ಹೆಬ್ಬಾಳ ಕಿತ್ತಯ್ಯ ಶಿಲಾಬರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೫ ನೇ ಸಾಲು:
==ಸಮುದಾಯದಿಂದ ಧನಸಂಗ್ರಹಿಸಿ ನಿರ್ಮಿಸಿದ ಮಂಟಪ==
[[File:Hebbal-Kittayya mantapa front view.jpg|thumb|300px|ಗಂಗಶೈಲಿಯ ಮಂಟಪದಲ್ಲಿ ವೀರಗಲ್ಲು]]
[[ಎಪಿಗ್ರಾಫಿಯ ಕರ್ನಾಟಿಕ]] ಗ್ರಂಥದ ೯ನೇ ಸಂಪುಟ, ೧೯೦೫ ನೇ ಇಸವಿಯ ಆವೃತ್ತಿಯಲ್ಲಿ ಬೆಂಗಳೂರು ಪ್ರದೇಶದ ಸುಮಾರು ೧೬೦ಕ್ಕೂ ಹೆಚ್ಚು ಶಿಲಾಶಾಸನ/ಬರಹಗಳು ದಾಖಲಾಗಿವೆ. ಆದರೆ ಪ್ರಸ್ತುತ ಅವುಗಳಲ್ಲಿ ಕೇವಲ ೫೦ ಮಾತ್ರ ಉಳಿದುಕೊಂಡಿವೆ. ಇಂತಹ ಸಂದರ್ಭದಲ್ಲಿ ದೊರೆತ ಎಂಟನೇ ಶತಮಾನದ ಈ ಶಿಲಾಬರಹವು ಅತ್ಯಂತ ಮಹತ್ವದಾಗಿದೆ. ಹಾಗಾಗಿ ಇಂತಹ ಶಾಸನ/ಬರಹಗಳ ಸಂರಕ್ಷಣೆಯಲ್ಲಿ ಮತ್ತು ದಾಖಲಾತಿಯಲ್ಲಿ ತೊಡಗಿರುವ “Inscription Stones of Bangalore” ಎಂಬ ಸಮುದಾಯವು ಈ ಕಿತ್ತಯ್ಯ ಶಿಲಾಬರಹವನ್ನು ಸೂಕ್ತವಾಗಿ ಪ್ರತಿಷ್ಟಾಪಿಸಿ ಕಾಪಾಡುವ ಉದ್ದೇಶದಿಂದ ಇದಕ್ಕಾಗಿ ಗಂಗ ಶೈಲಿಯ ಮಂಟಪವೊಂದನ್ನು ನಿರ್ಮಿಸುವ ಯೋಜನೆ ಹಾಕಿತು. ವಾಸ್ತುಶಿಲ್ಪಿ ''ಯಶಸ್ವಿನಿ ಶರ್ಮಾ'' ಅವರು ಗಂಗ ಶೈಲಿಯ ಮಂಟಪದ ವಿನ್ಯಾಸ ಮಾಡಿದರು<ref>{{cite news |last1=ಎಸ್ |first1=ಸಂಪತ್ |title=ಶಾಸನಗಳ ಹುಡುಕುತ್ತಾ....... |url=https://www.prajavani.net/artculture/article-features/inscriptions-563343.html |publisher=ಪ್ರಜಾವಾಣಿ ವಾರ್ತೆ |date=07 ಆಗಸ್ಟ್ 2018}}</ref>. ನಿರ್ಮಾಣಕ್ಕಾಗಿ ಜನರಿಂದಲೇ ಹಣಸಂಗ್ರಹ ಮಾಡುವ ಕೆಲಸಮಾಡಲಾಯಿತು. ಜನವರಿ ೨೦೨೦ರಲ್ಲಿ ಈ ಮಂಟಪದ ನಿರ್ಮಾಣಕಾರ್ಯ ಪೂರ್ಣಗೊಂಡಿತು. ಹೆಬ್ಬಾಳದ ನಾಗರೀಕರು ಜನವರಿ ೧೪, ೨೦೨೦ರ ಸಂಕ್ರಾಂತಿಯಂದು ಇದನ್ನು ಅಧಿಕೃತವಾಗಿ ಉದ್ಘಾಟನೆಗೊಳಿಸಿದರು ಮತ್ತು ಆ ಸ್ಥಳದಲ್ಲಿ ಹಬ್ಬದ ಆಚರಣೆಮಾಡಿ ಸಂಭ್ರಮಿಸಿದರು.
 
==ಉಲ್ಲೇಖಗಳು==