ಅಪ್ಪಚ್ಚ ಕವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೧ ನೇ ಸಾಲು:
}}
==ಜನನ ಮತ್ತು ವಿದ್ಯಾಭಾಸ==
ಅಪ್ಪಚ್ಚನವರು [[ಕೊಡಗು|ಕೊಡಗಿನ]] ಮುಖ್ಯ ಪಟ್ಟಣ [[ಮಡಿಕೇರಿ|ಮಡಿಕೇರಿಯ]] ದಕ್ಷಿಣಕ್ಕೆ ಸುಮಾರು ೧೫ ಕಿ ಮೀ ದೂರದಲ್ಲಿರುವ ನಾಪೊಕ್ಲು ನಾಡಿನ ಕಿರುಂದಾಡು ಎಂಬ ಗ್ರಾಮದಲ್ಲಿ ಜನಿಸಿದರು<ref> ಜಗತ್ತಿಗೊಂದೇ ಕೊಡಗು - ಶ್ರೀ ಕೆ. ಪಿ. ಮುತ್ತಣ್ಣ - 1969</ref>. ಅವರು ಅಪ್ಪನೆರವಂಡ ಮನೆತನಕ್ಕೆ ಸೇರಿದ ಮೇದಯ್ಯ ಮತ್ತು ಬೊಳ್ಳವ್ವ ದಂಪತಿಗಳ ಸುಪುತ್ರರು.ಅವರಿಗೆ ಮೂವರು ಸೋದರಿಯರಿದ್ದರು. ಬಾಲ್ಯದಲ್ಲಿಯೇ ಅವರು ಭಕ್ತಿಗೀತೆಗಳನ್ನು ಬರೆಯುವದರಲ್ಲೂ, ಹಾಡುವದರಲ್ಲೂ ನಿರತರಾಗಿರುತ್ತಿದ್ದರು. ಆಗಿನ ಕಾಲದಲ್ಲಿ ಅವರ ಗ್ರಾಮದಲ್ಲಿ ಶಾಲೆಯಿಲ್ಲದ ಕಾರಣ [[ವಿರಾಜಪೇಟೆ|ವಿರಾಜಪೇಟೆಯ]] ಪಕ್ಕದ ಆರ್ಜಿ ಎಂಬ ಊರಿನಲ್ಲಿದ್ದ ಅವರ ಸೋದರಮಾವನಲ್ಲಿಗೆ ಹೋದರು. ಅಲ್ಲಿ ಮೂರನೇ ತರಗತಿಯವರೆಗೆ ಕಲಿತರು. [[ಕನ್ನಡ ಭಾಷೆ|ಕನ್ನಡ ಭಾಷೆಯ]] ಸಾಮಾನ್ಯ ಜ್ಞಾನವನ್ನು ಮತ್ತು ಸಾಮಾನ್ಯ ಗಣಿತವನ್ನಷ್ಟೇ ಅವರು ಗಳಿಸಿದದು.
==ಉದ್ಯೋಗ==
ಕೆಲಸಮಯದವರೆಗೆ ಅಪ್ಪಚ್ಚನವರು ವಿರಾಜಪೇಟೆಯ ನಾಡು ಕಚೇರಿಯಲ್ಲಿ ಸ್ವಯಂಸೇವೆಯನ್ನು ಮಾಡಿದ್ದರಲ್ಲದೆ ಪೊಲಿಸ್ ಇಲಾಖೆಯಲ್ಲೂ ದುಡಿದಿದ್ದರು. ಬಳಿಕ ಅವರು ಮಡಿಕೇರಿಯ [[ಓಂಕಾರೇಶ್ವರ ದೇವಸ್ಥಾನ, ಮಡಿಕೇರಿ|ಓಂಕಾರೇಶ್ವರ ದೇವಸ್ಥಾನ]]ದಲ್ಲಿ ವೃತ್ತಿಯಲ್ಲಿದ್ದರು. ಅಲ್ಲಿ ಅವರು ವೆಂಕಟಾದ್ರಿ ಶಾಮರಾಯರನ್ನು ಭೇಟಿಯಾದರು. ಮಡಿಕೇರಿಯ ದೇವಸ್ಥಾನದಲ್ಲಿ ಎರಡು ವರ್ಷಗಳ ಅನುಭವದ ನಂತರ [[ಭಾಗಮಂಡಲ]]ದ [[ಭಗಂಡೇಶ್ವರ ದೇವಸ್ಥಾನ]]ದಲ್ಲಿ ಮೇಲ್ವಿಚಾರಕರಾಗಿ ನೇಮಕಗೊಂಡರು.ಇಲ್ಲಿ ಅವರು ವೈದ್ಯನಾಥ ಭಟ್ಟ ಎಂಬವರ ಸಾಂಗತ್ಯದಲ್ಲಿ [[ರಾಮಾಯಣ]], [[ಮಹಾಭಾರತ]] ಮತ್ತು [[ವೇದ]]ಗಳನ್ನೊಳಗೊಂಡು ಹಿಂದೂ ಧಾರ್ಮಿಕ ಸಾಹಿತ್ಯಲೋಕವನ್ನು ಪ್ರವೇಶಿಸಿದರು.
೪೦ ನೇ ಸಾಲು:
 
೫. ‘http://en.wikipedia.org/wiki/Appachcha Kavi
 
==ಉಲ್ಲೇಖಗಳು==
{{reflist}}
{{Navbox
|name = ಪ್ರಸಿದ್ಧ ಕೊಡವರು
"https://kn.wikipedia.org/wiki/ಅಪ್ಪಚ್ಚ_ಕವಿ" ಇಂದ ಪಡೆಯಲ್ಪಟ್ಟಿದೆ