ಸಂಯುಕ್ತ ರಾಷ್ಟ್ರ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[File:Flag of the United Nations.svg|thumb|ವಿಶ್ವಸಂಸ್ಥೆಯ ಧ್ವಜ]]
 
'''ಸಂಯುಕ್ತ ರಾಷ್ಟ್ರ ಸಂಸ್ಥೆ''' (ಅಥವಾ '''ವಿಶ್ವಸಂಸ್ಥೆ''') ೧೯೪೫ರಲ್ಲಿ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. [[ಎರಡನೆ ವಿಶ್ವ ಯುದ್ಧ|ಎರಡನೆ ವಿಶ್ವ ಯುದ್ಧದ]] ನಂತರ ಯುದ್ಧ ವಿಜಯಿ ದೇಶಗಳಾದ [[ಫ್ರಾನ್ಸ್]], [[ಯು.ಎಸ್.ಎ.]], [[ಚೀನಾ]], [[ಸೋವಿಯಟ್ ಸಂಸ್ಥಾನ]] ಮತ್ತು [[ಯು.ಕೆ.]] ದೇಶಗಳ ಪ್ರತಿನಿಧಿಗಳು ಈ ಸಂಸ್ಥೆಯ ರೂಪರೇಖೆಗಳನ್ನು ಸ್ಥಾಪಿಸಿದರು. ನಂತರ, [[ಜೂನ್ ೨೬]], [[೧೯೪೫]]ರಲ್ಲಿ ೫೧ ರಾಷ್ಟ್ರಗಳು ಒಂದುಗೂಡಿ ಈ ಸಂಸ್ಥೆಯ ಸ್ಥಾಪನೆಯನ್ನು ಅಂಗೀಕರಿಸಿದರು. ೨೦೦೬ ರ ಜುಲೈ ೩ ರ ಪಟ್ಟಿಯಂತೆ ವಿಶ್ವಸಂಸ್ಥೆಯಲ್ಲಿ ಈ ಕೆಳಕಂಡ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದವು.
==ವಿಶ್ವಸಂಸ್ಥೆಯ ಹುಟ್ಟು==
*ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆ(ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್). 1945 ಅಕ್ಟೋಬರ್ 24 ರಂದು ಅಧಿಕೃತವಾಗಿ ಸ್ಥಾಪಿತವಾಯಿತು. ಒಂದನೆಯ ಮಹಾಯುದ್ಧದ ಅನಂತರ ಸ್ಥಾಪಿಸ ಲಾಗಿದ್ದ ಲೀಗ್ ಆಫ್ ನೇಷನ್ಸ್‍ನ(ರಾಷ್ಟ್ರ ಸಂಘ) ವಿಫಲತೆ ಹಾಗೂ ಎರಡನೆಯ ಮಹಾಯುದ್ಧದ ಘೋರ ಪರಿಣಾಮಗಳನ್ನರಿತು ಮುಂದೆ ಯುದ್ಧಗಳಾಗುವುದನ್ನು ತಡೆಯಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ ಮಾನವಜನಾಂಗದ ಜೀವನಮಟ್ಟ ಸುಧಾರಿಸುವ ಧ್ಯೇಯದೊಂದಿಗೆ ಇದನ್ನು ಸ್ಥಾಪಿಸಲಾಯಿತು. ಇಂಗ್ಲೆಂಡಿನ ಪ್ರಧಾನಿ ಚರ್ಚಿಲ್, ಅಮೆರಿಕದ ಅಧ್ಯಕ್ಷ ರೂಸ್‍ವೆಲ್ಟ್ ಹಾಗೂ ರಷ್ಯದ ಅಧ್ಯಕ್ಷ ಸ್ಟಾಲಿನ್ ಇದರ ಪ್ರಮುಖ ರೂವಾರಿಗಳು. ಇದರ ತಾತ್ಕಾಲಿಕ ಕೇಂದ್ರ ಕಚೇರಿ ಲೇಕ್‍ಸಕ್ಸಸ್ ಪ್ರದೇಶದಲ್ಲಿತ್ತು, ಅನಂತರ ಜಾನ್ ಡಿ.ರಾಕ್‍ಫೆಲ್ಲರ್ ಎಂಬ ಶ್ರೀಮಂತ ವಿಶಾಲ ನಿವೇಶನವನ್ನು ನ್ಯೂಯಾರ್ಕಿನ ಮ್ಯಾನ್‍ಹಟನ್‍ನಲ್ಲಿ ನೀಡಿದಾಗ ಕಚೇರಿಯನ್ನು ಇಲ್ಲಿಗೆ ವರ್ಗಾಯಿಸ ಲಾಯಿತು(1951). ಇಂಗ್ಲಿಷ್, ಅರೇಬಿಕ್, ಫ್ರೆಂಚ್, ಸ್ಪ್ಯಾನಿಷ್, ರಷ್ಯನ್ ಹಾಗೂ ಚೀನಿ ಇದರ ಅಧಿಕೃತ ಭಾಷೆಗಳು. ಪ್ರಸ್ತುತ ವಿಶ್ವಸಂಸ್ತೆಯಲ್ಲಿ 188 ಸದಸ್ಯ ರಾಷ್ಟ್ರಗಳಿವೆ.