ಬರಹ ಲೇಖನಕ್ಕಾಗಿ ಇಲ್ಲಿ ನೋಡಿ.

ಉಲ್ಲೇಖವು ಒಂದು ಪ್ರಕಟಿತ ಅಥವಾ ಅಪ್ರಕಟಿತ ಮೂಲಕ್ಕೆ ಸಂದರ್ಭ ಸೂಚನೆ. ಹೆಚ್ಚು ನಿಖರವಾಗಿ, ಉಲ್ಲೇಖವು ಒಂದು ಬೌದ್ಧಿಕ ಕೃತಿಯ ಪ್ರಧಾನಭಾಗದಲ್ಲಿ ಒಳಸೇರಿಸಲಾದ ಒಂದು ಸಂಕ್ಷಿಪ್ತ ಅಕ್ಷರಸಂಖ್ಯಾಯುಕ್ತ ಪದವಿನ್ಯಾಸ. ಇದು ಕೃತಿಯ ಗ್ರಂಥಸೂಚಿ ವಿಭಾಗದಲ್ಲಿನ ಒಂದು ನಮೂದನ್ನು ಸೂಚಿಸುತ್ತದೆ. ಉಲ್ಲೇಖವು ಕಾಣಿಸಿಕೊಳ್ಳುವ ಸ್ಥಳದಲ್ಲಿ ಚರ್ಚೆಯ ವಿಷಯಕ್ಕೆ ಇತರರ ಕೃತಿಗಳ ಪ್ರಸ್ತುತತೆಯನ್ನು ಒಪ್ಪಿಕೊಳ್ಳುವುದು ಇದರ ಉದ್ದೇಶವಾಗಿರುತ್ತದೆ. [೧]ಸಾಮಾನ್ಯವಾಗಿ ಪ್ರಧಾನಭಾಗದಲ್ಲಿನ ಉಲ್ಲೇಖ ಮತ್ತು ಗ್ರಂಥಸೂಚಿಯ ನಮೂದು ಎರಡರ ಸಂಯೋಜನೆಯು ಯಾವುದನ್ನು ಸಾಮಾನ್ಯವಾಗಿ ಉಲ್ಲೇಖ ಎಂದು ಭಾವಿಸಲಾಗುವುದೋ ಅದನ್ನು ರೂಪಿಸುತ್ತದೆ (ಸ್ವತಃ ಗ್ರಂಥಸೂಚಿ ನಮೂದುಗಳು ಉಲ್ಲೇಖಗಳಲ್ಲ).

