ಸುಮಿತ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೬ ನೇ ಸಾಲು:
ಪ್ರತಿಭಾವಂತ ನಟ '''[[ಶಿವಕುಮಾರ್]]''' ಅವರೊಂದಿಗೆ '''ಕಣ್ಣನ್ ಒರು ಕೈ ಕುಳಂದೈ'''(೧೯೭೮), '''ಚಿಟ್ಟುಕುರುವಿ'''(೧೯೭೮), '''ಕಡವುಳ್ ಅಮೈತ್ತ್ ಮೇಡೈ'''(೧೯೭೯), '''ಮುದಲ್ ಇರವು'''(೧೯೭೯) ಮತ್ತು '''ಮಂಜಳ್ ನಿಲಾ'''(೧೯೮೨) ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಪ್ರಬುದ್ಧ ಅಭಿನಯ ನೀಡಿದ ಸುಮಿತ್ರಾ ಮಲಯಾಳಂನ ಮೇರುನಟ '''[[ಪ್ರೇಮ್ ನಜೀರ್]]''' ಅವರೊಂದಿಗೆ '''ದುರ್ಗಾ'''(೧೯೭೪), '''ನೀಲಪೊಣ್ಣ್ಮಾನ್'''(೧೯೭೫), '''ಕಡಮಟ್ಟತಾಚನ್'''(೧೯೮೪) ಮತ್ತು '''ಸನ್ನಾಹಂ'''(೧೯೮೫) ಮುಂತಾದ ಮಲಯಾಳಂ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡೀದ್ದಾರೆ.
 
'''ಅವಳುಂ ಪೆಣ್ ದಾನೆ''' ಚಿತ್ರದ ಕನ್ನಡ ಅವತರಣಿಕೆಯಾದ '''[[ಮುಗಿಯದ ಕಥೆ]]'''(೧೯೭೬) ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಮಿತ್ರಾ '''[[ವಿಷ್ಣುವರ್ಧನ್]]''' ಅವರೊಂದಿಗೆ '''[[ಮಕ್ಕಳ ಸೈನ್ಯ]]'''(೧೯೮೦) ಮತ್ತು '''[[ಸತ್ಯಂ ಶಿವಂ ಸುಂದರಂ]]'''(೧೯೮೮) ಚಿತ್ರದಲ್ಲಿ ಅಪೂರ್ವ ಅಭಿನಯ ನೀಡಿದ್ದಾರೆ. ೧೯೮೦ರ ದಶಕದ ಮಧ್ಯದಿಂದ ಪೋಷಕ ಪಾತ್ರಗಳಿಗೆ ಸೀಮಿತರಾದ ಸುಮಿತ್ರಾ '''[[ರಾಮಾಚಾರಿ]]'''(೧೯೯೧) ಚಿತ್ರದಲ್ಲಿ ನಾಯಕನ ತಾಯಿಯಾಗಿ ನೀಡಿದ ಹೃದಯಸ್ಪರ್ಶಿ ಅಭಿನಯ ಕನ್ನಡ ಚಿತ್ರರಸಿಕರ ಮನಸೂರೆಗೊಂಡಿತ್ತು. '''ಕರ್ಣ'''(೧೯೮೬) ಮತ್ತು '''ಒಂದಾಗಿ ಬಾಳು'''(೧೯೮೯) ಚಿತ್ರದಲ್ಲಿ ನಾಯಕನ ವಾತ್ಸಲ್ಯಮಯಿ ಅತ್ತಿಗೆಯಾಗಿ ಪ್ರಶಂಸನೀಯ ಅಭಿನಯ ನೀಡಿದ ಸುಮಿತ್ರಾ '''[[ಗೋಪಿ ಕೃಷ್ಣ]]'''(೧೯೯೨) ಚಿತ್ರದಲ್ಲಿ ಮೋಹಕ ಅತ್ತೆಯಾಗಿ ಮಿಂಚಿದ್ದಾರೆ. '''[[ಶ್ರೀರಾಮಚಂದ್ರ]]'''(೧೯೯೨), '''[[ಕುರುಬನ ರಾಣಿ]]'''(೧೯೯೮), '''[[ಅಪ್ಪು (ಚಲನಚಿತ್ರ)|ಅಪ್ಪು]]'''(೨೦೦೦), '''[[ಅಭಿ]]'''(೨೦೦೩), '''[[ಮಿಲನ]]'''(೨೦೦೭), '''[[ಜಾಕಿ]]'''(೨೦೧೦), '''[[ಮೈನಾ]]'''(೨೦೧೩) ಸುಮಿತ್ರಾ ಪೋಷಕ ಪಾತ್ರದಲ್ಲಿ ನಟಿಸಿದ ಯಶಸ್ವಿ ಕನ್ನಡ ಚಿತ್ರಗಳು. '''ಅಗ್ನಿ ನಚತಿರಮ್'''(೧೯೮೮), '''ಚಿನ್ನ ತಂಬಿ'''(೧೯೯೧), '''ಸಿಂಗಾರವೇಲನ್'''(೧೯೯೨), '''ಸಿಂಗಂ'''(೨೦೧೦), '''ಸಿಂಗಂ ೨'''(೨೦೧೩) ಸುಮಿತ್ರಾ ಪೋಷಕ ನಟಿಯಾಗಿ ಅಭಿನಯಿಸಿದ ಪ್ರಮುಖ ತಮಿಳು ಚಿತ್ರಗಳಾಗಿವೆ.
 
ತಮ್ಮ ಸಹಜ ಸೌಂದರ್ಯ, ನೈಜ ಭಾವಪೂರ್ಣ ಅಭಿನಯದಿಂದ ದಕ್ಷಿಣ ಭಾರತದ ಚಿತ್ರರಸಿಕರ ಮೆಚ್ಚುಗೆ ಗಳಿಸಿರುವ ಸುಮಿತ್ರಾ ವೃತ್ತಿ ಜೀವನದಲ್ಲಿ ಅನೇಕ ಪ್ರಭಾವಶಾಲಿ ಪಾತ್ರಗಳನ್ನು ನಿರಾಯಾಸವಾಗಿ ನಿಭಾಯಿಸಿದ್ದಾರೆ. ದಕ್ಷಿಣ ಭಾರತದ ಪ್ರಖ್ಯಾತ ನಟರಾದ '''ಶಿವಾಜಿ ಗಣೇಶನ್''', '''ಪ್ರೇಮ್ ನಜೀರ್''', '''ಮಧು''', '''[[ರಜನೀಕಾಂತ್]]''', '''[[ಕಮಲ್ ಹಾಸನ್]]''', '''[[ವಿಷ್ಣುವರ್ಧನ್]]''', '''[[ರಾಜೇಶ್]]''', '''ಶಿವಕುಮಾರ್''', '''ವಿಜಯಕುಮಾರ್''', '''ಸುಕುಮಾರನ್''' ಮತ್ತು '''ಎಂ.ಜಿ.ಸೋಮನ್''' ಮುಂತಾದವರೊಂದಿಗೆ ನಾಯಕಿಯಾಗಿ ಅಭಿನಯಿಸಿರುವ ಸುಮಿತ್ರಾ '''[[ರಜನೀಕಾಂತ್]]''', '''[[ಕಮಲ್ ಹಾಸನ್]]''' ಮತ್ತು '''[[ವಿಷ್ಣುವರ್ಧನ್]]''' ಅವರಿಗೆ ತಾಯಿಯಾಗಿಯೂ ಅಭಿನಯಿಸಿದ ಹೆಗ್ಗಳಿಕೆಗೆ ಪಾತ್ರರು. '''ಎ.ಭೀಮ್ ಸಿಂಗ್''', '''ಕೆ.ಬಾಲಚಂದರ್''', '''ಎಸ್.ಪಿ.ಮುತ್ತುರಾಮನ್''', '''[[ಭಾರ್ಗವ]]''' ಮತ್ತು '''ಡಿ.ರಾಜೇಂದ್ರ ಬಾಬು''' ಮುಂತಾದ ಹೆಸರಾಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
"https://kn.wikipedia.org/wiki/ಸುಮಿತ್ರಾ" ಇಂದ ಪಡೆಯಲ್ಪಟ್ಟಿದೆ