ಪಾರ್ವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
cleanup
ಮಾಹಿತಿ ಸೇರ್ಪಡೆ
೨ ನೇ ಸಾಲು:
[[ಚಿತ್ರ:Parvati Ganesha.jpg|thumb|150px|ಪಾರ್ವತಿ [[ಗಣೇಶ]]ನಿಗೆ ಮೊಲೆಯುಣಿಸುತ್ತಿರುವ ಚಿತ್ರಣ]]
 
'''ಪಾರ್ವತಿ''' ({{lang|sa|पार्वती}}), [[ಹಿಂದೂ ಪುರಾಣ]]ದ ಪ್ರಕಾರ [[ಹಿಮಾಲಯ]]ದ ಪುತ್ರಿ (ಪರ್ವತರಾಜನಪರ್ವತರಾಜ ಮೇನಕೆಯರ ಮಗಳು) ಮತ್ತು [[ಶಿವ]]ನ ಪತ್ನಿ. ಈಕೆ [[ಗಣೇಶ]] ಮತ್ತು [[ಸುಬ್ರಹ್ಮಣ್ಯ]]ರ ತಾಯಿ.
 
== ಪಾರ್ವತಿಯ ಜನನದ ಹಿನ್ನೆಲೆ ==
೧೫ ನೇ ಸಾಲು:
== ಪಾರ್ವತಿಯ ಜನನ ==
ತನ್ನ ಸತಿ ಹೋದ ಕೊರಗು ಶಿವನನ್ನು ಬಾದಿಸತೊಡಗಿತು, ಪ್ರಪಂಚವನ್ನೆ ತೊರೆದ ಅವನು ಏಕಾಂಗಿಯಾದ, ಕೈಲಾಸದ ಉನ್ನತ ಶೃಂಗ ಒಂದನ್ನೇರಿ ದ್ಯಾನಕ್ಕೆ ಕುಳಿತ.ಸಮಾದಿಗೆ ಇಳಿದ, ಪ್ರಕೃತಿಯೊಡನೆ ಒಂದಾಗಿ ಬೆರೆತುಹೋದ.ಕೈಲಾಸ ಅನಾಥವಾಯಿತು. ಸತಿಯಿಲ್ಲದ ಶಿವನಿಲ್ಲದ ಪ್ರಮುಥಗಣಗಳಾದರು ಏನು ಮಾಡಿಯಾರು. ಎಲ್ಲರೂ ಕಂಗೆಟ್ಟರು.
ಇತ್ತ ದಕ್ಷಯಾಗದಲ್ಲಿ ದೇಹತ್ಯಾಗ ಮಾಡಿದ ಸತಿ , ಪರ್ವತರಾಜನಿಗೆ ಮಗಳಾಗಿ ಹುಟ್ಟಿಹುಟ್ಟಿದಳು. ಪರ್ವತರಾಜನಿಗೆ ಮೂವರು ಹೆಣ್ಣುಮಕ್ಕಳು - ಪಾರ್ವತಿ, ಏಕಪರ್ಣಾ, ಏಕಪಾಟಲಾ ಎಂದು, ಒಬ್ಬ ಮಗ - ಮೈನಾಕಾ ಎಂದು. ಕನ್ಯೆಯಾಗಿ ಬೆಳೆದು ಪಾರ್ವತಿ ಎಂದು ಪ್ರಖ್ಯಾತಳಾಗಿದ್ದಳು.ದೇವತೆಗಳೆಲ್ಲ ಚಿಂತಿಸಿದರು ಹೇಗಾದರು ಶಿವ ಪಾರ್ವತಿಯರನ್ನು ಸೇರಿಸಬೇಕಿದ್ದು ಅದಕ್ಕೆ ಲೋಕಸಂಚಾರಿ ನಾರದರ ರಾಯಬಾರವಾಯಿತು.ನಾರದರು ಪರ್ವತರಾಜನಲ್ಲಿಗೆ ಬಂದು ಪಾರ್ವತಿಯನ್ನು ಬೇಟಿಮಾಡಿ ಅವಳಿಗೆ ಸೂಕ್ತ ವರನೆಂದರೆ ಪರಶಿವನೆಂದು. ಅವನೀಗ ಒಂಟಿಯೆಂದು, ತಪದಲ್ಲಿರುವನೆಂದು ಹೇಗಾದರು ಅವನನ್ನು ಒಲಿಸಿಕೊಳ್ಳೆಂದು ಬೋಧಿಸಿದರು. ತಂದೆಯ ಒಪ್ಪಿಗೆ ಪಡೆದ ಪಾರ್ವತಿ ಸಖಿಯರನ್ನು ಕೂಡಿಕೊಂಡು ನಾರದರ ಜೊತೆ ಶಿವನಿರುವಲ್ಲಿಗೆ ತಲುಪಿದಳು.
 
