ಆರೋಗ್ಯ ವಿಮೆ ಯು ಇತರ ವಿಮೆಗಳಂತೆಯೇ ಒಂದು ರೀತಿಯ ಸಾಮೂಹಿಕ ಸ್ವಾಮ್ಯವಾದವಾಗಿದ್ದು, ಅದರ ಮೂಲಕ ಜನರು ವೈದ್ಯಕೀಯ ಖರ್ಚು-ವೆಚ್ಚಗಳಿಗೆ ಒಳಗಾಗುವ ಅವರ ಅಪಾಯವನ್ನು ಒಟ್ಟಿಗೆ ಹಂಚಿಕೊಳ್ಳುತ್ತಾರೆ. ಈ ಸಮಷ್ಟಿಯನ್ನು ಸಾಮಾನ್ಯವಾಗಿ ಸಾರ್ವಜನಿಕರು ಹೊಂದಿರುತ್ತಾರೆ ಅಥವಾ ಸಾಮುದಾಯಿಕ ಸಂಗ್ರಹದ ಸದಸ್ಯರಿಗಾಗಿ ಲಾಭವಿಲ್ಲದ ಆಧಾರದಲ್ಲಿ ಆಯೋಜಿಸಲಾಗಿರುತ್ತದೆ.

ಇತಿವೃತ್ತ ಬದಲಾಯಿಸಿ

  • ಕೆಲವು ರಾಷ್ಟ್ರಗಳಲ್ಲಿ ಆರೋಗ್ಯ ವಿಮೆಯನ್ನು ಲಾಭದ-ಉದ್ಧೇಶವಿರುವ ಕಂಪೆನಿಗಳು ನಿರ್ವಹಿಸುತ್ತವೆ. ಇದನ್ನು ಕೆಲವೊಮ್ಮೆ ವಿಮೆಯಿಂದ ರಕ್ಷಿಸಲ್ಪಡುವ ಅಸಾಮರ್ಥ್ಯ ಅಥವಾ ದೀರ್ಘಕಾಲದ ಶುಶ್ರೂಷೆ ಅಥವಾ ಪಾಲನೆ ಮಾಡುವ ಅವಶ್ಯಕತೆಗಳನ್ನು ಒಳಗೊಳ್ಳಲು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಇದನ್ನು ಸರಕಾರ-ಪ್ರಾಯೋಜಿತ ಸಾಮಾಜಿಕ ವಿಮಾ ಯೋಜನೆಯಿಂದ ಅಥವಾ ಖಾಸಗಿ ವಿಮೆ ಕಂಪೆನಿಗಳಿಂದ ಒದಗಿಸಲಾಗುತ್ತದೆ.
  • ಇದನ್ನು ಗುಂಪಿನ ಆಧಾರದಲ್ಲಿ (ಉದಾ. ಸಂಸ್ಥೆಯಿಂದ ಅದರ ಉದ್ಯೋಗಿಗಳಿಗೆ ರಕ್ಷಣೆ ಒದಗಿಸಲು) ಅಥವಾ ವೈಯಕ್ತಿಕವಾಗಿ ಖರೀದಿಸಲಾಗುತ್ತದೆ. ಪ್ರತಿಯೊಂದು ಸಂದರ್ಭದಲ್ಲಿ, ರಕ್ಷಿಸಲ್ಪಟ್ಟ ಗುಂಪುಗಳು ಅಥವಾ ವ್ಯಕ್ತಿಗಳು ಅನಿರೀಕ್ಷಿತ ಆರೋಗ್ಯ ರಕ್ಷಣೆಯ ಖರ್ಚುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಹಾಯವಾಗಲು ಪ್ರೀಮಿಯಂಗಳನ್ನು ಅಥವಾ ತೆರಿಗೆಗಳನ್ನು ಪಾವತಿಸುತ್ತಾರೆ.
  • ವೈದ್ಯಕೀಯ ಖರ್ಚುವೆಚ್ಚಗಳಿಗೆ ಪಾವತಿಸುವ ಅಂತಹುದೇ ಲಾಭಗಳು, ಸರಕಾರ ಬಂಡವಾಳ ಒದಗಿಸುವ ಸಮಾಜ ಕಲ್ಯಾಣ ಯೋಜನೆಗಳಿಂದ ಒದಗಿಸಲ್ಪಡುತ್ತದೆ. ಒಟ್ಟು ಆರೋಗ್ಯ ಸಂಬಂಧಿತ ಖರ್ಚುಗಳನ್ನು ಅಂದಾಜು ಮಾಡುವ ಮೂಲಕ, ವಿಮೆಯ ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿದ ಆರೋಗ್ಯ-ರಕ್ಷಣೆಯ ಲಾಭಗಳಿಗೆ ಪಾವತಿ ಮಾಡಲು ಹಣವು ಲಭ್ಯಯಿರುವಂತೆ ಖಚಿತಪಡಿಸಿಕೊಂಡು, ಒಂದು ನಿಯತಕ್ರಮದ ಹಣಕಾಸಿನ ರಚನೆಯನ್ನು (ತಿಂಗಳ ಪ್ರೀಮಿಯಂ ಅಥವಾ ವಾರ್ಷಿಕ ತೆರಿಗೆಯಂತಹ) ಅಭಿವೃದ್ಧಿಪಡಿಸಬಹುದು. ಲಾಭವು ಸರಕಾರಿ ಏಜೆನ್ಸಿ, ಖಾಸಗಿ ವ್ಯವಹಾರ ಅಥವಾ ಲಾಭವಿಲ್ಲದ-ಸಂಸ್ಥೆಯಂತಹ ಕೇಂದ್ರ ಸಂಘಟನೆಯಿಂದ ನಿರ್ವಹಿಸಲ್ಪಡುತ್ತದೆ.[೧]

ಇತಿಹಾಸ ಮತ್ತು ವಿಕಾಸ ಬದಲಾಯಿಸಿ

  • ಆರೋಗ್ಯ ವಿಮೆಯ ವಿಷಯವನ್ನು ಪೀಟರ್ ಚ್ಯಾಂಬರ್ಲೆನ್ ಕುಟುಂಬದ ಹಫ್ ದ ಎಲ್ಡರ್ ಚ್ಯಾಂಬರ್ಲೆನ್ ೧೬೯೪ರಲ್ಲಿ ಪ್ರಸ್ತಾಪಿಸಿದನು. 19ನೇ ಶತಮಾನದ ಉತ್ತರಾರ್ಧದಲ್ಲಿ "ಅಪಘಾತ ವಿಮೆ"ಯು ಲಭ್ಯವಾಗಿದ್ದು, ಆಧುನಿಕ ಅಸಾಮರ್ಥ್ಯ-ವಿಮೆಯಂತೆ ಕಾರ್ಯನಿರ್ವಹಿಸಿತು.[೨][೩] ಈ ಪಾವತಿಯ ಮಾದರಿಯು, ಆರೋಗ್ಯ ವಿಮೆಯನ್ನು ನಿಯಂತ್ರಿಸುವ ಎಲ್ಲಾ ಕಾನೂನುಗಳು ವಾಸ್ತವವಾಗಿ ಅಸಾಮರ್ಥ್ಯ-ವಿಮೆಯನ್ನು ಸೂಚಿಸಿದ ಕೆಲವು ನ್ಯಾಯನಿರ್ವಹಣೆಯೊಂದಿಗೆ (ಕ್ಯಾಲಿಫೋರ್ನಿಯಾದಂತೆ) 20ನೇ ಶತಮಾನದ ಆರಂಭದವರೆಗೆ ಮುಂದುವರಿಯಿತು.[೪]
  • ಅಪಘಾತ ವಿಮೆಯನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೊದಲು ಮಸ್ಸಾಚ್ಯುಸೆಟ್ಸ್‌ನ ಫ್ರ್ಯಾಂಕ್ಲಿನ್ ಹೆಲ್ತ್ ಅಸ್ಯುರೆನ್ಸ್ ಕಂಪೆನಿಯು ಒದಗಿಸಿತು. ೧೮೫೦ ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ರೈಲು ಮತ್ತು ಆವಿದೋಣಿಗಳ ಅಪಘಾತದಿಂದ ಸಂಭವಿಸುವ ಅಪಾಯಗಳ ವಿರುದ್ಧ ವಿಮೆಯನ್ನು ನೀಡಿತು. ೧೮೬೬ ರಲ್ಲಿ U.S.ನಲ್ಲಿ ಅರವತ್ತು ಸಂಘಟನೆಗಳು ಅಪಘಾತ ವಿಮೆಯನ್ನು ಒದಗಿಸುತ್ತಿದ್ದವು.
  • ಆದರೆ ಆನಂತರ ಉದ್ಯಮವು ಶೀಘ್ರವಾಗಿ ಬಲಗೊಂಡಿತು. ಆರಂಭಿಕ ಪ್ರಯೋಗಗಳಿದ್ದರೂ, U.S.ನಲ್ಲಿ ಕಾಯಿಲೆಯ ವಿಮಾ ರಕ್ಷಣೆಯ ಮೂಲವು ಪರಿಣಾಮಕಾರಿಯಾಗಿ ೧೮೯೦ ರಿಂದ ಆರಂಭಗೊಂಡಿತು. ಮೊದಲ ಕೆಲಸ ಕೊಡುವ ಕಂಪೆನಿ-ಪ್ರಾಯೋಜಿತ ಗುಂಪು ಅಸಾಮರ್ಥ್ಯ-ಪಾಲಿಸಿಯನ್ನು ೧೯೧೧ ರಲ್ಲಿ ಪಡೆಯಲಾಯಿತು.[೫]
  • ವೈದ್ಯಕೀಯ ಖರ್ಚಿನ ವಿಮೆಯು ಅಭಿವೃದ್ಧಿಯಾಗುವುಕ್ಕಿಂತ ಮೊದಲು, ಸೇವೆಗಾಗಿ-ಶುಲ್ಕ ವ್ಯವಹಾರ ಮಾದರಿಯಲ್ಲಿ ರೋಗಿಗಳು ಎಲ್ಲಾ ಆರೋಗ್ಯ ಸಂಬಂಧಿ ಖರ್ಚುವೆಚ್ಚಗಳನ್ನು ಅವರ ಸ್ವಂತ ಹಣದಿಂದ ಪಾವತಿಸಬೇಕಿತ್ತು. ೨೦ ನೇ ಶತಮಾನದ ಮಧ್ಯದಿಂದ ಉತ್ತರಾರ್ಧದ ಸಂದರ್ಭದಲ್ಲಿ ಸಾಂಪ್ರದಾಯಿಕ ಅಸಾಮರ್ಥ್ಯ-ವಿಮೆಯು ಆಧುನಿಕ ಆರೋಗ್ಯ ವಿಮಾ ಯೋಜನೆಗಳನ್ನು ಹೊರಡಿಸಿತು.
  • ಇಂದು ಹೆಚ್ಚು ವ್ಯಾಪಕ ಖಾಸಗಿ ಆರೋಗ್ಯ ವಿಮಾ ಯೋಜನೆಗಳು ನಿಯತಕ್ರಮದ, ಮುನ್ನೆಚ್ಚರಿಕೆಯ ಮತ್ತು ತುರ್ತುಪರಿಸ್ಥಿತಿಯ ಆರೋಗ್ಯ ರಕ್ಷಣೆಯ ಕಾರ್ಯಗಳ ಹಾಗೂ ಹೆಚ್ಚಿನ ಪ್ರಿಸ್ಕ್ರಿಪ್ಷನ್ ಔಷಧಿಗಳ ಖರ್ಚಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಆದರೆ ಯಾವಾಗಲೂ ಕೇವಲ ಇದು ಮಾತ್ರ ಆಗಿರುವುದಿಲ್ಲ. ಆಸ್ಪತ್ರೆ ಮತ್ತು ವೈದ್ಯಕೀಯ ವೆಚ್ಚದ ಪಾಲಿಸಿಗಳು ೨೦ ನೇ ಶತಮಾನದ ಮೊದಲಾರ್ಧದಲ್ಲಿ ಬಳಕೆಗೆ ಬಂದವು.
  • ೧೯೨೦ ರಲ್ಲಿ ವೈಯಕ್ತಿಕ ಆಸ್ಪತ್ರೆಗಳು ಸೇವೆಗಳನ್ನು ಮುಂಗಡವಾಗಿ ಪಾವತಿಸುವ ಆಧಾರದಲ್ಲಿ ಜನರಿಗೆ ಒದಗಿಸಲು ಆರಂಭಿಸಿದವು. ಇದು ಅಂತಿಮವಾಗಿ ಬ್ಲೂ ಕ್ರಾಸ್ ಸಂಸ್ಥೆಗಳ ಅಭಿವೃದ್ಧಿಗೆ ಎಡೆಮಾಡಿಕೊಟ್ಟಿತು.[೫] ಇಂದಿನ ಹೆಲ್ತ್ ಮೇಂಟೇನೆನ್ಸ್ ಆರ್ಗನೈಸೇಶನ್ನ (HMOs) ಪೂರ್ವವರ್ತಿಯು ಆರಂಭದಲ್ಲಿ ೧೯೨೯


೧೯೨೯ ರಲ್ಲಿ, ನಂತರ ೧೯೩೦ ರಲ್ಲಿ ಮತ್ತು ವಿಶ್ವ ಸಮರ IIರ ಸಂದರ್ಭದಲ್ಲಿ ಹುಟ್ಟಿಕೊಂಡಿತು.[೬][೭] ಹ್ಯಾಲೊ

ಇದು ಹೇಗೆ ಕೆಲಸ ಮಾಡುತ್ತದೆ ಬದಲಾಯಿಸಿ

  • ಆರೋಗ್ಯ ವಿಮಾ ಪಾಲಿಸಿಯು ವಿಮಾ ಕಂಪೆನಿ ಮತ್ತು ವ್ಯಕ್ತಿಯ ಅಥವಾ ಆತನ ಹೊಣೆಗಾರರ (ಉದಾ. ನೌಕರಿ ಕೊಡುವವರ) ನಡುವಿನ ಒಂದು ಒಪ್ಪಂದವಾಗಿದೆ. ಆ ಒಪ್ಪಂದವನ್ನು ಮಾಸಿಕವಾಗಿ ಅಥವಾ ವಾರ್ಷಿಕವಾಗಿ ನವೀಕರಿಸಬಹುದು. ಆರೋಗ್ಯ ವಿಮಾ ಕಂಪೆನಿಯಿಂದ ರಕ್ಷಣೆ ಕೊಡಲ್ಪಡುವ ಆರೋಗ್ಯ ಸಂಬಂಧಿತ ಖರ್ಚುವೆಚ್ಚಗಳ ಪ್ರಕಾರ ಮತ್ತು ಮೊತ್ತವನ್ನು ಮೊದಲೇ, ಸದಸ್ಯರ ಒಪ್ಪಂದದಲ್ಲಿ ಅಥವಾ "ವಿಮಾ ರಕ್ಷಣೆಯ ಸಾಕ್ಷ್ಯ"ದ ಕಿರು ಪುಸ್ತಕದಲ್ಲಿ ನಿರ್ದಿಷ್ಟಪಡಿಸಲಾಗುತ್ತದೆ. ವಿಮೆ ಮಾಡಿದ ವ್ಯಕ್ತಿಯು ಅನೇಕ ಜವಾಬ್ದಾರಿಯನ್ನು ಹೊಂದಿರುತ್ತಾನೆ:[೮][೯]
  • ಪ್ರೀಮಿಯಂ: ಪಾಲಿಸಿ ಮಾಡಿದವರು ಅಥವಾ ಅವರ ಹೊಣೆಗಾರರು (ಉದಾ. ನೌಕರಿಯನ್ನು ನೀಡಿದವರು) ಆರೋಗ್ಯ ರಕ್ಷಣೆಯನ್ನು ಪಡೆಯಲು ಪ್ರತಿ ತಿಂಗಳು ಆರೋಗ್ಯ ಯೋಜನೆಗೆ ಪಾವತಿಸುವ ಮೊತ್ತ.
  • ಕಳೆಯಬಹುದಾದುದು(ಡಿಡಕ್ಟಿಬಲ್): ಆರೋಗ್ಯ ವಿಮೆಗಾರರು ಅವರ ಪಾಲನ್ನು ಪಾವತಿಸುವುದಕ್ಕಿಂತ ಮೊದಲು ವಿಮೆ ಮಾಡಿದವರು ಅವರ ಕೈಯಿಂದ ತೆರಬೇಕಾದ ಮೊತ್ತ. ಉದಾಹರಣೆಗಾಗಿ, ಪಾಲಿಸಿ-ಮಾಡಿದವರ ಆರೋಗ್ಯ ರಕ್ಷಣೆಯು ಆರೋಗ್ಯ ವಿಮೆಗಾರರಿಂದ ರಕ್ಷಿಸಲ್ಪಡುವ ಮೊದಲು ಪ್ರತಿ ವರ್ಷ $500ರಷ್ಟು ಕಳೆಯಬಹುದಾದ ಮೊತ್ತವನ್ನು ಪಾವತಿಸಬೇಕಾಗುತ್ತದೆ. ವಿಮೆದಾರರು ಕಳೆಯಬಹುದಾದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸುವ ಮತ್ತು ವಿಮಾ ಕಂಪೆನಿಯು ರಕ್ಷಣೆಗಾಗಿ ಪಾವತಿಸಲು ಆರಂಭಿಸುವ ಮೊದಲು, ಅನೇಕ ವೈದ್ಯರ ಭೇಟಿ ಅಥವಾ ಪ್ರಿಸ್ಕ್ರಿಪ್ಷನ್ ಪುನರ್ಭರ್ತಿಗಳು ಬೇಕಾಗಬಹುದು.
  • ಸಹ-ಪಾವತಿ: ಆರೋಗ್ಯ ವಿಮೆಗಾರರು ನಿರ್ದಿಷ್ಟ ಭೇಟಿ ಅಥವಾ ಸೇವೆಗಾಗಿ ಪಾವತಿಸುವ ಮೊದಲು ವಿಮೆದಾರರು ತಮ್ಮ ಕೈಯಿಂದಲೇ ನೀಡಬೇಕಾಗಿರುವ ಮೊತ್ತ. ಉದಾಹರಣೆಗಾಗಿ, ವಿಮೆದಾರನೊಬ್ಬನು ವೈದ್ಯರ ಭೇಟಿಗಾಗಿ ಅಥವಾ ಪ್ರಿಸ್ಕ್ರಿಪ್ಷನ್‌ಅನ್ನು ಪಡೆಯಲು $೪೫ ರಷ್ಟು ಸಹ-ಪಾವತಿಯನ್ನು ನೀಡಬೇಕಾಗಬಹುದು. ಸಹ-ಪಾವತಿಯನ್ನು ಪ್ರತಿ ಬಾರಿ ಒಂದು ನಿರ್ದಿಷ್ಟ ಸೇವೆಯನ್ನು ಪಡೆದಾಗ ಪಾವತಿಸಬೇಕು.
  • ಸಹವಿಮೆ: ಗೊತ್ತಾದ ಮೊತ್ತವನ್ನು ಸಹ-ಪಾವತಿಯಾಗಿ ನೀಡುವ ಬದಲಿಗೆ, ಸಹ-ವಿಮೆಯು ವಿಮೆದಾರರು ಪಾವತಿಸುವ ಒಟ್ಟು ಖರ್ಚಿನ ಶೇಕಡಾವಾರಾಗಿದೆ. ಉದಾಹರಣೆಗಾಗಿ, ಸದಸ್ಯರು ಸಹ-ಪಾವತಿಯಾಗಿ ಶಸ್ತ್ರಚಿಕಿತ್ಸೆಯ ಖರ್ಚಿನ ೨೦% ರಷ್ಟನ್ನು ಪಾವತಿಸಬೇಕಾಗುತ್ತದೆ ಮತ್ತು ವಿಮಾ ಕಂಪೆನಿಯು ಇತರ ೮೦% ರಷ್ಟನ್ನು ಪಾವತಿಸುತ್ತದೆ. ಸಹವಿಮೆಯಲ್ಲಿ ಮೇಲಿನ ಮಿತಿಯಿದ್ದರೆ, ಪಾಲಿಸಿ-ಮಾಡಿದವರು ಅವರು ಪಡೆಯುವ ಸೇವೆಗಳ ನಿಜವಾದ ಖರ್ಚಿನ ಆಧಾರದಲ್ಲಿ ತೆರಬೇಕಾಗಿರುವುದನ್ನು ಸ್ವಲ್ಪಮಟ್ಟಿಗೆ ಕೊನೆಗೊಳಿಸಬೇಕಾಗುತ್ತದೆ.
  • ಹೊರಗಿಡುವವು(ಎಕ್ಸ್‌ಕ್ಲೂಶನ್ಸ್) ಎಲ್ಲಾ ಸೇವೆಗಳು ರಕ್ಷಣೆಯನ್ನು ಪಡೆದಿರುವುದಿಲ್ಲ. ವಿಮೆದಾರರು ಸಾಮಾನ್ಯವಾಗಿ ರಕ್ಷಣೆ-ಪಡೆಯದ ಸೇವೆಗಳ ಸಂಪೂರ್ಣ ವೆಚ್ಚವನ್ನು ತಮ್ಮ ಕೈಯಿಂದಲೇ ಪಾವತಿಸಬೇಕಾಗುತ್ತದೆ.
  • ವಿಮೆ ರಕ್ಷಣಾ ಮಿತಿಗಳು: ಕೆಲವು ಆರೋಗ್ಯ ವಿಮಾ ಪಾಲಿಸಿಗಳು ಕೇವಲ ಆರೋಗ್ಯ ರಕ್ಷಣೆಗೆ ಮಾತ್ರ ಕೆಲವು ಡಾಲರ್ ಮೊತ್ತವನ್ನು ಪಾವತಿಸುತ್ತವೆ. ವಿಮೆ ಮಾಡಿದವರು ನಿರ್ದಿಷ್ಟ ಸೇವೆಗೆ ಆರೋಗ್ಯ ಯೋಜನೆಯ ಗರಿಷ್ಠ ಪಾವತಿಗಿಂತ ಹೆಚ್ಚಿರುವ ಯಾವುದೇ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಕೆಲವು ವಿಮಾ ಕಂಪೆನಿಗಳ ಯೋಜನೆಗಳು ವಾರ್ಷಿಕ ಅಥವಾ ಜೀವಮಾನ ರಕ್ಷಣಾ ಮಿತಿಯನ್ನು ಹೊಂದಿರುತ್ತವೆ. ಈ ಉದಾಹರಣೆಗಳಲ್ಲಿ, ಅವರು ಲಾಭದ ಮಿತಿಯನ್ನು ತಲುಪಿದಾಗ ಆರೋಗ್ಯ ಯೋಜನೆಯು ಪಾವತಿಸುವುದನ್ನು ನಿಲ್ಲಿಸುತ್ತದೆ ಮತ್ತು ಪಾಲಿಸಿ-ಮಾಡಿದವರು ಉಳಿದ ಎಲ್ಲಾ ಖರ್ಚನ್ನು ಪಾವತಿಸಬೇಕಾಗುತ್ತದೆ.
  • ಕೈಯಿಂದ ತೆರಬೇಕಾದ ಮಿತಿ: ವಿಮಾ ರಕ್ಷಣಾ ಮಿತಿಗಳಂತೆ, ವಿಮೆ ಮಾಡಿದವರು ಕೈಯಿಂದ ತೆರಬೇಕಾದ ಮಿತಿಯನ್ನು ತಲುಪಿದಾಗ ಅವರ ಪಾವತಿ ಜವಾಬ್ದಾರಿಯು ಕೊನೆಗೊಳ್ಳುತ್ತದೆ ಮತ್ತು ಆರೋಗ್ಯ ಕಂಪೆನಿಯು ಮುಂದಿನ ಎಲ್ಲಾ ರಕ್ಷಣಾ ಖರ್ಚುಗಳನ್ನು ಪಾವತಿಸುತ್ತದೆ. ಕೈಯಿಂದ ತೆರಬೇಕಾದ ಮಿತಿಯು ನಿರ್ದಿಷ್ಟ ಲಾಭ ವರ್ಗಕ್ಕೆ (ಪ್ರಿಸ್ಕ್ರಿಪ್ಷನ್‌ನಂತಹ) ಮಿತಿಯಾಗಿರಬಹುದು ಅಥವಾ ನಿರ್ದಿಷ್ಟ ಲಾಭದ ವರ್ಷದಲ್ಲಿ ಒದಗಿಸಿದ ಎಲ್ಲಾ ರಕ್ಷಣೆಗೆ ಅನ್ವಯಿಸಬಹುದು.
  • ತಲೆ ಎಣಿಕೆ: ವಿಮೆಗಾರರ ಎಲ್ಲಾ ಸದಸ್ಯರಿಗೆ ರಕ್ಷಣೆ ಒದಗಿಸಲು ಒಪ್ಪಿದಕ್ಕಾಗಿ ವಿಮೆಗಾರರು ಆರೋಗ್ಯ ರಕ್ಷಣೆ ಒದಗಿಸುವವರಿಗೆ ಪಾವತಿಸುವ ಮೊತ್ತ.
  • ಜಾಲದಲ್ಲಿನ ಒದಗಿಸುವವರು: (U.S. ಪದ) ಅನೇಕ ರಕ್ಷಣೆ ಒದಗಿಸುವವರ ಪಟ್ಟಿಯಲ್ಲಿ ವಿಮೆಗಾರರು ಆರಿಸಿದ ಆರೋಗ್ಯ ರಕ್ಷಣೆ ಒದಗಿಸುವವರು. ಜಾಲದಲ್ಲಿನ ಒದಗಿಸುವವರನ್ನು ಗಮನಿಸಲು ಯೋಜನಾ ಸದಸ್ಯರಿಗೆ ವಿಮೆಗಾರರು ರಿಯಾಯಿತಿಯ ಸಹವಿಮೆ ಅಥವಾ ಸಹ-ಪಾವತಿಗಳನ್ನು ಅಥವಾ ಹೆಚ್ಚುವರಿ ಲಾಭಗಳನ್ನು ಒದಗಿಸುತ್ತಾರೆ. ಸಾಮಾನ್ಯವಾಗಿ ಜಾಲದಲ್ಲಿನ ಒದಗಿಸುವವರು, ವಿಮೆಗಾರರು ಜಾಲದ ಹೊರಗಿನ ಒದಗಿಸುವವರಿಗೆ ಪಾವತಿಸುವ "ರೂಢಿಯ ಮತ್ತು ವಾಡಿಕೆಯ" ಶುಲ್ಕಗಳಿಂದ ಇನ್ನಷ್ಟು ರಿಯಾಯಿತಿಯ ದರಗಳನ್ನು ಸ್ವೀಕರಿಸಲು ವಿಮೆಗಾರರೊಂದಿಗೆ ಒಪ್ಪಂದವನ್ನು ಹೊಂದಿರುವ ಒದಗಿಸುವವರಾಗಿದ್ದಾರೆ.
  • ಮುಂಚಿನ ಪ್ರಮಾಣೀಕರಣ: ವೈದ್ಯಕೀಯ ಸೇವೆಯನ್ನು ಒದಗಿಸುವುದಕ್ಕಿಂತ ಮೊದಲು ವಿಮೆಗಾರರು ಒದಗಿಸುವ ದೃಢೀಕರಣ ಅಥವಾ ಪ್ರಮಾಣೀಕರಣ. ಪ್ರಮಾಣೀಕರಣವನ್ನು ಪಡೆಯುವುದೆಂದರೆ ವಿಮೆಗಾರರು ದೃಢೀಕೃತವಾದುದಕ್ಕೆ ಸರಿಹೊಂದುತ್ತದೆಂದು ಊಹಿಸಿಕೊಂಡು ಸೇವೆಗಾಗಿ ಪಾವತಿಸಲು ಜವಾಬ್ದಾರರಾಗಿದ್ದಾರೆ ಎಂಬುದರ್ಥವಾಗಿದೆ. ಅನೇಕ ಸಣ್ಣ, ನಿಯತಕ್ರಮದ ಸೇವೆಗಳಿಗೆ ಪ್ರಮಾಣೀಕರಣದ ಅವಶ್ಯಕತೆ ಇರುವುದಿಲ್ಲ.[೧೦]
  • ಲಾಭಗಳ ವಿವರಣೆ: ವಿಮೆಗಾರರಿಂದ ರೋಗಿಗೆ ಕಳುಹಿಸಲ್ಪಡುವ ದಾಖಲೆ. ಇದು ವೈದ್ಯಕೀಯ ಸೇವೆಗೆ ಏನು ರಕ್ಷಣೆ ಒದಗಿಸುತ್ತದೆ ಹಾಗೂ ಅವರು ಹೇಗೆ ಪಾವತಿಸುವ ಮೊತ್ತ ಮತ್ತು ರೋಗಿಯ ಜವಾಬ್ದಾರಿಯ ಮೊತ್ತವನ್ನು ತಲುಪಬಹುದು ಎಂಬುದನ್ನು ವಿವರಿಸುತ್ತದೆ.[೧೧]

