ಮತ್ತೊಬ್ಬರನ್ನು ಪ್ರತಿನಿಧಿಸುವ ಅರ್ಹತೆ ಅಥವಾ ಅಧಿಕಾರ ಹೊಂದಿ ಅವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುವ ವ್ಯಕ್ತಿ.[೧] ಭಾರತದಲ್ಲಿ ಪೋರ್ಚುಗೀಸರ ಕಾಲದಿಂದ ಅಂದರೆ ವಾಸ್ಕೋ ಡಿ ಗಾಮ ಬಂದಾಗಲಿನಿಂದಲೇ- ಕಾನೂನಿನ ಇತಿಹಾಸ ಪ್ರಾರಂಭವಾಯಿತು. ಆಗ ಈಗಿನಂತೆ ಪ್ರತ್ಯೇಕವಾಗಿ ವಾದಿಸುವವರು ಬೇಕಾಗಿರಲಿಲ್ಲ. ಕ್ರಮೇಣ, ಕಾನೂನಿನ ಚರಿತ್ರೆ ಬೆಳೆದುಬಂದಂತೆ-ಪ್ಲೀಡರ್, ಲಾಯರ್, ವಕೀಲ, ಅಟಾರ್ನಿ ಮುಂತಾದ ವಿವಿಧ ನಾಮಗಳಿಂದ ನ್ಯಾಯಾಲಯಗಳಲ್ಲಿ ವಾದಿಸುವವರು ಹುಟ್ಟಿಕೊಂಡರು.[೨] ಇದು ಇಂದಿಗೂ ನಡೆದು ಬಂದಿದೆ. ಆದರೆ, ಕಾನೂನಿನ ಕ್ರೋಡೀಕರಣಕ್ಕೋಸ್ಕರ 1961ರಲ್ಲಿ ಒಂದು ಹೊಸ ಕಾನೂನು-'ಅಡ್ವೊಕೇಟ್ ಕಾಯಿದೆ 1961' ಜಾರಿಗೆ ಬಂದಿದೆ.[೩] ಇದರ ಪ್ರಕಾರ ಮೊದಲಿನ ಪ್ಲೀಡರ್ ಮತ್ತಿತರರು ಬೇಕಾದರೆ ಅವರಿರುವ ತನಕ ಹಾಗೆಯೇ ಮುಂದುವರಿಯಬಹುದಾದರೂ ಇನ್ನುಮುಂದೆ ಅಡ್ವೊಕೇಟುಗಳು ಮಾತ್ರ ಉಳಿಯುತ್ತಾರೆ. ಈಗಿನ ಕಾಯಿದೆಯಂತೆ, ಅಡ್ವೊಕೇಟರು ತಮ್ಮ ತಮ್ಮ ರಾಜ್ಯಗಳ ಬಾರ್‍ಕೌನ್ಸಿಲ್‍ಗಳಿಂದ ಸನ್ನದನ್ನು ಪಡೆದು ಆಯಾ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಯಾರನ್ನಾದರೂ ಪ್ರತಿನಿಧಿಸಬಹುದು. ಆದರೆ, ಸರ್ಕಾರ ಇದಕ್ಕೂ ಮಿತಿಯನ್ನು ಒಡ್ಡಿದೆ. ಉದಾಹರಣೆಗೆ ಸಹಕಾರ ಸಂಘಗಳ ನ್ಯಾಯಾಲಯದಲ್ಲಿ ಅಪ್ಪಣೆ ಇಲ್ಲದೆ ವಾದಮಾಡಲಾಗುವುದಿಲ್ಲ.

A 16th-century advocate.

ಇಂಗ್ಲೆಂಡಿನಲ್ಲಿ ಸಿವಿಲ್ ಮತ್ತ ಕ್ರಿಮಿನಲ್ ಕೋರ್ಟುಗಳಲ್ಲಿ ವಾದಿಸುವವರಿಗೆ ಮಾತ್ರ, ಅಡ್ವೊಕೇಟರು ಎಂದು ಹೆಸರಿದೆ. ಅಲ್ಲಿಯ ಹಾಗೆ ಇಲ್ಲಿಯೂ ಅಡ್ವೊಕೇಟ್ ಜನರಲ್ ಎಂಬುವರು ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದಿಸುವರು.

ಅಮೆರಿಕದಲ್ಲಿ ಅಡ್ವೊಕೇಟ್ ಪದ, ಮಿಕ್ಕ ಹೆಸರುಗಳಾದ, ಅಟಾರ್ನಿ, ಕಾನ್ಸೆಲ್ ಮತ್ತು ಲಾಯರ್ ಪದಗಳ ಜೊತೆಯಲ್ಲಿಯೇ ಉಪಯೋಗಿಸಲ್ಪಡುತ್ತದೆ.

ಫ್ರಾನ್ಸ್ ದೇಶದಲ್ಲಿ ಎರಡುಬಗೆಯ ಅಡ್ವೊಕೇಟರಿದ್ದಾರೆ. ಒಬ್ಬರು ಬರಿಯ ಕಾನೂನಿನ ಸಲಹೆಗಾರರು; ಇವರು ಕಾನೂನಿನ ತಿಳಿವಳಿಕೆಯನ್ನು ಕೊಡುವುದೇ ಅಲ್ಲದೆ ದಾವೆಯನ್ನು ಬರೆದು ಸಿದ್ಧಪಡಿಸಿ ದಾವೆ ನಡೆಸಲು ಸಹಾಯಮಾಡುತ್ತಾರೆ. ಇತರರು ಬೇರೆಯವರ ಪರವಾಗಿ ನ್ಯಾಯಾಲಯದಲ್ಲಿ ಕಾರ್ಯ ನಡೆಸುತ್ತಾರೆ.

ಸ್ಕಾಟಲೆಂಡಿನಲ್ಲಿ ಸೆಷನ್ಸ್ ಮತ್ತು ಉಚ್ಚನ್ಯಾಯಾಲಯದಲ್ಲಿ ವಾದಿಸಲು ಅಡ್ವೊಕೇಟುಗಳು ಆಯಾಪ್ರಾಂತ್ಯಗಳ ಬಾರ್‍ಕೌನ್ಸಿಲ್‍ಗಳ ಅಧಿಕಾರಕ್ಕೊಳಪಟ್ಟಿರುವರು. (ವಿ.ಎಸ್.)

ಉಲ್ಲೇಖನಗಳು ಬದಲಾಯಿಸಿ

  1. http://www.merriam-webster.com/dictionary/advocate
  2. http://www.thesaurus.com/browse/advocate
  3. "ಆರ್ಕೈವ್ ನಕಲು". Archived from the original on 2016-09-23. Retrieved 2016-10-19.

ಫ್ರಾನ್ಸ್