ಉಲ್ಲೇಖಗಳು ಹಲವು ಮಹತ್ವದ ಉದ್ದೇಶಗಳನ್ನು ಹೊಂದಿವೆ: ಬೌದ್ಧಿಕ ಪ್ರಾಮಾಣಿಕತೆಯನ್ನು ಎತ್ತಿಹಿಡಿಯುವುದು (ಅಥವಾ ಕೃತಿಚೌರ್ಯವನ್ನು ತಪ್ಪಿಸುವುದು)[೨], ಮುಂಚಿನ ಅಥವಾ ಸ್ವಂತಿಕೆಯಿಲ್ಲದ ಕೃತಿ ಮತ್ತು ವಿಚಾರಗಳನ್ನು ಸರಿಯಾದ ಮೂಲಗಳಿಗೆ ಆರೋಪಿಸುವುದು, ಉಲ್ಲೇಖಗಳನ್ನು ಒದಗಿಸಿದ ಸಾಮಗ್ರಿಯು ಸಾಧಿಸಿದ ರೀತಿಯಲ್ಲಿ ಲೇಖಕನ ವಾದವನ್ನು ಬೆಂಬಲಿಸುವುದೇ ಎಂಬುದನ್ನು ಸ್ವತಂತ್ರವಾಗಿ ತೀರ್ಮಾನಿಸಲು ಓದುಗನಿಗೆ ಅನುಮತಿಸುವುದು, ಮತ್ತು ಲೇಖಕನು ಬಳಸಿದ ಸಾಮಗ್ರಿಯ ಸತ್ವ ಹಾಗೂ ಸಿಂಧುತ್ವವನ್ನು ಮಾಪನ ಮಾಡುವಲ್ಲಿ ಓದುಗನಿಗೆ ನೆರವಾಗುವುದು. ರೋರ್ಕ್ ಮತ್ತು ಎಮರ್‌ಸನ್ ವಾದಿಸಿದಂತೆ, ಉಲ್ಲೇಖಗಳು ಲೇಖಕರು ತಮ್ಮ ಕೃತಿಯ ಸಾರವನ್ನು ಗ್ರಹಿಸುವ ರೀತಿಗೆ, ಶೈಕ್ಷಣಿಕ ವ್ಯವಸ್ಥೆಯಲ್ಲಿ ತಮ್ಮ ಸ್ಥಾನವನ್ನು ಗ್ರಹಿಸುವ ರೀತಿಗೆ, ಮತ್ತು ಅವುಗಳ ಸ್ಥಳ, ಸಾರ, ಹಾಗೂ ಶಬ್ದಗಳ ನೈತಿಕ ಸಮಾನತೆಯನ್ನು ಗ್ರಹಿಸುವ ರೀತಿಗೆ ಸಂಬಂಧಿಸಿವೆ. ಈ ಲಕ್ಷಣಗಳ ಹೊರತಾಗಿಯೂ, ಉಲ್ಲೇಖದ ಅಭ್ಯಾಸಗಳ ಅನೇಕ ನ್ಯೂನತೆಗಳು ಮತ್ತು ಕೊರತೆಯನ್ನು ವರದಿ ಮಾಡಲಾಗಿದೆ. ಇವುಗಳಲ್ಲಿ ಗೌರವಾರ್ಥ ಉಲ್ಲೇಖಗಳು, ಸಾಂದರ್ಭಿಕ ಉಲ್ಲೇಖಗಳು, ತಾರತಮ್ಯ ಸಂಬಂಧಿ ಉಲ್ಲೇಖಗಳು, ಆಯ್ದ ಹಾಗೂ ಕ್ರಮವಿಲ್ಲದ ಉಲ್ಲೇಖಗಳು ಸೇರಿವೆ.

ಸಾಮಾನ್ಯವಾಗಿ ಉಲ್ಲೇಖಗಳ ರೂಪಗಳು ಸಾಧಾರಣವಾಗಿ ಒಪ್ಪಿಕೊಳ್ಳಲಾದ ಉಲ್ಲೇಖ ಪದ್ಧತಿಗಳಲ್ಲಿ ಒಂದನ್ನು ಸಮರ್ಥಿಸುತ್ತವೆ, ಉದಾಹರಣೆಗೆ ಆಕ್ಸ್‌ಫ಼ರ್ಡ್, ಹಾರ್ವರ್ಡ್, ಎಮ್ಎಲ್ಎ, ಅಮೇರಿಕನ್ ಸೋಶಿಯಾಲಾಜಿಕಲ್ ಅಸೋಸಿಯೇಶನ್, ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಶನ್, ಮತ್ತು ಇತರ ಉಲ್ಲೇಖ ಪದ್ಧತಿಗಳು. ಇದಕ್ಕೆ ಕಾರಣವೆಂದರೆ ಇವುಗಳ ಪದಜೋಡಣಾ ರೂಢಿಗಳು ವ್ಯಾಪಕವಾಗಿ ಪರಿಚಿತವಾಗಿವೆ ಮತ್ತು ಒದುಗರು ಇವನ್ನು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ. ಈ ಉಲ್ಲೇಖ ಪದ್ದತಿಗಳಲ್ಲಿ ಪ್ರತಿಯೊಂದು ತನ್ನದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ.

ಉಲ್ಲೇಖಗಳು ಬದಲಾಯಿಸಿ

  1. "ಕನ್ನಡ ಉಲ್ಲೇಖಗಳು". Archived from the original on 2023-08-10. Retrieved 2023-08-09.
  2. "What Does it Mean to Cite?". MIT Academic Integrity.
"https://kn.wikipedia.org/w/index.php?title=ಉಲ್ಲೇಖ&oldid=1203508" ಇಂದ ಪಡೆಯಲ್ಪಟ್ಟಿದೆ