ಹೆಚ್.ಆರ್.ನಾಗೇಶರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Sangappadyamani (ಚರ್ಚೆ) ರ 891889 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೬೯ ನೇ ಸಾಲು:
==='''ಸಂಯುಕ್ತ ಕರ್ನಾಟಕ'''===
[[ಚಿತ್ರ:Single_Photo.jpg|thumb|ಸುದ್ದಿ ಸಂಪಾದಕರ ಕುರ್ಚಿಯಲ್ಲಿ]]
*ಅದೇ ಸಮಯದಲ್ಲಿ ಹುಬ್ಬಳ್ಳಿಯ [[ಸಂಯುಕ್ತ ಕರ್ನಾಟಕ]] ಪತ್ರಿಕೆಯು [[ಬೆಂಗಳೂರು]] ಮುದ್ರಣವನ್ನು ಆರಂಭಿಸಲು ಇಚ್ಛಿಸಿತ್ತು. ಹುಬ್ಬಳ್ಳಿ ಪತ್ರಿಕೆಯನ್ನು ಬೆಂಗಳೂರು ಓದುಗರಿಗೆ ರುಚಿಸುವಂತೆ ರೂಪಿಸುವ ಹೊಣೆಗಾರಿಕೆ ಕೆ.ಶಾಮರಾವ್, ಸುರೇಂದ್ರ ಬಿ.ದಾನಿ ಹಾಗೂ ಹೆಚ್.ಆರ್. ನಾಗೇಶರಾವ್ ಅವರಿದ್ದ ಈ ಮೊದಲ ತಂಡದ ಮೇಲಿತ್ತು. ಕೆಲದಿನಗಳಲ್ಲಿ `[[ಜನಪ್ರಗತಿ]]' ಸಂಪಾದಕರಾಗಿದ್ದ ಬಿ.ಶ್ರೀನಿವಾಸ ಮೂರ್ತಿ, ಕವಿ [[ಅರ್ಚಕ ವೆಂಕಟೇಶ]], ಯುವ ಬರಹಗಾರ [[ಮತ್ತೂರು ಕೃಷ್ಣಮೂರ್ತಿ]] (ಮುಂದೆ [[ಲಂಡನ್]]ನ [[ಭಾರತೀಯ ವಿದ್ಯಾಭವನ]] ದ ಜವಾಬ್ದಾರಿ ಹೊತ್ತವರು), ಹೊಸತಾಗಿ ವೃತ್ತಿ ಆರಂಭಿಸಿದ [[ಎನ್.ವಿ.ಜೋಶಿ]] [[ಸಂಯುಕ್ತ ಕರ್ನಾಟಕ]]ಕ್ಕೆ ಸೇರ್ಪಡೆಯಾದರು. [[ಪ್ರಜಾವಾಣಿ]]ಯಲ್ಲಿದ್ದ [[ಖಾದ್ರಿ ಶಾಮಣ್ಣ]] [[ಸಂಕ]]ದ ಸುದ್ದಿ ಸಂಪಾದಕರಾಗಿ ನೇಮಕಗೊಂಡರು.
*ಸಹಾಯಕ ಸಂಪಾದಕರಾಗಿ [[`ಗ್ರಾಮಾಯಣ']] ಖ್ಯಾತಿಯ ಸಾಹಿತಿ [[ರಾವಬಹಾದ್ದೂರ]] ([[ಆರ್.ಬಿ.ಕುಲಕರ್ಣಿ]]) ನೇತೃತ್ವ ವಹಿಸಿಕೊಂಡರು. [[ಲೋಕ ಶಿಕ್ಷಣ ಟ್ರಸ್ಟ್]]ನ ಏಕಮೇವ ಟ್ರಸ್ಟಿಯಾಗಿದ್ದ [[ಗಾಂಧೀವಾದಿ]], [[ಸ್ವಾತಂತ್ರ್ಯ ಹೋರಾಟಗಾರ]], [[ಕಾಂಗ್ರೆಸ್ ರಾಜಕಾರಣಿ]] [[ರಂಗನಾಥ ದಿವಾಕರ]] ಪತ್ರಿಕೆಯ [[ಹುಬ್ಬಳ್ಳಿ]] ಹಾಗೂ [[ಬೆಂಗಳೂರು]] ಆವೃತ್ತಿಯ ಸಂಪಾದಕತ್ವ ವಹಿಸಿಕೊಂಡರು.
