ಸುನಾದ್‍ ಗೌತಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{ವಿಕೀಕರಿಸಿ}}{{ಉಲ್ಲೇಖ}}
 
ಸುನಾದ್‍ ಗೌತಮ್ ಅವರು ಭಾರತೀಯ ಸಂಗೀತ ಸಂಯೋಜಕರಾಗಿದ್ದಾರೆ. ಪ್ರಧಾನವಾಗಿ ಇವರು ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಸುನಾದ್‍ ಗೌತಮ್ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಮತ್ತು ಛಾಯಾಗ್ರಾಹಕ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೆಲೆಸಿರುವ ಸುನಾದ್, ಅಲ್ಲೇ ತಮ್ಮ"ಸುನಿನಾದ ಡಿಜಿಟಲ್‍ ಆಡಿಯೋ ಸ್ಟುಡಿಯೋ" ಎಂಬ ಸಂಸ್ಥೆ ತೆರೆದು ಕೆಲಸ ಮಾಡುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ಜಾಹೀರಾತು ಹೀಗೆ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.
 
==ಬಾಲ್ಯ ಶಿಕ್ಷಣ==
ಸುನಾದ್‍ ಮತ್ತು ಗೌತಮ್‍ ಅವರು ನವಂಬರ್ 1, 1993 ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಜನಿಸಿದರು. ತಂದೆ ಉಮೇಶ್‍ ಗೌತಮ್ ನಾಯಕ್ ಮತ್ತು ತಾಯಿ ಸುಮಾ ನಾಯಕ್. ಸುನಾದ್‍ ಗೌತಮ್‍ ತಂದೆ ಉಮೇಶ್‍ ಗೌತಮ್ ನಾಯಕ್‍ ಇವರು ಅಷ್ಟಾವಧಾನಿ, ಸಂಗೀತಗಾರ ಮತ್ತು ಸಂಗೀತ ಶಿಕ್ಷಕರಾಗಿದ್ದವರು. ಹಾಗಾಗಿ ಸಂಗೀತದ ಅಭ್ಯಾಸ ಬಾಲ್ಯದಲ್ಲಿ ಮನೆಯಲ್ಲೇ ಆರಂಭವಾಯಿತು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಉಮೇಶ್‍ ಗೌತಮ್ ನಾಯಕ್‍ ಅವರು ಭಕ್ತಿ ಮತ್ತು ಭಾವಗೀತೆಗಳಿಗೆ ಸಂಗೀತ ಸಂಯೋಜಿಸುತ್ತಿದ್ದರು, ಅಲ್ಲದೆ ಹಲವಾರು ಸಿಡಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಸುನಾದ್‍ ಅವರು ಸಂಗೀತ ಸಂಯೋಜನೆಯ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತು. ಅದರ ಪರಿಣಾಮ ತಮ್ಮ 13 ವರ್ಷ ವಯಸ್ಸಿನಲ್ಲೇ ತಂದೆಯ ಮಾರ್ಗದರ್ಶನದಲ್ಲಿ ಭಕ್ತಿಗೀತೆಯೊಂದನ್ನು ರಚಿಸುವ ಅವಕಾಶ ಪಡೆದುಕೊಂಡರು. ಜೊತೆಗೆ ಬಾಲ್ಯದಲ್ಲಿ ಅವರು ಗಾಯಕನಾಗಿ ಮೆಚ್ಚುಗೆ ಪಡೆದಿದ್ದರು. ಶಾಲಾ ದಿನಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದಿದ್ದರು. ಅವರು ಪ್ರೌಢ ಶಾಲೆಗೆ ಪ್ರವೇಶಿಸುತ್ತಿದ್ದಂತೆ ಅವರಿಗೆ ಸಂಗೀತದ ಆಸಕ್ತಿ ಮತ್ತಷ್ಟು ಹೆಚ್ಚಿತು. ಕೀಬೋರ್ಡ್ ಕಲಿಕೆ ಪ್ರಾರಂಭಿಸಿದರು. ಪಾಶ್ಚಾತ್ಯ ಸಂಗೀತದತ್ತಲೂ ಗಮನಹರಿಸಿದರು. ತಮ್ಮ 15 ವರ್ಷ ವಯಸ್ಸಿನಲ್ಲಿ ಕನ್ನಡ ಕಿರುಚಿತ್ರ "ಧನ್ಯಾ"ಗೆ ಸಂಗೀತ ನೀಡುವ ಮೂಲಕ ಅವರ ಸಂಗೀತ ನಿರ್ದೇಶನದ ಬದುಕು ಆರಂಭವಾಗಿ ಬೆಳೆಯತೊಡಗಿತು. ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಇದು ಮೊದಲ ಹೆಜ್ಜೆಯಾಯಿತು. ಅವರು ತಮ್ಮ ಕಾಲೇಜು ಶಿಕ್ಷಣದೊಂದಿಗೆ ಆಸಕ್ತಿಯ ಕ್ಷೇತ್ರವಾದ ಸಂಗೀತದಲ್ಲಿ ಮುಂದುವರಿಯಲು ಅನುಕೂಲವಾಯಿತು.
"https://kn.wikipedia.org/wiki/ಸುನಾದ್‍_ಗೌತಮ್" ಇಂದ ಪಡೆಯಲ್ಪಟ್ಟಿದೆ