ಆಲಿಂಗನ ಎಂದರೆ ತಬ್ಬುವಿಕೆ. ಪ್ರೀತಿ, ವಿಶ್ವಾಸ, ಸ್ನೇಹಸೂಚಕವಾಗಿ ವ್ಯಕ್ತಿಯನ್ನು ವ್ಯಕ್ತಿ ಎರಡೂ ಕೈಗಳಿಂದ ತಬ್ಬಿ ಎದೆಗೆ ಎದೆ ಕೂಡಿಸುವುದು.

Elisabeth Louise Vigée-Lebrun, Madame Vigée-Lebrun et sa fille, by Louise Élisabeth Vigée Le Brun, 1789
ಸ್ನೇಹ ಪ್ರದರ್ಶನದಲ್ಲಿ ಆಲಿಂಗನ

ಮುಸ್ಲಿಂ ಧರ್ಮದಲ್ಲಿ ಬದಲಾಯಿಸಿ

ಮುಸ್ಲಿಮರಲ್ಲಿ ಸರ್ವಸಾಧಾರಣವಾದ ಆಚಾರ.

ಹಿಂದೂ ಧರ್ಮದಲ್ಲಿ ಬದಲಾಯಿಸಿ

ಹಿಂದೂಗಳಲ್ಲೂ ಮದುವೆ ಸಂದರ್ಭದಲ್ಲಿ ಬೀಗರು ಬೀಗರನ್ನು ಆಲಿಂಗಿಸುವ ಪದ್ಧತಿ ಇದೆ.ಸಾಯುಜ್ಯಮೋಕ್ಷವನ್ನು ಪಡೆದ ಭಕ್ತರಿಗೆ ಪರಮಾತ್ಮನ ಆಲಿಂಗನಸುಖ ಲಭಿಸುತ್ತದೆಂದು ವಿಶಿಷ್ಟಾದ್ವೈತದಲ್ಲಿ ಹೇಳಿದೆ.

ಪ್ರೀತಿಯಲ್ಲಿ ಬದಲಾಯಿಸಿ

ಸತಿಪತಿಯರಲ್ಲಿ ಚುಂಬನ, ಆಲಿಂಗನಗಳು ರತಿಭಾವಕ್ಕೆ ಆಲಂಬನಗಳಾಗಿವೆ. ಮುಖ್ಯವಾಗಿ ಆಲಿಂಗನ ಎರಡು ಮನಸ್ಸುಗಳ ಮಧುರಮಿಲನದ ಬಾಹ್ಯಪ್ರಕಟನೆಯಾಗಿದೆ.

ಇತರ ಬದಲಾಯಿಸಿ

ಆಲಿಂಗನದ ನೆಪದಲ್ಲಿ ಶಿವಾಜಿ ಅಫ್ಜಲ್ ಖಾನನನ್ನು ವ್ಯಾಘ್ರನಖದಿಂದ ಬಗಿದು ಕೊಂದುದೂ ಧೃತರಾಷ್ಟ್ರಾಲಿಂಗನಕ್ಕೆ ಸಿಕ್ಕ ಭೀಮನ ಲೋಹ ಪ್ರತಿಮೆ ನುಚ್ಚುನುರಿಯಾಗಿ ಹೋದುದೂ ಆಲಿಂಗನದ ಇನ್ನೊಂದು ಮುಖಕ್ಕೆ ಉದಾಹರಣೆಗಳಾಗಿವೆ.

"https://kn.wikipedia.org/w/index.php?title=ಆಲಿಂಗನ&oldid=1018888" ಇಂದ ಪಡೆಯಲ್ಪಟ್ಟಿದೆ