*[[ಹುಬ್ಬಳ್ಳಿ]] ಮತ್ತು [[ಬೆಂಗಳೂರು]] ಕೇಂದ್ರಗಳಿಂದ ಪ್ರಕಟವಾಗುವ ಏಕಮೇವ ಕನ್ನಡ ದಿನಪತ್ರಿಕೆಯೆಂಬ ಹೆಗ್ಗಳಿಕೆ [[ಸಂಕ]]ದ್ದಾಯಿತು. ಎರಡೂ ಕೇಂದ್ರಗಳ ನಡುವೆ [[ಟೆಲಿಪ್ರಿಂಟರ್]] ಸಂಪರ್ಕ ವ್ಯವಸ್ಥೆ ಜಾರಿಗೆ ಬಂದಿತು. [[ಉತ್ತರ ಕರ್ನಾಟಕ]] ಹಾಗೂ [[ಹಳೇ ಮೈಸೂರು]] ಪ್ರದೇಶಗಳನ್ನು ಬೆಸೆಯುವಲ್ಲಿ [[ಸಂಯುಕ್ತ ಕರ್ನಾಟಕ]] ಮಹತ್ವದ ಪಾತ್ರ ವಹಿಸಿತು. [[ರೋಟರಿ ಯಂತ್ರ]]ವನ್ನು ಮುದ್ರಣಕ್ಕೆ ಅಳವಡಿಸಿಕೊಂಡ ಮೊದಲ ಕನ್ನಡ ಪತ್ರಿಕೆಯೆಂಬ ಹೆಗ್ಗಳಿಕೆಯೂ [[ಸಂಯುಕ್ತ ಕರ್ನಾಟಕ]] ಪತ್ರಿಕೆಯದಾಯಿತು.
*[[ದೆಹಲಿ]]ಯ [[ಪ್ರೆಸ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯ]]ದಲ್ಲಿ ಮುದ್ರಣ ಮಾಧ್ಯಮದ ಬಗ್ಗೆ ಪ್ರೌಢ ತರಬೇತಿ ಪಡೆದ ನಂತರ ನಾಗೇಶರಾವ್ ಅವರು ಪತ್ರಿಕೆಯ ಮುಖ್ಯ ಉಪಸಂಪಾದಕರಾದರು. ಅವರು ಆಗ ಪತ್ರಿಕೆಗೆ ಬರೆಯುತ್ತಿದ್ದ [[ಚಿಟಿಕೆ ಚಪ್ಪರ]] ನಿತ್ಯ ಟೀಕಾಂಕಣ ಬಹು ಜನಪ್ರಿಯವಾಗಿತ್ತು. ಕೆಲದಿನಗಳಲ್ಲಿ ಉಸ್ತುವಾರಿ ಸುದ್ದಿ ಸಂಪಾದಕರಾಗಿ ಪತ್ರಿಕೆಯ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ನಂತರ ಸುದ್ದಿ ಸಂಪಾದಕ ಹುದ್ದೆ ಅವರದಾಯಿತು.
