ಇಂಗ್ಲಿಷ್ ಸಾಹಿತ್ಯದ ಸಂಕ್ಷಿಪ್ತ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೧ ನೇ ಸಾಲು:
===ನಾಟಕ-ಷೇಕ್ಸ್‍ಪಿಯರ್, (1564-1616) ಅವನ ಯುಗ:===
ಈ ಯುಗ ಇಷ್ಟು ಚೈತನ್ಯಮಯವಾದುದರಿಂದಲೇ ಇದರ ವಿಶಿಷ್ಟ ಸಾಹಿತ್ಯಪ್ರಕಾರ ನಾಟಕವಾದುದು. ಮಧ್ಯಯುಗದಲ್ಲೇ ಚರ್ಚುಗಳಲ್ಲಿ ಧರ್ಮಭೋಧನೆಯ ಸಾಧನವಾಗಿ ಪಾದ್ರಿಗಳಿಂದ ನಡೆಯುತ್ತಿದ್ದ ಬೈಬಲ್ ಕಥೆಗಳ ಪ್ರದರ್ಶನದಿಂದ ಆರಂಭವಾಗಿದ್ದ ನಾಟಕ (ಆ ಕಾಲದ ನಾಟಕಗಳಿಗೆ ಮಿಸ್ಟರಿ ಪ್ಲೇಸ್, ಮಿರಕಲ್ ಪ್ಲೇಸ್, ಮೊರ್ಯಾಲಿಟಿ ಪ್ಲೇಸ್ ಎಂದು ಹೆಸರು) ಹದಿನಾರನೆಯ ಶತಮಾನದಲ್ಲಿ ಉನ್ನತಮಟ್ಟಕ್ಕೇರಿತು. ಇಂಟರ್ ಲ್ಯೂಡ್ ಎಂಬ ಕಿರುನಾಟಕ ಪ್ರಕಾರವೂ ಹಾಸ್ಯನಾಟಕಗಳೂ ಬಂದುವು. ಪ್ರಾರಂಭದಲ್ಲಿ ಪ್ರದರ್ಶನವು ಚರ್ಚ್‍ಗಳ ಆವರಣದಲ್ಲಿ ನಡೆಯುತ್ತಿತ್ತು. ಅನಂತರ ಚಕ್ರಗಳ ಮೇಲು ಚಲಿಸುವ, ಎರಡು ಅಂತಸ್ತುಗಳ ರಂಗವೇದಿಕೆಯು ಕಾಣಿಸಿಕೊಂಡಿತು. ಮುಂದೆ ಲಂಡನ್ನಿನಲ್ಲಿ ಥೇಮ್ಸ್ ನದಿಯಾಚೆ ಕಟ್ಟಿದ ರಂಗಭೂಮಿಯಿಂದ ಇಂಗ್ಲಿಷ್ ನಾಟಕಗಳ ಬೆಳವಣಿಗೆಗೆ ವಿಶೇಷ ನೆರವಾಯಿತು.
ಗ್ಯಾಮರ್ ಗರ್ಟನ್ಸ್ ನೀಡ್ಸ್ ಮತ್ತು ರಾಲ್ಪ್ ರಾಯಿಸ್ಟರ್ ಡಾಯಿಸ್ಟರ್ ಇಂಗ್ಲಿಷಿನ ಮೊದಲ ಹಾಸ್ಯನಾಟಕಗಳೆನ್ನಬಹುದು. ಹಾಸ್ಯ ಅಷ್ಟೇನೂ ಸೂಕ್ಷ್ಮರೀತಿಯದಲ್ಲದಿದ್ದರೂ ಸೆನೆಕನ ಲ್ಯಾಟಿನ ದುರಂತ ನಾಟಕಗಳ ಮಾದರಿಯಲ್ಲಿ 1561ರಲ್ಲಿ ಸ್ಯಾಕ್ವಿಲ್ ಮತ್ತು ನಾತ್ಪನ್ ಎಂಬುವರು ಗೋರ್ಪೋಡಕ್ ಎಂಬ ನಾಟಕವನ್ನು ಬರೆದರು. ಇದೇ ಇಂಗ್ಲಿಷಿನ ಮೊಟ್ಟಮೊದಲ ಸರಳೆಗಳೆಯ ನಾಟಕ. ಅನಂತರ ಯೂನಿವರ್ಸಿಟಿ ವಿಟ್ಸ್ ಎಂದು ಹೆಸರು ಪಡೆದಿರುವ ಲಿಲಿ, ಪೀಲ್, ಗ್ರೀನ್, ಮಾರ್ಲೊ ಮತ್ತು ಕಿಡ್ ಒಬ್ಬೊಬ್ಬರೂ ಒಂದೊಂದು ಬಗೆಯ ನಾಟಕಕ್ಷೇತ್ರದಲ್ಲಿ-ಹಾಸ್ಯನಾಟಕ, ರುದ್ರನಾಟಕ ಇತ್ಯಾದಿ-ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದರು. ಕಿಡ್ ಬರೆದ ಸ್ಪ್ಯಾನಿಷ್ ಟ್ರಾಜಿಡಿ ಭೀಭತ್ಸಮಯ ದೃಶ್ಯಗಳಿಗೂ ರೋಮಾಂಚಕಾರಕ ಘಟನೆಗಳಿಗೂ ಹತ್ಯೆಗಳಿಗೂ ಪ್ರಸಿದ್ಧವಾಗಿ ಸೆನೆಕನ್ ಟ್ರಾಜಿಡಿ ಎಂಬ ವಿಶಿಷ್ಟವರ್ಗದ ನಾಟಕಗಳಿಗೆ ಮಾದರಿಯಾಯಿತು. ಷೇಕ್ಸ್‍ಪಿಯರನ ಹ್ಯಾಮ್ಲೆಟ್ ನಾಟಕವೂ ಸ್ವಲ್ಪಮಟ್ಟಿಗೆ ಈ ವರ್ಗಕ್ಕೆ ಸೇರಿದ್ದೇ. ವೆಬ್‍ಸ್ಟರ್‍ನ ದಿ ವೈಟ್ ಡೆವಿಲ್ ಮತ್ತು ಡಚೆಸ್ ಆಫ್ ಮ್ಯಾಲ್ಪಿ ಎಂಬ ಪ್ರಖ್ಯಾತ ನಾಟಕಗಳು ಇದೇ ಜಾತಿಯವು. ಯೂನಿವರ್ಸಿಟಿ ವಿಟ್ಸ್‍ಗಳಲ್ಲಿ ಅತ್ಯಂತ ಪ್ರಸಿದ್ಧನೂ ಪ್ರಭಾವಶಾಲಿಯೂ ಆದವನು ಕ್ರಿಸ್ಟೊಫರ್ ಮಾರ್ಲೊ. ಅವನ ಟ್ಯಾಂಬುರ್ಲೇನ್, ದಿ ಜ್ಯೂ ಆಫ್ ಮಾಲ್ಟ. ಡಾಕ್ಟರ್ ಫೌಸ್ಟಸ್, ಎಡ್ವರ್ಡ್ 11-ನಾಟಕಗಳು ತಮ್ಮ ಕಲ್ಪನಾ ವೈಭವಕ್ಕೂ ಪಾತ್ರಪೋಷಣೆ ಸಂವಿಧಾನ ವೈಖರಿಗಳಿಗೂ ಭಾಷೆ ಮತ್ತು ಛಂದಸ್ಸುಗಳ ಅಪೂರ್ವಶಕ್ತಿಗೂ ಹೆಸರಾಂತ ಷೇಕ್ಸ್‍ಪಿಯರನಿಗೇ ದಾರಿಮಾಡಿಕೊಟ್ಟವೆಂದು ಹೇಳಲಾಗಿದೆ. ಈ ಯುಗದ ನಾಟಕಕಾರರಲ್ಲೆಲ್ಲ ಶಿಖರಪ್ರಾಯನಾದವ ಲೋಕ ವಿಖ್ಯಾತನಾದ ಷೇಕ್ಸ್‍ಪಿಯರ್. ರೊಮ್ಯಾಂಟಿಕ್ ಪಂಥಕ್ಕೆ ಸೇರಿದ ಇಂಗ್ಲಿಷ್ ನಾಟಕ ಪ್ರಪಂಚಕ್ಕೆ ಹಿಮಾಲಯ ಸದೃಶನಾದವ ಈ ಕವಿ. ಹಾಸ್ಯನಾಟಕ, ರುದ್ರನಾಟಕ, ಚಾರಿತ್ರಿಕ ನಾಟಕ ಮೊದಲಾದ ನಾನಾ ಕೇತ್ರಗಳಲ್ಲಿ ಒಂದೇ ಸಮನಾದ ಔನ್ನತ್ಯಪಡೆದ ಸಾಧನೆ ಅವನದು. '''ಸಾಮಾಜಿಕ ನಾಟಕಗಳನ್ನು ಬರೆಯುವುದರಲ್ಲಿ ಷೇಕ್ಸ್‍ಪಿಯರ್ ಆಸಕ್ತನಾಗಿರಲಿಲ್ಲ. ಮನುಷ್ಯ ಹೃದಯದಲ್ಲಿ ಕೆಲಸಮಾಡುವ ಭಾವಗಳ ವಿಶ್ಲೇಷಣೆ ಮತ್ತು ಅನ್ವೇಷಣೆ ಅವನ ಮುಖ್ಯ ಉದ್ದೇಶವಾಗಿತ್ತು. ಮೂವತ್ತೆಂಟು ನಾಟಕಗಳನ್ನೂ ಎರಡು ದೀರ್ಘಕಥನ ಕವನಗಳನ್ನೂ ಸುಮಾರು ನೂರ್ಯೆವತ್ತುನಾಲ್ಕುನೂರೈವತ್ತುನಾಲ್ಕು ಸಾನೆಟ್ಟ್ತುಗಳನ್ನೂ ಷೇಕ್ಸಪಿಯರ್ ರಚಿಸಿದ್ದಾನೆ.''' ಸಾನೆಟ್ (ಸುನೀತ)ಕ್ಕೆ ಹೊಸ ರೂಪವನ್ನು ಕೊಟ್ಟ. ಸುನೀತ ಚಿತ್ರದಲ್ಲಿ ಸ್ನೇಹ, ಪ್ರೇಮಗಳ ಸೂಕ್ಷ್ಮ ವಿಶ್ಲೇಷಣೆ ಇದೆ. 