ಅನಾಕ್ರಿಯಾನ್ (ಕ್ರಿ.ಪೂ ೫೮೨-ಕ್ರಿ.ಪೂ.೪೮೫) [೧] ಕ್ರಿ.ಪೂ. ಆರನೆಯ ಶತಮಾನದಲ್ಲೆ ಉತ್ಕೃಷ್ಟ ಗೀತೆಗಳನ್ನು ಬರೆದ ಗ್ರೀಕ್ ಕವಿ.

A bust of Anacreon in the Louvre
Sketch of a bust of Anacreon

ಹಿರಿಮೆ ಬದಲಾಯಿಸಿ

ಅನಾಕ್ರಿಯಾನ್‍ಟಿಕ್ಸ್ ಎಂಬ ಹೊಸ ಛಂದಸ್ಸು ಮತ್ತು ಹೊಸ ಭಾವಕಲ್ಪನೆಯ ಮೂಲಪುರುಷ. ನಿರಂಕುಶ ಪ್ರಭುಗಳೇ ಹೆಚ್ಚಾಗಿದ್ದ ಆ ಕಾಲದಲ್ಲಿ ಒಂದು ಕಡೆ ನೆಲೆಯಾಗಿ ನಿಲ್ಲಲು ಅವನಿಗೆ ಸಾಧ್ಯವಾಗಲಿಲ್ಲ. ಸೇಮಾಸ್ ರಾಜ್ಯದ ಪಾಲಿಕ್ರಟೀಸ್‍ನ ಆಶ್ರಯದಲ್ಲಿ ಕೆಲಕಾಲ ಇದ್ದು, ಆ ದೊರೆಯ ಕೊಲೆಯಾದ ಮೇಲೆ ಅಥೆನ್ಸ್ ನಗರಕ್ಕೆ ಬಂದು ನೆಲೆಸಿದ. 85ನೆಯ ವಯಸ್ಸಿನಲ್ಲಿ ತೀರಿಕೊಂಡ. ಪಾಸೇನಿಯಸ್ ಎಂಬ ಪ್ರಸಿದ್ಧ ದಳಪತಿ ಇವನ ವಿಗ್ರಹವನ್ನು ಅಥೆನ್ಸಿನ ಅಕ್ರೋಪೋಲಿಸ್‍ನಲ್ಲಿ ನಿಲ್ಲಿಸಿದ್ದನೆಂದು ಹೇಳಿರುವುದರಿಂದಲೂ.[೨] ಐದು ಮತ್ತು ನಾಲ್ಕನೆಯ ಶತಮಾನದ ಕವಿಗಳು ಇವನ ಕೃತಿಗಳಿಂದ ಉದ್ಧರಿಸಿರುವುದರಿಂದಲೂ ಇವನು ಅಥೆನ್ಸಿನಲ್ಲಿ ತುಂಬ ಮಾನ್ಯತೆ ಪಡೆದಿದ್ದನೆಂದು ಹೇಳಬಹುದು. ಇವನು ರಚಿಸಿದ ಯಾವ ಕಾವ್ಯವೂ ಸಂಪೂರ್ಣವಾಗಿ ಉಳಿದಿಲ್ಲ; ದೊರೆತಿರುವುದೆಲ್ಲ ತುಂಡುಗಳು ಮಾತ್ರ. ಆದರೂ ಅವುಗಳಲ್ಲಿ, ಅವನು ಆರಿಸಿರುವ ಛಂದಸ್ಸಿನ ಔಚಿತ್ಯ, ಶೈಲಿಯ ಸರಳತೆ, ಲಾಲಿತ್ಯ ಎದ್ದು ಕಾಣುತ್ತವೆ. ದೊರೆತಿರುವ ಕವಿತೆಗಳಲ್ಲಿ ಕಾಣುವ ವಿಷಯ ಮದ್ಯ, ಮಾನಿನಿಯನ್ನು ಕುರಿತವು; ಗಂಭೀರ ವಿಷಯಗಳನ್ನುಳ್ಳವು ಇಲ್ಲವೇ ಇಲ್ಲ. ಅನಾಕ್ರಿಯಾನ್‍ಟಿಕ ಎಂಬ ಹೆಸರಿನಿಂದ ಲಭ್ಯವಾಗಿರುವ ಕವನಗಳನ್ನು ಅವನ ಕಾಲದ ಐದಾರು ಶತಮಾನಗಳ ನಂತರ ಅವನನ್ನು ಅನುಕರಿಸಿದವರು ರಚಿಸಿದರು.

ಉಲ್ಲೇಖಗಳು ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ

 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಅನಾಕ್ರಿಯಾನ್]]
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: