ಜೆಸ್ವಿತ್ ಪತ್ರಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವರ್ಗೀಕರಣ
 
೧೪ ನೇ ಸಾಲು:
==ಕನ್ನಡಾನುವಾದ==
[[ರೋಮ್]] ನ ಪ್ರತಿಷ್ಠಿತ [[ಗ್ರೆಗರಿಯನ್ ವಿಶ್ವವಿದ್ಯಾಲಯ]]ದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶ ಪಡೆದ ಮೊದಲ ಕನ್ನಡಿಗ [[ಫಾದರ್ ಅಂತಪ್ಪ]]. ೬೦ನೇ ದಶಕದ ಆ ವಿದ್ಯಾರ್ಥಿದೆಸೆಯಲ್ಲಿ ಅವರು ಅಲ್ಲಿನ ಪತ್ರಾಗಾರದಲ್ಲಿ ನಮ್ಮ ಕನ್ನಡನಾಡಿನ ಕುರಿತ ಉಲ್ಲೇಖಗಳಿಗಾಗಿ ತಡಕಾಡಿದ್ದರು. ಆ ನಿಟ್ಟಿನಲ್ಲಿ ಅವರು ನಮ್ಮ ನಾಡಿನಲ್ಲಿ ಧರ್ಮಪ್ರಚಾರ ಮಾಡಿದ ವಿದೇಶೀ [[ಜೆಸ್ವಿತ್]] ಮತಪ್ರಚಾರಕರ ವಾರ್ಷಿಕ ವರದಿಗಳ ಅತ್ಯಮೂಲ್ಯ ಸಂಗ್ರಹವನ್ನು ಅಲ್ಲಿ ಕಂಡರು. ಆದರೆ ತಮಗೆ ನೀಡಿದ್ದ ಒಂದು ವರ್ಷದ ಗಡುವಿನಲ್ಲಿ ಅವರು ಪವಿತ್ರ ಧರ್ಮಶಾಸ್ತ್ರದಲ್ಲಿ ಡಾಕ್ಟರೆಟ್ ಪಡೆದು [[ಇಂಡಿಯಾ]]ಕ್ಕೆ ಹಿಂದಿರುಗಬೇಕಾಗಿತ್ತು. ಅವರ ಮನದಲ್ಲಿ ಆ [[ಗ್ರೆಗರಿಯನ್ ವಿಶ್ವವಿದ್ಯಾಲಯ]]ದಲ್ಲಿ ಕಂಡ ಅಮೂಲ್ಯ ನಿಧಿಯನ್ನು ಪಡೆಯುವ ಕನಸು ಅದಮ್ಯವಾಗಿತ್ತು. ಯಾರು [[ರೋಮ್]] ಗೆ ಹೋದರೂ ಆ ಅಮೂಲ್ಯ ನಿಧಿಯ ಕುರಿತು ಹೇಳಿಕಳುಹಿಸಿ ನಂತರ ಅವರು ಬರಿಗೈಯಲ್ಲಿ ಬರುತ್ತಿದ್ದುದನ್ನು ತಿಳಿದು ನಿರಾಶರಾಗುತ್ತಿದ್ದರು. ನೆರಳಚ್ಚು ತಂತ್ರಜ್ಞಾನದ ಪ್ರವೇಶವಾದ ಮೇಲೆ ಅವರು ಸ್ವಪ್ರಯತ್ನದಿಂದಲೇ ಅವನ್ನು [[ರೋಮ್]] ನಿಂದ ತರಿಸಿ [[ಲತೀನ್]], [[ಸ್ಪಾನಿಷ್]], [[ಪೋರ್ಚುಗೀಸ್ ]]ಮತ್ತು [[ಫ್ರೆಂಚ್]] ಭಾಷೆಗಳಲ್ಲಿದ್ದ ಅವುಗಳ ಹೂರಣವನ್ನು ಬಲ್ಲವರಿಂದ [[ಇಂಗ್ಲಿಷ್]] ಭಾಷೆಗೆ ತರ್ಜುಮೆಮಾಡಿಸಿ ಅನಂತರ ಅವನ್ನು [[ಕನ್ನಡ]]ಕ್ಕೆ ಭಾಷಾಂತರಿಸಿ ಲಭ್ಯವಿರುವ ಇತರ ಇತಿಹಾಸ ಗ್ರಂಥಗಳೊಂದಿಗೆ ತುಲನೆ ಮಾಡಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ.
 
[[ವರ್ಗ:ಕರ್ನಾಟಕದಲ್ಲಿ ಕ್ರೈಸ್ತ ಧರ್ಮ]]
"https://kn.wikipedia.org/wiki/ಜೆಸ್ವಿತ್_ಪತ್ರಗಳು" ಇಂದ ಪಡೆಯಲ್ಪಟ್ಟಿದೆ