ಪೂತರೇಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಆಂಧ್ರಪ್ರದೇಶದ ಸಿಹಿ ಖಾದ್ಯ
Content deleted Content added
"Pootharekulu" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
( ಯಾವುದೇ ವ್ಯತ್ಯಾಸವಿಲ್ಲ )

೧೯:೦೮, ೧೮ ಮೇ ೨೦೨೦ ನಂತೆ ಪರಿಷ್ಕರಣೆ

ಪೂತರೇಕು ಆಂಧ್ರಪ್ರದೇಶ ರಾಜ್ಯದ ಒಂದು ಜನಪ್ರಿಯ ಸಿಹಿತಿಂಡಿಯಾಗಿದೆ.[೧] ಈ ಸಿಹಿ ತಿಂಡಿಯನ್ನು ಕಾಗದವನ್ನು ಹೋಲುವ ತುಂಬಾ ತೆಳುವಾದ ಅಕ್ಕಿಯ ಪಿಷ್ಟದ ಪದರದಲ್ಲಿ ಸುತ್ತಲಾಗುತ್ತದೆ ಮತ್ತು ಒಳಗೆ ಸಕ್ಕರೆ, ಒಣಫಲಗಳು ಹಾಗೂ ನಟ್‍ಗಳನ್ನು ತುಂಬಿರಲಾಗುತ್ತದೆ. ಈ ಸಿಹಿ ತಿನಿಸು ತೆಲುಗು ರಾಜ್ಯಗಳಲ್ಲಿನ ಹಬ್ಬಗಳು, ಧಾರ್ಮಿಕ ಸಂದರ್ಭಗಳು ಮತ್ತು ಮದುವೆಗಳಲ್ಲಿ ಜನಪ್ರಿಯವಾಗಿದೆ.

ಪೂತರೇಕುವನ್ನು ಜಯ ಬಿಯ್ಯಮ್ ಎಂಬ ಒಂದು ವಿಶಿಷ್ಟ ಬಗೆಯ ಅಕ್ಕಿಯ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರ ಜೊತೆಗೆ ಪುಡಿ ಸಕ್ಕರೆ ಮತ್ತು ತುಪ್ಪವನ್ನು ಸೇರಿಸಲಾಗುತ್ತದೆ. ತಿನ್ನಲರ್ಹ ಲೇಪವನ್ನು ತಯಾರಿಸಲು ಮೊದಲು ಸುಮಾರು ಎರಡು ಗಂಟೆಗಳ ಕಾಲ ರುಬ್ಬಿದ ಉರುಟಕ್ಕಿಯನ್ನು ಹಿಟ್ಟಾಗಿ ಮಾಡಿಕೊಂಡು ಅದಕ್ಕೆ ನೀರು ಸೇರಿಸಿ, ಈ ದ್ರಾವಣದಲ್ಲಿ ಒಂದು ತೆಳುವಾದ ಬಟ್ಟೆಯನ್ನು ಅದ್ದಿ ಒಂದು ಬಿಸಿ ಮಡಕೆಯನ್ನು ತಲೆಕೆಳಗುಮಾಡಿ ಅದರ ಕೆಳಗೆ ಉರಿ ಹಚ್ಚಿ ಮಡಕೆಯ ಮೇಲೆ ಈ ಬಟ್ಟೆಯನ್ನು ಇರಿಸಲಾಗುತ್ತದೆ. ತಿನ್ನಲರ್ಹ ಪೊರೆಯು ಬೇಗನೇ ಮಡಕೆಯ ಮೇಲೆ ರೂಪಗೊಳ್ಳುತ್ತದೆ.[೨].

ಉಲ್ಲೇಖಗಳು

  1. B.V.S. Bhaskar (3 July 2005). "Life, sweetened by `pootarekulu'". Retrieved 6 April 2016.
  2. G.V. PRASADA SARMA (6 April 2016). "'Putarekulu' making set to get simpler". The Hindu. VISAKHAPATNAM. Retrieved 6 April 2016.
"https://kn.wikipedia.org/w/index.php?title=ಪೂತರೇಕು&oldid=993247" ಇಂದ ಪಡೆಯಲ್ಪಟ್ಟಿದೆ