ಜೋಸೆಫ್ ಸ್ಟಾಲಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೩೦ ನೇ ಸಾಲು:
==ಪೀಠಿಕೆ==
*'''ಜೋಸೆಫ್ ಸ್ಟಾಲಿನ್''' - ಜೋಸೆಫ್ ವಿಸ್ಸರಿಯೊನೊವಿಚ್ ಸ್ಟಾಲಿನ್ [ಜನನ 18 ಡಿಸೆಂಬರ್ -1878; ಮತ್ತು ನಿಧನ ಮಾರ್ಚ್ 5, 1953) ಜಾರ್ಜಿಯನ್ ಕ್ರಾಂತಿಕಾರಿ ಮತ್ತು ಸೋವಿಯತ್ ರಾಜಕಾರಣಿ, ಇವರು 1920 ರ ದಶಕದ ಮಧ್ಯಭಾಗದಿಂದ 1953 ರವರೆಗೆ ಸೋವಿಯತ್ ಒಕ್ಕೂಟವನ್ನು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೋವಿಯತ್ ಯೂನಿಯನ್ (1922-1952)ದೇಶವನ್ನು ಮುನ್ನಡೆಸಿದರು.
*ಅವರು. ಸೋವಿಯತ್ ಒಕ್ಕೂಟದ (1941-1953) ಸಾಮೂಹಿಕ ಪ್ರಧಾನ ನಾಯಕತ್ವದ ಭಾಗವಾಗಿ ಆರಂಭದಲ್ಲಿ ಸೋವಿಯತ್ ಒಕ್ಕೂಟವನ್ನು ಆಳುತ್ತಿದ್ದರೂ, ಅಂತಿಮವಾಗಿ ಅವರು 1930 ರ ಹೊತ್ತಿಗೆ ದೇಶದ ವಾಸ್ತವಿಕ ಸರ್ವಾಧಿಕಾರಿಯಾಗಿ ಅಧಿಕಾರವನ್ನು ನೆಡೆಸಿದರು. ಮಾರ್ಕ್ಸ್‌ವಾದದ ಲೆನಿನಿಸ್ಟ್ ವ್ಯಾಖ್ಯಾನಕ್ಕೆ ಸೈದ್ಧಾಂತಿಕವಾಗಿ ಬದ್ಧವಾಗಿದ್ದ ರಷ್ಯಾದ ಉದಾರ ಕಮ್ಯುನಿಸ್ಟ್ ನೀತಿಯನ್ನು, ಉಗ್ರವಾದದ ಸರ್ವಾಧಿಕಾರದ ಸ್ಟಾಲಿನ್ ಮಾರ್ಕ್ಸ್‌ವಾದ-ಲೆನಿನಿಸಂ ಎಂದು ಪ್ರಚಾರಗೊಳಿಸಿದರು, ಆದ್ದರಿಂದ ಅವರ ಸ್ವಂತ ನೀತಿಗಳನ್ನು ಸ್ಟಾಲಿನಿಸಂ ಎಂದು ಕರೆಯಲಾಗುತ್ತದೆ.<ref>Brackman, Roman (2001). The Secret File of Joseph Stalin: A Hidden Life. London and Portland: Frank Cass Publishers.</ref>
 
==ಜೀವನ ವಿವರ==
*ಸ್ಟಾಲಿನ್, ಜೋಸೆಫ್ 1879 ರಿಂದ 1953 ವರೆಗಿನ ಕಾಲ, ಯೂನಿಯನ್ ಆಫ್ ಸೋಷಿಯಲಿಸ್ಟ್ ಸೋವಿಯತ್ ರಿಪಬ್ಲಿಕ್‍ನ (ಯು.ಎಸ್.ಎಸ್.ಆರ್.) ಸರ್ವಾಧಿಕಾರಿ . ಇವನು ಜಾರ್ಜಿಯಾದ ಗೋರಿ ಎಂಬಲ್ಲಿ 1879 ಡಿಸೆಂಬರ್ 21ರಂದು ಜನಿಸಿದ. ತಂದೆ ವಿಸೊರಿನ್ ಐವಾನೊವಿಚ್, ತಾಯಿ ಎಕ್ತರಿನ ಗೆಹ್ಲಾಜ್. ಇವನ ಮೂಲ ಹೆಸರು ಐವೊಸಿಫ್ ವಿಸರಿಯೊನವಿಚ್ ಜುಗಾಷ್‍ವಿಲಿ. 1913ರಲ್ಲಿ ಸ್ಟಾಲಿನ್ ಎಂದು ತನ್ನ ಹೆಸರನ್ನು ಬದಲಿಸಿಕೊಂಡ. ರಷ್ಯನ್ ಭಾಷೆಯಲ್ಲಿ ಸ್ಟಾಲಿನ್ ಎಂದರೆ ಕಬ್ಬಿಣ ಎಂದರ್ಥ. ಕಡುಬಡತನದಲ್ಲಿ ಬೆಳೆದ ಇವನು ಚರ್ಚ್‍ನ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ. ಧರ್ಮಾಧಿಕಾರಿಯಾಗಬೇಕೆಂಬುದು ಇವನ ಅಪೇಕ್ಷೆಯಾಗಿತ್ತು. ಜಾರ್ಜಿಯನ್ ಆರ್ಥೊಡಾಕ್ಸ್ ಚರ್ಚ್‍ನಲ್ಲಿ ಅಧ್ಯಯನ ಕೈಗೊಂಡ. ಆದರೆ ರಷ್ಯದಲ್ಲಿ ಸಂಭವಿಸಿದ ಅನೇಕ ಘಟನೆಗಳು ಇವನನ್ನು ಕ್ರಾಂತಿಕಾರಿಯಾಗಿ ರೂಪಿಸಿದವು. ಅನೇಕ ಬಾರಿ ಬಂಧನಕ್ಕೊಳಗಾಗಿ ಸೆರೆಮನೆವಾಸ ಅನುಭವಿಸಿದ. ಗಡೀಪಾರು ಶಿಕ್ಷೆಗೂ ಒಳಗಾಗಿದ್ದ. ಇವನ ಹೆಂಡತಿ ನಡೇಸ್ಥ ಅಲ್ಲಿಲುಯೆವ.
"https://kn.wikipedia.org/wiki/ಜೋಸೆಫ್_ಸ್ಟಾಲಿನ್" ಇಂದ ಪಡೆಯಲ್ಪಟ್ಟಿದೆ