ಸುನಾದ್‍ ಗೌತಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯ ನೇ ಸಾಲು:
<big>ಸುನಾದ್‍ ಗೌತಮ್ ಅವರು ಭಾರತೀಯ ಸಂಗೀತ ಸಂಯೋಜಕರಾಗಿದ್ದಾರೆ. ಪ್ರಧಾನವಾಗಿ ಇವರು ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.</big>
 
==ಬಾಲ್ಯ -ಶಿಕ್ಷಣ==
ಸುನಾದ್ ಗೌತಮ್ ತಂದೆ ಉಮೇಶ್‍ ಗೌತಮ್ ನಾಯಕ್‍ ಇವರು ಅಷ್ಟಾವಧಾನಿ, ಸಂಗೀತಗಾರ ಮತ್ತು ಸಂಗೀತ ಶಿಕ್ಷಕರಾಗಿದ್ದವರು. ಹಾಗಾಗಿ ಸಂಗೀತದ ಅಭ್ಯಾಸ ಬಾಲ್ಯದಲ್ಲಿ ಮನೆಯಲ್ಲಿಯೇ ಆರಂಭವಾಯಿತು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಉಮೇಶ್‍ ಗೌತಮ್ ನಾಯಕ್‍ ಅವರು ಭಕ್ತಿ ಮತ್ತು ಭಾವಗೀತೆಗಳಿಗೆ ಸಂಗೀತ ಸಂಯೋಜಿಸುತ್ತಿದ್ದರು. ಇದು ಸುನಾದ್‍ ಸಂಗೀತ ಸಂಯೋಜನೆಯ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತು. ತಮ್ಮ 15 ವರ್ಷ ವಯಸ್ಸಿನಲ್ಲಿ ಕನ್ನಡ ಕಿರುಚಿತ್ರ "ಧನ್ಯಾ"ಗೆ ಸಂಗೀತ ನೀಡುವ ಮೂಲಕ ಅವರ ಸಂಗೀತ ನಿರ್ದೇಶನದ ಬದುಕು ಆರಂಭವಾಗಿ ಬೆಳೆಯತೊಡಗಿತು. ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಇದು ಮೊದಲ ಹೆಜ್ಜೆಯಾಯಿತು. ತಮ್ಮ ಕಾಲೇಜು ಶಿಕ್ಷಣದೊಂದಿಗೆ ಆಸಕ್ತಿಯ ಕ್ಷೇತ್ರವಾದ ಸಂಗೀತದಲ್ಲಿ ಮುಂದುವರಿಯಲು ಅನುಕೂಲವಾಯಿತು.
 
"https://kn.wikipedia.org/wiki/ಸುನಾದ್‍_ಗೌತಮ್" ಇಂದ ಪಡೆಯಲ್ಪಟ್ಟಿದೆ