ಮಧು ನಟರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨ ನೇ ಸಾಲು:
 
==ಶಿಕ್ಷಣ==
ಮಧು ನಟರಾಜ್ ರವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತಮ್ಮ ಬಿ.ಕಾಂ [[ಶಿಕ್ಷಣ]]ವನ್ನು ಪಡೆದುಕೊಂಡರು.ಅವರು ಬೆಂಗಳೂರಿನ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಹಾಗೂ ಕೊರಿಯೋಗ್ರಫಿಯಲ್ಲಿ ನೃತ್ಯವನ್ನು ಕಲಿತರು.ನಂತರ ಭಾರತೀಯ ವಿದ್ಯಾ ಭವನದಲ್ಲಿ [[ಪತ್ರಿಕೋದ್ಯಮ]] ಕೋರ್ಸ್ ಗೆ ಸೇರಿಕೊಂಡರು.ಇಂದಿರಾ ಗಾಂಧಿ ಓಪನ್ ಯೂನಿವರ್ಸಿಟಿಯಿಂದ [[ಮಾನವಶಾಸ್ತ್ರ]]ದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡಿದ್ದಾರೆ.
ಮಧು ಅವರು ಕಥಕ್ ನಲ್ಲಿ ತಮ್ಮ ನೃತ್ಯ [[ತರಬೇತಿ]]ಯನ್ನು ತಾಯಿ ಮಾಯಾ ರಾವ್, ಚಿಕ್ಕಮ್ಮ ಚಿತ್ರ ವೇಣುಗೋಪಾಲ್ ಮತ್ತು ಮುನ್ನಾ ಶುಕ್ಲಾರವರ ಬಳಿ ಪಡೆದರು.
[[ನ್ಯೂಯಾರ್ಕ್]] ನ ಜೋಸ್ ಲಿಮನ್ ಕೇಂದ್ರದಲ್ಲಿ, ಮಧುರವರು ಕರೆಣ್ ಪಾಟರ್ ರವರಿಂದ ಸಮಕಾಲೀನ ನೃತ್ಯದಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ.ಭಾರತದ [[ಜಾನಪದ]] ಮತ್ತು ಸಮರ ನೃತ್ಯಗಳಲ್ಲಿ ತರಬೇತಿ ಪಡೆದ ಮಧುರವರು [[ಯೋಗ]] ಅಧ್ಯಯನವನ್ನೂ ಮಾಡಿದ್ದಾರೆ.
 
==ವೃತ್ತಿ==
೧೯೯೫ ರಲ್ಲಿ ಮಧು ನಟರಾಜ್ ರವರು ಸ್ಟೆಮ್ (ಸ್ಪೇಸ್.ಟೈಮ್.ಎನರ್ಜಿ.ಮೂವ್ಮೆಂಟ್) ಡ್ಯಾನ್ಸ್ ಕಂಪನಿಯನ್ನು ಸ್ಥಾಪಿಸಿದರು.ಇದು ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಹಾಗೂ ಕೊರಿಯೋಗ್ರಫಿಯ ಪ್ರದರ್ಶನ ವಿಭಾಗವಾಗಿದೆ.<ref>https://web.archive.org/web/20181018150906/http://www.stemdancekampni.in/index1.html</ref>ಮಧು ನಟರಾಜ್ ರವರು ಖಜುರಾಹೊ ಉತ್ಸವ, [[ಖಜುರಾಹೊ]]; ಪುರಾಣ ಕ್ವಿಲಾ ಉತ್ಸವ, [[ದೆಹಲಿ]]; [[ಅಹಮದಾಬಾದ್]] ನ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ ನೃತ್ಯ ಕೃತಿ; ಬ್ಯಾಬಿಲೋನ್ ಹಬ್ಬ; ಕಥಕ್ ಮಹೋತ್ಸವ, ದೆಹಲಿ, [[ಲಕ್ನೋ]] ಹಾಗೂ [[ಕೆನಡಾ]] ಮತ್ತು ಕಲಾನಿಧಿ ಅಂತರಾಷ್ಟ್ರೀಯ ನೃತ್ಯ ಉತ್ಸವ, ಟೊರಾಂಟೊ ಮುಂತಾದ ವಿವಿಧ ನೃತ್ಯ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.
"https://kn.wikipedia.org/wiki/ಮಧು_ನಟರಾಜ್" ಇಂದ ಪಡೆಯಲ್ಪಟ್ಟಿದೆ