ಅರುಣ ಸಾಯಿರಾಮ್ (ಅರುಣಾ ಸಾಯಿರಾಮ್ ) ಕರ್ನಾಟಕ ಸಂಗೀತದ ನವ ಪೀಳಿಗೆಯ ಗಾಯಕಿಯರ ಸಾಲಿನಲ್ಲಿ ಪ್ರಮುಖರು.ಇವರಿಗೆ ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿ ದೊರೆಕಿದೆ.

ಅರುಣ ಸಾಯಿರಾಮ್ / ಅರುಣಾ ಸಾಯಿರಾಮ್
ಜನನ(೧೯೫೨-೧೦-೩೦)೩೦ ಅಕ್ಟೋಬರ್ ೧೯೫೨
ಮುಂಬೈ, ಮಹಾರಾಷ್ಟ್ರ
ಸಂಗೀತ ಶೈಲಿಕರ್ನಾಟಕ ಸಂಗೀತ
ವೃತ್ತಿಶಾಸ್ತ್ರೀಯ ಸಂಗೀತ ಗಾಯಕಿ
ಸಕ್ರಿಯ ವರ್ಷಗಳು1958 - ಪ್ರಸ್ತುತ

ಬಾಲ್ಯ ಮತ್ತು ಶಿಕ್ಷಣ ಬದಲಾಯಿಸಿ

ಅರುಣ ಸಾಯಿರಾಮ್ ಪ್ರಾಥಮಿಕ ಶಿಕ್ಷಣವನ್ನು ತಮ್ಮ ತಾಯಿ ಆಲತ್ತೂರು ಸಹೋದರರ.ಮತ್ತು ತಂಜಾವೂರು ಶಂಕರ ಐಯ್ಯರ್ ರವರ ಶಿಷ್ಯೆ ರಾಜಲಕ್ಷ್ಮೀ ಸೇತುರಾಮನ್ ರವರಿಂದ ಪಡೆದರು.[೧] ಮುಂದೆ ಹೆಚ್ಚಿನ ಶಿಕ್ಷಣವನ್ನು ಮದುರೈ ಸೋಮಸುಂದರಮ್ ಮತ್ತು ಟಿ.ಬೃಂದಾ ರವರಿಂದ ಪಡೆದರು.[೨] ರಾಗ, ತಾನ ಮತ್ತು ಪಲ್ಲವಿ ಗಾಯನವನ್ನು ಟಿ.ಆರ್.ಸುಬ್ರಹ್ಮಣ್ಯಂ ರವರಿಂದ ಪಡೆದರು.[೩]

ಸಾಧನೆ ಮತ್ತು ಗೌರವ ಬದಲಾಯಿಸಿ

ಅರುಣ ಸಾಯಿರಾಮ್ ದೇಶ ಹಾಗೂ ವಿದೇಶದ ಹಲವಾರು ಕಲಾವಿದರೊಂದಿಗೆ ಸೇರಿ ಕಛೇರಿಗಳನ್ನು ಅಥವಾ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಇಂತಹವರಲ್ಲಿ ಅಂತಾರಾಷ್ಟ್ರ ಖ್ಯಾತಿಯ ಡೊಮಿನಿಕ್ ವೆಲ್ಲಾರ್ಡ್ ಮುಂತಾದರೂ ಸೇರಿದ್ದಾರೆ. ಹಲವಾರು ಅಂತಾರಾಷ್ಟ್ರೀಯ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿ ಖ್ಯಾತಿ ಗಳಿಸಿದ್ದಾರೆ.
ಇವರ ಈ ಸಾಧನೆ ಗಮನಿಸಿ ಭಾರತ ಸರಕಾರ ಇವರಿಗೆ ೨೦೦೯ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.[೪]

ಉಲ್ಲೇಖಗಳು ಬದಲಾಯಿಸಿ

  1. "''The Hindu'': Entertainment Delhi / Music : Song of the soul". Chennai, India: Hindu.com. 2006-02-17. Archived from the original on 2006-09-13. Retrieved 2010-09-30.
  2. "''The Hindu'': Friday Review Delhi / Music : Devotion and dexterity". Chennai, India: Hindu.com. 2006-02-24. Archived from the original on 2010-09-18. Retrieved 2010-09-30.
  3. "''The Hindu'': Friday Review Chennai / Events : Odyssey of a musician". Chennai, India: Hindu.com. 2008-10-17. Archived from the original on 2008-10-21. Retrieved 2010-09-30.
  4. "The Times of India". The Times Of India. 26 January 2009. Archived from the original on 7 ಜುಲೈ 2012. Retrieved 22 January 2012.

ಬಾಹ್ಯ ಸಂಪರ್ಕಗಳು ಬದಲಾಯಿಸಿ