ಅರಿಶಿನ ಬುರುಡೆ
ಮೇಲಿನ ಚಿತ್ರ (ಗಂಡು). ಕೆಳಗೆ ಗೂಡಿನಲ್ಲಿ (ಹೆಣ್ಣು)
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
O. kundoo
Binomial name
Oriolus kundoo
(Sykes, 1832)
ಅಂದಾಜು ವ್ಯಾಪ್ತಿ

ಅರಿಶಿನ ಬುರುಡೆ ಹಕ್ಕಿ , ಒರಿಯಲ್ ಕುಂಡೂ (Oriolus kundoo ಕ-ಅರಿಶಿನ-ಬುರುಡೆ) ಜಾತಿಗೆ ಸೇರಿದ ಗುಬಚ್ಚಿ ಗಾತ್ರದ ಹಕ್ಕಿ. ಇದನ್ನು ಭಾರತ ಉಪಖಂಡ ಹಾಗು ಮಧ್ಯ ಏಷ್ಯದೆಲ್ಲೆಡೆ ಕಾಣಬಹುದು. ಈ ಹಕ್ಕಿ ಕೆಲವೆಡೆ ಮದುವಣಗಿತ್ತಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಮದುವಣಗಿತ್ತಿ (ಮದುಮಗಳು) ಎಂಬ ಹೆಸರಿಗೆ ತಕ್ಕಂತೆ ಮುಖ ಮೈ ಎಲ್ಲವೂ ಅರಿಶಿನ, ಹಣೆಯ ಕುಂಕುಮದಂತೆ ಕೆಂಪು ಕೊಕ್ಕು, ಕಾಡಿಗೆ ತೀಡಿದ ಕಣ್ಣಿನಂತೆ ಕಣ್ಣಿನ ಪಕ್ಕಕ್ಕೆ ಕಪ್ಪು ಬಣ್ಣ ತೀಡಿರುವುದರಿಂದ ಮದುವಣಗಿತ್ತಿ ಎಂಬ ಹೆಸರು ಈ ಹಕ್ಕಿಯ ರೂಪವನ್ನು ಸೂಕ್ತವಾಗಿ ಸೂಚಿಸುತ್ತದೆ . ಆದರೆ ಈ ಹೆಸರು ಸೂಚಿಸುವಂತೆ ಇದು ಹೆಣ್ಣ ಹಕ್ಕಿಯ ರೂಪ ಲಕ್ಷಣಗಳಲ್ಲ - ಇದು ಗಂಡು ಹಕ್ಕಿಯ ರೂಪ ಲಕ್ಷಣಗಳಾಗಿವೆ. ಈ ಹಕ್ಕಿಯನ್ನು ಇನ್ನೂ ಬೇರೆ ಬೇರೆ ಹೆಸರುಗಳಿಂದಲೂ ಕರೆಯುವುದುಂಟು, ಸುವರ್ಣ ಪಕ್ಷಿ, ಹೊನ್ನಕ್ಕಿ, ಮಂಜಲಪಕ್ಕಿ, ಮಂಜಲಕ್ಕಿ (ತುಳು), ಮಂಜಪಕ್ಷಿ (ಕೊಡವ), ಪಿಳಿಕ, ಪಿಪೀಲಾಯ (ಸಂಸ್ಕೃತ). ಹಿಂದೆ ಇವುಗಳನ್ನು ಯುರೇಷ್ಯದ ಹಳದಿ ಓರಿಯಲ್ ಓರಿಯೊಲಸ್ (Eurasian Golden Oriole) ( Oriolus oriolus , ಓ-ಅರಿಶಿನ-ಬುರುಡೆ )ಗಳ ಉಪ್ಪಜಾತಿ ಎಂದು ವಿಂಗಡಿಸಲ್ಪಟ್ಟಿತ್ತು ಆದರೆ ಇವುಗಳ ಬಣ್ಣ ಮಾರ್ಪಾಡು, ಕೂಗುಗಳಲ್ಲಿನ ವ್ಯತ್ಯಾಸದಿಂದಾಗಿ ಇವು ಈಗ ತಮ್ಮದೇ ಆದ ಮೂಲ ಜಾತಿಯ ಸ್ಥಾನ ಪಡೆದಿವೆ[೧]. ಇವು ಯುರೇಷ್ಯದ ಹಳದಿ ಗಂಡು ಒರಿಯಲ್ ಗಳಿಗಿಂತ ವಿಭಿನ್ನ ಎಂಬುದನ್ನು ಅದರ ಕಣ್ಣ ಹಿಂದಕ್ಕೆ ವಿಸ್ತರಿಸುವ ಕಪ್ಪು ಪಟ್ಟಿಯಿಂದ ಗುರುತಿಸಬಹುದು. ಪಾಕಿಸ್ತಾನ, ಉಜ್ಬೇಕಿಸ್ತಾನ , ತುರ್ಕ್ಮೆನಿಸ್ತಾನ್, ಕಝೆಕ್ಸ್ತಾನ್, ತಜಿಕಿಸ್ತಾನ್, ಆಫ್ಗಾನಿಸ್ತಾನ್ ಹಾಗು ನೇಪಾಳ ಹಾಗು ಭಾರತದ ಬಹುತೇಕ ಕಡೆ ಇವು ಕಾಣಿಸಿಕೊಂಡರೂ, ಬೇರೆಡೆಯ ಅರಿಶಿನ-ಬುರುಡೆಗಳು ಭಾರತದ ಪರ್ಯಾಯದ್ವೀಪದಲ್ಲಿನ ಅರಿಶಿನ-ಬುರುಡೆಗಳು ವಲಸೆ ಹೋಗುವುದಿಲ್ಲ.[೧]