== ಶಿವನನ್ನು ಒಲಿಸಿಕೊಂಡ ಕಥೆ ==
೨೮ ನೇ ಸಾಲು:
 
ಪಾರ್ವತಿದೇವಿಯ ತಂದೆ ತಾಯಿಯರು ಓಡೋಡಿ ಬಂದರು, ದೇವದೇವತೆಗಳೆಲ್ಲ ನೆರೆದರು. ಸಂಭ್ರಮದಿಂದ ಶಿವ ಪಾರ್ವತಿಯರ ಕಲ್ಯಾಣ ನೆರವೇರಿಸಿದರು. ಅದೇ ಸಂದರ್ಪದಲ್ಲಿ ದೇವತೆಗಳೆಲ್ಲ ಶಿವನನ್ನು ಪ್ರಾರ್ಥಿಸಿದರು, ಮನ್ಮಥನಿಲ್ಲದಿದ್ದರೆ ಲೋಕದ ಸೃಷ್ಟಿಕಾರ್ಯವೆ ನಡೆಯದು, ಹಾಗಾಗಿ ಅವನನ್ನು ಬದುಕಿಸು ಎಂದರು. ಶಿವ ಒಪ್ಪಿಕೊಂಡ, ಮನ್ಮಥ ಬದುಕಿದ ಆದರೆ ಶರೀರವೆ ಇಲ್ಲದೆ ಅನಂಗನಾದ. ಅವನ ಪತ್ನಿ ರತಿದೇವಿಯು ಸಂತೋಷಿಸಿದಳು. ಮದುವೆಯ ನಂತರ ಶಿವ ಪಾರ್ವತಿಯರು ತಮ್ಮ ವೈವಾಹಿಕ ಜೀವನಕ್ಕಾಗಿ ಗಂಧಮಂದನ ಪರ್ವತದತ್ತ ನಡೆದರು.
 
ಪಾರ್ವತಿ ಶಿವನಿಂದ ಗಣಪತಿಯನ್ನು ಷಣ್ಮುಖನನ್ನು ಪಡೆದಳು. ಮುಂದೆ ಷಣ್ಮುಖ ತಾರಕಾಸುರರನ್ನು ಸಂಹಾರ ಮಾಡಿದ.
 
== ಪಾರ್ವತಿಗೆ ಸಂಬಂಧಿಸಿದ ಕಥೆಗಳು ==
ಒಮ್ಮೆ ಶಿವಪಾರ್ವತಿ ಕ್ರೀಡಾಸಕ್ತರಾಗಿದ್ದಾಗ ದೇವತೆಗಳು ಹೆದರಿ ಭೂದೇವಿಯನ್ನು ಮುಂದಿಟ್ಟುಕೊಂಡು ಬ್ರಹ್ಮನೇ ಮುಂತಾದವರು ದೇವ, ಪಾರ್ವತಿಯಲ್ಲಿ ಪಿಂಡೋತ್ಪತ್ತಿಯಾದರೆ ಯಾರೂ ತಡೆದುಕೊಳ್ಳಲಾರರು, ಈ ಕಾರ್ಯವನ್ನು ನಿಲ್ಲಿಸು, ತೇಜಸ್ಸನ್ನು ನಿನ್ನಲ್ಲಿಯೇ ಅಡಗಿಸಿಕೊ ಎಂದು ಪ್ರಾರ್ಥಿಸಿದರು. ಆಗ ಪಾರ್ವತಿ ತನಗೆ ಸಂತಾನವಾಗುವುದನ್ನು ತಡೆದಿದ್ದಕ್ಕಾಗಿ ದೇವತೆಗಳನ್ನು ಕುರಿತು ನಿಮಗೆ ನಿಮ್ಮ ಪತ್ನಿಯರಲ್ಲಿ ಸಂತಾನವಾಗದಿರಲಿ ಎಂದು ಭೂದೇವಿಗೆ ನೀನು ನನಗೆ ಸಂತಾನವಾಗದಂತೆ ಭಂಗಪಡಿಸಿದ್ದಕ್ಕಾಗಿ ನೀನು ಆನೇಕ ರೂಪಗಳನ್ನು ಪಡೆದು ಅನೇಕರಿಗೆ ಹೆಂಡತಿಯಾಗೂ ಎಂದು ಶಪಿಸಿದಳು.
 
