ಸಾಮಾನ್ಯ ಯುಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೧ ನೇ ಸಾಲು:
==ವಿವಾದ==
*ಕ್ರಿ.ಶ. "ಸಾವಿನ ನಂತರ" ಅಲ್ಲ. ಇದು ಅನ್ನೋ ಡೊಮಿನಿಯನ್ನು ಸೂಚಿಸುತ್ತದೆ, ಇದನ್ನು ಭಗವಂತನ ವರ್ಷದಲ್ಲಿ ಅನುವಾದಿಸಲಾಗಿದೆ. [[ಯೇಸು]] ಜೀವಂತವಾಗಿದ್ದ ಸಮಯವು ಕ್ರಿ.ಶ. ಆದ್ದರಿಂದ, ಯೇಸುವಿನ ಶಿಲುಬೆಗೇರಿಸುವ ವರ್ಷ ಕ್ರಿ.ಶ 32 ಎಂದು ನಂಬಲಾಗಿದೆ.<ref>[https://www.quora.com/If-B-C-means-Before-Christ-and-A-D-means-After-Death-whats-the-time-period-when-Jesus-was-alive-called If B.C. means "Before Christ" and A.D. means "]</ref>
===ಇತಿಹಾಸ==
*ಕ್ರಿಸ್ತಶಕ ಪ್ರಪಂಚದಲ್ಲಿ ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ವರ್ಷ ತಿಂಗಳು ದಿವಸಗಳನ್ನು ಸೂಚಿಸುವ ಒಂದು ವ್ಯವಸ್ಥೆ (ಕ್ರಿಶ್ಚನ್ ಈರ). ಉದಾಹರಣೆಗೆ, 15-8-1972 ಎಂದರೆ ಒಂದು ನಿಶ್ಚಿತ ಮುಹೂರ್ತದಿಂದ ತೊಡಗಿ 1971 ವರ್ಷಗಳು ಮತ್ತು 7 ತಿಂಗಳುಗಳು ಸಂದ ಬಳಿಕ ಬರುವ 15ನೆಯ ದಿವಸ ಎಂದು ಅರ್ಥವಾಗುತ್ತದೆ. ಇಲ್ಲಿ ದಿವಸ-ತಿಂಗಳು ಸಂಬಂಧ ಸಹ ಗೊತ್ತಾದ ಕ್ರಮದಲ್ಲಿಯೇ ಇರಬೇಕು.
*ಕ್ರಿಸ್ತಶಕದ ಪ್ರಾರಂಭ ಜನವರಿ 1, 754 ಎ.ಯು.ಸಿ. (ಆನ್ನೋ ಆರ್ಬಿಸ್ ಕಾಂಡಿಟೇ ಎಂಬುದರ ಸಂಕ್ಷೇಪ ರೂಪ. ರೋಮ್ ನಗರದ ತಳಪಾಯ ಹಾಕಿದಂದಿನಿಂದ 754 ವರ್ಷಗಳ ತರುವಾಯ ಕ್ರಿಸ್ತಶಕ ಆರಂಭವಾಗುತ್ತದೆ ಎಂದು ಇದರ ಅರ್ಥ). ಕ್ರಿಸ್ತನ ಜನನ ಅದೇ ಹಿಂದಿನ ಡಿಸೆಂಬರ್ 25ರಂದು ಆಗಿದ್ದಿರಬೇಕು ಎಂದು ಮೊದಲು ನಂಬಲಾಗಿತ್ತು. ಇದರ ವಿಚಾರದಲ್ಲಿ ಸಾಕಷ್ಟು ಗೊಂದಲ ಮುಂದಿನ ಹಲವಾರು ಶತಮಾನಗಳ ಕಾಲ ಪ್ರಚಲಿತವಾಗಿತ್ತು. ಇವನ್ನೆಲ್ಲ ನಿವಾರಿಸಿ ಸಮನ್ವಯ ಸಾಧಿಸಿದವ ಡಯೊನೀಸಿಯಸ್ ಎಗ್ಸಿಜಸ್ (ಸು. 