ಪ್ರಿಸ್ಕ್ರಿಪ್ಷನ್ ಯೋಜನೆಗಳು ಬದಲಾಯಿಸಿ

  • ಪ್ರಿಸ್ಕ್ರಿಪ್ಷನ್ ಯೋಜನೆಗಳು U.S.ನಲ್ಲಿ ಕೆಲವು ನೌಕರಿ ನೀಡುವವರ ಲಾಭ ಯೋಜನೆಗಳ ಮ‌ೂಲಕ ಒದಗಿಸಲಾಗುವ ಒಂದು ರೀತಿಯ ವಿಮೆಯಾಗಿದೆ. ಅದರಲ್ಲಿ ರೋಗಿಗಳು ಸಹಪಾವತಿಯನ್ನು ಮತ್ತು ಪ್ರಿಸ್ಕ್ರಿಪ್ಷನ್ ಔಷಧಿ ವಿಮಾ ಭಾಗವನ್ನು ಪಾವತಿಸುತ್ತಾರೆ ಅಥವಾ ಔಷಧಿಗಳ ಎಲ್ಲಾ ಬಾಕಿಯು ಯೋಜನೆಯ ಸೂತ್ರ ಸಂಗ್ರಹದಲ್ಲಿ ರಕ್ಷಿಸಲ್ಪಡುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕೆಲವು ಆರೋಗ್ಯ ರಕ್ಷಣೆ ಒದಗಿಸುವವರು.
  • ರೋಗಿಗಳು ವಿಮಾ ಕಂಪೆನಿಯು ಪಾವತಿಸದಿದ್ದರೆ ತಾವು ಜವಾಬ್ದಾರರಾಗಿರುತ್ತೇವೆ ಎಂಬ ಒಪ್ಪಂದವೊಂದಕ್ಕೆ ಸಹಿಹಾಕಲು ಒಪ್ಪಿದರೆ ವಿಮಾ ಕಂಪೆನಿಗಳನ್ನು ಪ್ರಕಟಿಸಲು ಅನುಮತಿಸುತ್ತದೆ. ವಿಮಾ ಕಂಪೆನಿಯು "ತರ್ಕಬದ್ಧ ಮತ್ತು ಬಳಕೆಯಲ್ಲಿರುವ" ಶುಲ್ಕಗಳ ಪ್ರಕಾರ ಜಾಲ ಒದಗಿಸುವವರಿಂದ ಪಾವತಿಸುತ್ತದೆ. ಅದು ಒದಗಿಸುವವರ ಸಾಮಾನ್ಯ ಶುಲ್ಕಕ್ಕಿಂತ ಕಡಿಮೆ ಇರಬಹುದು.
  • ಎಷ್ಟು ಮೊತ್ತವು ರಿಯಾಯಿತಿ ದರದಲ್ಲಿರುತ್ತದೆ ಮತ್ತು ಒದಗಿಸುವವರ ಪ್ರಮಾಣಿತ ಶುಲ್ಕಗಳಿಗೆ ತಲೆತೆರಿಗೆಯಾಗಿರುತ್ತದೆ ಎಂಬುದರ ಬಗೆಗಿನ ಪ್ರತ್ಯೇಕ ಒಪ್ಪಂದವೊಂದನ್ನು ಒದಗಿಸುವವರು ವಿಮೆಗಾರರೊಂದಿಗೆ ಹೊಂದಿರುತ್ತಾರೆ. ಇದು ಸಾಮಾನ್ಯವಾಗಿ ರೋಗಿಗಳಿಗೆ ಜಾಲದಲ್ಲಿನ ಒದಗಿಸುವವರನ್ನು ಕಡಿಮೆ ಬಳಸುವಂತೆ ಮಾಡುತ್ತದೆ.

ಆರೋಗ್ಯ ಯೋಜನೆ ಮತ್ತು ಆರೋಗ್ಯ ವಿಮೆ (ಅಮೆರಿಕ ಸಂಯುಕ್ತ ಸಂಸ್ಥಾನ) ಬದಲಾಯಿಸಿ

  • ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಐತಿಹಾಸಿಕವಾಗಿ HMOಗಳು "ಆರೋಗ್ಯ ಯೋಜನೆ" ಪದವನ್ನು ಬಳಸುತ್ತವೆ ಮತ್ತು ವಾಣಿಜ್ಯ ವಿಮಾ ಕಂಪೆನಿಗಳು "ಆರೋಗ್ಯ ವಿಮೆ" ಪದವನ್ನು ಉಪಯೋಗಿಸುತ್ತವೆ. ಆರೋಗ್ಯ ಯೋಜನೆಯು HMOಗಳಿಂದ, ಬಡತಿಹೊಂದಿದ ಒದಗಿಸುವವರ ಸಂಸ್ಥೆಗಳಿಂದ ಅಥವಾ ಪಾಯಿಂಟ್ ಆಫ್ ಸರ್ವಿಸ್ ಯೋಜನೆಗಳಿಂದ ಒದಗಿಸಲಾದ ಚಂದಾ ಪಾವತಿ-ಆಧಾರಿತ ವೈದ್ಯಕೀಯ ರಕ್ಷಣೆ ವ್ಯವಸ್ಥೆಯನ್ನು ಸೂಚಿಸಬಹುದು.
  • ಈ ಯೋಜನೆಗಳು ಮುಂಗಡವಾಗಿ ಪಾವತಿಸುವ ದಂತವೈದ್ಯದ, ಮುಂಗಡವಾಗಿ ಪಾವತಿಸುವ ಕಾನೂನಿನ ಮತ್ತು ಮುಂಗಡವಾಗಿ ಪಾವತಿಸುವ ದೃಷ್ಟಿಯ ಯೋಜನೆಗಳಂತೆ ಇರುತ್ತದೆ. ಮುಂಗಡವಾಗಿ ಪಾವತಿಸುವ ಆರೋಗ್ಯ ಯೋಜನೆಗಳು ವಿಶಿಷ್ಟವಾಗಿ ನಿರ್ದಿಷ್ಟ ಸಂಖ್ಯೆಯ ಸೇವೆಗಳಿಗೆ ಪಾವತಿಸುತ್ತವೆ (ಉದಾಹರಣೆಗಾಗಿ, $೩೦೦ ಮುನ್ನೆಚ್ಚರಿಕೆಯ ರಕ್ಷಣೆಯಲ್ಲಿ, ಕೆಲವು ದಿನಗಳ ಕಾಲ ರೋಗಿಗಳನ್ನು ನೋಡಿಕೊಳ್ಳಲು ಜಾಗದ ರಕ್ಷಣೆ ಅಥವಾ ನುರಿತ ಶುಶ್ರೂಷೆ-ಸೌಲಭ್ಯದ ರಕ್ಷಣೆ, ನಿರ್ದಿಷ್ಟ ಸಂಖ್ಯೆಯ ಮನೆ ಆರೋಗ್ಯ ಭೇಟಿಗಳು, ಕೆಲವು ಬೆನ್ನುಮೂಳೆ-ಪರೀಕ್ಷೆಯ ಶುಲ್ಕಗಳು ಇತ್ಯಾದಿ).
  • ಒದಗಿಸಲಾಗುವ ಸೇವೆಗಳು ಸಾಮಾನ್ಯವಾಗಿ ಚಂದಾ ಪಾವತಿಯ ಆರೋಗ್ಯ ಯೋಜನೆಯನ್ನು ಒದಗಿಸುವ ನಿರ್ವಹಿಸಲ್ಪಟ್ಟ ರಕ್ಷಣಾ ಅಸ್ತಿತ್ವದೊಂದಿಗೆ (ಮ್ಯಾಮೇಜ್ಡ್ ಕೇರ್ ಎಂಟಿಟಿ) ಒಪ್ಪಂದ ಮಾಡಿಕೊಂಡಿರುವ ಬಳಕೆ ಪುನಃಪರಿಶೀಲನೆ (ಯುಟಿಲೈಸೇಶನ್ ರಿವ್ಯೂ) ನರ್ಸ್ನ ಇಷ್ಟಾನುಸಾರದಲ್ಲಿರುತ್ತದೆ. ಇದನ್ನು ಆಸ್ಪತ್ರೆಗೆ ಸೇರಿಸುವುದಕ್ಕಿಂತ ಮೊದಲು ಅಥವಾ ನಂತರ ಮಾಡಲಾಗುತ್ತದೆ (ಕೂಡು ಬಳಕೆ ಪುನಃಪರಿಶೀಲನೆ).

ವಿವಿಧೋದ್ದೇಶದ ಮತ್ತು ಷೆಡ್ಯೂಲ್ ಮಾಡಿದ ಬದಲಾಯಿಸಿ

  • ವಿವಿಧೋದ್ದೇಶದ ಆರೋಗ್ಯ ವಿಮೆಯು ಕಳೆಯಬಹುದಾದುದನ್ನು (ಸಾಮಾನ್ಯವಾಗಿ ಆಸ್ಪತ್ರೆಯ ಖರ್ಚಿಗೆ ಅನ್ವಯಿಸುತ್ತದೆ) ಅಥವಾ ಸಹ-ಪಾವತಿಯನ್ನು (ಸಾಮಾನ್ಯವಾಗಿ ವೈದ್ಯರ ಶುಲ್ಕಕ್ಕೆ ಅನ್ವಯಿಸುತ್ತದೆ, ಆದರೆ ಕೆಲವು ಆಸ್ಪತ್ರೆಯ ಸೇವೆಗಳಿಗೂ ಅನ್ವಯಿಸುತ್ತದೆ) ವಿಮೆ ಮಾಡಿದವರು ಪಾವತಿಸಿದ ನಂತರ ಆಸ್ಪತ್ರೆಯ ಖರ್ಚು ಮತ್ತು ವೈದ್ಯರ ಶುಲ್ಕುಗಳ ಪ್ರತಿಶತವನ್ನು ಪಾವತಿಸುತ್ತದೆ.
  • ಹೆಚ್ಚಿನ ಲಾಭದ ಪಾವತಿಯಿಂದಾಗಿ — $೧,೦೦೦,೦೦೦ ರಿಂದ ೫,೦೦೦,೦೦೦ ಸಾಮಾನ್ಯವಾಗಿರುತ್ತದೆ — ಮತ್ತು ವಿಸ್ತಾರವಾದ ವಿಮಾರಕ್ಷಣೆಯ ಪ್ರಯೋಜನಗಳಿಂದಾಗಿ ಈ ಯೋಜನೆಗಳು ಸಾಮಾನ್ಯವಾಗಿ ದುಬಾರಿಯಾಗಿರುತ್ತವೆ.[೧೨]
  • ಷೆಡ್ಯೂಲ್ ಮಾಡಿದ ಆರೋಗ್ಯ ವಿಮೆ ಯೋಜನೆಗಳು ಸಾಂಪ್ರದಾಯಿಕ ವಿವಿಧೋದ್ದೇಶದ ಆರೋಗ್ಯ ವಿಮೆ ಯೋಜನೆಗಳನ್ನು ಬದಲಿಸುವ ಉದ್ದೇಶವನ್ನು ಹೊಂದಿರುವುದಿಲ್ಲ ಮತ್ತು ಇವು ವೈದ್ಯರಲ್ಲಿಗೆ ಹೋಗುವುದು ಅಥವಾ ಸೂಚಿಸಿದ ಔಷಧಿಯನ್ನು ತೆಗೆದುಕೊಳ್ಳುವಂತಹ ದಿನ-ದಿನದ ಆರೋಗ್ಯ ರಕ್ಷಣೆ ಒದಗಿಸುವ ಮೂಲ ಪಾಲಿಸಿಯಾಗಿವೆ. ಇತ್ತೀಚಿಗೆ ಈ ಯೋಜನೆಗಳು ಮಿನಿ-ಮೆಡ್ ಯೋಜನೆಗಳು ಅಥವಾ ಕೂಡಿಕೆ ಯೋಜನೆಗಳೆಂಬ ಹೆಸರು ಪಡೆದಿವೆ.
  • ಈ ಯೋಜನೆಗಳನ್ನು ಸೂಚಿಸಲು "ಕೂಡಿಕೆ" ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಾರೆ ಏಕೆಂದರೆ ಅವುಗಳಿಗೆ ವಿಮೆಯನ್ನು ಮಾರಾಟ ಮಾಡುವುದರ ಬದಲಿಗೆ ಇತರ ಕೆಲವು ಕಾರಣಕ್ಕೆ ಅಸ್ತಿತ್ವದಲ್ಲಿರಬೇಕಾದ ಕೂಡಿಕೆಯಲ್ಲಿನ ಸದಸ್ಯತ್ವವು ಅಗತ್ಯ ವಾಗಿರುತ್ತದೆ. ಉದಾಹರಣೆಗಳೆಂದರೆ - ನ್ಯಾಷನಲ್ ಅಸೋಸಿಯೇಶನ್ ಫಾರ್ ದ ಸೆಲ್ಫ್ ಎಂಪ್ಲಾಯ್ಡ್ ಮತ್ತು ಹೆಲ್ತ್ ಕೇರ್ ಕ್ರೆಡಿಟ್ ಯೂನಿಯನ್ ಅಸೋಸಿಯೇಶನ್.
  • ಈ ಯೋಜನೆಗಳು ಆಸ್ಪತ್ರೆಗೆ ಸೇರಿಸಲು ಮತ್ತು ಶಸ್ತ್ರಚಿಕಿತ್ಸೆಗೆ ಪ್ರಯೋಜನಗಳನ್ನು ಒದಗಿಸುತ್ತವೆ. ಆದರೆ ಈ ಪ್ರಯೋಜನಗಳು ಸೀಮಿತವಾಗಿರುತ್ತವೆ. ಷೆಡ್ಯೂಲ್ ಮಾಡಿದ ಯೋಜನೆಗಳು ದುರಂತದ ಘಟನೆಗಳಿಗೆ ಪರಿಣಾಮಕಾರಿಯಾಗಿರುವುದಿಲ್ಲ. ಈ ಯೋಜನೆಗಳ ಖರ್ಚು ವಿವಿಧೋದ್ದೇಶದ ಆರೋಗ್ಯ ವಿಮೆಗಿಂತ ತುಂಬಾ ಕಡಿಮೆ ಇರುತ್ತದೆ. ಅವು ಸಾಮಾನ್ಯವಾಗಿ ಸೀಮಿತ ಲಾಭದ ಮೊತ್ತವನ್ನು ಸೇವೆ ಒದಗಿಸುವವರಿಗೆ ನೇರವಾಗಿ ಪಾವತಿಸುತ್ತವೆ ಮತ್ತು ಪಾವತಿಗಳು ಯೋಜನೆಯ "ಪ್ರಯೋಜನಗಳ ಪಟ್ಟಿ"ಯನ್ನು ಆಧರಿಸಿರುತ್ತವೆ. ವಿಶಿಷ್ಟ ಷೆಡ್ಯೂಲ್ ಮಾಡಿದ ಆರೋಗ್ಯ ವಿಮೆಯ ವಾರ್ಷಿಕ ಲಾಭದ ಗರಿಷ್ಠ ಮಿತಿಯು $೧,೦೦೦ ರಿಂದ $೨೫,೦೦೦ ರಷ್ಟಿರುತ್ತದೆ.[೧೩]

