ಅನನ್ಯಾ ಭಟ್

ಭಾರತೀಯ ಹಿನ್ನೆಲೆಗಾಯಕಿ

ಅನನ್ಯಾ ಭಟ್ ಭಾರತೀಯ ಹಿನ್ನೆಲೆ ಗಾಯಕಿ, ಅವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ.[೧][೨][೩] ಅವರ ಗಾಯನ ವೃತ್ತಿಜೀವನದ ಮೂಲಕ, ಅವರು ೬೪ ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್, ೨೦೧೭ ರಲ್ಲಿ ರಾಮ ರಾಮ ರೇ ಚಿತ್ರದ ನಮ್ಮ ಕಾಯೋ ದೇವಾನೆ ಹಾಡಿಗೆ ಫಿಲ್ಮ್‌ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅನನ್ಯಾ ಭಟ್
ಹಿನ್ನೆಲೆ ಮಾಹಿತಿ
ಮೂಲಸ್ಥಳಮೈಸೂರು, ಭಾರತ
ಸಂಗೀತ ಶೈಲಿಫಿಲ್ಮಿ, ಕರ್ನಾಟಕ ಶಾಸ್ತ್ರೀಯ
ವೃತ್ತಿಹಾಡುಗಾರ್ತಿ, ಟೆಲಿವಿಷನ್ ನಟಿ
ಸಕ್ರಿಯ ವರ್ಷಗಳು೨೦೧೭-ಇಂದಿನವರೆಗೆ

ಜೀವನ ಬದಲಾಯಿಸಿ

ಬೆಳಗಾವಿಯ ಅಂಕಲಿಯಲ್ಲಿ ಜನಿಸಿದ ಅವರು ಕರ್ನಾಟಕದ ಮೈಸೂರಿನಲ್ಲಿ ಬೆಳೆದರು. ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರು ಜ್ಯೋತಿಷಿ ವಿಶ್ವನಾಥ ಭಟ್ ಮತ್ತು ರೇವತಿ ಪುರಾಣಿಕ್ ಅವರ ಪುತ್ರಿ.

ಶಿಕ್ಷಣ ಬದಲಾಯಿಸಿ

ಪ್ರಾಥಮಿಕ ಶಿಕ್ಷಣವನ್ನು ವಿಶ್ವೇಶ್ವರ ನಗರದ ಸೈಂಟ್ ಥಾಮಸ್ ಶಾಲೆಯಲ್ಲಿ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ವಿಜಯ ವಿಠಲಶಾಲೆಯಲ್ಲೂ ಪೂರೈಸಿ, ಪಿಯು ಮರಿಮಲ್ಲಪ್ಪ ಕಾಲೇಜು, ಬಿಕಾಂ ಪದವಿಯನ್ನು ಮಹಾಜನ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದ್ದಾರೆ.

ವೃತ್ತಿ ಜೀವನ ಬದಲಾಯಿಸಿ

ಅನನ್ಯ ಭಟ್ ಈಗ ಸ್ಯಾಂಡಲ್‌ವುಡ್‌ನ ಬೇಡಿಕೆಯ ಹಿನ್ನೆಲೆ ಗಾಯಕಿ. ತನ್ನ ೧೪ನೇ ವಯಸ್ಸಿಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ, ‘ಒಲವೇ ಜೀವನ ಲೆಕ್ಕಾಚಾರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನನ್ಯಾ ಹಿಂದಿರುಗಿ ನೋಡಲೇ ಇಲ್ಲ.

ಅನನ್ಯ ಭಟ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಿನ್ನಲೆ ಗಾಯಕಿ. ಇವರು ಯಶ್ ಅಭಿನಯದ `ಕೆಜಿಎಫ್' ಮುಂತಾದ ಚಿತ್ರದ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಕೆಜಿಎಫ್ ಚಿತ್ರದ ಗೀತೆಗಾಗಿ ಸೈಮಾ ಅತ್ತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಪಡೆದರು.

