ಶಿವ ಲೇಖನಕ್ಕಾಗಿ ಇಲ್ಲಿ ನೋಡಿ.

ಈಶ್ವರ ಅಧಿಪತಿ ಶಬ್ದಕ್ಕೆ ಭಾಷಾಂತರಿಸುವ, ಏಕದೇವತಾವಾದಿ ಅರ್ಥದಲ್ಲಿ ಪರಮಾತ್ಮ ಅಥವಾ ದೇವರಿಗೆ ಅನ್ವಯಿಸುವ, ಅಥವಾ ಅದ್ವೈತವಾದಿ ಚಿಂತನೆಯಲ್ಲಿ ಇಷ್ಟದೇವನಿಗೆ ಅನ್ವಯಿಸುವ ಹಿಂದೂ ಧರ್ಮದಲ್ಲಿನ ಒಂದು ದೇವತಾಶಾಸ್ತ್ರೀಯ ಪರಿಕಲ್ಪನೆ. ಮನುಷ್ಯರು ಬ್ರಹ್ಮನ್ ಬಗ್ಗೆ ಯೋಚಿಸಿದಾಗ, ಪರಮೋಚ್ಚ ವಿಶ್ವಾತ್ಮವು ನಿಯಮಿತ, ಪರಿಮಿತ ಮಾನವ ಮನಸ್ಸಿನ ಮೇಲೆ ಬಿಂಬಿತವಾಗುತ್ತದೆ ಮತ್ತು ಈಶ್ವರನಾಗಿ ಕಾಣಿಸಿಕೊಳ್ಳುತ್ತದೆ ಎಂದು ಅದ್ವೈತ ವೇದಾಂತ ಅಭಿಪ್ರಾಯಪಡುತ್ತದೆ. ಹಾಗಾಗಿ, ಮನಸ್ಸು ಪರಮಾತ್ಮನ ಮೇಲೆ ವ್ಯಕ್ತಿತ್ವ, ಮಾತೃತ್ವ, ಮತ್ತು ಪಿತೃತ್ವದಂತಹ ಮಾನವ ಲಕ್ಷಣಗಳನ್ನು ಬಿಂಬಿಸುತ್ತದೆ. ಈಶ್ವರ ಎಂದರೆ ಸಾಮರ್ಥ್ಯವನ್ನು ಹೊಂದಿರುವವ, ಆಡಳಿತಗಾರ ಎಂದರ್ಥ.ಹಿಂದೂ ತತ್ವಶಾಸ್ತ್ರದ ಆರು ವ್ಯವಸ್ಥೆಗಳಲ್ಲಿ ಸಾಂಖ್ಯ ಮತ್ತು ಮೀಮಾಂಸ ಈಶ್ವರನ ಪರಿಕಲ್ಪನೆಯನ್ನು ಪರಿಗಣಿಸುವುದಿಲ್ಲ,ಆದರೆ ಯೋಗ, ವೈಶೇಶಿಕ, ವೇದಾಂತ ಮತ್ತು ನ್ಯಾಯ ಶಾಲೆಗಳು ಈಶ್ವರನನ್ನು ಪರಿಗಣಿಸುತ್ತವೆ.

ಈಶ್ವರ ದೇವಾಲಯ
"https://kn.wikipedia.org/w/index.php?title=ಈಶ್ವರ&oldid=1159386" ಇಂದ ಪಡೆಯಲ್ಪಟ್ಟಿದೆ