ವಿಮೆಯ ದರಗಳ ಮೇಲೆ ಪ್ರಭಾವಬೀರುವ ಇತರ ಅಂಶಗಳು ಬದಲಾಯಿಸಿ

  • ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್‌ನ ಇತ್ತೀಚಿನ ಅಧ್ಯಯನವೊಂದು U.S.ನಲ್ಲಿ ಹೆಚ್ಚುತ್ತಿರುವ ಆರೋಗ್ಯ ರಕ್ಷಣೆ ಖರ್ಚುಗಳ ಚಾಲಕರನ್ನು ಪರಿಶೀಲಿಸುತ್ತಾ, ಹೆಚ್ಚಿದ ಗ್ರಾಹಕರ ಬೇಡಿಕೆ, ಹೊಸ ಚಿಕಿತ್ಸೆಗಳು ಮತ್ತು ಹೆಚ್ಚು ತೀವ್ರ-ರೋಗ ಲಕ್ಷಣ ಕಂಡುಹಿಡಿಯುವ ಪರೀಕ್ಷೆಗಳಿಂದ ಬಳಕೆಯು ಹೆಚ್ಚಾಗುತ್ತಿದೆ ಎಂದು ಸೂಚಿಸಿದೆ.[೧೪]
  • ಅಭಿವೃದ್ಧಿಹೊಂದಿದ ರಾಷ್ಟ್ರಗಳ ಜನರು ದೀರ್ಘಕಾಲ ಜೀವಿಸುತ್ತಾರೆ. ಆ ರಾಷ್ಟ್ರಗಳ ಜನರಿಗೆ ವಯಸ್ಸಾಗುತ್ತಿದೆ ಮತ್ತು ಆರೋಗ್ಯಪೂರ್ಣ ವಯಸ್ಕ ಜನರಿಗಿಂತ ಅತಿ ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರಿಗೆ ತೀವ್ರ ವೈದ್ಯಕೀಯ ರಕ್ಷಣೆಯ ಅವಶ್ಯಕತೆ ಇರುತ್ತದೆ. ಔಷಧಿ ಮತ್ತು ವೈದ್ಯಕೀಯ ತಂತ್ರಜ್ಞಾನದಲ್ಲಿನ ಬೆಳವಣಿಗೆಯೂ ಸಹ ವೈದ್ಯಕೀಯ ಚಿಕಿತ್ಸೆಯ ಖರ್ಚನ್ನು ಹೆಚ್ಚಿಸಬಹುದು. ಜೀವನ ಶೈಲಿ-ಸಂಬಂಧಿತ ಅಂಶಗಳು ಬಳಕೆಯನ್ನು, ಹಾಗೂ ಆ ಮೂಲಕ ವಿಮೆಯ ದರಗಳನ್ನು ಏರಿಸಬಹುದು:
  • ಸಾಕಷ್ಟಿಲ್ಲದ ವ್ಯಾಯಾಮ ಮತ್ತು ಆರೋಗ್ಯಪೂರ್ಣವಲ್ಲದ ಆಹಾರದ ಆಯ್ಕೆಗಳ ಕಾರಣಗಳಿಂದ ಹೆಚ್ಚಾದ ಸ್ಥೂಲಕಾಯತೆ; ವಿಪರೀತ ಆಲ್ಕಹಾಲ್ ಬಳಕೆ, ಧೂಮಪಾನ ಮತ್ತು ರಸ್ತೆಬದಿಯ ಔಷಧಿಗಳ ಬಳಕೆ. PWC ಅಧ್ಯಯನ ಗಮನಿಸಿದ ಇತರ ಅಂಶಗಳೆಂದರೆ ವ್ಯಾಪಕ-ಪ್ರವೇಶದ ಯೋಜನೆಗಳೆಡೆಗಿನ ಚಲನೆ, ಹೆಚ್ಚಿನ-ಬೆಲೆಯ ತಂತ್ರಜ್ಞಾನಗಳು ಹಾಗೂ ವೈದ್ಯಕೀಯ-ನೆರವಿನಿಂದ ಮತ್ತು ವಿಮೆ ಮಾಡದಿರುವಿಕೆಯಿಂದ ಖಾಸಗಿ ಪಾವತಿಗಾರರಿಗೆ ಬೆಲೆಯ-ಬದಲಾಯಿಸುವಿಕೆ.[೧೪]

ಹೋಲಿಕೆ ಬದಲಾಯಿಸಿ

ಕಾಮನ್‌ವೆಲ್ತ್ ಫಂಡ್ ಅದರ ವಾರ್ಷಿಕ ಸಮೀಕ್ಷೆ "ಮಿರರ್, ಮಿರರ್ ಆನ್ ದ ವಾಲ್"ನಲ್ಲಿ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಯುನೈಟೆಡ್ ಕಿಂಗ್ಡಮ್, ಜರ್ಮನಿ, ಕೆನಡಾ ಮತ್ತು U.S. ಮೊದಲಾದ ಪ್ರದೇಶಗಳಲ್ಲಿನ ಆರೋಗ್ಯ ರಕ್ಷಣೆ ವ್ಯವಸ್ಥೆಗಳ ನಿರ್ವಹಣೆಯನ್ನು ಹೋಲಿಸುತ್ತದೆ. ಅದರ ೨೦೦೭ ರ ಅಧ್ಯಯನವು, U.S. ವ್ಯವಸ್ಥೆಯು ಹೆಚ್ಚು ದುಬಾರಿಯಾಗಿದ್ದರೂ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಅದು ಕೆಟ್ಟದಾಗಿ ನಿರ್ವಹಿಸುತ್ತದೆ ಎಂದು ಕಂಡುಹಿಡಿದಿದೆ.[೧೫] ಈ ಅಧ್ಯಯನವು ಕಂಡುಹಿಡಿದ U.S. ಮತ್ತು ಇತರ ರಾಷ್ಟ್ರಗಳ ನಡುವಿನ ಒಂದು ವ್ಯತ್ಯಾಸವೆಂದರೆ U.S. ಸಾರ್ವತ್ರಿಕ ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿರದ ಏಕೈಕ ರಾಷ್ಟ್ರವಾಗಿದೆ.

ಆಸ್ಟ್ರೇಲಿಯಾ ಬದಲಾಯಿಸಿ

  • ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮೆಡಿಕೇರ್‌ ಎಂದು ಕರೆಯುತ್ತಾರೆ. ಇದು ಆಸ್ಪತ್ರೆಯ ಚಿಕಿತ್ಸೆಗೆ ಉಚಿತ ಸಾರ್ವತ್ರಿಕ ಪ್ರವೇಶವನ್ನು ಒದಗಿಸುತ್ತದೆ ಮತ್ತು ಆಸ್ಪತ್ರೆಯ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ನೀಡುತ್ತದೆ. ಇದಕ್ಕೆ ಬಂಡವಾಳವು ಎಲ್ಲಾ ತೆರಿಗೆ-ಪಾವತಿಸುವವರ ಮೇಲೆ ೧.೫ % ತೆರಿಗೆ ವಿಧಿಸುವುದರಿಂದ, ಹೆಚ್ಚು ಆದಾಯ ಗಳಿಸುವವರ ಮೇಲೆ ಹೆಚ್ಚುವರಿ 1% ತೆರಿಗೆಯನ್ನು ಹಾಕುವುದರಿಂದ ಮತ್ತು ಸಾಮಾನ್ಯ ಆದಾಯದಿಂದ ಬರುತ್ತದೆ.
  • ಖಾಸಗಿ ಆರೋಗ್ಯ ವ್ಯವಸ್ಥೆಗೆ ಅನೇಕ ಖಾಸಗಿ ಆರೋಗ್ಯ ವಿಮಾ ಸಂಘಟನೆಗಳು ಬಂಡವಾಳ ಒದಗಿಸುತ್ತವೆ. ಇದರಲ್ಲಿ ಅತಿ ದೊಡ್ಡದಾದುದು ಮೆಡಿಬ್ಯಾಂಕ್ ಪ್ರೈವೇಟ್. ಇದು ಸರಕಾರಕ್ಕೆ-ಸೇರಿದ್ದರೂ, ಎಲ್ಲಾ ಇತರ ದೃಢೀಕೃತ ಖಾಸಗಿ ಆರೋಗ್ಯ ಸಂಸ್ಥೆಗಳಂತಹುದೇ ನಿಯಂತ್ರಕ ಆಳ್ವಿಕೆ ವಿಧಾನದಡಿಯಲ್ಲಿ ಸರಕಾರಿ ವ್ಯವಹಾರ ಉದ್ಯಮವಾಗಿ ಕಾರ್ಯನಿರ್ವಹಿಸುತ್ತದೆ.
  • ಮೆಡಿಬ್ಯಾಂಕ್ ೨೦೦೭ ರ ಚುನಾವಣೆಯಲ್ಲಿ ಗೆದ್ದರೆ ಅದನ್ನು ಖಾಸಗಿಗೊಳಿಸಲಾಗುತ್ತದೆ ಎಂದು ಕೊಯಲಿಶನ್ ಹೊವಾರ್ಡ್ ಸರಕಾರವು ಘೋಷಿಸಿತು. ಆದರೆ ಅದು ಕೆವಿನ್ ರುಡ್ನಡಿಯಲ್ಲಿ ಆಸ್ಟ್ರೇಲಿಯನ್ ಲೇಬರ್ ಪಾರ್ಟಿಯಿಂದ ಸೋಲಲ್ಪಟ್ಟಿತು ಹಾಗೂ ಅದು ಸರಕಾರಿ-ಸ್ವಾಮ್ಯದಲ್ಲಿಯೇ ಇರುತ್ತದೆ ಎಂದು ಪ್ರತಿಜ್ಞೆ ಮಾಡಿತು. ಕೆಲವು ಖಾಸಗಿ ಆರೋಗ್ಯ ವಿಮೆಗಾರ ಸಂಸ್ಥೆಗಳು 'ಲಾಭದ ಉದ್ದೇಶವನ್ನು ಹೊಂದಿರುವ' ಉದ್ಯಮಗಳಾಗಿವೆ.
  • ಉದಾಹರಣೆಗಾಗಿ ಆಸ್ಟ್ರೇಲಿಯನ್ ಯುನಿಟಿ. ಮತ್ತೆ ಕೆಲವು ಲಾಭವಿಲ್ಲದ ಸಂಘಟನೆಗಳಾಗಿವೆ, ಉದಾಹರಣೆಗಾಗಿ HCF ಆರೋಗ್ಯ ವಿಮೆ ಮತ್ತು GMHBA ಆರೋಗ್ಯ ವಿಮೆ. ಕೆಲವು ನಿರ್ದಿಷ್ಟ ಗುಂಪುಗಳಿಗೆ ಸೀಮಿತಗೊಂಡ ಸದಸ್ಯತ್ವವನ್ನು ಹೊಂದಿರುತ್ತವೆ. ಆದರೆ ಹೆಚ್ಚಿನವು ಮುಕ್ತ ಸದಸ್ಯತ್ವವನ್ನು ಹೊಂದಿರುತ್ತವೆ.
  • ಹೆಚ್ಚಿನ ಆರೋಗ್ಯ ಸಂಸ್ಥೆಗಳ ಸದಸ್ಯತ್ವವು ಈಗ ಹೋಲಿಕೆಯ ವೆಬ್‌‍ಸೈಟ್‌ಗಳಾದ ಮನಿಟೈಮ್, ಐಸೆಲೆಕ್ಟ್ ಅಥವಾ ನಿರ್ಧಾರ ಸಹಾಯಕ ಸೈಟ್‌ಗಳಾದ ಹೆಲ್ಪ್‌ಮಿಚೂಸ್ ಮತ್ತು ಇತ್ತೀಚಿನ ಯುಕಂಪೇರ್ನ ಮೂಲಕವೂ ಲಭ್ಯವಾಗುತ್ತದೆ. ಈ ಹೋಲಿಕೆಯ ಸೈಟ್‌ಗಳು ಕಮೀಷನ್‌ನ-ಆಧಾರದಲ್ಲಿ ಅವುಗಳ ಭಾಗವಹಿಸುವ ಆರೋಗ್ಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಕಾರ್ಯನಿರ್ವಹಿಸುತ್ತವೆ.

ಖಾಸಗಿ ಆರೋಗ್ಯ ವಿಮೆ ಆಕ್ಟ್ ೨೦೦೭ ಬದಲಾಯಿಸಿ

ಆಸ್ಟ್ರೇಲಿಯಾದಲ್ಲಿ ಖಾಸಗಿ ಆರೋಗ್ಯ ವಿಮೆಯ ಹೆಚ್ಚಿನ ಅಂಶಗಳು ಖಾಸಗಿ ಆರೋಗ್ಯ ವಿಮೆ ಆಕ್ಟ್ 2007 ರಿಂದ ನಿಯಂತ್ರಿಸಲ್ಪಡುತ್ತವೆ. ಆಸ್ಟ್ರೇಲಿಯಾದಲ್ಲಿನ ಖಾಸಗಿ ಆರೋಗ್ಯ ವ್ಯವಸ್ಥೆಯು "ಸಮುದಾಯ ದರದ" ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಆ ಮೂಲಕ ಪ್ರೀಮಿಯಂಗಳು, ವ್ಯಕ್ತಿಗಳ ಹಿಂದಿನ ವೈದ್ಯಕೀಯ ಇತಿಹಾಸ, ಪ್ರಸ್ತುತ ಆರೋಗ್ಯದ ಸ್ಥಿತಿ ಅಥವಾ ಅವರ ವಯಸ್ಸಿನಿಂದಾಗಿ ಏಕಮಾತ್ರವಾಗಿ ವ್ಯತ್ಯಾಸಗೊಳ್ಳುವುದಿಲ್ಲ (ಆದರೆ ಕೆಳಗಿನ ಜೀವಮಾನ ಆರೋಗ್ಯ ರಕ್ಷಣೆಯನ್ನು ಗಮನಿಸಿ) ಇದರ ಬಾಕಿಯು ಕಾಯುವ ಅವಧಿಯಾಗಿದೆ, ನಿರ್ದಿಷ್ಟವಾಗಿ ಹಿಂದೆ-ಅಸ್ತಿತ್ವದಲ್ಲಿರುವ ಸ್ಥಿತಿಗಳು (ಸಾಮಾನ್ಯವಾಗಿ "ಪ್ರಿ-ಎಕ್ಸಿಸ್ಟಿಂಗ್ ಏಲ್ಮೆಂಟ್" ಎನ್ನುವ PEAಯಂತಹ ಉದ್ಯಮದೊಳಗಿದನ್ನು ಸೂಚಿಸುತ್ತದೆ).

  • ಸಂಸ್ಥೆಗಳು ವ್ಯಕ್ತಿಯು ವಿಮೆಯನ್ನು ಮೊದಲು ತೆಗೆದುಕೊಂಡ ದಿನದಿಂದ ಆರು ತಿಂಗಳ ಕಾಲ ಚಿಹ್ನೆ ಮತ್ತು ಲಕ್ಷಣಗಳು ಕಾಣಿಸಿಕೊಂಡ ಯಾವುದೇ ವೈದ್ಯಕೀಯ ಸ್ಥಿತಿಯ ಪ್ರಯೋಜನಗಳ ಮೇಲೆ ೧೨ ತಿಂಗಳ ಕಾಯುವ ಅವಧಿಯನ್ನು ವಿಧಿಸುವ ಅಧಿಕಾರವನ್ನು ಹೊಂದಿರುತ್ತವೆ. ಅವು ಪ್ರಸೂತಿಯ ಸ್ಥಿತಿಗೆ ಸಂಬಂಧಿಸಿದ ಚಿಕಿತ್ಸೆಯ ಪ್ರಯೋಜನಗಳಿಗೆ ೧೨-ತಿಂಗಳ ಕಾಯುವ ಅವಧಿಯನ್ನು ಮತ್ತು ವ್ಯಕ್ತಿಯು ಮೊದಲು ಖಾಸಗಿ ವಿಮೆಯನ್ನು ತೆಗೆದುಕೊಂಡಾಗ ಎಲ್ಲಾ ಇತರ ಪ್ರಯೋಜನಗಳಿಗೆ ೨-ತಿಂಗಳ ಕಾಯುವ ಅವಧಿಯನ್ನು ವಿಧಿಸಲು ಅಧಿಕಾರವನ್ನು ಹೊಂದಿರುತ್ತವೆ. ಸಂಸ್ಥೆಗಳು ವೈಯಕ್ತಿಕ ಸಂದರ್ಭಗಳಲ್ಲಿ ಅಂತಹ ಕಾಯುವ ಅವಧಿಯನ್ನು ಕಡಿಮೆ ಮಾಡುವ ಅಥವಾ ತೆಗೆದುಹಾಕುವ ಸ್ವಾತಂತ್ರ್ಯವನ್ನು ಹೊಂದಿರುತ್ತವೆ.
  • ಇತರ ಸಂಸ್ಥೆಗಳಿಂದ ಅಥವಾ ಬೇರೆ ಸಂಸ್ಥೆಗಳನ್ನು ಸೇರಲು ಉದ್ದೇಶಿಸಿದ್ದ ಸದಸ್ಯರಿಂದ ವಿಷಮ ಪ್ರಮಾಣದ ಸದಸ್ಯರನ್ನು ಆಕರ್ಷಿಸುವುದರೊಂದಿಗೆ ಆರಂಭಿಸದಂತೆ ಮಾಡಲೂ ಸಹ ಅವು ಸ್ವತಂತ್ರವಾಗಿರುತ್ತವೆ. ಆದರೆ ಇದು ಅಂತಹ ಸಂಸ್ಥೆಯನ್ನು "ಪ್ರತಿಕೂಲ ಆಯ್ಕೆ"ಯ ಅಪಾಯದಲ್ಲಿ ಸಿಲುಕಿಸುತ್ತದೆ. ಇದು ಪ್ರಸ್ತುತ ವೈದ್ಯಕೀಯ ಸ್ಥಿತಿಗಳೊಂದಿಗೆ, PEA ನಿಯಮದ ಕಾರಣದಿಂದ 12 ತಿಂಗಳವರೆಗಿನ ಪ್ರಯೋಜನಗಳ ನಿರಾಕರಣೆಯಿಂದಾಗಿ ಎಂದೆಂದಿಗೂ ವಿಮೆಯನ್ನು ತೆಗೆದುಕೊಳ್ಳಲು ಬಯಸದಿದ್ದ ಜನರನ್ನೂ ಆಕರ್ಷಿಸುತ್ತದೆ. ಆ ಸ್ಥಿತಿಗಳಿಗೆ ಒದಗಿಸಲ್ಪಡುವ ಪ್ರಯೋಜನಗಳು ಸಂಸ್ಥೆಯ ಎಲ್ಲಾ ಸದಸ್ಯರ ಪ್ರೀಮಿಯಂಗಳ ಮೇಲೆ ಒತ್ತಡವನ್ನು ಹೇರಬಹುದು, ಅಲ್ಲದೆ ಕೆಲವರು ಅವರ ಸದಸ್ಯತ್ವವನ್ನು ಹಿಂದೆಗೆದುಕೊಳ್ಳಲು ಕಾರಣವಾಗಬಹುದು. ಇದು ಪ್ರೀಮಿಯಂಗಳು ಇನ್ನಷ್ಟು ಹೆಚ್ಚಾಗುವಂತೆ ಮಾಡಬಹುದು ಮತ್ತು ತೀವ್ರ ಪ್ರಮಾಣದಲ್ಲಿ ಸದಸ್ಯರು ಪ್ರೀಮಿಯಂಗಳನ್ನು-ಬಿಟ್ಟುಬಿಡಬಹುದು.
  • ಸಂಸ್ಥೆಗಳು ಸದಸ್ಯರ ಮಧ್ಯೆ ಪ್ರೀಮಿಯಂ, ಲಾಭಗಳು ಅಥವಾ ಸದಸ್ಯತ್ವದ ವಿಷಯದಲ್ಲಿ ವ್ಯತ್ಯಾಸ ತೋರಿಸಲು ಅವಕಾಶ ಕಲ್ಪಿಸದಿರುವ ಬಗ್ಗೆ ಅನೇಕ ಇತರ ಅಂಶಗಳಿವೆ. ಅವುಗಳೆಂದರೆ ಜನಾಂಗದ ಮೂಲ, ಧರ್ಮ, ಲಿಂಗ, ಲೈಂಗಿಕ ಆಸಕ್ತಿ, ಉದ್ಯೋಗದ ಸ್ವರೂಪ ಮತ್ತು ಬಿಡುವಿನ ಕಾಲದ ಚಟುವಟಿಕೆಗಳು. ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಮಾರಾಟವಾದ ಸಂಸ್ಥೆಯ ಉತ್ಪನ್ನದ ಪ್ರೀಮಿಯಂಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಜೀವಮಾನ ಆರೋಗ್ಯ ರಕ್ಷಣೆ ಬದಲಾಯಿಸಿ

  • ಅದು ಒಂದು ರಾಜ್ಯದೊಳಗೆ ವ್ಯತ್ಯಾಸಗೊಳ್ಳುವುದಿಲ್ಲ. ಆಸ್ಟ್ರೇಲಿಯಾದ ಸರಕಾರವು ಖಾಸಗಿ ಆಸ್ಪತ್ರೆ ವಿಮೆಯನ್ನು ತೆಗೆದುಕೊಳ್ಳುವಂತೆ ವಯಸ್ಕರನ್ನು ಪ್ರೇರೇಪಿಸಲು ಅನೇಕ ಉತ್ತೇಜಕ-ಸವಲತ್ತುಗಳನ್ನು ಬಳಕೆಗೆ ತಂದಿದೆ. ಅವುಗಳೆಂದರೆ:

ಜೀವಮಾನ ಆರೋಗ್ಯ ರಕ್ಷಣೆ : ವ್ಯಕ್ತಿಯೊಬ್ಬನು ಖಾಸಗಿ ಆಸ್ಪತ್ರೆ ವಿಮಾ ರಕ್ಷಣೆಯನ್ನು ಅವನ ೩೧ ನೇ ಜನ್ಮದಿನದ ನಂತರ ೧ ನೇ ಜುಲೈವೊಳಗೆ ತೆಗೆಯದಿದ್ದರೆ, ಆ ಸಮಯದನಂತರ ಅವನ ಪ್ರೀಮಿಯಂಗಳಿಗೆ ಪ್ರತಿ ವರ್ಷಕ್ಕೆ ೨% ರಷ್ಟು ವಿಶೇಷ ಬಡ್ತಿಯನ್ನು ಪಡೆಯುತ್ತಾನೆ. ಆದ್ದರಿಂದ ಖಾಸಗಿ ರಕ್ಷಣೆಯನ್ನು ಪಡೆಯುವ ವ್ಯಕ್ತಿಯು ಅವನ ೪೦ ವರ್ಷದಲ್ಲಿ ೨೦ ಪ್ರತಿಶತದಷ್ಟು ವಿಶೇಷ ಬಡ್ತಿಯನ್ನು ಪಡೆಯುತ್ತಾನೆ.

