ಮಧು ನಟರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
ಮಧು ನಟರಾಜ್ ರವರು ಒಬ್ಬ [[ಭಾರತೀಯ]] ಶಾಸ್ತ್ರೀಯ, [[ಸಮಕಾಲೀನ]] ನರ್ತಕಿ ಮತ್ತು [[ನೃತ್ಯ]] ಸಂಯೋಜಕಿ.
==ಜನನ==
ಮಧು ನಟರಾಜ್ ಅವರು ಫೆಬ್ರವರಿ ೨೧,೧೯೭೧ ರಂದು ಬೆಂಗಳೂರಿನಲ್ಲಿ ಎಂ.ಎಸ್.ನಟರಾಜನ್ ಮತ್ತು ಭಾರತೀಯ ಶಾಸ್ತ್ರೀಯ ನರ್ತಕಿ [[ಮಾಯಾ ರಾವ್]] ದಂಪತಿಗೆ ಜನಿಸಿದರು.<ref>http://www.mumsandstories.com/2016/01/22/madhu-nataraj-kiran-on-her-mother-the-iconic-maya-rao/</ref>
==ಶಿಕ್ಷಣ==
ಮಧು ನಟರಾಜ್ ರವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತಮ್ಮ ಬಿ.ಕಾಂ [[ಶಿಕ್ಷಣ]]ವನ್ನು ಪಡೆದುಕೊಂಡರು.ಅವರು ಬೆಂಗಳೂರಿನ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಹಾಗೂ ಕೊರಿಯೋಗ್ರಫಿಯಲ್ಲಿ ನೃತ್ಯವನ್ನು ಕಲಿತರು.ನಂತರ ಭಾರತೀಯ ವಿದ್ಯಾ ಭವನದಲ್ಲಿ [[ಪತ್ರಿಕೋದ್ಯಮ]] ಕೋರ್ಸ್ ಗೆ ಸೇರಿಕೊಂಡರು.ಇಂದಿರಾ ಗಾಂಧಿ ಓಪನ್ ಯೂನಿವರ್ಸಿಟಿಯಿಂದ [[ಮಾನವಶಾಸ್ತ್ರ]]ದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡಿದ್ದಾರೆ.
೨೫ ನೇ ಸಾಲು:
[[ನ್ಯೂಯಾರ್ಕ್]] ನ ಜೋಸ್ ಲಿಮನ್ ಕೇಂದ್ರದಲ್ಲಿ, ಮಧುರವರು ಕರೆಣ್ ಪಾಟರ್ ರವರಿಂದ ಸಮಕಾಲೀನ ನೃತ್ಯದಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ.ಭಾರತದ [[ಜಾನಪದ]] ಮತ್ತು ಸಮರ ನೃತ್ಯಗಳಲ್ಲಿ ತರಬೇತಿ ಪಡೆದ ಮಧುರವರು [[ಯೋಗ]] ಅಧ್ಯಯನವನ್ನೂ ಮಾಡಿದ್ದಾರೆ.
==ವೃತ್ತಿ==
೧೯೯೫ ರಲ್ಲಿ ಮಧು ನಟರಾಜ್ ರವರು ಸ್ಟೆಮ್ (ಸ್ಪೇಸ್.ಟೈಮ್.ಎನರ್ಜಿ.ಮೂವ್ಮೆಂಟ್) ಡ್ಯಾನ್ಸ್ ಕಂಪನಿಯನ್ನು ಸ್ಥಾಪಿಸಿದರು.ಇದು ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಹಾಗೂ ಕೊರಿಯೋಗ್ರಫಿಯ ಪ್ರದರ್ಶನ ವಿಭಾಗವಾಗಿದೆ.<ref>https://web.archive.org/web/20181018150906/http://www.stemdancekampni.in/index1.html</ref>ಮಧು ನಟರಾಜ್ ರವರು ಖಜುರಾಹೊ ಉತ್ಸವ, [[ಖಜುರಾಹೊ]]; ಪುರಾಣ ಕ್ವಿಲಾ ಉತ್ಸವ, [[ದೆಹಲಿ]]; [[ಅಹಮದಾಬಾದ್]] ನ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ ನೃತ್ಯ ಕೃತಿ; ಬ್ಯಾಬಿಲೋನ್ ಹಬ್ಬ; ಕಥಕ್ ಮಹೋತ್ಸವ, ದೆಹಲಿ, [[ಲಕ್ನೋ]] ಹಾಗೂ [[ಕೆನಡಾ]] ಮತ್ತು ಕಲಾನಿಧಿ ಅಂತರಾಷ್ಟ್ರೀಯ ನೃತ್ಯ ಉತ್ಸವ, ಟೊರಾಂಟೊ ಮುಂತಾದ ವಿವಿಧ ನೃತ್ಯ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.
==ಪ್ರಶಸ್ತಿಗಳು==
ಸೃಜನಶೀಲ ಮತ್ತು ಪ್ರಾಯೋಗಿಕ ನೃತ್ಯ ಕ್ಷೇತ್ರದಲ್ಲಿನ ಪ್ರತಿಭೆಗಾಗಿ ೨೦೧೦ ರಲ್ಲಿ ಮಧು ನಟರಾಜ್ ಅವರಿಗೆ [[ಸಂಗೀತ ನಾಟಕ ಅಕಾಡೆಮಿ]]ಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ ಪ್ರಶಸ್ತಿಯನ್ನು ನೀಡಲಾಯಿತು.ಅವರು ಭಾರತದ ಇಂದಿನ ೫೦ ಯುವ ಸಾಧಕರು ಪ್ರಶಸ್ತಿಯನ್ನೂ ಗೆದ್ದಿದ್ದಾರೆ.ಅಲ್ಲದೇ ಮಧುರವರು ೨೦೧೧ ರಲ್ಲಿ ಮೋಹನ್ ಖೋಕರ್ [[ಪ್ರಶಸ್ತಿ]]ಯನ್ನು ಪಡೆದುಕೊಂಡರು.
"https://kn.wikipedia.org/wiki/ಮಧು_ನಟರಾಜ್" ಇಂದ ಪಡೆಯಲ್ಪಟ್ಟಿದೆ