ವಿವರ ಬದಲಾಯಿಸಿ

 
ಗಂಡು ಹಕ್ಕಿಯ ಕೆಳಭಾಗ

ಯುರೇಷ್ಯಾದ ತಮ್ಮ ಬಳಗಕ್ಕಿಂತಲೂ, ಬಾಲದಲ್ಲಿ ಹೆಚ್ಚು ಹಳದಿ ಹೊಂದಿದ್ದು , ಕೊಕ್ಕಿನಲ್ಲಿನ ಹಾಗು ಕಣ್ಣುಗಳಲ್ಲಿನ ಕೆಂಪು ಮಂದವಾಗಿರುವ ಭಾರತದ ಅರಿಶಿನ-ಬುರುಡೆಯ ಗಂಡು ಹಕ್ಕಿಗಳಿಗೆ ಕಾಡಿಗೆ ಹಚ್ಚಿರುವಂತೆ ಕಣ್ಣಿನಿಂದ ಪಕ್ಕಕ್ಕೆ ಕಪ್ಪು ಬಣ್ಣ ತೀಡಿದ್ದು, ಕಪ್ಪು ರೆಕ್ಕೆಯ ಎರಡನೆ ಹಾಗು ಮೂರನೆ ಮಡಿಚಿನಲ್ಲಿರುವ ಪುಕ್ಕಗಳ ತುದಿ ಹಳದಿ ಯಾಗಿರುತ್ತದೆ. ಹೆಣ್ಣು ಹಕ್ಕಿಗಳ ಕೆಳಭಾಗದಲ್ಲಿನ ಭೂದಿಬಣ್ಣದ ಕಿರು ಪಟ್ಟೆಗಳು ಯುರೇಷ್ಯಾದ ಹೆಣ್ಣು ಬಳಗಕ್ಕಿಂತಲೂ ತೀಕ್ಷ್ಣವಾಗಿರುತ್ತದೆ.[೨][೩][೪] ಯುರೇಷ್ಯಾದ ಮದುವಣಗಿತ್ತಿ ಗಂಡು ಹಕ್ಕಿಗಳ ರೆಕ್ಕೆ ೧೪೯-೧೬೨ cm ಆದರೆ ಭಾರತದ ಗಂಡು ಹಕ್ಕಿಗಳ ರೆಕ್ಕೆ ೧೩೬-೧೪೪. ರೆಕ್ಕೆಯ ಪುಕ್ಕಗಳ ಸೂತ್ರದಲ್ಲೂ ವ್ಯತ್ಯಾಸವಿದೆ. ಓ-ಮದುವಣಗಿತ್ತಿಯರ ಮೂಲ ೫ ನೆಯದಕ್ಕಿಂತ ೨ ನೆಯದು ಉದ್ದ, ಕ-ಮದುವಣಗಿತ್ತಿಯರ ಮೂಲ 2 ನೆಯದಕ್ಕಿಂತ 5 ನೆಯದು ಉದ್ದವಿರುತ್ತದೆ.[೫]