  • ಈ ವಿಶೇಷ ಬಡ್ತಿಯು ೧೦ ವರ್ಷಗಳ ನಿರಂತರ ಆಸ್ಪತ್ರೆಯ ರಕ್ಷಣೆಯ ನಂತರ ರದ್ದುಗೊಳ್ಳುತ್ತದೆ. ಈ ವಿಶೇಷ ಬಡ್ತಿಯು ಆಸ್ಪತ್ರೆ ರಕ್ಷಣೆಯ ಪ್ರೀಮಿಯಂಗಳಿಗೆ ಮಾತ್ರ ಅನ್ವಯಿಸುತ್ತದೆ, ಸಹಾಯಕ (ಹೆಚ್ಚುವರಿ) ರಕ್ಷಣೆಗೆ ಅಲ್ಲ.
  • ಮೆಡಿಕೇರ್‌ ಲೇವಿ ಸರ್ಚಾರ್ಜ್ : ತೆರೆಗೆ ವಿಧಿಸಬಲ್ಲ ಆದಾಯವು ನಿರ್ದಿಷ್ಟಪಡಿಸಿದ ಮೊತ್ತಕ್ಕಿಂತ (ಪ್ರಸ್ತುತ ಅವಿವಾಹಿತರಿಗೆ $೭೦,೦೦೦ ಮತ್ತು ವಿವಾಹಿತರಿಗೆ $೧೪೦,೦೦೦) ಹೆಚ್ಚಿರುವ ಮತ್ತು ಸಮರ್ಪಕವಾದ ಖಾಸಗಿ ಆಸ್ಪತ್ರೆಯ ರಕ್ಷಣೆಯನ್ನು ಹೊಂದಿರದವರು ಪ್ರಮಾಣಿತ ೧.೫% ಮೆಡಿಕೇರ್‌ ಲೇವಿಯಲ್ಲಿ ೧% ರಷ್ಟು ಅಧಿಕ ಕರವನ್ನು ಪಾವತಿಸಬೇಕು. ಇದಕ್ಕೆ ತಾರ್ಕಿಕ ವಿವರಣೆಯೆಂದರೆ - ಈ ಆದಾಯದ ಗುಂಪಿನಡಿಯಲ್ಲಿ ಬರುವ ಜನರು ಅಧಿಕ ಹಣವನ್ನು ಪಾವತಿಸುವಂತೆ ಬಲವಂತಕ್ಕೊಳಗಾದರೆ ಹೆಚ್ಚಿನವರು, ಆ ಹಣವನ್ನು ಹೆಚ್ಚುವರಿ ತೆರಿಗೆಯ ರೂಪದಲ್ಲಿ ಪಾವತಿಸುವ ಬದಲಿಗೆ ಮತ್ತು ಅವರ ಸ್ವಂತ ಖಾಸಗಿ ಆಸ್ಪತ್ರೆಯ ಖರ್ಚುಗಳನ್ನು ಭರಿಸುವ ಉದ್ದೇಶದಿಂದ ಖಾಸಗಿ ಆಸ್ಪತ್ರೆಯ ಚಿಕಿತ್ಸೆಯ ಪ್ರಯೋಜನಗಳನ್ನು ಪಡೆಯಲು ಆಸ್ಪತ್ರೆಯ ವಿಮೆ ಖರೀದಿಸಲು ಬಯಸುತ್ತಾರೆ.
  • ಆಸ್ಟ್ರೇಲಿಯಾದ ಸರಕಾರವು ೨೦೦೮ ರ ಮೇಯಲ್ಲಿ, ಮಿತಿಯನ್ನು ಅವಿವಾಹಿತರಿಗೆ $೧೦೦,೦೦೦ ರಷ್ಟಕ್ಕೆ ಮತ್ತು ಕುಟುಂಬಿಕರಿಗೆ $೧೫೦,೦೦೦ ರಷ್ಟಕ್ಕೆ ಏರಿಸುವ ಉದ್ದೇಶವನ್ನು ಹೊಂದಿದೆ ಎಂದು ಘೋಷಿಸಿತು. ಈ ಬದಲಾವಣೆಗಳಿಗೆ ಕಾನೂನುರಚನೆಯ ಅನುಮೋದನೆಯ ಅವಶ್ಯಕತೆ ಇರುತ್ತದೆ. ಕಾನೂನನ್ನು ಬದಲಾಯಿಸುವ ಕಾಯಿದೆಯೊಂದನ್ನು ಮಂಡಿಸಲಾಯಿತು. ಆದರೆ ಇದನ್ನು ಸೆನೆಟ್‌ ಮಂಜೂರು ಮಾಡಲಿಲ್ಲ.[೧೬][೧೭] ಇದರ ತಿದ್ದುಪಡಿಮಾಡಿದ ಆವೃತ್ತಿಯು 2008ರ ಅಕ್ಟೋಬರ್ 16ರಂದು ಅನುಮೋದನೆಯನ್ನು ಪಡೆಯಿತು. ಈ * ಬದಲಾವಣೆಗಳುಸಾರ್ವಜನಿಕ ಆಸ್ಪತ್ರೆಯ ವ್ಯವಸ್ಥೆಯ ಮೇಲೆ ಹೆಚ್ಚಿನ ಭಾರವನ್ನು ಹಾಕಲು ಮತ್ತು ಖಾಸಗಿ ವ್ಯವಸ್ಥೆಯಲ್ಲಿ ಉಳಿಯುವವರಿಗೆ ಪ್ರೀಮಿಯಂಗಳು ಏರಲು ಕಾರಣವಾಗುವುದರ ಮೂಲಕ ಹೆಚ್ಚಿನವರಿಗೆ ಅವರ ಖಾಸಗಿ ಆರೋಗ್ಯ ವಿಮೆಯನ್ನು ರದ್ದುಗೊಳಿಸುವಂತೆ ಮಾಡಬಹುದು ಎಂಬ ಟೀಕೆಗಳಿದ್ದವು. ಕೆಲವು ವಿಮರ್ಶಕರು ಪರಿಮಾಣವು ಕಡಿಮೆ ಪ್ರಮಾಣದಲ್ಲಿರಬಹುದೆಂದು ನಂಬಿದ್ದರು.[೧೮]
  • ಖಾಸಗಿ ಆರೋಗ್ಯ ವಿಮೆ ರಿಯಾಯಿತಿ : ಸರಕಾರವು ಆಸ್ಪತ್ರೆ ಮತ್ತು ಸಹಾಯಕ(ಹೆಚ್ಚುವರಿ)ವನ್ನೂ ಒಳಗೊಂಡಂತೆ ಎಲ್ಲಾ ಖಾಸಗಿ ಆರೋಗ್ಯ ವಿಮಾ ರಕ್ಷಣೆಗಳಿಗೆ ವಯಸ್ಸಿನ ಆಧಾರದಲ್ಲಿ ೩೦%, ೩೫% ಅಥವಾ ೪೦% ರಷ್ಟು ಪ್ರೀಮಿಯಂಗಳ ಸಹಾಯಧನ ಒದಗಿಸುತ್ತದೆ. ರುಡ್ ಸರಕಾರವು ೨೦೦೯ ರ ಮೇಯಲ್ಲಿ, ೨೦೧೦ ರ ಜುಲೈಯೊಳಗೆ ಈ ರಿಯಾಯಿತಿಯು ಆದಾಯ ತನಿಖೆಯಾಗುತ್ತದೆ ಮತ್ತು ಸ್ಲೈಡಿಂಗ್ ಸ್ಕೇಲ್‌ನಲ್ಲಿ ಒದಗಿಸಲ್ಪಡುತ್ತದೆ ಎಂದು ಘೋಷಿಸಿತು.

ಕೆನಡಾ ಬದಲಾಯಿಸಿ

  • ಕೆನಡಾದಲ್ಲಿ ಆರೋಗ್ಯ ರಕ್ಷಣೆಯು ಮುಖ್ಯವಾಗಿ ಪ್ರಾಂತೀಯ ಸರಕಾರದ ಜವಾಬ್ದಾರಿಯಾಗಿದೆ (ಇದಕ್ಕೆ ಹೊರತಾದ ಫೆಡರಲ್ ಸರಕಾರವು ಒಪ್ಪಂದ, ರಾಯಲ್ ಕೆನಡಿಯನ್ ಮೌಂಟೆಡ್ ಪಾಲಿಸಿ, ರಕ್ಷಣಾ ಸೈನ್ಯ ಮತ್ತು ಸಂಸತ್ತಿನ ಸದಸ್ಯರಿಂದ ರಕ್ಷಿಲ್ಪಡುವ ಮೂಲನಿವಾಸಗರಿಗೆ ಒದಗಿಸಲಾಗುವ ಸೇವೆಗಳಿಗೆ ಜವಾಬ್ದಾರವಾಗಿದೆ). ಆದುದರಿಂದ ಪ್ರತಿ ಪ್ರಾಂತವು ಅದರ ಸ್ವಂತ ಆರೋಗ್ಯ ವಿಮಾ ಯೋಜನೆಗಳನ್ನು ಹೊಂದಿರುತ್ತವೆ.
  • ಫೆಡರಲ್ ಸರಕಾರವು ಅದರ ಹಣಕಾಸಿನ ಅಧಿಕಾರದ ಬಲದಿಂದ ಆರೋಗ್ಯ ವಿಮೆಯ ಮೇಲೆ ಪ್ರಭಾವ ಬೀರುತ್ತದೆ. ಅದು ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆಗಳ ಖರ್ಚುಗಳಿಗೆ ನೆರವು ಒದಗಿಸಲು ನಗದು ಮತ್ತು ತೆರಿಗೆಯನ್ನು ಪ್ರಾಂತಗಳಿಗೆ ಕಳುಹಿಸುತ್ತದೆ. ಕೆನಡಾ ಹೆಲ್ತ್ ಆಕ್ಟ್‌ನಡಿಯಲ್ಲಿ, ಫೆಡರಲ್ ಸರಕಾರವು ವೈದ್ಯರಿಂದ ಅಥವಾ ಆಸ್ಪತ್ರೆಗಳಲ್ಲಿ ನೀಡಲಾಗುವ ಪ್ರಾಥಮಿಕವಾಗಿ ರಕ್ಷಣೆಯೆಂದು ನಿರೂಪಿಸಲಾದ "ವೈದ್ಯಕೀಯವಾಗಿ ಅವಶ್ಯಕವಾದ ಸೇವೆ"ಗಳಿಗೆ ಮತ್ತು ದೀರ್ಘಕಾಲದ ಮನೆಯ-ರಕ್ಷಣೆಯ ಶುಶ್ರೂಷೆಗೆ ಎಲ್ಲರೂ ಉಚಿತ ಪ್ರವೇಶವನ್ನು ಹೊಂದಬೇಕೆಂಬ ಅಗತ್ಯಕಾರ್ಯವನ್ನು ವಿಧಿಸುತ್ತದೆ ಮತ್ತು ಕಡ್ಡಾಯಗೊಳಿಸುತ್ತದೆ.
  • ಪ್ರಾಂತಗಳು ವೈದ್ಯಕೀಯವಾಗಿ ಅವಶ್ಯಕವಾದ ಸೇವೆಗಳಿಗಾಗಿ ರೋಗಿಗಳಿಗೆ ಶುಲ್ಕವಿಧಿಸಲು ವೈದ್ಯರಿಗೆ ಅಥವಾ ಸಂಸ್ಥೆಗಳಿಗೆ ಅನುವು ಮಾಡಿಕೊಟ್ಟರೆ, ಫೆಡರಲ್ ಸರಕಾರವು ನಿಷೇಧಿತ ಶುಲ್ಕಗಳಿಂದ ಪ್ರಾಂತಗಳಿಗೆ ಆ ಪಾವತಿಗಳನ್ನು ಕಡಿಮೆ ಮಾಡುತ್ತದೆ. ಕೆನಡಾದಲ್ಲಿ ಸಾರ್ವಜನಿಕ ಪ್ರಾಂತೀಯ ಆರೋಗ್ಯ ವಿಮಾ ವ್ಯವಸ್ಥೆಗಳನ್ನು ಹೆಚ್ಚಾಗಿ ಮೆಡಿಕೇರ್‌ ಎಂದು ಕರೆಯಲಾಗುತ್ತದೆ. ಈ ಸಾರ್ವಜನಿಕ ವಿಮೆಯು ಸಾಮಾನ್ಯ ಸರಕಾರ ಆದಾಯದಿಂದ ತೆರಿಗೆ-ಸಂಗ್ರಹಿಸುತ್ತದೆ.
  • ಆದರೆ ಬ್ರಿಟಿಷ್ ಕೊಲಂಬಿಯ ಮತ್ತು ಆಂಟಾರಿಯೊ ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ಹೆಚ್ಚುವರಿ ಆದಾಯವನ್ನು ಮೂಲಭೂತವಾಗಿ ಅಧಿಕ ತೆರಿಗೆಯನ್ನು ಹುಟ್ಟಿಸಲು ಕಡಿಮೆ ದರಗಳಲ್ಲಿ ಕಡ್ಡಾಯ ಪ್ರೀಮಿಯಂಅನ್ನು ವಿಧಿಸುತ್ತದೆ. ಖಾಸಗಿ ಆರೋಗ್ಯ ವಿಮೆಗೆ ಅನುಮತಿಸಲಾಗುತ್ತದೆ. ಆದರೆ ಆರು ಪ್ರಾಂತೀಯ ಸರಕಾರಗಳಲ್ಲಿ ಸಾರ್ವಜನಿಕ ಆರೋಗ್ಯ ಯೋಜನೆಗಳು ರಕ್ಷಣೆ ಒದಗಿಸದ ಸೇವೆಗಳಿಗೆ ಮಾತ್ರ, ಉದಾಹರಣೆಗಾಗಿ ಆಸ್ಪತ್ರೆಗಳಲ್ಲಿನ ಅರೆ-ಖಾಸಗಿ ಅಥವಾ ಖಾಸಗಿ ಕೊಠಡಿಗಳು ಮತ್ತು ಸೂಚಿಸಿದ ಔಷಧಿ ಯೋಜನೆಗಳಿಗೆ ಮಾತ್ರ, ಅವಕಾಶ ನೀಡಲಾಗುತ್ತದೆ. ನಾಲ್ಕು ಪ್ರಾಂತಗಳು ಕೆನಡಾ ಹೆಲ್ತ್ ಆಕ್ಟ್‌ನಿಂದಲೂ ನಿರ್ದೇಶಿಸಲ್ಪಟ್ಟ ಸೇವೆಗಳಿಗೆ ವಿಮೆಯನ್ನು ಒದಗಿಸುತ್ತದೆ.
  • ಆದರೆ ಬಳಕೆಯಲ್ಲಿ ಅದಕ್ಕೆ ಮಾರುಕಟ್ಟೆಯಿಲ್ಲ. ಎಲ್ಲಾ ಕೆನಡಾದವರು ಲೇಸರ್‌ನಿಂದ ದೃಷ್ಟಿ ಸರಿಪಡಿಸುವ ಶಸ್ತ್ರಚಿಕಿತ್ಸೆ, ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಇತರ ಮೂಲಭೂತವಲ್ಲದ ವೈದ್ಯಕೀಯ ಕಾರ್ಯಗಳಂತಹ ಐಚ್ಛಿಕ ವೈದ್ಯಕೀಯ ಸೇವೆಗಳಿಗೆ ಖಾಸಗಿ ವಿಮೆಯನ್ನು ಬಳಸಲು ಸ್ವತಂತ್ರರಾಗಿದ್ದಾರೆ. ಕೆಲವು 65%ನಷ್ಟು ಕೆನಡಾದವರು ಕೆಲವು ಪ್ರಕಾರದ ಪೂರಕ ಖಾಸಗಿ ಆರೋಗ್ಯ ವಿಮೆಯನ್ನು ಹೊಂದಿರುತ್ತಾರೆ; ಹೆಚ್ಚಿನವರು ಅದನ್ನು ಅವರಿಗೆ ನೌಕರಿ ನೀಡುವವರಿಂದ ಪಡೆಯುತ್ತಾರೆ.[೧೯] ಖಾಸಗಿ-ವಿಭಾಗದ ಸೇವೆಗಳು ಸುಮಾರು ೩೦ ಪ್ರತಿಶತದಷ್ಟು ಒಟ್ಟು ಆರೋಗ್ಯ ರಕ್ಷಣೆಯ ಖರ್ಚಿಗೆ ಸರಕಾರದಿಂದ ಪಾವತಿಯನ್ನು ಪಡೆಯುವುದಿಲ್ಲ.[೨೦]

2005ರಲ್ಲಿ ಕೆನಡಾದ ಸರ್ವೋಚ್ಛ ನ್ಯಾಯಾಲಯವು ಚೌಲಿ v. ಕ್ವೆಬೆಕ್ನಲ್ಲಿ, ಪ್ರಾಂತೀಯ ಯೋಜನೆಯಿಂದ ವಿಮೆ ಪಡೆದ ಆರೋಗ್ಯದ ಖಾಸಗಿ ವಿಮೆಯ ಮೇಲಿನ ಪ್ರಾಂತದ ನಿಷೇಧವು ಕ್ವೆಬೆಕ್ ಚಾರ್ಟರ್ ಆಫ್ ರೈಟ್ಸ್ ಆಂಡ್ ಫ್ರೀಡಮ್ಸ್ಅನ್ನು ಮತ್ತು ನಿರ್ದಿಷ್ಟವಾಗಿ ಬದುಕುವ ಹಕ್ಕು ಮತ್ತು ಭದ್ರತೆಗೆ ಸಂಬಂಧಿಸಿದ ಪರಿಚ್ಛೇದಗಳನ್ನು ಉಲ್ಲಂಘಿಸಿದೆ ಎಂದು ತೀರ್ಪು ನೀಡಿತು. ಈ ತೀರ್ಪು ಕೆನಡಾದಾದ್ಯಂತದ ಆರೋಗ್ಯ ವಿಮೆಯ ಸಂಪೂರ್ಣ ಸ್ವರೂಪವನ್ನು ಬದಲಾಯಿಸಲಿಲ್ಲ. ಆದರೆ ಪೂರೈಕೆ ಮತ್ತು ಬೇಡಿಕೆಯ ಹಲವಾರು ಸಮಸ್ಯೆಗಳನ್ನು ಹಾಗೂ ಕಾಯುವ ಅವಧಿಯ ಪರಿಣಾಮವನ್ನು ನಿಭಾಯಿಸುವ ಪ್ರಯತ್ನಗಳನ್ನು ಉತ್ತೇಜಿಸಿತು.[೨೧]