ಶಿವನ ಕೋಪದಿಂದ ಲವಣ ಸಮುದ್ರದಲ್ಲಿ ಜನ್ಮತಾಳಿದ ಜಲಂಧರನೆಂಬ ರಕ್ಕಸ ಇಂದ್ರನ ಸಂಪತ್ತನ್ನೆಲ್ಲಾ ಸೂರೆ ಮಾಡಿ ಸುಂದರಿಯಾದ ಪಾರ್ವತಿಯನ್ನು ತನ್ನ ಮಡದಿಯನ್ನಾಗಿ ಮಾಡಿಕೊಳ್ಳಲು ಯತ್ನಿಸಿ ಶಿವನಿಂದ ನಾಶ ಹೊಂದಿದ.
 
== ಪಾರ್ವತಿಯ ಹೆಸರುಗಳು ==
ಉಮಾ, ಉಮೆ ಎನ್ನುವುದು ಪಾರ್ವತಿಯ ಒಂದು ಹೆಸರು. ಉಗ್ರತಪಸ್ಸಿಲ್ಲಿ ನಿರತಳಾದ ಈಕೆಯನ್ನು ಕುರಿತು ತಾಯಿ ಉ (ಎಲೌ) ಮಾ (ಬೇಡ, ಕಷ್ಟಸಾಧ್ಯವಾದ ತಪಸ್ಸಿಗೆ ಉದ್ಯುಕ್ತಳಾಗಬೇಡ) ಎಂದು ಬಾರಿಬಾರಿಗೂ ಅಡ್ಡಗಿಸಿದ ಕಾರಣ ಉಮಾ ಎಂಬ ಹೆಸರು ರೂಢಿಗೆ ಬಂತು.
 
ಪಾರ್ವತಿಗೆ ಅಪರ್ಣೆ, ಗಿರಿಜೆ ಎಂಬ ಹೆಸರುಗಳಿವೆ.
 
==ನೋಡಿ==
* [[ಗೌರಿ]]
*[https://kn.wikisource.org/s/2ih ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾರ್ವತಿ]
 
== ಉಲ್ಲೇಖಗಳು ==
 
* David Kinsley, ''Hindu Goddesses: Vision of the Divine Feminine in the Hindu Religious Traditions'' ({{ISBN|81-208-0379-5}})
* [[Vans Kennedy]], ''Researches Into the Nature and Affinity of Ancient and Hindu Mythology''; Published 1831; Printed for Longman, Rees, Orme, Brown, and Green; 494 pages; Original from Harvard University; Digitized 11 July 2005 [https://archive.org/details/researchesinton00kenngoog]
* William J. Wilkins, [https://archive.org/stream/hindumythologyve00inwilk#page/292/mode/2up Uma – Parvati], ''Hindu Mythology, Vedic and Puranic''; Republished 2001 (first published 1882); Adamant Media Corporation; 463 pages; {{ISBN|1-4021-9308-4}}
* Wendy Doniger O'Flaherty, ''Śiva, the Erotic Ascetic''
* Charles Coleman, ''Mythology of the Hindus''
* Karen Tate, ''Sacred Places of Goddess: 108 Destinations''
* Srivastava, A. L. (2004). Umā-Maheśvara: An iconographic study of the divine couple. Kasganj, U: Sukarkshetra Shodh Sansthana.
 
== ಹೊರಗಿನ ಕೊಂಡಿಗಳು ==
 
* [https://www.britannica.com/topic/Parvati Parvati] at Encyclopædia Britannica
* [http://www.lotussculpture.com/parvati1.htm The Story of Hindu Goddess Parvati]
 
[[ವರ್ಗ:ಹಿಂದೂ ದೇವತೆಗಳು]]
"https://kn.wikipedia.org/wiki/ಪಾರ್ವತಿ" ಇಂದ ಪಡೆಯಲ್ಪಟ್ಟಿದೆ