ವ್ಯಾಪ್ತಿ ಮತ್ತು ವಾಸ ಬದಲಾಯಿಸಿ

ಅರಿಶಿನ-ಬುರುಡೆಗಳ ಸಂತತಿ ಬಲೂಚಿಸ್ತಾನ ಮತ್ತು ಆಫಗಾನಿಸ್ತಾನ, ಹಿಮಾಲಯ ದಿಂದ ನೇಪಾಳದವರೆಗೂ ವ್ಯಾಪಿಸಿದ್ದರೂ ಇಲ್ಲಿನ ಅರಿಶಿನ-ಬುರುಡೆಗಳು ಚಳಿಗಾಲದಲ್ಲಿ ದಕ್ಷಿಣ ಭಾರತ, ಶ್ರೀಲಂಕ, ಮಾಳ್ಡವೀಸ್ ಮತ್ತು ಆಂಡಮಾನಗಳಿಗೆ ವಲಸೆ ಬರುವುದನ್ನು ದಾಖಲಿಸಲಾಗಿದೆ. ಆದರೆ ಭಾರತದ ದಕ್ಷಿಣ ಭಾಗದ ಅರಿಶಿನ-ಬುರುಡೆಗಳು ವಲಸೆ ಹೋಗುವುದಿಲ್ಲ.[೨] ಕ-ಅರಿಶಿನ-ಬುರುಡೆಗಳ ಆವಾಸ ವಿವಿಧ ಬಗೆಯದಾಗಿವೆ. ಕುರಚಲು-ಕಾಡು, ಅಲ್ಪ-ನಿತ್ಯ ಹರಿದ್ವರ್ಣ ಕಾಡು, ಗೋಮಾಳಗಳು, ತೋಪುಗಳು, ಉದ್ಯಾನವನಗಳು, ತೋಟಗಳು, ಜನವಸತಿ ಪ್ರದೇಶ,ಪೇಟೆಗಳ ಉದ್ಯಾನಗಳಲ್ಲೂ ಅರಿಶಿನ-ಬುರುಡೆಗಳನ್ನು ಕಾಣಬಹುದು [೧]

ಆಹಾರ ಮತ್ತು ಪರಿಸರ ಬದಲಾಯಿಸಿ

 
ಗಂಡು ಗೂಡಿನಲ್ಲಿ ( ಹೈದರಾಬಾದ್, ಭಾರತ )

ಹಣ್ಣುಗಳು, ಕೀಟಗಳು, ಹೂವಿನ ಮಕರಂದ [೨] ಅರಿಶಿನ ಬುರುಡೆ ಹಕ್ಕಿಗಳ ಆಹಾರ, ಇವು ಬಯಲು ಸೀಮೆಯ ಸಾಲುಮರಗಳಲ್ಲಿ ಅತ್ತಿ, ಗೋಣಿ, ಆಲ, ಬಸರಿ ಮೊದಲಾದ ಮರಗಳು ಹಣ್ಣು ಬಿಟ್ಟಾಗ ಇತರ ಹಕ್ಕಿಗಳ ಗುಂಪಿನಲ್ಲಿ ಇವೂ ಸೇರಿ ಗಲಾಟೆ ಮಾಡುತ್ತಾ ಹಣ್ಣು ತಿನ್ನುವುದನ್ನು ನೋಡಬಹುದು. ಅವು ಲಂಟ್ರಾಣಿ ( ಲಾಂಟೆನ ) ಹಾಗು ಇತರ ಬಗೆಯ ಕಿರಿ ಹಣ್ಣುಗಳ ಬೀಜಪ್ರಸಾರಕ್ಕೆ ಕಾರಣವಾಗಿವೆ.[೬] ಇವು ಹಾರುವ ಹಲ್ಲಿಯನ್ನು (Draco dussumieri) ಬೇಟೆ ಆಡಿದ ಪುರಾವೆಯೂ ಇದೆ.[೭] ಇವುಗಳ ಹಾರಾಟ ತಗ್ಗು-ಧುಮುಕುವ ಶೈಲಿಯದಾದರೂ, ಇವು ಗಂಟೆಗೆ ೪೦ ಕಿ.ಮಿ ವೇಗ ಮುಟ್ಟಬಲ್ಲವು. ಇವು ಕೆಲವೊಮ್ಮೆ ನಿಂತ ನೀರಿನಲ್ಲಿ ಮತ್ತೆ ಮತ್ತೆ ಮೀಯುವ ಸಡಗರವನ್ನು ಗಮನಿಸಲಾಗಿದೆ. ಗುಜರಾತ್ ರಾಜ್ಯದಲ್ಲಿ ಗುರುತಿಸಿದ ಮದುವಣಗಿತ್ತಿಯೊಂದು - ೯ ವರ್ಷಗಳ ನಂತರ ತಜಕಿಸ್ತಾನದಲ್ಲಿ ಕಂಡಿರುವ ದಾಖಲೆ ಇದೆ.[೮] ಏಪ್ರಿಲ್ ನಿಂದ ಆಗಸ್ಟ್ ಮಾಸಗಳಲ್ಲಿ ಸಂತಾನ ಅಭಿವೃದ್ಧಿ ನಡೆಸಿ ಇವು ಜೇಡರ ಬಲೆಯನ್ನೂ , ಹುಲ್ಲು, ನಾರು, ಮತ್ತು ಎಲೆಗಳಿಂದ ಎರಡು ಕೊಂಬೆಗಳ ಮಧ್ಯದಲ್ಲಿ ತೊಟ್ಟಿಲಿನಂತಹ ಗೂಡನ್ನು ಕಟ್ಟುತ್ತವೆ. ಸಾಧಾರಣವಾಗಿ ಇವು ಕಾಜಾಣ/ಕರಿ-ಭುಜಂಗ (Black Drongo) ಹಕ್ಕಿಯ ಗೂಡಿನ ಅಕ್ಕಪಕ್ಕದಲ್ಲಿ ತಮ್ಮ ಗೂಡನ್ನು ಮಾಡುತ್ತವೆ.[೨] ಬಿಳಿಯ ತೊಗಟಿನಮೇಲೆ ಮಣ್ಣು ಹಾಗು ಕಪ್ಪು ಬಣ್ಣದ ಬೊಟ್ಟುಗಳುಳ್ಳ ೨-೩ ಮೊಟ್ಟೆಗಳನ್ನು ಹಾಕಿ, ತಾಯಿ ಮತ್ತು ತಂದೆ ಹಕ್ಕಿಗಳೆರಡೂ ಗೂಡು ಹಾಗು ಮರಿಗಳನ್ನು ಪಾಲಿಸುತ್ತವೆ. ಇವುಗಳ ಸಂತತಿಗೆ ಕಾಗೆ, ಗಿಡಗ ಮತ್ತು ಇತರ ಭಕ್ಷಕರಿಂದ ಆತಂಕ ಹೆಚ್ಚು.[೮] ಹೀಮೊಪ್ರೋಟಿಯಸ ಎಂಬ ಪರಾವಲಂಬ ರಕ್ತ ಜೀವಿ ಅರಿಶಿನ-ಬುರುಡೆಗಳಲ್ಲಿ ಸಾಧಾರಣವಾಗಿ ಕಾಣಿಸಿಕೊಳುತ್ತವೆ.[೯]

