ವೆಂಕಟರಮಣ ದೇವಸ್ಥಾನ, ಕಾರ್ಕಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
ದಿನ ನಿತ್ಯದ ಪೂಜೆಗಳೊಂದಿಗೆ ಕೆಲವು ವಾರ್ಷಿಕ ಉತ್ಸವಗಳು ಹಾಗೂ ವಿಶೇಷ ಆಚರಣೆಗಳು ನಡೆಯುತ್ತವೆ
 
=== ೧. ರಾಮದಂಡು ===
ಗೋಸಾವಿಗೆ ನೀಡಿದ ವಚನದಂತೆ ತಿರುಪತಿ ದೇವರಿಗೆ ಎಂದು ಬರುವ ಕಾಣಿಕೆಯನ್ನು ಪ್ರತ್ಯೇಕವಾಗಿ ತೆಗೆದಿಟ್ಟು ಕೆಲವು ವರ್ಷಗೊಳಿಗೊಮ್ಮ ತಿರುಪತಿಗೆ ತೆರಳಿ ಪಾವತಿಸುತ್ತಾರೆ. ಕಾಣಿಕೆ ಪಾವತಿಸುವ ಈ ಯಾತ್ರೆಗೆ ರಾಮದಂಡು ಎನ್ನುತ್ತಾರೆ.
 
ಕ್ರಿಸ್ತಶಕ ೧೫೩೭ರಿಂದ ಹಲವು ಸಾರಿ ರಾಮದಂಡು ತಿರುಪತಿಗೆ ಹೊಗಿರಬಹುದಾದರು ಕ್ರಿಸ್ತಶಕ ೧೮೧೩ರವರೆಗೆ ಅವುಗಳ ದಾಖಲೆ ಲಭ್ಯವಿಲ್ಲ. ಕ್ರಿಸ್ತಶಕ ೧೮೧೩, ೧೮೪೫, ೧೯೦೧,೧೯೭೦ರಲ್ಲಿ ರಾಮದಂಡು ತಿರುಪತಿಗೆ ಹೋಗಿರುವ ದಾಖಲೆಗಳಿವೆ. ಕ್ರಿಸ್ತಶಕ ೧೮೪೫ರಲ್ಲಿ ತಿರುಪತಿ ಧೇವರ ಮುಡಿಪನ್ನು ತೆಗೆದುಕೊಂಡು ೩೦೦ ಜನರ ರಾಮದಂಡು ತಿರುಪತಿಗೆ ಹೊರಟಾಗ,ಚದ್ಮ ಎಂಬ ಊರಿನಲ್ಲಿ ವಾಂತಿ ಭೇದಿ ಪ್ರಾರಂಭವಾಗಿ ಗೋವಿಂದರಾಜ ಪಟ್ಟಣ ಸೇರುವಾಗ ೭೫ ಜನ ಮರಣ ಹೊಂದಿರುವ ವಿಷಯ ಧಾಖಲೆಗಳಲ್ಲಿದೆ. ಉಳಿದವರು ದೇವರ ದರ್ಶನ ಪಡೆದು, ಕಾಣಿಕೆ ಸಲ್ಲಿಸಿ ಕಾರ್ಕಳಕ್ಕೆ ಮರಳಿದರೆನ್ನಲಾಗಿದೆ. ಈ ಯಾತ್ರೆಗೆ ತಗುಲಿದ ಸಯಮ ಎರಡು ತಿಂಗಳು ಇಪ್ಪತ್ತು ದಿನಗಳು.
 
=== ೨. ರಥೋತ್ಸವ ===
ಕಾರ್ಕಳ ದೇವಸ್ಥಾನದಲ್ಲಿ ರಥೋತ್ಸವ ಆಚರಣೆಯು ಯಾವಾಗ ಪ್ರಾರಂಭವಾಯ್ತು ಎಂಬ ಬಗ್ಗೆ ದೃಢವಾದ ದಾಖಲೆಗಳಿಲ್ಲ. ಪುರಾತನ ಕಡತಗಳನ್ನು ಅವಲೋಕಿಸಿದಾಗ ಕ್ರಿಸ್ತಶಕ ೧೭೭೭ರ ಜೀರ್ಣೋದ್ಧಾರದ ನಂತರ ೧೭೮೫ರಲ್ಲಿ ಬಣ್ಣದ ರಥ ಹಾಗೂ ಕ್ರಿಸ್ತಶಕ ೧೮೨೭ರಲ್ಲಿ ಬ್ರಹ್ಮ ರಥದ ನಿರ್ಮಾಣವಾಯಿತೆಂದು ತಿಳಿದು ಬರುತ್ತದೆ.ಕಡತದಲ್ಲಿ ಸಿಕ್ಕಿದ ದಾಖಲೆಯೊಂದರಲ್ಲಿ ಕ್ರಿಸ್ತಶಕ ೧೮೧೬ರಲ್ಲಿ ನಡೆದ ರಥೋತ್ಸವದ ಖರ್ಚಿನ ವಿವರಗಳಿವೆ. ಇದರಿಂದ ೧೭೮೫ರಲ್ಲಿ ಬಣ್ಣದ ರಥ ನಿರ್ಮಾಣವಾದ ಮೇಲೆ ರಥೋತ್ವದ ಆಚರಣೆಯು ಆರಂಭವಾಯಿತು ಎಂಬ ಊಹೆ ಇದೆ.