ಫ್ರಾನ್ಸ್‌ ಬದಲಾಯಿಸಿ

  • ಆರೋಗ್ಯ ವಿಮೆಯ ರಾಷ್ಟ್ರೀಯ ವ್ಯವಸ್ಥೆಯು ಎರಡನೇ ವಿಶ್ವ ಸಮರವು ಕೊನೆಗೊಂಡ ಸ್ವಲ್ಪದರಲ್ಲಿ ೧೯೪೫ ರಲ್ಲಿ ಆರಂಭಗೊಂಡಿತು. ಇದು ಫ್ರೆಂಚ್ ಸಂಸತ್ತಿನಲ್ಲಿನ ಗಾಲಿಸ್ಟ್ ಮತ್ತು ಕಮ್ಯೂನಿಸ್ಟ್ ಪ್ರತಿನಿಧಿಗಳ ನಡುವಿನ ಸಂಧಾನವಾಗಿತ್ತು. ಸಂಪ್ರದಾಯವಾದಿ ಗಾಲಿಸ್ಟ್‌ಗಳು ರಾಜ್ಯದಿಂದ-ನಡೆಸಲ್ಪಡುವ ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದರು.
  • ಅದೇ ಕಮ್ಯೂನಿಸ್ಟ್‌ಗಳು ಬ್ರಿಟಿಷ್ ಬೆವೆರಿಡ್ಜ್ ಮಾದರಿಯಲ್ಲಿ ಆರೋಗ್ಯ ರಕ್ಷಣೆಯನ್ನು ಸಂಪೂರ್ಣವಾಗಿ ರಾಷ್ಟ್ರೀಕರಣಗೊಳಿಸಲು ಬೆಂಬಲಿಸುತ್ತಿದ್ದರು. ಅದರ ಪರಿಣಾಮದ ಯೋಜನೆಯು ವೃತ್ತಿ-ಆಧಾರಿತವಾಗಿದೆ: ಎಲ್ಲಾ ಕೆಲಸ ಮಾಡುವವರು ಅವರ ಆದಾಯದ ಒಂದು ಭಾಗವನ್ನು, ಅನಾರೋಗ್ಯದ ಅಪಾಯವನ್ನು ಪರಸ್ಪರ ಪ್ರಯೋಜಕವಾಗಿ ಮಾಡುವ ಮತ್ತು ವೈದ್ಯಕೀಯ ಖರ್ಚನ್ನು ವಿವಿಧ ದರಗಳಲ್ಲಿ ಮರಳಿಸುವ ಲಾಭದ-ಉದ್ದೇಶವಿಲ್ಲದ ಆರೋಗ್ಯ ವಿಮೆಗೆ ಪಾವತಿಸುವುದು ಅಗತ್ಯವಾಗಿರುತ್ತದೆ.
  • ವಿಮೆ ಮಾಡಿದವರ ಮಕ್ಕಳು ಮತ್ತು ಸಂಗಾತಿಗಳೂ ಸಹ ಲಾಭಗಳಿಗೆ ಅರ್ಹರಾಗಿರುತ್ತಾರೆ. ಪ್ರತಿ ಸಂಸ್ಥೆಯು ಅದರ ಸ್ವಂತ ಆಯವ್ಯಯವನ್ನು ನಿರ್ವಹಿಸಲು ಮತ್ತು ವೈದ್ಯಕೀಯ ಖರ್ಚುಗಳನ್ನು ಅದು ಸರಿಹೊಂದುತ್ತದೆಂದು ತಿಳಿಯುವ ದರದಲ್ಲಿ ಮರಳಿಸಲು ಸ್ವತಂತ್ರವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಸುಧಾರಣೆಗಳನ್ನು ಮಾಡಲಾಗುತ್ತಿದ್ದರೂ, ಹೆಚ್ಚಿನ ಸಂಸ್ಥೆಗಳು ಒಂದೇ ರೀತಿಯ ಖರ್ಚಿನ-ಮರಳಿಸುವಿಕೆ ಮತ್ತು ಲಾಭಗಳನ್ನು ಒದಗಿಸುತ್ತವೆ.
  • ಸರಕಾರವು ಈ ವ್ಯವಸ್ಥೆಯಲ್ಲಿ ಎರಡು ಜವಾಬ್ದಾರಿಗಳನ್ನು ಹೊಂದಿರುತ್ತದೆ. ಸರಕಾರದ ಮೊದಲ ಜವಾಬ್ದಾರಿಯೆಂದರೆ ವೈದ್ಯಕೀಯ ಖರ್ಚುನ್ನು ಪರಿಹರಿಸುವ ದರವನ್ನು ನಿರ್ದಿಷ್ಟಪಡಿಸುವುದು. ಇದನ್ನು ಎರಡು ವಿಧಾನಗಳಲ್ಲಿ ಮಾಡುತ್ತದೆ: ಮಿನಿಸ್ಟ್ರಿ ಆಫ್ ಹೆಲ್ತ್ ನೆರೆಯ ರಾಷ್ಟ್ರಗಳಲ್ಲಿ ಕಂಡುಬರುವ ಮಾರಾಟದ ಸರಾಸರಿ ದರಗಳ ಆಧಾರದಲ್ಲಿ ತಯಾರಕರೊಂದಿಗೆ ಔಷಧಿಯ ದರಗಳನ್ನು ನೇರವಾಗಿ ಕೊಡುತ್ತದೆ.
  • ಔಷಧಿಯು ಸಾಕಷ್ಟು ಮೌಲ್ಯಯುತ, ಖರ್ಚನ್ನು ಮರಳಿಸುವ ವೈದ್ಯಕೀಯ ಪ್ರಯೋಜನವನ್ನು ಒದಗಿಸುತ್ತಿದೆಯೇ ಎಂಬುದನ್ನು ವೈದ್ಯರ ಮತ್ತು ಪರಿಣಿತರ ಮಂಡಳಿಯೊಂದು ನಿರ್ಧರಿಸುತ್ತದೆ (ಹೋಮಿಯೋಪತಿಯನ್ನೂ ಒಳಗೊಂಡಂತೆ ಹೆಚ್ಚಿನ ಔಷಧಿಯು ಖರ್ಚನ್ನು ತುಂಬಿಕೊಡುತ್ತದೆ ಎಂಬುದನ್ನು ಗಮನಿಸಬೇಕು). ಸಮಾಂತರವಾಗಿ ಸರಕಾರವು ವೈದ್ಯಕೀಯ ಸೇವೆಗಳಿಗೆ ಖರ್ಚು ತುಂಬಿಕೊಡುವ ದರವನ್ನು ನಿರ್ದಿಷ್ಟ ಪಡಿಸುತ್ತದೆ:
  • ಅಂದರೆ ವೈದ್ಯನೊಬ್ಬ ಭೇಟಿಗೆ ಅಥವಾ ಪರೀಕ್ಷೆಗೆ ಅವನು ಬಯಸುವಷ್ಟು ಶುಲ್ಕವನ್ನು ವಿಧಿಸಲು ಸ್ವತಂತ್ರರಾಗಿರುತ್ತಾನೆ. ಆದರೆ ಸಾಮಾಜಿಕ ಭದ್ರತಾ ವ್ಯವಸ್ಥೆಯು ಮಾತ್ರ ಮುಂಚಿತವಾಗಿ-ಯೋಜಿಸಿದ ದರದಲ್ಲಿ ಇದರ ಖರ್ಚನ್ನು ತುಂಬಿಕೊಡಬಹುದು. ಈ ವಿಮಾ ದರಗಳು ವಾರ್ಷಿಕವಾಗಿ ವೈದ್ಯರ ಪ್ರಾತಿನಿಧಿಕ ಸಂಸ್ಥೆಗಳೊಂದಿಗಿನ ಸಂಧಾನದ ಮೂಲಕ ವ್ಯವಸ್ಥೆಗೊಳಿಸಲ್ಪಡುತ್ತವೆ.
  • ಸರಕಾರದ ಎರಡನೆಯ ಜವಾಬ್ದಾರಿಯೆಂದರೆ - ಆರೋಗ್ಯ-ವಿಮಾ ಸಂಸ್ಥೆಗಳು ಪಡೆಯುವ ಮೊತ್ತವನ್ನು ಸರಿಯಾಗಿ ನಿರ್ವಹಿಸುತ್ತವೆಯೇ ಎಂಬುದನ್ನು ದೃಢೀಕರಿಸಲು ಮತ್ತು ಸಾರ್ವಜನಿಕ ಆಸ್ಪತ್ರೆ ಜಾಲದ ಮೇಲುಸ್ತುವಾರಿಯನ್ನು ಖಚಿತಪಡಿಸಲು ಅವುಗಳ ಮೇಲ್ವಿಚಾರಣೆ ನಡೆಸುವುದು. ಇದು ಈ ವ್ಯವಸ್ಥೆಯು ಹೆಚ್ಚು ಕಡಿಮೆ ಅಖಂಡವಾಗಿ ಉಳಿದಿದೆ.
  • ಫ್ರಾನ್ಸಿನ ಎಲ್ಲಾ ನಾಗರಿಕರು ಮತ್ತು ಕಾನೂನುಬದ್ಧ ವಿದೇಶಿ ನಿವಾಸಿಗರು ಈ ಕಡ್ಡಾಯ ಯೋಜನೆಗಳಲ್ಲಿ ಒಂದರ ರಕ್ಷಣೆಯನ್ನು ಪಡೆದಿದ್ದಾರೆ. ಇದು ಕಾರ್ಮಿಕರ ಭಾಗವಹಿಸುವಿಕೆಯಿಂದ ಬಂಡವಾಳವನ್ನು ಪಡೆದುಕೊಂಡು ಮುಂದುವರಿಯಲ್ಪಡುತ್ತದೆ. 1945ರಿಂದೀಚಿಗೆ ಅನೇಕ ಪ್ರಮುಖ ಬದಲಾವಣೆಗಳನ್ನು ಚಾಲ್ತಿಗೆ ತರಲಾಗಿದೆ.
  • ಮೊದಲನೆಯದಾಗಿ, ವಿವಿಧ ಆರೋಗ್ಯ-ರಕ್ಷಣಾ ಸಂಸ್ಥೆಗಳು (ಐದು ಇವೆ: ಸಾಮಾನ್ಯ, ಸ್ವತಂತ್ರ, ಕೃಷಿ, ವಿದ್ಯಾರ್ಥಿ, ಸಾರ್ವಜನಿಕ ಸೇವಕರು) ಈಗ ಎಲ್ಲವೂ ಒಂದೇ ದರದಲ್ಲಿ ಖರ್ಚನ್ನು ತುಂಬಿಕೊಡುತ್ತವೆ. ಎರಡನೆಯದಾಗಿ, ೨೦೦೦ ರಿಂದೀಚಿಗೆ ಸರಕಾರವು ಕಡ್ಡಾಯವಾದ ವಿಧಾನದಿಂದ ರಕ್ಷಿಸಲ್ಪಡದವರಿಗೆ (ಉದ್ಯೋಗ ಮಾಡದ ಮತ್ತು ವಿದ್ಯಾರ್ಥಿಗಳಲ್ಲದ ಅಂದರೆ ತುಂಬಾ ಶ್ರೀಮಂತ ಮತ್ತು ತೀರ ಬಡವರು) ಆರೋಗ್ಯ ರಕ್ಷಣೆಯನ್ನು ಒದಗಿಸುತ್ತಿದೆ.
  • ಈ ವಿಧಾನವು ಕಾರ್ಮಿಕರಿಗೆ-ಹಣ ಒದಗಿಸುವುದಕ್ಕೆ ಭಿನ್ನವಾಗಿ ಸಾಮಾನ್ಯ ತೆರಿಗೆ ವಿಧಿಸುವ ಮತ್ತು ಖರ್ಚನ್ನು ತುಂಬಿಕೊಡುವ ಮೂಲಕ ವೃತ್ತಿ-ಆಧಾರಿತ ವ್ಯವಸ್ಥೆಗಿಂತ ಹೆಚ್ಚಿನ ದರದಲ್ಲಿ ವ್ಯತ್ಯಾಸವನ್ನು ಮಾಡಲು ಸಮರ್ಥರಾಗಿಲ್ಲದವರಿಗೆ ಹಣಕಾಸು ಒದಗಿಸುತ್ತವೆ. ಅಂತಿಮವಾಗಿ, ಆರೋಗ್ಯ-ರಕ್ಷಣೆ ಖರ್ಚುಗಳ ಏರಿಕೆಯನ್ನು ಎದುರಿಸಲು ಸರಕಾರವು ಎರಡು ಯೋಜನೆಗಳನ್ನು (೨೦೦೪ ಮತ್ತು ೨೦೦೬ ರಲ್ಲಿ) ಬಳಕೆಗೆ ತಂದಿತು.
  • ಇದು ವಿಶೇಷ ತಜ್ಞರ ಭೇಟಿಗಾಗಿ ಸಂಪೂರ್ಣವಾಗಿ ಖರ್ಚನ್ನು ತುಂಬಿಕೊಡಲು ಸೂಚಿಸುವ ವೈದ್ಯರನ್ನು ಘೋಷಿಸುವುದಕ್ಕಾಗಿ ವಿಮೆ ಮಾಡಿದವರ ಅವಶ್ಯಕತೆಯನ್ನು ಹೊಂದಿರುತ್ತದೆ ಹಾಗೂ ವೈದ್ಯರ ಭೇಟಿಗೆ ೧ € (ಸುಮಾರು $೧.೪೫), ಸೂಚಿಸಿದ ಔಷಧಿಯ ಪ್ರತಿ ಪೆಟ್ಟಿಗೆಗೆ ೦,೫೦ € (ಸುಮಾರು ೮೦ ¢) ಮತ್ತು ಆಸ್ಪತ್ರೆಯಲ್ಲಿ ಉಳಿಯಲು ಮತ್ತು ದುಬಾರಿ ಕಾರ್ಯಗಳಿಗಾಗಿ ೧೬-೧೮ € (೨೦-೨೫ $)ನಷ್ಟು ಶುಲ್ಕದ ಕಡ್ಡಾಯವಾದ ಸಹಪಾವತಿಯನ್ನು ಚಾಲ್ತಿಗೆ ತಂದಿತು.
  • ಫ್ರೆಂಚ್ ವಿಮೆ ವ್ಯವಸ್ಥೆಯ ಒಂದು ಪ್ರಮುಖ ಅಂಶವೆಂದರೆ ಸೋಲಿಡ್ಯಾರಿಟಿ: ವ್ಯಕ್ತಿಯು ಹೆಚ್ಚು ಅನಾರೋಗ್ಯಕ್ಕೆ ಒಳಗಾದಂತೆ, ಆತನು ಕಡಿಮೆ ಪಾವತಿಸುತ್ತಾನೆ. ಅಂದರೆ ಗಂಭೀರ ಅಥವಾ ತೀವ್ರ ಅನಾರೋಗ್ಯದವರಿಗೆ ವಿಮಾ ವ್ಯವಸ್ಥೆಯು ೧೦೦% ರಷ್ಟು ಖರ್ಚನ್ನು ಮರಳಿಸುತ್ತದೆ ಮತ್ತು ಅವರ ಸಹ-ಪಾವತಿ ಶುಲ್ಕಗಳನ್ನು ಬಿಟ್ಟುಕೊಡುತ್ತದೆ. ಅಂತಿಮವಾಗಿ, ಕಡ್ಡಾಯ ವ್ಯವಸ್ಥೆಯು ರಕ್ಷಣೆ ಒದಗಿಸದ ಶುಲ್ಕಗಳಿಗೆ ಅನೇಕ ಖಾಸಗಿ ಭರ್ತಿಮಾಡುವ-ವಿಮಾ ಯೋಜನೆಗಳು ಲಭ್ಯವಾಗಿವೆ.
  • ಈ ಯೋಜನೆಗಳ ಮಾರುಕಟ್ಟೆಯು ತುಂಬಾ ಸ್ಪರ್ಧಾತ್ಮಕವಾಗಿದೆ ಮತ್ತು ಹೆಚ್ಚಾಗಿ ನೌಕರಿ ಒದಗಿಸುವವರಿಂದ ಸಹಾಯಧನ ಒದಗಿಸುತ್ತದೆ, ಅಂದರೆ ಪ್ರೀಮಿಯಂಗಳು ಸಾಮಾನ್ಯವಾಗಿ ಮಿತವಾಗಿರುತ್ತವೆ. 85%ನಷ್ಟು ಫ್ರೆಂಚ್ ಜನರು ಪೂರಕ ಖಾಸಗಿ ಆರೋಗ್ಯ ವಿಮೆಯಿಂದ ಪ್ರಯೋಜನ ಪಡೆಯುತ್ತಾರೆ.[೨೨][೨೩]

ನೆದರ್ಲ್ಯಾಂಡ್ಸ್ ಬದಲಾಯಿಸಿ

  • ೨೦೦೬ ಲ್ಲಿ ಆರೋಗ್ಯ ವಿಮೆಯ ಹೊಸ ವ್ಯವಸ್ಥೆಯೊಂದು ನೆದರ್ಲ್ಯಾಂಡ್ಸ್‌ನಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಹೊಸ ವ್ಯವಸ್ಥೆಯು ವಿಧಿಸಿದ ನಿಯಮ ಮತ್ತು ವಿಮೆ ಸಮೀಕರಿಸುವ ಕೂಡುಹಣದ ಸಂಯೋಗವನ್ನು ಬಳಸಿಕೊಂಡು ಸಾಂಪ್ರದಾಯಿಕ ರೀತಿಯ ಆರೋಗ್ಯ ವಿಮೆಯೊಂದಿಗೆ ಸಂಬಂಧಿಸಿದ ನೈತಿಕ ಹಾನಿಕಾರಿಗಳ ಮತ್ತು ಪ್ರತಿಕೂಲ ಆಯ್ಕೆಯ ಎರಡು ಅಪಾಯಗಳನ್ನು ದೂರಮಾಡುತ್ತದೆ.
  • ವಿಮಾ ಕಂಪೆನಿಗಳು ಸರಕಾರ-ಸ್ಥಾಪಿತ ಕನಿಷ್ಠ ದೃಢೀಕೃತ ಮಟ್ಟದ ರಕ್ಷಣೆಯನ್ನು ಸಾಧಿಸುವ ಕನಿಷ್ಠ ಒಂದು ಪಾಲಿಸಿಯನ್ನು ಒದಗಿಸುವಂತೆ ಕಡ್ಡಾಯ ಮಾಡುವ ಮೂಲಕ ಹಾಗೂ ಎಲ್ಲಾ ವಯಸ್ಕ ನಿವಾಸಿಗಳು ಅವರ ಆಯ್ಕೆಯ ವಿಮಾ ಕಂಪೆನಿಯಿಂದ ಈ ರಕ್ಷಣೆಯನ್ನು ಖರೀದಿಸುವಂತೆ ಕಾನೂನಿನಿಂದ ಒತ್ತಾಯಪಡಿಸುವಂತೆ ಮಾಡುವ ಮೂಲಕ ನೈತಿಕ ಹಾನಿಕಾರಿಗಳನ್ನು ದೂರಮಾಡಬಹುದು.
  • ಎಲ್ಲಾ ವಿಮಾ ಕಂಪೆನಿಗಳು ಈ ಸರಕಾರ-ಕಡ್ಡಾಯಗೊಳಿಸಿದ ವಿಮಾರಕ್ಷಣೆಯ ಖರ್ಚಿಗೆ ರಕ್ಷಣೆ ಒದಗಿಸಲು ಸಮೀಕರಿಸುವ ಕೂಡಹಣದಿಂದ ನಗದನ್ನು ಪಡೆಯುತ್ತವೆ. ಈ ಕೂಡುಹಣವು ನೌಕರಿ ನೀಡುವವರಿಂದ ಸಂಬಳ-ಆಧಾರಿತ ಕೊಡುಗೆಗಳನ್ನು ಸಂಗ್ರಹಿಸುವ ನಿಯಂತ್ರಕದಿಂದ -ಇದು ಸುಮಾರು ೫೦% ರಷ್ಟು ಎಲ್ಲಾ ಆರೋಗ್ಯ ರಕ್ಷಣಾ ಹಣವನ್ನು ಒದಗಿಸುತ್ತದೆ- ನಡೆಸಲ್ಪಡುತ್ತದೆ ಹಾಗೂ ಆರೋಗ್ಯ ರಕ್ಷಣೆಯನ್ನು ಪಡೆಯಲು ಸಾಧ್ಯವಾಗದವರಿಗೆ ವಿಮಾ ರಕ್ಷಣೆಯನ್ನು ನೀಡಲು ಸರಕಾರದಿಂದ ಹಣವನ್ನು ಪಡೆಯುತ್ತದೆ, ಇದು ಹೆಚ್ಚುವರಿ ೫% ರಷ್ಟನ್ನು ನೀಡುತ್ತದೆ. ಉಳಿದ ೪೫% ರಷ್ಟು ಆರೋಗ್ಯ ರಕ್ಷಣಾ ಹಣವು ಸಾರ್ವಜನಿಕರಿಂದ ಪಾವತಿಸಲ್ಪಟ್ಟ ವಿಮೆ ಪ್ರೀಮಿಯಂಗಳಿಂದ ಬರುತ್ತದೆ. ಅದಕ್ಕಾಗಿ ಕಂಪೆನಿಗಳು ದರದಲ್ಲಿ ಸ್ಪರ್ಧಿಸುತ್ತವೆ.
  • ಆದರೂ ವಿವಿಧ ಸ್ಪರ್ಧಾತ್ಮಕ ವಿಮೆಗಾರರ ನಡುವಿನ ವ್ಯತ್ಯಾಸವು ಕೇವಲ ಸುಮಾರು 5%ನಷ್ಟಿರುತ್ತದೆ. ವಿಮಾ ಕಂಪೆನಿಗಳು ರಾಷ್ಟ್ರೀಯ ಮಿತಿಯನ್ನು ಮೀರಿ ವಿಮಾ ರಕ್ಷಣೆಯನ್ನು ಒದಗಿಸುವುದಕ್ಕಾಗಿ ಹೆಚ್ಚುವರಿ ಪಾಲಿಸಿಗಳನ್ನು ಮಾರಾಟ ಮಾಡಲು ಸ್ವತಂತ್ರವಾಗಿರುತ್ತವೆ. ಈ ಪಾಲಿಸಿಗಳು ಸಮೀಕರಿಸುವ ಕೂಡುಹಣದಿಂದ ಬಂಡವಾಳವನ್ನು ಪಡೆಯುವುದಿಲ್ಲ.
  • ಆದರೆ ಕಡ್ಡಾಯ ಪಾಲಿಸಿಯಿಂದ ಪಾವತಿಸಲ್ಪಡದ ದಂತವೈದ್ಯದ ನಿರ್ವಹಣ ವಿಧಾನ ಮತ್ತು ಭೌತಚಿಕಿತ್ಸೆಯಂತಹ ಹೆಚ್ಚುವರಿ ಚಿಕಿತ್ಸೆಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ಸಮೀಕರಿಸುವ ಕೂಡುಹಣದಿಂದ ಬಂಡವಾಳ ಒದಗಿಸುವುದನ್ನು ವಿಮಾ ಕಂಪೆನಿಗಳಿಗೆ ಅವು ಅವಶ್ಯಕ ಪಾಲಿಸಿಯಡಿಯಲ್ಲಿ ವಿಮೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೆ ಹಂಚಲಾಗುತ್ತದೆ.
  • ಅಧಿಕ-ಅಪಾಯದ ವ್ಯಕ್ತಿಗಳು ಕೂಡುಹಣದಿಂದ ಹೆಚ್ಚು ಪಡೆಯುತ್ತಾರೆ ಹಾಗೂ ಕಡಿಮೆ-ಆದಾಯದ ವ್ಯಕ್ತಿಗಳು ಮತ್ತು 18 ವರ್ಷಕ್ಕಿಂತ ಕೆಳಗಿನ ಮಕ್ಕಳು ಅವರ ವಿಮೆಯನ್ನು ಸಂಪೂರ್ಣವಾಗಿ ಪಾವತಿಸಬೇಕಾಗುತ್ತದೆ. ಇದರಿಂದಾಗಿ ವಿಮಾ ಕಂಪೆನಿಗಳು ಇಷ್ಟವಾಗದ ಕಾರ್ಯದ ಹೆಚ್ಚಿನ-ಅಪಾಯದ ವ್ಯಕ್ತಿಗಳಿಗೆ ವಿಮೆ ಮಾಡುವುದಿಲ್ಲ. ಆ ಮೂಲಕ ಪ್ರತಿಕೂಲ ಆಯ್ಕೆಯ ಪ್ರಬಲ ಸಮಸ್ಯೆಗಳನ್ನು ದೂರಮಾಡುತ್ತದೆ.
  • ವಿಮಾ ಕಂಪೆನಿಗಳು ಸಹ-ಪಾವತಿ, ಕ್ಯಾಪ್(ಟೋಪಿಹಣ) ಅಥವಾ ಕಳೆಯಬಹುದಾದವುಗಳನ್ನು ಹೊಂದಲು, ಅಥವಾ ಪಾಲಿಸಿಗೆ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿಗೆ ವಿಮಾ ರಕ್ಷಣೆಯನ್ನು ನಿರಾಕರಿಸುವ, ಅಥವಾ ಅವುಗಳಿಗೆ ರಾಷ್ಟ್ರೀಯವಾಗಿ ಯೋಜಿಸಲಾದ ಮತ್ತು ಪ್ರಕಟಿತವಾದ ಪ್ರಮಾಣಿತ ಪ್ರೀಮಿಯಂಗಳ ಹೊರತು ಇತರೆ ಯಾವುದಕ್ಕಾದರೂ ಶುಲ್ಕ ವಿಧಿಸುವ ಅವಕಾಶವನ್ನು ಹೊಂದಿರುವುದಿಲ್ಲ. ಆದ್ದರಿಂದ, ವಿಮೆಯನ್ನು ಖರೀದಿಸುವ ಪ್ರತಿ ವ್ಯಕ್ತಿಯು ಅದೇ ವಿಮೆಯನ್ನು ಖರೀದಿಸುವ ಎಲ್ಲರಂತೆ ಒಂದೇ ದರವನ್ನು ಪಾವತಿಸುತ್ತಾನೆ ಮತ್ತು ಪ್ರತಿಯೊಬ್ಬನೂ ಕನಿಷ್ಠ ಮಟ್ಟದ ವಿಮಾ ರಕ್ಷಣೆಯನ್ನು ಪಡೆಯುತ್ತಾನೆ.

