ಸದಸ್ಯ:Jasmitha M J/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ಭಾವನಾ ಮೆನನ್ ಎಂಬ ಹೆಸರಿನಿಂದ ಚಿರಪರಿಚಿತವಾದ ಚಿತ್ರನಟಿಯ ಹುಟ್ಟು ಹೆಸರು ಕಾರ್ತಿಕಾ ಮೆನನ್. ಮೂಲತಃ ಕೇರಳದವರಾಗಿದ್ದು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.
==ಆರಂಭಿಕ ಜೀವನ==
ಭಾವನಾ ಮೆನನ್ ಅವರು ೧೯೮೬ರ ಜೂನ್ ೬ರಂದು ಕೇರಳದ ತ್ರಿಶೂರ್ ಎಂಬಲ್ಲಿ ಜನಿಸಿದರು. ಇವರ ತಂದೆ ಜಿ.ಬಾಲಚಂದ್ರನ್ ಮತ್ತು ತಾಯಿ ಪುಷ್ಪ. ಇವರ ತಂದೆ ಜಿ.ಬಾಲಚಂದ್ರನ್ ರವರು ಸಹಾಯಕ ಛಾಯಾಗ್ರಾಹಕರಾಗಿದ್ದಾರೆ. ಜಯದೇವ್ ಇವರ ಸಹೋದರ.ಇವರು ತ್ರಿಶೂರ್ನ ಹೋಲಿ ಫ್ಯಾಮಿಲಿ ಬಾಲಕಿಯರ ಪ್ರೌಢಶಾಲೆ, ಚೆಂಬಕ್ಕಾವ್ ಎಂಬಲ್ಲಿ ವಿದ್ಯಾಭ್ಯಾಸ ಮಾಡಿದರು.
೬ ನೇ ಸಾಲು:
 
==ವೃತ್ತಿ ಜೀವನ==
೧೬ನೇ ವಯಸ್ಸಿನಲ್ಲಿ ಭಾವನಾ ಎಂದು ವೇದಿಕೆಯ ಹೆಸರನ್ನು ತೆಗೆದುಕೊಳ್ಳುವ ಮೂಲಕ ನಮ್ಮಾಲ್ನಮ್ಮಲ್ ಎಂಬ ಮಲಯಾಳಂ ಚಿತ್ರವನ್ನು ಪ್ರವೇಶಿಸಿದರು. ಈ ಚಿತ್ರವು ದೊಡ್ಡ ಯಶಸ್ಸನ್ನು ಕಂಡಿತು ಮತ್ತು ಮಲಯಾಳಂನಲ್ಲಿ ಹಲವಾರು ಕೊಡುಗೆಗಳನ್ನು ಪಡೆದರು. ಈ ಚಿತ್ರಕ್ಕಾಗಿ ಅವರು ಅನೇಕ ಗೌರವಗಳನ್ನು ಮತ್ತು ಕೇರಳ ರಾಜ್ಯ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಚಿತ್ರದಲ್ಲಿ ವಿರಾಮ ಪಡೆದಾಗ ಭಾವನಾ ಅವರು ೧೧ನೇ ತರಗತಿ ವಿದ್ಯಾರ್ಥಿನಿ.
 
೨೦೧೦ರಲ್ಲಿ ಅವರು ಮೊದಲ ಬಾರಿಗೆ ಜಾಕಿ ಎಂಬ ಕನ್ನಡ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರೊಂದಿಗೆ ನಟಿಸಿದರು. ಅಲ್ಲದೆ ಈ ಚಿತ್ರವು ಬ್ಲಾಕ್ಬಸ್ಟರ್ ಆಗಿತ್ತು. ಚಿತ್ರದ ದೊಡ್ಡ ಯಶಸ್ಸಿನ ನಂತರ ಈ ಚಿತ್ರವನ್ನು ತೆಲುಗು ಮತ್ತು ಮಲಯಾಳಂ ಭಾಷೆಗೆ ಡಬ್ ಮಾಡಲಾಯಿತು. ಇವರ ಎರಡನೇ ಚಿತ್ರ ವಿಷ್ಣುವರ್ಧನ ನಟ ಸುದೀಪ್ ಅವರ ಜೊತೆ ದೊಡ್ಡ ಪ್ರತಿಕ್ರಿಯೆ ನೀಡಿತು. ೨೦೧೨ರಲ್ಲಿ ಒಝಿಮುರಿ ಮತ್ತು ತ್ರಿವೆಂಡ್ರಂ ಲಾಡ್ಜ್ ಎಂಬ ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡರು. ೨೦೧೩ರಲ್ಲಿ ಹನಿ ಬೀ ಮತ್ತು ಎಝಮತೆ ವರವು ಚಿತ್ರಗಳಲ್ಲಿ ನಟಿಸಿದರು. ಅಮೆರಿಕದ ಪ್ರಮುಖ ನಗರಗಳಲ್ಲಿ ಐಟಿ ಟೆಕ್ಕಿಗಳ ಸರಣಿ ಹತ್ಯೆಯನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಶ್ಯಾಮಪ್ರಸಾದ್ ಅವರ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಒಂಟಿ ತಾಯಿಯಾದ ರೋಶ್ನಿ ಮ್ಯಾಥ್ಯೂ ಪಾತ್ರವನ್ನು ನಿರ್ವಹಿಸಿದ್ದಾರೆ. ೨೦೧೬ರಲ್ಲಿ ಅವರು ಬೆನೆಡಿಕ್ ಡೋರೆ ಅವರೊಂದಿಗೆ ಚಿತ್ರದಲ್ಲಿ ನಟಿಸಿದರು.