496-540) ಎಂಬ ಇಟಲಿ ದೇಶದ ಕ್ರಿಶ್ಚನ್ ಪಾದ್ರಿ. ವಾಸ್ತವಿಕವಾಗಿ ಈತನೇ ಕ್ರಿಸ್ತಶಕದ ಸಂಸ್ಥಾಪಕ. ಖಚಿತತೆಯ ದೃಷ್ಟಿಯಿಂದ ವರ್ಷದ ಸಂಖ್ಯೆಯ ಒತ್ತಿಗೆ ಎ.ಡಿ. ಎಂಬ ಸಂಕ್ಷೇಪಗಳನ್ನು ಬರೆಯುವ ಕ್ರಮವನ್ನೂ ಈತ ಬಳಕೆಗೆ ತಂದ. (ಕನ್ನಡದಲ್ಲಿ ಕ್ರಿ.ಶ. ಎಂದು ಸಂಖ್ಯೆಯ ಮೊದಲೇ ಬರೆಯುತ್ತೇವೆ. ಇದಕ್ಕೆ ಸಂವಾದಿಯಾಗಿ ಕ್ರಿಸ್ತಪೂರ್ವ, ಇಂಗ್ಲಿಷಿನಲ್ಲಿ ಬಿಫೋರ್ ಕ್ರೈಸ್ಟ್ ಅಥವಾ ಬಿ.ಸಿ. ಇದೆ.) ಈ ಅಕ್ಷರಗಳ ವಿಸ್ತøತ ರೂಪ ಅನ್ನೊ ಡೋಮಿನಿ; ಅರ್ಥ ನಮ್ಮ ಪ್ರಭುವಿನ ವರ್ಷದಲ್ಲಿ ಎಂದು. ಡಯೊನೀಸಿಯಸನ ಸುಧಾರಣೆಯನ್ನು ಎಲ್ಲ ಗುರುಗಳೂ ಎಲ್ಲ ಪಂಥಗಳವರೂ ಒಡನೆಯೇ ಸ್ವೀಕರಿಸಲಿಲ್ಲ : ಸಾಕಷ್ಟು ದೀರ್ಘಕಾಲ ಕ್ರಿಸ್ತನ ಹುಟ್ಟಿನ - ಆದ್ದರಿಂದ ಕ್ರಿಸ್ತಶಕದ - ಆರಂಭದ ದಿವ¸ ಮತ್ತು ವರ್ಷವನ್ನು ಕುರಿತು ವಿವಾದ ಮುಂದುವರಿದಿತ್ತು. ಇಂಗ್ಲೆಂಡ್ 676ರಲ್ಲಿ ಡಯೊನೀಸಿಯಸ್ ವಿಧಾನವನ್ನು ಬಳಕೆಗೆ ತಂದಿತು. ಯುರೋಪ್ ಖಂಡದಲ್ಲಿ ಇದು ವ್ಯಾಪಕವಾಗಿ ಪಸರಿಸಿದ್ದು 11ನೆಯ ಶತಮಾನದ ಅನಂತರ; ಗ್ರೀಕ್ ಪ್ರಪಂಚದಲ್ಲಿ ಕಾಲೂರಿದ್ದು 15ನೆಯ ಶತಮಾನದಲ್ಲಿ. ಇದು ಹೇಗೂ ಇರಲಿ, ಇಂದು ಕ್ರಿಸ್ತಶಕ ಪ್ರಪಂಚದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವುದು ಮಾತ್ರವಲ್ಲ, ಎಲ್ಲ ನಾಗರಿಕರಿಗೂ ಸುಲಭವಾಗಿ ಅರ್ಥವೂ ಆಗುವುದು. ಇದರಿಂದಾಗಿ ವರ್ಷ, ತಿಂಗಳು, ದಿವಸಗಳ ನಿರೂಪಣೆಯಲ್ಲಿ ಒಂದು ವಿಧದ ಏಕತೆ ಒದಗಿದೆ.
<ref>https://kn.wikisource.org/s/35u ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರಿಸ್ತಶಕ</ref>
 
==ನೋಡಿ==
*[[ಕ್ರಿಸ್ತ ಶಕ]]
"https://kn.wikipedia.org/wiki/ಸಾಮಾನ್ಯ_ಯುಗ" ಇಂದ ಪಡೆಯಲ್ಪಟ್ಟಿದೆ