ಯುನೈಟೆಡ್ ಕಿಂಗ್ಡಮ್ ಬದಲಾಯಿಸಿ

  • UKಯ ನ್ಯಾಷನಲ್ ಹೆಲ್ತ್ ಸರ್ವಿಸ್ (NHS) ಸಾರ್ವಜನಿಕವಾಗಿ ಹಣ ಒದಗಿಸುವ ಆರೋಗ್ಯ ರಕ್ಷಣಾ ವ್ಯವಸ್ಥೆಯಾಗಿದ್ದು, UKಯಲ್ಲಿ ಸಾಮಾನ್ಯವಾಗಿ ವಾಸಿಸುವ ಪ್ರತಿಯೊಬ್ಬರಿಗೂ ವಿಮಾರಕ್ಷಣೆಯನ್ನು ಒದಗಿಸುತ್ತದೆ. ಇದು ಸಂಪೂರ್ಣವಾಗಿ ವಿಮೆ ವ್ಯವಸ್ಥೆಯಲ್ಲ ಏಕೆಂದರೆ - (a) ಪ್ರೀಮಿಯಂಗಳನ್ನು ಸಂಗ್ರಹಿಸಲಾಗುವುದಿಲ್ಲ, (b) ಖರ್ಚುಗಳನ್ನು ರೋಗಿಯ ಮಟ್ಟದಲ್ಲಿ ವಿಧಿಸಲಾಗುವುದಿಲ್ಲ (c) ವೆಚ್ಚಗಳನ್ನು ಕೂಡುಹಣದಿಂದ ಮುಂಗಡವಾಗಿ ಪಾವತಿಸಲಾಗುವುದಿಲ್ಲ.
  • ಆದರೆ ಇದು ಅನಾರೋಗ್ಯದಿಂದ ಬರುವ ಹಣಕಾಸಿನ ಅಪಾಯವನ್ನು ಹರಡುವ ವಿಮೆಯ ಪ್ರಮುಖ ಉದ್ದೇಶವನ್ನು ಸಾಧಿಸುವುದಿಲ್ಲ. NHSಅನ್ನು ನಡೆಸುವ ಖರ್ಚುವೆಚ್ಚಗಳು (2007-8ರಲ್ಲಿ £104 ಶತಕೋಟಿ ಎಂದು ಅಂದಾಜಿಸಲಾಗಿದೆ)[೨೪] ನೇರವಾಗಿ ಸಾಮಾನ್ಯ ತೆರಿಗೆ ವಿಧಿಸುವುದರಿಂದ ಭರಿಸಲ್ಪಡುತ್ತವೆ. NHS ಪ್ರಾಥಮಿಕ ರಕ್ಷಣೆ, ಒಳರೋಗಿಯ ರಕ್ಷಣೆ, ದೀರ್ಘಕಾಲದ ಆರೋಗ್ಯ ರಕ್ಷಣೆ, ನೇತ್ರವಿಜ್ಞಾನ ಮತ್ತು ದಂತವೈದ್ಯವನ್ನೂ ಒಳಗೊಂಡಂತೆ UKಯಲ್ಲಿ ಹೆಚ್ಚಿನ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ.
  • ಖಾಸಗಿ ಆರೋಗ್ಯ ರಕ್ಷಣೆಯು NHSಗೆ ವ್ಯತ್ಯಾಸವಾಗದ ಹೋಲಿಕೆಯನ್ನು ಹೊಂದಿದ್ದು, ಹೆಚ್ಚಾಗಿ ಖಾಸಗಿ ವಿಮೆಯಿಂದ ಪಾವತಿಸಲ್ಪಡುತ್ತದೆ. ಆದರೆ ಇದು ೮% ಗಿಂತಲೂ ಕಡಿಮೆ ಜನರಿಂದ ಬಳಸಲ್ಪಡುತ್ತದೆ ಮತ್ತು ಸಾಮಾನ್ಯವಾಗಿ NHS ಸೇವೆಗಳನ್ನು ಪೂರ್ಣಗೊಳಿಸುತ್ತದೆ. ಖಾಸಗಿ ವಿಭಾಗವು ಒದಗಿಸದ ಅನೇಕ ಚಿಕಿತ್ಸೆಗಳಿವೆ. ಉದಾಹರಣೆಗಾಗಿ, ಗರ್ಭಿಣಿಯ ಮೇಲಿನ ಆರೋಗ್ಯ ವಿಮೆಯು ಸಾಮಾನ್ಯವಾಗಿ ವಿಮಾರಕ್ಷಣೆಯನ್ನು ಹೊಂದಿರುವುದಿಲ್ಲ ಅಥವಾ ಸೀಮಿತ ಷರತ್ತಿನೊಂದಿಗೆ ಹೊಂದಿರುತ್ತದೆ.[೨೫] ಬ್ಯುಪಾ ಯೋಜನೆಗಳು (ಮತ್ತು ಇತರ ಅನೇಕ ವಿಮೆಗಾರರು) ವಿಶಿಷ್ಟವಾಗಿ ಹೊರಗಿಡುವವುಗಳೆಂದರೆ:
  • ವಯಸ್ಸಾಗುವಿಕೆ, ಮುಟ್ಟುನಿಲ್ಲುವ ಕಾಲ ಮತ್ತು ಹರೆಯ; AIDS/HIV; ಅಲರ್ಜಿ ಅಥವಾ ಅಲರ್ಜಿಯ ಕಾಯಿಲೆಗಳು; ಸಂತಾನ ನಿಯಂತ್ರಣ, ಬಸಿರಾಗುವಿಕೆ, ಲೈಂಗಿಕ ಸಮಸ್ಯೆಗಳು ಮತ್ತು ಲಿಂಗ ಬದಲಾವಣೆ; ದೀರ್ಘಕಾಲದ ತೊಂದರೆಗಳು; ಅಲಕ್ಷಿಸಿದ ಅಥವಾ ಸೀಮಿತಗೊಳಿಸಿದ ರೋಗಗಳು/ಚಿಕಿತ್ಸೆಯ ಸಮಸ್ಯೆಗಳು; ಚೇತರಿಕೆ, ಪುನಃಸ್ಥಾಪನೆ ಮತ್ತು ಸಾಮಾನ್ಯ ಶುಶ್ರೂಷೆಯ ರಕ್ಷಣೆ; ಸೌಂದರ್ಯವರ್ಧಕ, ಪುನಃಸ್ಥಾಪನಾ ಅಥವಾ ಭಾರ ಕಳೆದುಕೊಳ್ಳುವ ಚಿಕಿತ್ಸೆ; ಕಿವುಡು; ದಂತ/ಬಾಯಿಯ ಚಿಕಿತ್ಸೆ (ಟೊಳ್ಳುಹಲ್ಲನ್ನು ತುಂಬುವುದು, ಗಮ್ ರೋಗ, ದವಡೆ ಸಂಕೋಚನ); ಡಯಾಲಿಸೀಸ್; ಹೊರರೋಗಿಯ ಅಥವಾ ಮನೆಗೆ-ಬಳಸುವ ಔಷಧಗಳು ಮತ್ತು ಬ್ಯಾಡೇಜು, ಮುಲಾಮು ಇತ್ಯಾದಿ †;
  • ಪ್ರಾಯೋಗಿ ಔಷಧಗಳು ಮತ್ತು ಚಿಕಿತ್ಸೆ; ದೃಷ್ಟಿ; HRT ಮತ್ತು ಬೋನ್ ಡೆನ್ಸಿಟೊಮೆಟ್ರಿ; ಕಲಿಯುವ ಸಮಸ್ಯೆಗಳು, ವರ್ತನೆಯ ಮತ್ತು ಅಭಿವೃದ್ಧಿಯ ತೊಂದರೆಗಳು; ಕಡಲಾಚೆಯ ಚಿಕಿತ್ಸೆ ಮತ್ತು ಪುನರಾಗಮನ; ದೈಹಿಕ ನೆರವುಗಳು ಮತ್ತು ಸಾಧನಗಳು; ಮೊದಲಿನಿಂದ ಇರುವ ಅಥವಾ ವಿಶೇಷ ಕಾಯಿಲೆಗಳು; ಗರ್ಭಿಣಿಸ್ಥಿತಿ ಮತ್ತು ಮಗುವಿನ ಜನನ; ಪರೀಕ್ಷಿಸುವ ಮತ್ತು ತಡೆಗಟ್ಟುವ ಚಿಕಿತ್ಸೆ; ನಿದ್ರೆಯ ಸಮಸ್ಯೆಗಳು ಮತ್ತು ಕಾಯಿಲೆಗಳು; ಮಾತನಾಡುವ ಕಾಯಿಲೆಗಳು; ರೋಗಲಕ್ಷಣಗಳ ತಾತ್ಕಾಲಿಕ ಉಪಶಮನ.[೨೬]

(† = ವಿಶೇಷ ಸಂದರ್ಭಗಳಲ್ಲಿ ಹೊರತಾಗಿರುತ್ತದೆ)

  • ಯುನೈಟೆಡ್ ಕಿಂಗ್ಡಮ್‌ನಲ್ಲಿ ಅನೇಕ ಇತರ ಕಂಪೆನಿಗಳಿವೆ, ಅವುಗಳಲ್ಲಿ ಕೆಲವು - AXA[೨೭], ಆವಿವ, ಗ್ರೂಪಾಮ ಹೆಲ್ತ್‌ಕೇರ್ ಮತ್ತು ಪ್ರು ಹೆಲ್ತ್. ಖರೀದಿಸುವ ಪಾಲಿಸಿಯ ಆಧಾರದಲ್ಲಿ, ಇವುಗಳಲ್ಲೂ ಅಂತಹುದೇ ಹೊರಗಿಡುವವುಗಳು ಅನ್ವಯಿಸುತ್ತವೆ. ಇತ್ತೀಚೆಗೆ (೨೦೦೯) ಬ್ರಿಟಿಷ್ ಮೆಡಿಕಲ್ ವೈದ್ಯರ ಪ್ರಮುಖ ಪ್ರಾತಿನಿಧಿಕ ಸಂಸ್ಥೆ ಬ್ರಿಟಿಷ್ ಮೆಡಿಕಲ್ ಅಸೋಸಿಯೇಶನ್, UKಯಲ್ಲಿನ ಆರೋಗ್ಯ ವಿಮಾ ಮಾರುಕಟ್ಟೆಯ ಅಭಿವೃದ್ಧಿಗಳ ಬಗ್ಗೆ ಕಾಳಿಜಿ ವ್ಯಕ್ತಪಡಿಸುವ ಪಾಲಿಸಿ ಹೇಳಿಕೆಯೊಂದನ್ನು ಅನುಮೋದಿಸಿತು.
  • ಆ ಹೇಳಿಕೆಯು ಅದರ ವಾರ್ಷಿಕ ಪ್ರಾತಿನಿಧಿಕ ಸಭೆಯಲ್ಲಿ ಆರಂಭದಲ್ಲಿ ಕನ್ಸಲ್ಟೆಂಟ್ಸ್ ಪಾಲಿಸಿ ಗ್ರೂಪ್‌ನಿಂದ (ಅಂದರೆ ಹಿರಿಯ ವೈದ್ಯರಿಂದ) ಅನುಮತಿಯನ್ನು ಪಡೆಯಿತು ಹಾಗೂ ಅದು ಹೀಗೆಂದು ಹೇಳಿತು - "ಕೆಲವು ಖಾಸಗಿ ಆರೋಗ್ಯರಕ್ಷಣೆ ವಿಮಾ ಕಂಪೆನಿಗಳ ಪಾಲಿಸಿಗಳು ರೋಗಿಗಳಿಗೆ, (i)ಅವರನ್ನು ಪರೀಕ್ಷಿಸುವ ಸಲಹಾ ವೈದ್ಯರ; (ii)ಅವರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯ; (iii)ಅವರ ವಿಮಾ ಕಂಪೆನಿಯಿಂದ ಒದಗಿಸಲಾದ ಬಂಡವಾಳದ ಮತ್ತು ಅವರು ಆರಿಸಿದ ಖಾಸಗಿ ಚಿಕಿತ್ಸೆಯ ಖರ್ಚಿನ ನಡುವಿನ ಯಾವುದೇ ವ್ಯತ್ಯಾಸಕ್ಕೆ ವಿಮಾರಕ್ಷಣೆಯನ್ನು ನೀಡಲು ತುಂಬುವ-ಪಾವತಿಗಳನ್ನು ಮಾಡುವ ಮೊದಲಾದುವುಗಳ ಬಗ್ಗೆ ಆಯ್ಕೆಯನ್ನು ಒದಗಿಸುವುದನ್ನು ತಡೆಗಟ್ಟುತ್ತಿವೆ ಅಥವಾ ನಿರ್ಬಂಧಿಸುತ್ತಿವೆ ಎಂದು BMAಯು ತೀವ್ರ ಕಾಳಜಿಯನ್ನು ತೋರಿಸಿದೆ". "ಈ ಕಾಳಜಿಗಳನ್ನು ಜನಪ್ರಿಯಗೊಳಿಸಲು BMAಯಲ್ಲಿ, ಜನರು ಖಾಸಗಿ ಆರೋಗ್ಯರಕ್ಷಣೆ ವಿಮೆಯನ್ನು ಆರಿಸುವಾಗ ಸಂಪೂರ್ಣ ಮಾಹಿತಿಯನ್ನು ಪಡೆದಿರುತ್ತಾರೆ ಎಂಬುದಾಗಿ" ಕರೆನೀಡಲಾಯಿತು.[೨೮] NHS ರೋಗಿಗಳಿಗೆ ಆಸ್ಪತ್ರೆ ಮತ್ತು ಸಲಹಾರ್ಥಿಗಳ ಆಯ್ಕೆಯನ್ನು ಒದಗಿಸುತ್ತದೆ ಹಾಗೂ ಅದರ ಈ ಸೇವೆಗಾಗಿ ಶುಲ್ಕವನ್ನು ವಿಧಿಸುವುದಿಲ್ಲ.
  • ಬ್ರಿಟಿಷ್ ಸಾರ್ವಜನಿಕರ ತೀವ್ರ ಪ್ರಮಾಣದ ವಿರೋಧದ ಹೊರತಾಗಿಯ‌ೂ, NHSನ ಸಾಮರ್ಥ್ಯವನ್ನು ಹೆಚ್ಚಿಸಲು ಖಾಸಗೀ ಕ್ಷೇತ್ರವನ್ನು ಬಳಸಲಾಗುತ್ತದೆ.[೨೯] ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, UKಯಲ್ಲಿ ೨೦೦೪ ರಲ್ಲಿ ಸರಕಾರದ ಬಂಡವಾಳವು 86%ನಷ್ಟು ಒಟ್ಟು ಆರೋಗ್ಯ ರಕ್ಷಣಾ ಖರ್ಚುವೆಚ್ಚಗಳಿಗೆ ವಿಮಾ ರಕ್ಷಣೆಯನ್ನು ಒದಗಿಸಿತು ಹಾಗೂ ಉಳಿದ ೧೪% ರಷ್ಟಕ್ಕೆ ಖಾಸಗಿ ಸಂಸ್ಥೆಗಳು ರಕ್ಷಣೆಯನ್ನು ನೀಡಿದವು.[೩೦]