ಕಿರಿಯ ಗಾಯಕಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಹೈ ಪಿಚ್‌ನಲ್ಲಿ ತನ್ನದೇ ಆದ ಶೈಲಿಯ ಗಾಯನದೊಂದಿಗೆ ಗುರುತಿಸಿಕೊಂಡ ಅನನ್ಯಾ ಭಟ್, ೨೦೧೬ ರಲ್ಲಿ ತೆರೆಕಂಡ ‘ರಾಮ ರಾಮ ರೇ’ ಸಿನಿಮಾದ ‘ನಮ್ಮ ಕಾಯೋ ದೇವನೆ’ ಗೀತೆಗಾಗಿ ೬೪ ನೇ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಕೂಡಲೇ ತಮಿಳಿನ ‘ಕರುಪ್ಪನ್’ ತೆಲುಗಿನ ‘ಆಟಗದರ ಸಿವ’ ಸಿನಿಮಾದ ಹಾಡುಗಳಿಗೆ ಹಿನ್ನೆಲೆ ಗಾಯನಕ್ಕೆ ಅವಕಾಶ ಬಂತು.[೪]

ಇತ್ತೀಚೆಗೆ ತೆರೆಕಂಡ ಕನ್ನಡದ ‘ಟಗರು’ ಸಿನಿಮಾದ ‘ಮೆಂಟಲ್ ಹೋ ಜಾವೋ’ ಗೀತೆಯ ಮೂಲಕ ಮತ್ತಷ್ಟು ಜನಪ್ರಿಯರಾದರು. ಈವರೆಗೆ ಅನನ್ಯಾ, ಒಲವೇ ಜೀವನ ಲೆಕ್ಕಾಚಾರ, ಸಿದ್ದಗಂಗಾ, ಲೂಸಿಯಾ, ರಾಕೆಟ್, ಚತುರ್ಭುಜ, ಭಜುಂಗ, ಜಿಲ್ ಜಿಲ್, ಲೀ, ರಾಮ ರಾಮ ರೇ, ಮಾಫಿಯಾ, ಜೀಜಿಂಬೆ, ಡಾ. ಸುಕನ್ಯಾ, ಮೊಂಬತ್ತಿ, ಮಿಸ್ಟರ್ ಫರ್ಫೆಕ್ಟ್, ದಯವಿಟ್ಟು ಗಮನಿಸಿ, ಕಾಟಕ, ದಳಪತಿ, ಕಾನೂರಾಯಣ, ಟಗರು ಸಿನಿಮಾಗಳಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ.

ನಾಟಕ ಮತ್ತು ಚಲನಚಿತ್ರ ಬದಲಾಯಿಸಿ

ಇವರು ಚೋರ ಚರಣದಾಸ ನಾಟಕದಲ್ಲಿ ಗಾಯಕಿಯಾಗಿ, ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಬೆಂಗಳೂರಿನ ಬೆನಕ ತಂಡದೊಡನೆ ಸೇರಿ ಹಯವದನ ಗೋಕುಲ ನಿರ್ಗಮನ, ಹರಿಶ್ಚಂದ್ರ ಕಾವ್ಯ, ಜೋಕುಮಾರಸ್ವಾಮಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಊರ್ವಿ, ಭೂತಕಾಲ ಸಿನಿಮಾಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಪ್ರಶಸ್ತಿಗಳು ಬದಲಾಯಿಸಿ

ಇವರಿಗೆ ೨೦೧೭ ರಲ್ಲಿ 'ರಾಮ ರಾಮ ರೇ' ಹಾಡಿಗೆ ಅತ್ಯುತ್ತಮ ಹಿನ್ನಲೆ ಗಾಯಕಿ - ಸ್ತ್ರೀ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿದೆ.[೫]

ಉಲ್ಲೇಖಗಳು ಬದಲಾಯಿಸಿ

  1. "Ananya Bhat became a multilingual singer for 'KGF'". Deccan Herald (in ಇಂಗ್ಲಿಷ್). 21 December 2018. Retrieved 17 March 2020.
  2. Jan 27, Vinay Lokesh. "Ananya Bhat does her bit to keep folk songs alive | Mysuru News - Times of India". The Times of India (in ಇಂಗ್ಲಿಷ್). Retrieved 17 March 2020. {{cite web}}: Cite has empty unknown parameter: |2= (help); Text "TNN" ignored (help)CS1 maint: numeric names: authors list (link)
  3. "Ananya Bhat thanks a special someone - Times of India". The Times of India (in ಇಂಗ್ಲಿಷ್). Retrieved 17 March 2020.
  4. "Ananya Bhat Awards: List of awards and nominations received by Ananya Bhat | Times of India Entertainment". timesofindia.indiatimes.com. Retrieved 17 March 2020.
  5. "Ananya Bhat- Best Telugu Playback Singer Female 2016 Nominee | Filmfare Awards". filmfare.com (in ಇಂಗ್ಲಿಷ್). Retrieved 17 March 2020.