*ಸಂಪಾದಕೀಯ ಬರಹಗಳ ಜತೆಗೆ ಯುವ ಪತ್ರಕರ್ತರ ತಂಡವನ್ನು ಕಟ್ಟುವ ಹೊಣೆಗಾರಿಕೆ ನಾಗೇಶರಾವ್ ಅವರದಾಗಿತ್ತು. ಹಿಂದಿನ ಅಚ್ಚು-ಮೊಳೆ ಜೋಡಣೆಯ ಪುಟ ಕಟ್ಟುವ ದಿನಗಳಲ್ಲಿ ಅತಿ ಕಡಿಮೆ ಸಮಯದಲ್ಲಿ ಪುಟ ವಿನ್ಯಾಸ ಮಾಡುವವರೆಂಬ ಹೆಗ್ಗಳಿಕೆ ಅವರದಾಗಿತ್ತು. ಮುಂಗಡ ಪತ್ರ ಮಂಡಣೆಯಾದ ಮರುದಿನದ ಪುಟ ವಿನ್ಯಾಸ ಅವರದೇ ಆಗಿರುತ್ತಿತ್ತು. ಸಾಹಿತ್ಯ, ಕ್ರೀಡೆ, ಸಿನಿಮಾ, ರಾಜಕೀಯ ವಿಷಯಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದ ಅವರು ಸಂದರ್ಭಕ್ಕನುಸಾರವಾಗಿ ವಿಶೇಷ ಲೇಖನಗಳನ್ನು ಸಿದ್ಧಪಡಿಸುತ್ತಿದ್ದರು.
*ಕಾಲೇಜು ದಿನಗಳಿಂದಲೂ ವಿಜ್ಞಾನ ವಿದ್ಯಾರ್ಥಿ ಹಾಗೂ ವಿಜ್ಞಾನ ಬರಹಗಾರರಾಗಿದ್ದ ನಾಗೇಶರಾವ್ ಸ್ವತಃ ವಿಜ್ಞಾನ ಲೇಖನಗಳನ್ನು ಬರೆಯುವದರ ಜತೆಗೆ ವಿಜ್ಞಾನಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ವಿಶೇಷ ಪ್ರಾಶಸ್ತ್ಯ ನೀಡುತ್ತಿದ್ದರು, ಹಾಗೆಯೇ ವಿಜ್ಞಾನ ಲೇಖಕರನ್ನು ಪ್ರೋತ್ಸಾಹಿಸುತ್ತಿದ್ದರು. ಇಂಥದೊಂದು ಪ್ರೇರಣೆಯಿಂದಲೇ ಅವರ ಮಗ [[ಹಾಲ್ದೊಡ್ಡೇರಿ ಸುಧೀಂದ್ರ]] ವಿಜ್ಞಾನ ಬರಹದಲ್ಲಿ ತೊಡಗುವಂತಾಯಿತು.
*ವೈಯಕ್ತಿಕ ಕಾರಣಗಳಿಂದ [[ರಂಗನಾಥ ದಿವಾಕರ]] ಅವರು [[ಸಂಯುಕ್ತ ಕರ್ನಾಟಕ]] ಪತ್ರಿಕೆಯನ್ನು ರಾಜಕಾರಣಿ [[ಎಂ.ವೈ.ಘೋರ್ಪಡೆ]] ಅವರಿಗೆ ಮಾರಾಟ ಮಾಡಿದರು. ಆ ಸಮಯದಲ್ಲಿ [[ಪತ್ರಿಕೆಯ ಸಂಪಾದಕೀಯ ತಂಡದಲ್ಲಿ ಕೆಲವೊಂದು ಬದಲಾವಣೆಗಳಾದವು]]. [[ಪ್ರಜಾವಾಣಿ]]ಯಿಂದ ಬಂದ [[ಖಾದ್ರಿ ಶಾಮಣ್ಣ]] ಪ್ರಧಾನ ಸಂಪಾದಕರಾಗಿ, [[ಎಸ್.ವಿ.ಜಯಶೀಲರಾವ್]] ಜಂಟಿ ಸಂಪಾದಕರಾಗಿ ಹಾಗೂ [[ಕೆ.ಜನಾರ್ದನ]] ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ನೇಮಕಗೊಂಡರು.