ಅಮೆರಿಕ ಸಂಯುಕ್ತ ಸಂಸ್ಥಾನ ಬದಲಾಯಿಸಿ

  • ಅಮೆರಿಕ ಸಂಯುಕ್ತ ಸಂಸ್ಥಾನದ ಆರೋಗ್ಯ ರಕ್ಷಣಾ ವ್ಯವಸ್ಥೆಯು ಹೆಚ್ಚಿನ ಅಮೆರಿಕನ್ನರಿಗೆ ವಿಮಾ ರಕ್ಷಣೆಯ ಪ್ರಾಥಮಿಕ ಮ‌ೂಲವಾದ ಖಾಸಗಿ ಆರೋಗ್ಯ ವಿಮೆಯನ್ನು ಅಧಿಕವಾಗಿ ಆಧರಿಸಿದೆ. CDCಯ ಪ್ರಕಾರ, ಸರಿಸುಮಾರು 58%ನಷ್ಟು ಅಮೆರಿಕನ್ನರು ಖಾಸಗಿ ಆರೋಗ್ಯ ವಿಮೆಯನ್ನು ಹೊಂದಿದ್ದಾರೆ.[೩೧] ಸಾರ್ವಜನಿಕ ಯೋಜನೆಗಳು ಕೆಲವು ಅರ್ಹ ಅವಶ್ಯಕತೆಗಳನ್ನು ಹೊಂದಿರುವ ಹೆಚ್ಚಿನ ಹಿರಿಯ ನಾಗರಿಕರಿಗೆ ಹಾಗೂ ಕಡಿಮೆ ಆದಾಯದ ಮಕ್ಕಳಿಗೆ ಮತ್ತು ಕುಟುಂಬಗಳಿಗೆ ವಿಮಾರಕ್ಷಣೆಯ ಪ್ರಾಥಮಿಕ ಮ‌ೂಲವನ್ನು ಒದಗಿಸುತ್ತವೆ.
  • ಪ್ರಾಥಮಿಕ ಸಾರ್ವಜನಿಕ ಯೋಜನೆಗಳೆಂದರೆ - ಹಿರಿಯರಿಗೆ ಮತ್ತು ಕೆಲವು ಅಶಕ್ತ ವ್ಯಕ್ತಿಗಳಿಗೆ ನೀಡಲಾಗುವ ಫೆಡರಲ್ ಸಾಮಾಜಿಕ ವಿಮಾ ಯೋಜನೆಯಾದ ಮೆಡಿಕೇರ್‌. ಫೆಡರಲ್ ಸರಕಾರ ಮತ್ತು ರಾಜ್ಯಗಳಿಂದ ಜಂಟಿಯಾಗಿ ಬಂಡವಾಳ ಒದಗಿಸಲ್ಪಡುವ ಆದರೆ ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೆಡಿಕೈಡ್, ಇದು ಕೆಲವು ಅತಿ ಕಡಿಮೆ ಆದಾಯ ಹೊಂದಿರುವ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ವಿಮಾರಕ್ಷಣೆಯನ್ನು ಒದಗಿಸುತ್ತದೆ.
  • ಮತ್ತೊಂದು ಫೆಡರಲ್-ರಾಜ್ಯ ಪಾಲುದಾರಿಕೆಯ SCHIP, ಇದು ಮೆಡಿಕೈಡ್‌ಗೆ ಅರ್ಹವಾಗದ ಮತ್ತು ಖಾಸಗಿ ವಿಮಾರಕ್ಷಣೆಯನ್ನು ಪಡೆಯಲು ಸಾಧ್ಯವಾಗದ ಕೆಲವು ಮಕ್ಕಳಿಗೆ ಮತ್ತು ಕುಟುಂಬಗಳಿಗೆ ಸೇವೆ ಸಲ್ಲಿಸುತ್ತದೆ. ಇತರ ಸಾರ್ವಜನಿಕ ಯೋಜನೆಗಳೆಂದರೆ - TRICARE ಮತ್ತು ವೆಟೆರ್ನಸ್ ಹೆಲ್ತ್ ಅಡ್ಮಿನಿಸ್ಟ್ರೇಶನ್ನಿಂದ ಒದಗಿಸಲಾಗುವ ಮಿಲಿಟರಿ ಆರೋಗ್ಯ ಪ್ರಯೋಜನಗಳು ಹಾಗೂ ಇಡಿಯನ್ ಹೆಲ್ತ್ ಸರ್ವಿಸ್ನಿಂದ ನೀಡಲಾಗುವ ಪ್ರಯೋಜನಗಳು.
  • ಕೆಲವು ರಾಜ್ಯಗಳು ಕಡಿಮೆ-ಆದಾಯದ ವ್ಯಕ್ತಿಗಳಿಗೆ ಹೆಚ್ಚುವರಿ ಯೋಜನೆಗಳನ್ನು ಹೊಂದಿರುತ್ತವೆ.[೩೨] ೨೦೦೭ ರಲ್ಲಿ ಅರ್ಜಿ ಸಲ್ಲಿಸಿದ ೬೨ ಪ್ರತಿಶತದಷ್ಟು ಎಲ್ಲಾ ಬ್ಯಾಂಕ್ರುಪ್ಟ್ಸಿಗಳು ವೈದ್ಯಕೀಯ ಖರ್ಚುಗಳಿಗೆ ಸಂಬಂಧಿಸಿವೆ ಎಂದು ಇತ್ತೀಚಿನ ಅಧ್ಯಯನವೊಂದು ಕಂಡು ಹಿಡಿದಿದೆ.
  • ಬ್ಯಾಂಕ್ರುಪ್ಟ್ಸಿಗೆ ಅರ್ಜಿ ಸಲ್ಲಿಸಿದವುಗಳಲ್ಲಿ ಸುಮಾರು ೮೦ ಪ್ರತಿಶತದಷ್ಟು ಆರೋಗ್ಯ ವಿಮೆಯನ್ನು ಹೊಂದಿದ್ದವು.[೩೩] ಕೇವಲ ಮೂರು ವರ್ಷಗಳಲ್ಲಿ, ಮೆಡಿಕೇರ್‌ ಮತ್ತು ಮೆಡಿಕೈಡ್ ಯೋಜನೆಗಳು ಎಲ್ಲಾ ರಾಷ್ಟ್ರೀಯ ಆರೋಗ್ಯ ಖರ್ಚಿನ 50 ಪ್ರತಿಶತದಷ್ಟನ್ನು ನೀಡುತ್ತವೆ.[೩೪]
  • ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿನ ಆರೋಗ್ಯ ರಕ್ಷಣೆ ವ್ಯವಸ್ಥೆಯ ಕೂಲಂಕುಷ ಪರೀಕ್ಷೆ ಮಾಡುವಂತೆ ಉತ್ತೇಜಿಸಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಆರೋಗ್ಯ ರಕ್ಷಣಾ ಸುಧಾರಣೆಯ ಕಾಯಿದೆಯೊಂದನ್ನು ೨೨೦-೨೧೫ ರಷ್ಟು ಮತದೊಂದಿಗೆ ೨೦೦೯ ನವೆಂಬರ್ ೭ ರಂದು ಅನುಮೋದಿಸಿತು.[೩೫] ಪ್ರಸ್ತುತ ಕಾಯಿದೆಯ ಭವಿಷ್ಯವು ಸೆನೆಟ್‌ನಲ್ಲಿ ಉಳಿದುಕೊಂಡಿದೆ.
  • ಕಾನೂನು ಒಮ್ಮೆ ಪಾಲಿಸಿ ಪ್ರೀಮಿಯಂಗಳನ್ನು ಸಾಧಿಸುವ ಮತ್ತು ಸಾರ್ವಜನಿಕ ಆಯ್ಕೆಯನ್ನು ಒದಗಿಸುವ ಅಧಿಕಾರವನ್ನು ಸರಕಾರಕ್ಕೆ ನೀಡುವ ಬದಲಾವಣೆಗಳನ್ನು ಸೇರಿಸಿಕೊಂಡಿತು. ಆದರೆ ಪ್ರಜಾಪ್ರಭುತ್ವದ ದುರಾಕ್ರಮಣವನ್ನು ತಡೆಯಲು ಅವಶ್ಯಕ ಮತಗಳನ್ನು ಪಡೆಯುವ ಪ್ರಯತ್ನದಲ್ಲಿ ಸಾರ್ವಜನಿಕ ಆಯ್ಕೆಯು ಕಾಯಿದೆಯಿಂದ ಹೊರಹಾಕಲ್ಪಟ್ಟಿತು.
  • ಇದು ನಾಗರಿಕರಿಗೆ ಪ್ರಸ್ತುತ ಸದಸ್ಯರು ತಿಂಗಳಿಗೆ $೯೦.೪೦ ರಷ್ಟು ಮಾತ್ರ ಪಾವತಿಸುವ ಮೆಡಿಕೇರ್‌ನಂತಹ ಸಾರ್ವಜನಿಕ ಯೋಜನೆಗಳನ್ನು ಖರೀದಿಸುವ ಆಯ್ಕೆಯನ್ನು ನೀಡುವುದರಲ್ಲಿತ್ತು.[೩೬] ಬದಲಿಗೆ ಕಾಯಿದೆಯು, ಎಲ್ಲಾ ಅಮೆರಿಕನ್ನರು ಖಾಸಗಿ ಆರೋಗ್ಯ ವಿಮೆಯನ್ನು ಖರೀದಿಸಬೇಕು, ಇಲ್ಲದಿದ್ದರೆ ದಂಡ ತೆರುವಂತೆ ಮಾಡಿದೆ.ಉಲ್ಲೇಖ ದೋಷ: Closing </ref> missing for <ref> tag ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಿಮೆ ಉದ್ಯಮವು ಗಮನಾರ್ಹವಾದ ಪ್ರಭಾವ ಬೀರುವ ಗುಂಪನ್ನು ನಿರೂಪಿಸುತ್ತದೆ.
  • ಪ್ರಮುಖ ಆರೋಗ್ಯ ಬಡ್ಡಿಗಳು ಇಂದಿನವರೆಗೆ ಪ್ರತಿ ದಿನಕ್ಕೆ ಸುಮಾರು $೧.೪ ದಶಲಕ್ಷದಷ್ಟನ್ನು ಪ್ರಭಾವಿ ಕಾಂಗ್ರೆಸ್‌‍ಗೆ ಖರ್ಚು ಮಾಡಿವೆ ಹಾಗೂ ೨೦೦೯ ರ ಕೊನೆಯೊಳಗೆ ಒಂದು ಶತಕೋಟಿ ಡಾಲರ್‌ನ ಅರ್ಧಕ್ಕಿಂತಲೂ ಹೆಚ್ಚು ಖರ್ಚು ಮಾಡಲಿದ್ದಾವೆ. ೨೦೧೦ ರ ಮಾರ್ಚ್ ೨೧ ರಲ್ಲಿ, ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಅಧ್ಯಕ್ಷ ಒಬಾಮ ಪ್ರಸ್ತಾಪಿಸಿದ ಕಾಯಿದೆಯೊಂದನ್ನು ಅನುಮೋದಿಸಿತು. ಇದು ವ್ಯಾಪಕವಾದ ವಿಮಾರಕ್ಷಣೆಯನ್ನು ಒದಗಿಸಬಹುದು ಮತ್ತು ರಕ್ಷಣೆಯಿಲ್ಲದ ಹೆಚ್ಚುಕಡಿಮೆ ೩೨ ದಶಲಕ್ಷಕ್ಕಿಂತಲೂ ಅಧಿಕ ಅಮೆರಿಕನ್ನರಿಗೆ ಇದನ್ನು ವಿಸ್ತರಿಸಲಾಗಬಹುದು.

ಕ್ಯಾಲಿಫೋರ್ನಿಯಾ ಬದಲಾಯಿಸಿ

೨೦೦೭ ರಲ್ಲಿ ೮೭% ರಷ್ಟು ಕ್ಯಾಲಿಫೋರ್ನಿಯಾದವರು ಕೆಲವು ರೀತಿಯ ಆರೋಗ್ಯ ವಿಮೆಯನ್ನು ಹೊಂದಿದ್ದರು.[೩೭] ಕ್ಯಾಲಿಫೋರ್ನಿಯಾದಲ್ಲಿನ ಸೇವೆಗಳು ಖಾಸಗಿ ಯೋಜನೆಗಳಿಂದ: HMO, PPO ಹಿಡಿದು ಸಾರ್ವಜನಿಕ ಯೋಜನೆಗಳವರೆಗೆ: ಮೆಡಿ-ಕಾಲ್, ಮೆಡಿಕೇರ್ ಮತ್ತು ಹೆಲ್ತಿ ಫ್ಯಾಮಿಲೀಸ್ (SCHIP) ವಿಸ್ತರಿಸಿದೆ. ಕ್ಯಾಲಿಫೋರ್ನಿಯಾ ರಾಜ್ಯದಾದ್ಯಂತದ ಜನರಿಗೆ ನೆರವು ಒದಗಿಸಲು ಪರಿಹಾರವೊಂದನ್ನು ಅಭಿವೃದ್ಧಿಗೊಳಿಸಿತು ಹಾಗೂ ಸಾಧ್ಯವಾದಷ್ಟು ಉತ್ತಮ ರಕ್ಷಣೆಯನ್ನು ಪಡೆಯಲು ಜನರಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಲು ಮೀಸಲಾದ ಕಛೇರಿಯನ್ನು ಹೊಂದಿರುವ ಏಕೈಕ ರಾಜ್ಯವಾಗಿದೆ. ಟಾಪ್ HMO, PPO ಮತ್ತು ಮೆಡಿಕಲ್ ಗ್ರೂಪ್ಸ್‌ನಲ್ಲಿ ವಾರ್ಷಿಕವಾಗಿ ಹೆಲ್ತ್ ಕೇರ್ ಕ್ವಾಲಿಟಿ ರಿಪೋರ್ಟ್ ಕಾರ್ಡ್ Archived 2011-08-14 ವೇಬ್ಯಾಕ್ ಮೆಷಿನ್ ನಲ್ಲಿ. ಅನ್ನು ಪ್ರಕಟಿಸಲು ಹಾಗೂ ಉತ್ತಮ ರಕ್ಷಣೆಯನ್ನು ಪಡೆಯಲು ಕ್ಯಾಲಿಫೋರ್ನಿಯಾದವರಿಗೆ ಅಗತ್ಯವಾದ ಸಾಧನಗಳನ್ನು ನೀಡಲು ಸಹಾಯಕ ಸಲಹೆ ಮತ್ತು ಸೂಚನೆ Archived 2009-08-13 ವೇಬ್ಯಾಕ್ ಮೆಷಿನ್ ನಲ್ಲಿ. ಗಳನ್ನು ರಚಿಸಲು ಮತ್ತು ಹಂಚಲು ಕ್ಯಾಲಿಫೋರ್ನಿಯಾಸ್ ಆಫೀಸ್ ಆಫ್ ದ ಪೇಶೆಂಟ್ ಅಡ್ವೊಕೇಟ್ಅನ್ನು 2000ರ ಜುಲೈಯಲ್ಲಿ ಸ್ಥಾಪಿಸಲಾಯಿತು.[೩೮] ಹೆಚ್ಚುವರಿಯಾಗಿ, ಕ್ಯಾಲಿಫೋರ್ನಿಯಾವು ಒಂದು ಹೆಲ್ಪ್ ಸೆಂಟರ್ ಅನ್ನು ಹೊಂದಿದೆ. ಇದು ಕ್ಯಾಲಿಫೋರ್ನಿಯಾದವರು ಅವರ ಆರೋಗ್ಯ ವಿಮೆಯೊಂದಿಗೆ ಸಮಸ್ಯೆಗಳನ್ನು ಹೊಂದಿರುವಾಗ ಸಹಾಯ ಮಾಡುತ್ತದೆ. ಈ ಹೆಲ್ಪ್ ಸೆಂಟರ್ HMO ಮತ್ತು ಕೆಲವು PPOಗಳ ಮೇಲ್ವಿಚಾರಣೆ ನಡೆಸುವ ಮತ್ತು ನಿಯಂತ್ರಿಸುವ ಸರಕಾರಿ ಶಾಖೆಯಾದ ಡಿಪಾರ್ಟ್ಮೆಂಟ್ ಆಫ್ ಮ್ಯಾನೇಜ್ಡ್ ಹೆಲ್ತ್ ಕೇರ್ ನಿಂದ ನಡೆಸಲ್ಪಡುತ್ತದೆ.

ಜರ್ಮನಿ ಬದಲಾಯಿಸಿ

ಜರ್ಮನಿಯು ಒಟ್ಟೊ ವನ್ ಬಿಸ್ಮಾರ್ಕ್ಸಾಮಾಜಿಕ ಕಾನೂನುಗಳಷ್ಟು ಹಿಂದಿನದಾದ ಯುರೋಪಿನ ಅತಿ ಹಳೆಯ ಸಾರ್ವತ್ರಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಇದು ೧೮೮೩ ರ ಆರೋಗ್ಯ ವಿಮಾ ಕಾಯಿದೆ , ೧೮೮೪ ರ ಅಪಘಾತ ವಿಮಾ ಕಾಯಿದೆ ಮತ್ತು ೧೮೮೯ ರ ಹೆಚ್ಚು ವಯಸ್ಸಿನ ಮತ್ತು ಅಸಾಮರ್ಥ್ಯ-ವಿಮಾ ಕಾಯಿದೆ ಯನ್ನು ಒಳಗೊಂಡಿದೆ. ಕಡ್ಡಾಯ ಆರೋಗ್ಯ ವಿಮೆಯಾದ ಈ ಕಾಯಿದೆಗಳು ಆರಂಭದಲ್ಲಿ ಕೇವಲ ಕಡಿಮೆ-ಆದಾಯದ ಕಾರ್ಮಿಕರಿಗೆ ಮತ್ತು ಕೆಲವು ಸರಕಾರಿ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸಿತು; ಅವುಗಳ ವಿಮಾರಕ್ಷಣೆ ಮತ್ತು ಆನಂತರದ ಕಾನೂನುಗಳು ಕ್ರಮೇಣ ಎಲ್ಲಾ ಜನರಿಗೆ ವಿಮಾರಕ್ಷಣೆ ನೀಡಲು ವಿಸ್ತರಿಸಿತು.[೩೯] ಪ್ರಸ್ತುತ 85%ನಷ್ಟು ಜನರು ಕಾಯಿದೆಯಿಂದ ಒದಗಿಸಲ್ಪಟ್ಟ ಮೂಲ ಆರೋಗ್ಯ ವಿಮಾ ಯೋಜನೆಯಿಂದ ವಿಮಾರಕ್ಷಣೆಯನ್ನು ಪಡೆಯುತ್ತಿದ್ದಾರೆ. ಇದು ಪ್ರಮಾಣಿತ ಮಟ್ಟದ ವಿಮಾರಕ್ಷಣೆಯನ್ನು ಒದಗಿಸುತ್ತದೆ. ಉಳಿದ ಆಯ್ಕೆಯೆಂದರೆ ಮಾಮೂಲಾಗಿ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುವ ಖಾಸಗಿ ಆರೋಗ್ಯ ವಿಮೆ[ಸೂಕ್ತ ಉಲ್ಲೇಖನ ಬೇಕು]. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ೨೦೦೪ ರಲ್ಲಿ ಜರ್ಮನಿಯ ಆರೋಗ್ಯ ರಕ್ಷಣಾ ವ್ಯವಸ್ಥೆಯು ೭೭% ರಷ್ಟು ಸರಕಾರದಿಂದ ಮತ್ತು ೨೩ ರಷ್ಟು ಖಾಸಗಿಯಾಗಿ ಬಂಡವಾಳವನ್ನು ಪಡೆಯುತ್ತಿತ್ತು.[೩೦] ಸರಕಾರವು ಪ್ರೀಮಿಯಂಗಳನ್ನು ಮೊದಲೇ ನಿರ್ಣಯಿಸಿದ ಮೌಲ್ಯದಲ್ಲಿ ಹೇಳಲಾದ ಕಡಿಮೆ-ಸಂಬಳದ ಕಾರ್ಮಿಕರಿಗೆ ಖರ್ಚುಗಳನ್ನು ಭಾಗಶಃ ತುಂಬಿಕೊಡುತ್ತದೆ. ಹೆಚ್ಚಿನ ಸಂಬಳದ-ಕಾರ್ಮಿಕರು ಪ್ರೀಮಿಯಂಅನ್ನು ಅವರ ಸಂಬಳದ-ಆಧಾರದಲ್ಲಿ ಪಾವತಿಸುತ್ತಾರೆ. ಅವರು ಸಾಮಾನ್ಯವಾಗಿ ಹೆಚ್ಚು ದುಬಾರಿಯಾಗಿರುವ ಮತ್ತು ಬೆಲೆಯು ವ್ಯಕ್ತಿಗಳ ಆರೋಗ್ಯ ಸ್ಥಿತಿಯ ಆಧಾರದಲ್ಲಿ ಬದಲಾಗುವ ಖಾಸಗಿ ವಿಮೆಯನ್ನೂ ಆರಿಸಬಹುದು.[೪೦] ಸೇವೆಗಾಗಿ-ಶುಲ್ಕದ ಆಧಾರದಲ್ಲಿ ಖರ್ಚನ್ನು ತುಂಬಿಕೊಡಲಾಗುತ್ತದೆ. ಆದರೆ ನೀಡಿದ ಪ್ರದೇಶದಲ್ಲಿ ಕಾನೂನುಸಮ್ಮತ ಆರೋಗ್ಯ ವಿಮೆಯನ್ನು ಸ್ವೀಕರಿಸಲು ಅವಕಾಶ ಮಾಡಿಕೊಡುವ ವೈದ್ಯರ ಸಂಖ್ಯೆಯು ಸರಕಾರ ಮತ್ತು ವೃತ್ತಿಪರ ಸಮಾಜಗಳಿಂದ ನಿಯಂತ್ರಿಸಲ್ಪಡುತ್ತದೆ. ಮಿತಿಮೀರಿದ ಬಳಕೆಯನ್ನು ತಡೆಗಟ್ಟುವುದಕ್ಕಾಗಿ ೧೯೮೦ ರಲ್ಲಿ ಸಹಪಾವತಿಗಳನ್ನು ಚಾಲ್ತಿಗೆ ತರಲಾಯಿತು. ಜರ್ಮನಿಯಲ್ಲಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಬಹುದಾದ ಸರಾಸರಿ ದಿನಗಳು ಇತ್ತೀಚೆಗೆ ೧೪ ರಿಂದ ೯ ಕ್ಕೆ ಇಳಿದಿದೆ. ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಉಳಿದುಕೊಳ್ಳಬಹುದಾದ ಸರಾಸರಿ ದಿನಗಳಿಗಿಂತ (೫ ರಿಂದ ೬ ದಿನಗಳು) ಗಮನಾರ್ಹವಾಗಿ ಹೆಚ್ಚಾಗಿದೆ.[೪೧][೪೨] ಭಾಗಶಃ ವ್ಯತ್ಯಾಸವೆಂದರೆ ಆಸ್ಪತ್ರೆಯ ಖರ್ಚನ್ನು ತುಂಬಿಕೊಂಡುವುದರ ಪ್ರಮುಖ ಮಹತ್ವವು ಕ್ರಿಯೆಗಳಿಗೆ ಅಥವಾ ಡಯಾಗ್ನಸೀಸ್‌ಗೆ ವಿರೋಧಿಸುವ ಆಸ್ಪತ್ರೆಯಲ್ಲಿ ಕಳೆದ ದಿನಗಳಾಗಿವೆ. ಔಷಧಗಳ ದರಗಳು ಗಮನಾರ್ಹವಾಗಿ ೧೯೯೧ ರಿಂದ ೨೦೦೫ ರವರೆಗೆ ಸುಮಾರು ೬೦% ರಷ್ಟು ಹೆಚ್ಚಾಗಿವೆ. ಇತರ ಪಾಶ್ಚಿಮಾತ್ಯ ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ೨೦೦೫ ರಲ್ಲಿ ಇದರ ಒಟ್ಟು ಆರೋಗ್ಯ ರಕ್ಷಣಾ ಖರ್ಚುಗಳು GDPಯ ೧೦೭% ರಷ್ಟು ಏರಿದೆ. ಆದರೆ ಇದು U.S.ನಲ್ಲಿ ಖರ್ಚಾದುದಕ್ಕಿಂತ (ಸುಮಾರು GDPಯ 16%ನಷ್ಟು) ಕಡಿಮೆಯಾಗಿದೆ.[೪೩]