'ವೀನಸ್ ಅಂಡ್ ಅಡೊನಿಸ್, ದಿ ರೇಪ್ ಆಫ್s ಲ್ಯುಕ್ರ್ರಿಷಿ ಎಂಬುವು ಆ ಕವನಗಳು. ಅವನ ನಾಟಕಗಳಲ್ಲಿ ಮಚ್ ಆಡೊ ಅಬೌಟ್ ನಥಿಂಗ್, ದಿ ಟೇಮಿಂಗ್ ಆಫ್ ದಿ ಷ್ರ್ಯೂ, ಆಸ್ ಯು ಲ್ಯೆಕ್ ಇಟ್, ಟ್ವೆಲ್ಫ್‍ತ್ ನ್ಯೆಟ್, ಮಿಡ್ ಸಮ್ಮರ್ ನ್ಯೆಟ್ಸ್ ಡ್ರೀಂ, ಮರ್ಚೆಂಟ್ ಆಫ್ ವೆನಿಸ್ ಮೊದಲಾದ ಹಾಸ್ಯನಾಟಕಗಳೂ ರೋಮಿಯೋ ಅಂಡ್ ಜೂಲಿಯಟ್, ಮ್ಯಾಕ್ಬೆತ್, ಹ್ಯಾಮ್ಲೆಟ್, ಒಥೆಲೊ, ಕಿಂಗ್ ಲಿಯರ್ ಮೊದಲಾದ ರುದ್ರ ನಾಟಕಗಳೂ ದಿ ಟೆಂಪೆಸ್ಟ್, ವಿಂಟರ್ಸ್ ಟೇಲ್ ಮತ್ತು ಸಿಂಬೆಲಿನ್ ಎಂಬ (ದುಃಖದಲ್ಲಿ ಆರಂಭವಾಗಿ ಸುಖದಲ್ಲಿ ಕೊನೆಗಾಣುವ) ಟ್ರಾಜಿ-ಕಾಮೆಡಿಗಳೂ ಜ್ಯೂಲಿಯಸ್ ಸೀಸರ್, ಕೋರಿಯೋಲನಸ್, ರಿಚರ್ಡ್ II, ಹೆನ್ರಿ ಗಿ ಮೊದಲಾದ ರೋಮ್ ಮತ್ತು ಇಂಗ್ಲೆಂಡುಗಳ ಚರಿತ್ರೆಗಳಿಗೆ ಸಂಬಂಧಪಟ್ಟ ನಾಟಕಗಳೂ ಸಾಹಿತ್ಯ ಪ್ರಪಂಚದ ಅಮೂಲ್ಯರತ್ನಗಳೆಂದು ಪರಿಗಣಿತವಾಗಿವೆ. ವಸ್ತು ಯಾವುದೇ ಆಗಲಿ, ಷೇಕ್ಸ್‍ಪಿಯರ್ ನಾಟಕಗಳು ಮಾನವನ ಹೃದಯಾಂತರಾಳವನ್ನು ತೆರೆದು ತೋರಿಸುವ ದರ್ಪಣಗಳು. ಹೆಸರಿಗೆ ಇಂಗ್ಲಿಷಿನವರು, ರೋಮಿನವರು ಇತ್ಯಾದಿಯಾದರೂ ಅವನ ಪಾತ್ರಗಳು ಎಲ್ಲ ಕಾಲಗಳ ಎಲ್ಲ ಮಾನವರ ಪ್ರತಿನಿಧಿಗಳು. ಅಂತೆಯೇ ಅವನ ನಾಟಕ ಇಡೀ ಪ್ರಪಂಚದ ಒಂದು ತುಣುಕೆಂದರೆ ಉತ್ಪ್ರೇಕ್ಷೆಯಿರದು.<ref>[https://kn.wikisource.org/s/1ph ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಗ್ಲಿಷ್ ಸಾಹಿತ್ಯ]</ref>
;ರಾಣಿ ಎಲಿಜೆಬೆತ್ ಕಾಲ(1558-1603)
;ಪದ್ಯ: