ಎಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Beru
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೯ ನೇ ಸಾಲು:
== ಎಲೆತೊಟ್ಟು ==
ಕೆಲವು ತೆಂಗಿನ ಜಾತಿಯ ಗಿಡದಲ್ಲಿ 15 ಅಡಿಯಷ್ಟು ಉದ್ದದ ತೊಟ್ಟು ಇರುವುದುಂಟು. ನಿಂಬೆಯ ಎಲೆಯಲ್ಲಿ ತೊಟ್ಟಿಗೆ ರೆಕ್ಕೆಗಳು ಅಗಲವಾಗಿ ಬೆಳೆದಿರುವುವು. ಆಸ್ಟ್ರೇಲಿಯದ ಜಾಲಿಗಿಡಗಳಲ್ಲಿ, ಎಲೆ ತೊಟ್ಟು ಅಗಲವಾಗಿದ್ದು, ಎಲೆ ಪತ್ರದ ಕೆಲಸವನ್ನೇ ಮಾಡುತ್ತದೆ. ಇದಕ್ಕೆ ಫಿಲ್ಲೋಡ್ ಎಂದು ಹೆಸರು, ಇದು ಸೂರ್ಯನ ಬೆಳಕಿಗೆ ತನ್ನ ಅಂಚನ್ನು ತೋರಿಸುವುದು. ಈ ಎಲೆಯ ಭಿನ್ನಪತ್ರದ ಇತರ ಭಾಗಗಳು ಬೇಗನೆ ಉದುರಿ ಹೋಗುವುವು. ಸಾರಸೆನಿಯ ಎನ್ನುವ ಕೀಟಾಹಾರಿ ಸಸ್ಯದಲ್ಲಿ ಎಲೆತೊಟ್ಟು ಹೂಜಿಯ ಆಕಾರದಲ್ಲಿದೆ. ಟ್ರೋಪಿಯೋಲು ಗಿಡದಲ್ಲಿನ ತೊಟ್ಟು ನುಲಿಬಳ್ಳಿಯಂತೆ ಇರುವುದು. ಎಲೆತೊಟ್ಟಿನ ಬುಡದಲ್ಲಿ ಉಬ್ಬಿದ್ದರೆ ಆ ಭಾಗಕ್ಕೆ ಪಲ್ವೈನಸ್ ಎಂದು ಹೆಸರು. ಹರಳು ಮುಂತಾದ ಎಲೆಗಳ ಕಾವು ಪತ್ರದ ಮಧ್ಯಭಾಗದಲ್ಲಿ ಸೇರಿಕೊಂಡಿದೆ. ಮುಟ್ಟಿದರೆ ಮುನಿಯಲ್ಲಿ ಈ ಪಲ್ವೈನಸಿನ ಸಹಾಯದಿಂದ ಎಲೆಯ ಭಾಗಗಳು ಚಲಿಸುವುವು. ಇದರಂತೆಯೆ ಬಂiೆÆೕಫೈಟಂ ಸಸ್ಯದ ಎಲೆಗಳೂ ಮುಟ್ಟಿದರೆ ಅಥವಾ ಶಾಖವನ್ನು ತೋರಿಸಿದರೆ, ಮುಚ್ಚಿಕೊಳ್ಳುವುವು. ಆದರೆ ಡೆಸ್ಮೋಡಿಯ ಗೈರಾನ್ಸಿನ (ಟೆಲಿಗ್ರಾಫ್ ಸಸ್ಯ) ಎಲೆಯ ಉಪಪತ್ರಗಳು ತಮ್ಮಷ್ಟಕ್ಕೆ ತಾವೇ ಸದಾ ಚಲಿಸುತ್ತಿರುವುವು. ಮತ್ತೆ ಕೆಲವು ಗಿಡಗಳ ಉಪಪತ್ರಗಳು ರಾತ್ರಿಯಾಗುತ್ತಲೇ ಮುಚ್ಚಿಕೊಂಡು, ನಿದ್ರಿಸುವಂತೆ ತೋರುವುವು. ಜಾನ್ ಗೋಟು ಬೆಡ್ ಎಟ್ ನೂನ್ ಎಂದು ಕರೆಯುವ ಇಂಗ್ಲೆಂಡಿನ ಸಸ್ಯದಲ್ಲಿ ಈ ರೀತಿ ಮಧ್ಯಾಹ್ನದ ತಾಪಕ್ಕೆ ಉಪಪತ್ರಗಳು ಮುಚ್ಚಿಕೊಳ್ಳುವುವಂತೆ. ಅದರೆ ಅಮೆರಿಕದ ಹುಲ್ಲುಗಾವಲಿನಲ್ಲಿ ಬೆಳೆಯುವ ಸಿಲ್ಫಿಯಂ ಎಂಬ ಗಿಡದ ಎಲೆಗಳು ಮಧ್ಯಾಹ್ನದ ಸೂರ್ಯನ ಕಡೆಗೆ ತಮ್ಮ ಅಂಚನ್ನೇ ತೋರಿಸಿಟ್ಟುಕೊಂಡು ಬಿಸಿಲಿನ ತಾಪದಿಂದ ಪಾರಾಗುವುವಂತೆ.
 
== ಎಲೆಯ ಬುಡ ==
ಇದು ಹುಲ್ಲು, ಕೊತ್ತಂಬರಿ ಜಾತಿಗಳ ಎಲೆಗಳಲ್ಲಿ ಕೊಳವೆಯಂತೆ ಇರುವುದು. ಹುಲ್ಲು, ಶುಂಠಿ, ಸೆಲಾಜಿನೆಲ್ಲ, ಗಿಡಗಳ ಎಲೆಗಳಲ್ಲಿ ಲಿಗ್ಯೂಲ್ ಎಂದು ಕರೆಯುವ ನಾಲಗೆಯಂಥ ಚಿಕ್ಕ ಭಾಗ ಎಲೆಯ ಬುಡದಲ್ಲಿ ಬೆಳೆದಿರುವುದು ಒಂದು ವಿಶೇಷವಾಗಿದೆ.
"https://kn.wikipedia.org/wiki/ಎಲೆ" ಇಂದ ಪಡೆಯಲ್ಪಟ್ಟಿದೆ