ರಾಮನಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಶಾಸ್ತ್ರೀಯ ಸಂಗೀತ ವಿಭಾಗವನವನ್ನು ಚೊಕ್ಕಗೊಳಿಸಿದ್ದು
೨೧೩ ನೇ ಸಾಲು:
 
==ಶಾಸ್ತ್ರೀಯ ಸಂಗೀತ==
ರಾಮನಗರ ಜಿಲ್ಲೆಯಲ್ಲಿ ಶಾಸ್ತ್ರೀಯ [[ಸಂಗೀತ]]ದ ಕೊರತೆ ಕಾಣುತ್ತದೆ. ಆದರೆ ಇತಿಹಾಸವನ್ನು ಕೆದಕಿದಾಗ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಾತನೂರಿನ ಗ್ರಾಮದಲ್ಲಿ ಪುಂಡರೀಕ ವಿಠಲನೆಂಬ ಶ್ರೇಷ್ಠ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕನಿದ್ದದ್ದು ತಿಳಿದುಬರುತ್ತದೆ. ಈತ ಅಕ್ಬರನ ಆಸ್ಥಾನದಲ್ಲಿ, ತಾನ್ ಸೇನನ ಸಮಕಾಲೀನನಾಗಿದ್ದನಂತೆ. ಈತ ಅಕ್ಬರನ ಬಿರುದಿನೊಂದಿಗೆ ಗೌರವಿಸಲ್ಪಟ್ಟವನೆಂದು ಹೇಳಲಾಗಿದೆ. ಇವನು ಆಗಿನ ಕಾಲಕ್ಕೆ ದಕ್ಷಿಣ ಭಾರತದ ಖ್ಯಾತ ಹಿಂದೂಸ್ಥಾನಿ ಗಾಯಕನಾಗಿದ್ದನೆಂದು ಸ್ಮರಿಸುತ್ತಾರೆಹೇಳಲಾಗಿದೆ. ರಾಮನಗರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುವ ವಿದ್ವಾನ್ ನಾರಾಯಣ ಅಯ್ಯಂಗಾರ್ ಅವರ ಹೆಸರು ಕೇಳಿಬರುತ್ತದೆ.{{Citation needed|reason=Your explanation here}}
 
ಈಗಿನ ಪರಿಸ್ಥಿತಿ ನೋಡಿದಾಗ ಶಾಸ್ತ್ರೀಯ ಸಂಗೀತಕ್ಕೆ ಹೇಳಿ ಮಾಡಿಸಿದ ವಾತಾವರಣವಿಲ್ಲ. ರಾಮನಗರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುವ ವಿದ್ವಾನ್ ನಾರಾಯಣ ಅಯ್ಯಂಗಾರ್ ಅವರ ಹೆಸರು ಕೇಳಿಬರುತ್ತದೆ. ಆದರೂ ಕನಕಪುರದ ಕವಿ, ಲೇಖಕ ಯೋಗ ರವೀಶ್ ಭಾರತ್ ರವರನ್ನು ಮದುವೆಯಾಗಿ ಬಂದಿರುವ ವಡವಾಟಿ ಶಾರದಾ ಭರತ್ ಈ ಜಿಲ್ಲೆಯ ಏಕೈಕ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರಾಗಿದ್ದರೆಂದು ಹೇಳಿದರೆ ತಪ್ಪಾಗಲಾರದು. ಶಾರದಾ ಕೇವಲ ಶಾಸ್ತ್ರೀಯ ಸಂಗೀತಕ್ಕೆ ಸೀಮಿತರಾಗದೆ ವಿಶೇಷವಾಗಿ ವಚನ ಸಂಗೀತ ಗಾಯನದಲ್ಲಿ ಹೆಸರು ಮಾಡಿರುವ ನಮ್ಮ ರಾಜ್ಯದ ಖ್ಯಾತ ಗಾಯಕರು. ಇವರು ಹಾಡುವ ವಚನ ಸಂಗೀತ ಗಾಯನ ಕೇಳಲು ಮಧುರವಾಗಿರುವುದಷ್ಟೇ ಅಲ್ಲದೆ, ವಿಶೇಷವಾದ ವಚನ ಗಾಯನದ ಪರಂಪರೆಯನ್ನು ಪರಿಚಯಿಸುತ್ತದೆ. ಈ ನಿಟ್ಟಿನಲ್ಲಿ ಅವರು ಆಕಾಶವಾಣಿ ಮತ್ತು ದೂರದರ್ಶನದ "ಎ" ಗ್ರೇಡ್ ಕಲಾವಿದರಾಗಿದ್ದಾರೆ. ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಿದ ಜಿಲ್ಲೆಯ ಮೊದಲ ಗಾಯಕರಾಗಿದ್ದಾರೆ. ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ದೇವರ ನಾಮದಲ್ಲಿ ವಚನ ಗಾಯನ ಹಾಡಿದ ಭಾರತದ ಮೊದಲ ಗಾಯಕರು ಎಂಬ ಕೀರ್ತಿಗೆ ವಡವಾಟಿ ಶಾರದಾ ಭರತ್ ಪಾತ್ರರಾಗಿದ್ದಾರೆ. 2016ರ ಸೆಪ್ಟಂಬರ್ 24ರಂದು ಮೊದಲ ಬಾರಿಗೆ ಗುಲ್ಬರ್ಗಾದ ಡಾ. ಎಸ್, ಎಂ. ಪಂಡಿತ್ ರಂಗ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮವು 29.11.2016ರ ಮಂಗಳವಾರ ರಾತ್ರಿ 10 ಗಂಟೆಗೆ ಭಾರತದ ಎಲ್ಲಾ ಬಾನುಲಿ ಕೇಂದ್ರಗಳಿಂದ ಏಕ ಕಾಲದಲ್ಲಿ ಪ್ರಸಾರವಾಯಿತು. 3.12.2016 ರಂದು ಚಂದನವಾಹಿನಿಯಲ್ಲಿ ಬೆಳಿಗ್ಗೆ ಹಾಗೂ ರಾತ್ರಿ 10.30 ಗಂಟೆಗೆ ಪ್ರಸಾರವಾಯಿತು.
ಇವರು ಸರ್ಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ರಾಮನಗರ ಜಿಲ್ಲೆಯ ಪ್ರಪ್ರಥಮ ಸದಸ್ಯರಾಗಿ 2014ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ಇವರ ಅವಧಿಯಲ್ಲಿ 21ನೇ ಫ಼ೆಬ್ರವರಿ 2015ರಲ್ಲಿ ರಾಮನಗರ ಜಿಲ್ಲೆಯ ಪ್ರಪ್ರಥಮ ಜಿಲ್ಲಾ ಸಂಗೀತ ನೃತ್ಯೋತ್ಸವವು ನಡೆದಿದೆ. 16 ಮಾರ್ಚ್ 2016ರಲ್ಲಿ ಜಿಲ್ಲೆಯ ಪ್ರಪ್ರಥಮ ಜಿಲ್ಲಾ ಯುವ ಸಂಗೀತ ನೃತ್ಯೋತ್ಸವವು ಜರುಗಿದೆ.ಪ್ರಥಮ ನಮ್ಮ ಸಾಧಕರು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಪ್ರಪ್ರಥಮ ಬಾರಿಗೆ ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ 19.11.2016ರಂದು ಗಂಗೋತ್ಸವ ಹಾಗೂ ರೇಷ್ಮೆ ನಾಡ ಜಿಲ್ಲಾ ಸಂಗೀತ ನೃತ್ಯೋತ್ಸವವನ್ನು ಆಯೋಜಿಸಿದ ಕೀರ್ತಿ ವಡವಾಟಿ ಶಾರದಾ ಭರತ್ ಅವರಿಗೆ ಸಲ್ಲುತ್ತದೆ.
 
ಇತ್ತೀಚಿನ ಒಳ್ಳೆ ಬೆಳವಣಿಗೆಯೆಂದರೆ ಭರತನಾಟ್ಯಕ್ಕೆ ಪ್ರೋತ್ಸಾಹ ದೊರಕುತ್ತಿರುವುದು. ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿಯ ಎಲ್ಲಾ ತಾಲ್ಲೂಕುಗಳಲ್ಲೂ ಭರತ ನಾಟ್ಯ ಕಲಿಸುತ್ತಿರುವವರು ಹೆಚ್ಚಾಗುತ್ತಿರುವುದರಿಂದ ಭರತನಾಟ್ಯ ಕಲಾವಿದರು ಸೃಷ್ಟಿಯಾಗುತ್ತಿದ್ದಾರೆ. ಕಲೆಯ ಅಭಿವೃದ್ಧಿ ದೃಷ್ತಿಯಿಂದ ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ.
 
<gallery>
"https://kn.wikipedia.org/wiki/ರಾಮನಗರ" ಇಂದ ಪಡೆಯಲ್ಪಟ್ಟಿದೆ