ತಮ್ಮ ಹೆಸರೇ ಹೇಳುವ ಹಾಗೆ ಕಾಡು ಕುರುಬರೆಂದರೆ ಕಾಡಿನಲ್ಲಿ ವಾಸಿಸುವ ಕುರುಬ ಜನಾಂಗದ ಜನರು. ಇವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕಾಡುಗಳಲ್ಲಿ ವಾಸಿಸುವ ಜನರು . ಇತಿಹಾಸದ ಪ್ರಕಾರ ಈ ಕುರುಬರು ಪಲ್ಲವ ಸಾಮ್ರಾಜ್ಯವನ್ನು ಕಟ್ಟಿ ಆಳಿದವರು, ಪಲ್ಲವ ಸಾಮ್ರಾಜ್ಯದ ಪತನದ ನಂತರ ಅವರು ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳಲು ಕಾಡಿಗೆ ಬಂದು ನೆಲಸಿದರೆಂದು ಇತಿಹಾಸ ತಜ್ಞರು ಹೇಳುತ್ತಾರೆ. ಇವರು ತಮಿಳು ಮಿಶ್ರಿತ ಕನ್ನಡದಲ್ಲಿ ಮಾತಾಡುತ್ತಾರೆ. ಇವರ ಕುಲದೈವ ಮಲೈ ಮಾದೇಶ್ವರ. ಇವರು ಕಾಡನ್ನು ಕಾಪಾಡಿಕೊಂಡು ಬಂದವರು.