ಮೂಲಗಳು ಬದಲಾಯಿಸಿ

  1. ೧.೦ ೧.೧ ೧.೨ Walther, B; Jones, P (2008). "Family Oriolidae (Orioles and Figbirds)]". In Josep, del Hoyo; Andrew, Elliott; David, Christie (eds.). Handbook of the Birds of the World. Volume 13, Penduline-tits to Shrikes. Barcelona: Lynx Edicions. pp. 692–723. ISBN 978-84-96553-45-3{{cite book}}: CS1 maint: postscript (link)
  2. ೨.೦ ೨.೧ ೨.೨ ೨.೩ Rasmussen PC & JC Anderton (2005). Birds of South Asia. The Ripley Guide. Volume 2. Washington DC & Barcelona: Smithsonian Institution and Lynx Edicions. p. 586.
  3. Jønsson, KA; Rauri C. K. Bowie, Robert G. Moyle, Martin Irestedt, Les Christidis, Janette A. Norman and Jon Fjeldsa (2010). "Phylogeny and biogeography of Oriolidae (Aves: Passeriformes)" (PDF). Ecography. 33: 232–241. doi:10.1111/j.1600-0587.2010.06167.x.{{cite journal}}: CS1 maint: multiple names: authors list (link)
  4. Kollibay, Paul (1915). "Einige Bemerkungen über Oriolus oriolus kundoo Sykes". Journal of Ornithology (in German). 64 (2): 241–243. doi:10.1007/BF02250522.{{cite journal}}: CS1 maint: unrecognized language (link)
  5. Vaurie, Charles. "Systematic notes on Palearctic birds. No. 32, Oriolidae, Dicruridae, Bombycillidae, Pycnonotidae, Nectariniidae, and Zosteropidae". American Museum novitates. 1869: 1–28.
  6. Ali, Salim (1936). "Economic ornithology in India" (PDF). Current Science. 4: 472–478.
  7. Balachandran, S (1998). "Golden oriole Oriolus oriolus preying on flying lizard Draco dussumieri Dum. & Bibr". J. Bombay Nat. Hist. Soc. 95 (1): 115.
  8. ೮.೦ ೮.೧ Ali S & SD Ripley. Handbook of the Birds of India and Pakistan. Volume 5 (2 ed.). New Delhi: Oxford University Press. pp. 102–104.
  9. Peirce, MA (1984). "Haematozoa of Zambian birds VII. Redescription of Haemoproteus orioli from Oriolus oriolus (Oriolidae)". Journal of Natural History. 18 (5): 785–787. doi:10.1080/00222938400770651.

ಬಾಹ್ಯ ಕೊಂಡಿಗಳು ಬದಲಾಯಿಸಿ