*[[ಕೆ.ಶಾಮರಾವ್]] ರಾಜೀನಾಮೆ ನೀಡಿ, [[ಲೋಕ ಶಿಕ್ಷಣ ಟ್ರಸ್ಟ್]]ನ ಆಸ್ತಿಯ ಏಕಪಕ್ಷೀಯ ಪರಭಾರೆಯ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋದರು. ಇತ್ತ ಸುರೇಂದ್ರ ಬಿ.ದಾನಿಯವರನ್ನು ಹುಬ್ಬಳ್ಳಿಗೆ ವರ್ಗಾಯಿಸಿ, ಹುಬ್ಬಳ್ಳಿಯಲ್ಲಿದ್ದ ಮತ್ತೀಹಳ್ಳಿ ನಾಗರಾಜರಾವ್ ಅವರನ್ನು ಬೆಂಗಳೂರಿಗೆ ತರುವ ನಿರ್ಧಾರಗಳಾದವು. ಮುಂದೆ ಪತ್ರಿಕೆಯನ್ನು ನಡೆಸಲಾಗದೆಯೆ ಉದ್ಯಮಿ ಹಾಗೂ ರಾಜಕಾರಣಿ [[ಹೆಚ್.ಆರ್.ಬಸವರಾಜ್]] ಅವರಿಗೆ ಪತ್ರಿಕೆಯನ್ನು ಮಾರಾಟ ಮಾಡಲಾಯಿತು.
*ಲೇಖಕ [[ಪ.ಸು.ಭಟ್ಟ]] ಸಂಪಾದಕತ್ವವನ್ನು ವಹಿಸಿಕೊಂಡರು, [[ಕೆ.ಎಸ್.ರಾಮಕೃಷ್ಣಮೂರ್ತಿ]]ಯವರ ನಿಧನದಿಂದ ತೆರವಾಗಿದ್ದ [[ಕನ್ನಡಪ್ರಭ]] ಸಂಪಾದಕರ ಸ್ಥಾನವನ್ನು [[ಖಾದ್ರಿ ಶಾಮಣ್ಣ]] ತುಂಬಿದರು. ೧೯೮೦ರ ಜನವರಿ ೩೧ರಂದು ಏಕಾಏಕಿ ಬೆಂಗಳೂರು ಮುದ್ರಣವನ್ನು ಮುಚ್ಚುವ ನಿರ್ಧಾರವನ್ನು ಬಸವರಾಜ್ ತೆಗೆದುಕೊಂಡರು. ಅತ್ತ [[ಕೆ.ಶಾಮರಾವ್]] ನ್ಯಾಯಾಲಯದ ಮೂಲಕ ಕಚೇರಿಯ ಪುನಾರಂಭಕ್ಕೆ ಪ್ರಯತ್ನ ಪಡುತ್ತಿದ್ದರು.
* ಇತ್ತ್ತ ಹೆಚ್.ಆರ್.ನಾಗೇಶರಾವ್ [[ಸಂಯುಕ್ತ ಕರ್ನಾಟಕ]] ನೌಕರರ ಸಂಘದ ಮೂಲಕ ಆವೃತ್ತಿಯ ಪುನಾರಂಭಕ್ಕೆ ಸಂಘಟಿತ ಹೋರಾಟ ನಡೆಸಿದರು. [[ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ]]ವೂ ತನ್ನ ಬೆಂಬಲ ಸೂಚಿಸಿತು. ಈ ಎಲ್ಲ ಪ್ರಯತ್ನಗಳೊಂದಿಗೆ ಅಂದು ಮುಖ್ಯಮಂತ್ರಿಯಾಗಿದ್ದ [[ಆರ್.ಗುಂಡೂರಾವ್]] ಅವರ ನೆರವಿನಿಂದ ಹನ್ನೊಂದು ತಿಂಗಳ ನಂತರ ