ಶೃತಿ ಹರಿಹರನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು +image #WPWP
೧ ನೇ ಸಾಲು:
 
{{Infobox person|name=ಶೃತಿ ಹರಿಹರನ್|image=|image_size=|birth_name=ಶೃತಿ ಹರಿಹರನ್|birth_date={{birth date and age|df=yes|1989|2|2}}|birth_place=[[ತಿರುವನಂತಪುರಂ]], [[ಕೇರಳ]], [[ಭಾರತ]]|spouse(s)=|occupation=ನಟಿ, ನಿರ್ಮಾಪಕಿ, ನೃತ್ಯಗಾರ್ತಿ|years_active=|partner=}}
[[ಚಿತ್ರ:Sruthi Hariharan Filmfare South (cropped).jpg|thumb]]
'''''ಶೃತಿ ಹರಿಹರನ್''''' ಭಾರತೀಯ ನಟಿ ಮತ್ತು ನಿರ್ಮಾಪಕಿ. ಇವರು ಹೆಚ್ಚಾಗಿ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ರಂಗಭೂಮಿಯಲ್ಲಿ ನಟಿಸಿ, ಚಿತ್ರಗಳಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡಿದ ನಂತರ ಚಲನಚಿತ್ರಗಳಲ್ಲಿ ನಟಿಸುವ ವೃತ್ತಿಯನ್ನು ಆರಂಭಿಸಿದರು. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಎರಡು ಫಿಲಂ ಫೇರ್ ಅವಾರ್ಡ್ ಸೌತ್ ಪ್ರಶಸ್ತಿ, ಸೈಮಾ ಪ್ರಶಸ್ತಿ ಮತ್ತು [[ನಾತಿಚರಾಮಿ]] ಚಿತ್ರದಲ್ಲಿನ ಅಭಿನಯಕ್ಕಾಗಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಉಲ್ಲೇಖವನ್ನು ಪಡೆದಿದ್ದಾರೆ .ಬೆಂಗಳೂರು ಟೈಮ್ಸ್ ನ 2018ರ ಅತ್ಯಂತ ಅಪೇಕ್ಷಣೀಯ ಮಹಿಳೆಯಾಗಿ ಆಯ್ಕೆಯಾಗಿದ್ದರು.
 
2012ರ ಮಲಯಾಳಂ ಭಾಷೆಯ [[ಸಿನಿಮಾ ಕಂಪನಿ]] ಇವರು ನಟಿಸಿದ ಮೊದಲ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಇವರ ಮೊದಲ ಚಿತ್ರ ಲೂಸಿಯಾ. [[ಗೋಧಿ ಬಣ್ಣ ಸಾಧಾರಣ ಮೈಕಟ್ಟು (ಚಲನಚಿತ್ರ)|ಗೋಧಿ ಬಣ್ಣ ಸಾಧಾರಣ ಮೈಕಟ್ಟು]], [[ಉರ್ವಿ( ಚಲನಚಿತ್ರ)|ಉರ್ವಿ]], ನಾತಿಚರಾಮಿ, [[ಬ್ಯೂಟಿಫುಲ್ ಮನಸುಗಳು]] ಚಿತ್ರಗಳಲ್ಲಿನ ನಟನೆಗೆ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಸಾರ್ವಜನಿಕ ಮನ್ನಣೆಯನ್ನು ಪಡೆದಿದ್ದಾರೆ. 2016ರಲ್ಲಿ ಶೃತಿ ಹರಿಹರನ್ ರವರು ತಮ್ಮ ನಿರ್ಮಾಣ ಸಂಸ್ಥೆ 'ಕಲಾತ್ಮಕ'ವನ್ನು ಸ್ಥಾಪಿಸಿದರು.
"https://kn.wikipedia.org/wiki/ಶೃತಿ_ಹರಿಹರನ್" ಇಂದ ಪಡೆಯಲ್ಪಟ್ಟಿದೆ