ವಿಮಾ ವ್ಯವಸ್ಥೆಗಳು ಬದಲಾಯಿಸಿ

ಜರ್ಮನಿಯು ಎರಡು ಮುಖ್ಯ ಪ್ರಕಾರದ ಆರೋಗ್ಯ ವಿಮೆಗಳೊಂದಿಗೆ ಸಾರ್ವತ್ರಿಕ ಬಹು-ಪಾವತಿದಾರರ ವ್ಯವಸ್ಥೆಯೊಂದನ್ನು ಹೊಂದಿದೆ. ಜರ್ಮನ್ನರಿಗೆ ನೌಕರಿಯನ್ನು ಒದಗಿಸುವವರಿಂದ ಮತ್ತು ಉದ್ಯೋಗಿಗಳಿಂದ ಸಹ-ಬಂಡವಾಳ ಒದಗಿಸಲ್ಪಡುವ ಮೂರು ಕಡ್ಡಾಯ ಆರೋಗ್ಯ ಪ್ರಯೋಜನಗಳನ್ನು ಒದಗಿಸಲಾಗುತ್ತದೆ: ಆರೋಗ್ಯ ವಿಮೆ, ಅಪಘಾತ ವಿಮೆ ದೀರ್ಘ-ಕಾಲದ ರಕ್ಷಣಾ ವಿಮೆ. ಅಪಘಾತ ವಿಮೆ (ಅನ್‌ಫಾಲ್ವರ್ಸಿಚರಂಗ್)ಯನ್ನು ನೌಕರಿ ನೀಡುವವರು ಒದಗಿಸುತ್ತಾರೆ. ಇದು ಮೂಲತಃ ನೌಕರಿ ಬದಲಾಯಿಸುವಲ್ಲಿನ ಮತ್ತು ಕೆಲಸ ಮಾಡುವ ಸ್ಥಳದಲ್ಲಿನ ಎಲ್ಲಾ ಅಪಾಯಗಳಿಗೆ ವಿಮಾ ರಕ್ಷಣೆಯನ್ನು ನೀಡುತ್ತದೆ. ದೀರ್ಘ-ಕಾಲದ ರಕ್ಷಣೆ (ಫ್ಲೆಗೆವರ್ಸಿಚರಂಗ್)ಯನ್ನು ನೌಕರಿ ಒದಗಿಸುವವರು ಮತ್ತು ಉದ್ಯೋಗಿಗಳು ಅರ್ಧರ್ಧ ಒದಗಿಸುತ್ತಾರೆ. ಇದು ವ್ಯಕ್ತಿಯು ಆತನ ಪ್ರತಿದಿನದ ಕಾರ್ಯವನ್ನು (ಆಹಾರದ ಸರಬರಾಜು, ವಾಸದ ಮನೆಯನ್ನು ಶುಚಿಗೊಳಿಸುವುದು, ವೈಯಕ್ತಿಕ ನೈರ್ಮಲ್ಯ, ಇತ್ಯಾದಿ) ನಿರ್ವಹಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ವಿಮಾರಕ್ಷಣೆಯನ್ನು ಒದಗಿಸುತ್ತದೆ. ಇದು ನೌಕರಿ ನೀಡುವವರು ಉದ್ಯೋಗಿಗಳ ಕೊಡುಗೆಗೆ ಸರಿಹೊಂದಿಸುವುದರೊಂದಿಗೆ ವಾರ್ಷಿಕ ಸಂಬಳದ-ಆದಾಯದ ಅಥವಾ ಪಿಂಚಣಿಯ ಸುಮಾರು 2%ನಷ್ಟಿರುತ್ತದೆ. ಎರಡು ಪ್ರತ್ಯೇಕ ವ್ಯವಸ್ಥೆಯ ಆರೋಗ್ಯ ವಿಮೆ ಗಳಿವೆ: ಸಾರ್ವಜನಿಕ ಆರೋಗ್ಯ ವಿಮೆ (ಗೆಸೆಟ್‌ಜ್ಲಿಚ್‌ ಕ್ರ್ಯಾಂಕೆನ್ವರ್ಸಿಚರಂಗ್ ) ಮತ್ತು ಖಾಸಗಿ ವಿಮೆ (ಪ್ರೈವೇಟ್ ಕ್ರ್ಯಾಂಕೆನ್ವರ್ಸಿಚರಂಗ್ ). ಎರಡು ವ್ಯವಸ್ಥೆಗಳೂ ಹೆಚ್ಚುತ್ತಿರುವ ಖರ್ಚಿನ ವೈದ್ಯಕೀಯ ಚಿಕಿತ್ಸೆ ಮತ್ತು ಬದಲಾಗುತ್ತಿರುವ ಜನಸಂಖ್ಯೆಯೊಂದಿಗೆ ಹೋರಾಡುತ್ತವೆ. ಆರೋಗ್ಯ ವಿಮೆಯನ್ನು ಹೊಂದಿರುವ ಸುಮಾರು ೮೭.೫% ರಷ್ಟು ಮಂದಿ ಸಾರ್ವಜನಿಕ ವ್ಯವಸ್ಥೆಯ ಸದಸ್ಯರಾಗಿದ್ದಾರೆ ಹಾಗೂ ೧೨.೫ % ರಷ್ಟು ಮಂದಿ ಖಾಸಗಿ ವಿಮೆಯಿಂದ ರಕ್ಷಣೆಯನ್ನು ಪಡೆಯುತ್ತಾರೆ (೨೦೦೬ ರಂತೆ).[೪೪]

ಇವನ್ನೂ ಗಮನಿಸಿ ಬದಲಾಯಿಸಿ

ಟಿಪ್ಪಣಿಗಳು ಮತ್ತು ಆಕರಗಳು ಬದಲಾಯಿಸಿ

  1. ಹೌ ಪ್ರೇವೇಟ್ ಇನ್ಶುರೆನ್ಸ್ ವರ್ಕ್ಸ: ಎ ಪ್ರಿಮರ್ Archived 2008-12-21 ವೇಬ್ಯಾಕ್ ಮೆಷಿನ್ ನಲ್ಲಿ. - ಗ್ಯಾರಿ ಕ್ಲ್ಯಾಕ್ಸ್‌ಟನ್, ಇನ್‌ಸ್ಟಿಟ್ಯೂಶನ್ ಫಾರ್ ಹೆಲ್ತ್ ಕೇರ್ ರಿಸರ್ಚ್ ಆಂಡ್ ಪಾಲಿಸಿ, ಜಾರ್ಜ್‌‌ಟೌವ್ನ್ ಯೂನಿವರ್ಸಿಟಿ, ಹೆನ್ರಿ J. ಕೈಸರ್ ಫ್ಯಾಮಿಲಿ ಫೌಂಡೇಶನ್‌ನ ಪರವಾಗಿ.
  2. ಹೌಸ್ಟಫ್‌ವರ್ಕ್ಸ್: ಹೌ ಹೆಲ್ತ್ ಇನ್ಶುರೆನ್ಸ್ ವರ್ಕ್ಸ್.
  3. "Encarta: Health Insurance". Archived from the original on 2009-11-01. Retrieved 2010-06-18. {{cite web}}: Unknown parameter |deadurl= ignored (help)
  4. ಕ್ಯಾಲಿಫೋರ್ನಿಯಾ ಇನ್ಶುರೆನ್ಸ್ ಕೋಡ್ ಸೆಕ್ಷನ್ 106ಅನ್ನು ಗಮನಿಸಿ (ಅಸಾಮರ್ಥ್ಯ-ವಿಮೆಯನ್ನು ವಿವರಿಸುತ್ತದೆ). http://caselaw.lp.findlaw.com/cacodes/ins/100-124.5.html 2001ರಲ್ಲಿ ಕ್ಯಾಲಿಫೋರ್ನಿಯಾ ಲೆಜಿಸ್ಲೇಚರ್ ಉಪವಿಭಾಗ (b)ಅನ್ನು ಸೇರಿಸಿತು. ಅದು "ಆರೋಗ್ಯ ವಿಮೆ"ಯನ್ನು, "ಆಸ್ಪತ್ರೆಯ, ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸೆಯ ಪ್ರಯೋಜನಗಳಿಗೆ ವಿಮಾರಕ್ಷಣೆಯನ್ನು ನೀಡುವ ವೈಯಕ್ತಿಕ ಅಥವಾ ಗುಂಪು ಅಸಾಮರ್ಥ್ಯ-ವಿಮಾ ಪಾಲಿಸಿ" ಎಂದು ನಿರೂಪಿಸುತ್ತದೆ.
  5. ೫.೦ ೫.೧ ಫಂಡಮೆಂಟಲ್ಸ್ ಆಫ್ ಹೆಲ್ತ್ ಇನ್ಶುರೆನ್ಸ್: ಪಾರ್ಟ್ A, ಹೆಲ್ತ್ ಇನ್ಶುರೆನ್ಸ್ ಅಸೋಸಿಯೇಶನ್ ಆಫ್ ಅಮೆರಿಕ, 1997, ISBN 1-879143-36-4.
  6. ಥೋಮಸ್ P. ಒಹರೆ, "ಇಂಡಿವಿಜ್ವಲ್ ಮೆಡಿಕಲ್ ಎಕ್ಸ್‌ಪೆನ್ಸ್ ಇನ್ಶುರೆನ್ಸ್", ದ ಅಮೆರಿಕನ್ ಕಾಲೇಜ್, 2000, ಪುಟ 7, ISBN 1-57996-025-1.
  7. ಮ್ಯಾನೇಜ್ಡ್ ಕೇರ್: ಇಂಟೆಗ್ರೇಟಿಂಗ್ ದ ಡೆಲಿವರಿ ಆಂಡ್ ಫೈನಾನ್ಸಿಂಗ್ ಆಫ್ ಹೆಲ್ತ್ ಕೇರ್ - ಪಾರ್ಟ್ A, ಹೆಲ್ತ್ ಇನ್ಶುರೆನ್ಸ್ ಅಸೋಸಿಯೇಶನ್ ಆಫ್ ಅಮೆರಿಕ, 1995, ಪುಟ 9 ISBN 1-879143-26-1.
  8. ಏಜೆನ್ಸಿ ಫಾರ್ ಹೆಲ್ತ್ ಕೇರ್ ರಿಸರ್ಚ್ ಆಂಡ್ ಕ್ವಾಲಿಟಿ (AHRQ). "ಆರೋಗ್ಯ ವಿಮೆಯ ಬಗೆಗಿನ ಪ್ರಶ್ನೆಗಳು ಮತ್ತು ಉತ್ತರಗಳು: ಒಂದು ಗ್ರಾಹಕ ಮಾರ್ಗದರ್ಶಿ". Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ. ಆಗಸ್ಟ್‌ 2007.
  9. "Health insurance". turtlemint.com.
  10. "ಆರ್ಕೈವ್ ನಕಲು". Archived from the original on 2009-03-27. Retrieved 2010-06-18.
  11. "ಆರ್ಕೈವ್ ನಕಲು". Archived from the original on 2009-08-09. Retrieved 2010-06-18.
  12. "ವಿವಿಧೋದ್ದೇಶದ ಆರೋಗ್ಯ ವಿಮೆ ಮತ್ತು ಷೆಡ್ಯೂಲ್ ಮಾಡಿದ ಆರೋಗ್ಯ ವಿಮೆ" Archived 2021-01-18 ವೇಬ್ಯಾಕ್ ಮೆಷಿನ್ ನಲ್ಲಿ..
  13. "ಮಿನಿ ಮೆಡಿಕಲ್ ಪ್ಲ್ಯಾನ್ಸ್ ಆನ್ ದ ಮ‌ೂವ್".
  14. ೧೪.೦ ೧೪.೧ ದ ಫ್ಯಾಕ್ಟರ್ಸ್ ಫ್ಯುಯೆಲಿಂಗ್ ರೈಸಿಂಗ್ ಹೆಲ್ತ್‌ಕೇರ್ ಕಾಸ್ಟ್ಸ್ 2006, ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್‌ ಫಾರ್ ಅಮೆರಿಕಾಸ್ ಹೆಲ್ತ್‌ಕೇರ್ ಇನ್ಶುರೆನ್ಸ್ ಪ್ಲ್ಯಾನ್ಸ್, 2006, 2007-10-08ರಲ್ಲಿ ಸಂಕಲನಗೊಂಡಿದೆ.
  15. "Mirror, Mirror on the Wall: An International Update on the Comparative Performance of American Health Care". The Commonwealth Fund. May 15, 2007. Archived from [http: //www.commonwealthfund.org/Content/Publications/Fund-Reports/2007/May/Mirror--Mirror-on-the-Wall--An-International-Update-on-the-Comparative-Performance-of-American-Healt.aspx the original] on ಮಾರ್ಚ್ 29, 2009. Retrieved March 7, 2009. {{cite web}}: Check |url= value (help)
  16. "ಆರ್ಕೈವ್ ನಕಲು". Archived from the original on 2008-08-22. Retrieved 2010-06-18.
  17. http://parlinfoweb.aph.gov.au/piweb/Repository/Legis/Bills/Linked/27050802.pdf
  18. http://www.abc.net.au/news/stories/2008/08/12/2332647.htm
  19. Private Health Insurance in OECD Countries. OECD Health Project. 2004. Retrieved 2007-11-19.
  20. National Health Expenditure Trends, 1975-2007. Canadian Institute for Health Information. 2007-11-13. ISBN 9781554651672. Archived from the original on 2008-02-14. Retrieved 2007-11-19.
  21. Hadorn, D. (2005-08-02). "The Chaoulli challenge: getting a grip on waiting lists". Canadian Medical Association Journal. 173: 271. doi:10.1503/cmaj.050812. PMID 16076823.
  22. "L'ಅಶುರೆನ್ಸ್ ಮ್ಯಾಲಡಿ".
  23. ಜಾನ್ S. ಅಂಬ್ಲರ್, "ದ ಫ್ರೆಂಚ್ ವೆಲ್‌ಫೇರ್ ಸ್ಟೇಟ್: ಸರ್ವೈಂಗ್ ಸೋಷಿಯಲ್ ಆಂಡ್ ಐಡಿಯಲಾಜಿಕಲ್ ಚೇಂಜ್", ನ್ಯೂಯಾರ್ಕ್ ಯೂನಿವರ್ಸಿಟಿ ಪ್ರೆಸ್, 30 ಸೆಪ್ಟೆಂಬರ್ 1993, ISBN 978-0814706268.
  24. HM Treasury (2007-03-21). "Budget 2007" (PDF). p. 21. Retrieved 2007-05-11.
  25. "ಆರ್ಕೈವ್ ನಕಲು". Archived from the original on 2009-06-17. Retrieved 2010-06-18.
  26. BUPA ಎಕ್ಸ್‌ಕ್ಲೂಶನ್ಸ್ Archived 2009-01-31 ವೇಬ್ಯಾಕ್ ಮೆಷಿನ್ ನಲ್ಲಿ..
  27. AXA PPP ಆರೋಗ್ಯರಕ್ಷಣೆ.
  28. http://web2.bma.org.uk/bmapolicies.nsf/searchresults?OpenForm&Q=FIELD+Subject+ contains+Private+Healthcare+ AND+FIELD+DatePolicy +contains+2009~8~50~Y
  29. org.uk/ap.nsf/AttachmentsByTitle/PDFnhssystreform2007/$FILE/48751Surveynhsreform.pdf "Survey of the general public's views on NHS system reform in England" (PDF). BMA. 2007-06-01. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  30. ೩೦.೦ ೩೦.೧ ವರ್ಲ್ಡ್ ಹೆಲ್ತ್ ಆರ್ಗನೈಸೇಶನ್ ಸ್ಟಟಿಸ್ಟಿಕಲ್ ಇನ್ಫರ್ಮೇಶನ್ ಸಿಸ್ಟಮ್: ಕೋರ್ ಹೆಲ್ತ್ ಇಂಡಿಕೇಟರ್ಸ್.
  31. http://www.cdc.gov/nchs/fastats/hinsure.htm
  32. U.S. ಸೆನ್ಸಸ್ ಬ್ಯೂರೊ, "CPS ಹೆಲ್ತ್ ಕೇರ್ ಡೆಫಿನಿಶನ್ಸ್".
  33. ಹಿಮ್ಮಲ್‌ಸ್ಟೀನ್, D, E. ಮತ್ತು ಇತರರು, “ಮೆಡಿಕಲ್ ಬ್ಯಾಂಕ್ರಪ್ಟ್ಸಿ ಇನ್ ದ ಯುನೈಟೆಡ್ ಸ್ಟೇಟ್ಸ್, ೨೦೦೭: ರಿಸಲ್ಟ್ಸ್ ಆಫ್ ಎ ನ್ಯಾಷನಲ್ ಸ್ಟಡಿ, ಅಮೆರಿಕನ್ ಜರ್ನಲ್ ಆಫ್ ಮೆಡಿಸಿನ್, ಮೇ 2009.
  34. ಸಿಸ್ಕ, A ಮತ್ತು ಇತರರು, ಹೆಲ್ತ್ ಸ್ಪೆಂಡಿಂಗ್ ಪ್ರೊಜೆಕ್ಷನ್ಸ್ ಥ್ರೂ 2018: ರಿಸೆಶನ್ ಎಫೆಕ್ಟ್ಸ್ ಆಡ್ ಅನ್‌ಸರ್ಟೈನಿಟಿ ಟು ದ ಔಟ್‌ಲುಕ್ ಹೆಲ್ತ್ ಅಫೇರ್ಸ್, ಮಾರ್ಚ್/ಎಪ್ರಿಲ್ 2009; 28(2): w346-w357.
  35. http://www.cnn.com/2009/POLITICS/11/07/health.care/index.html
  36. http://questions.medicare.gov/cgi-bin/medicare.cfg/php/enduser/std_adp.php?p_faqid=2100
  37. CHIS 2007 ಸರ್ವೆ
  38. OPA, ಎಬೌಟ್ ಕ್ಯಾಲಿಫೋರ್ನಿಯಾಸ್ ಪೇಶೆಂಟ್ ಅಡ್ವೊಕೇಟ್ Archived 2022-01-25 ವೇಬ್ಯಾಕ್ ಮೆಷಿನ್ ನಲ್ಲಿ.
  39. ಹಿಸ್ಟರಿ ಆಫ್ ಜರ್ಮನ್ ಹೆಲ್ತ್ ಕೇರ್ ಸಿಸ್ಟಮ್
  40. Gesetzliche Krankenversicherungen im Vergleich(ಇಂಗ್ಲಿಷ್ ರೂಪಾಂತರ)
  41. "ಲೆಂತ್ ಆಫ್ ಹಾಸ್ಪಿಟಲ್ ಸ್ಟೆ, ಜರ್ಮನಿ". Archived from the original on 2011-06-12. Retrieved 2010-06-18.
  42. ಲೆಂತ್ ಆಫ್ ಹಾಸ್ಪಿಟಲ್ ಸ್ಟೆ, U.S.
  43. Borger C, Smith S, Truffer C; et al. (2006). "Health spending projections through 2015: changes on the horizon". Health Aff (Millwood). 25 (2): w61–73. doi:10.1377/hlthaff.25.w61. PMID 16495287. {{cite journal}}: Explicit use of et al. in: |author= (help)CS1 maint: multiple names: authors list (link)
  44. SOEP - ಸೋಜಿಯೊ-ಓಕೊನೊಮಿಸ್ಚೆ ಪ್ಯಾನೆಲ್ ೨೦೦೬: Art der Krankenversicherung
  • ನ್ಯಾವಿಗೇಟಿಂಗ್ ಯುವರ್ ಹೆಲ್ತ್ ಬೆನಿಫಿಟ್ಸ್ ಫಾರ್ ಡಮ್ಮೀಸ್. ಚಾರ್ಲ್ಸ M ಕಟ್ಲರ್ MD ಟ್ರೇಸಿ A ಬೇಕರ್ CFP (c)2006 ISBN 978-0-470-08354-3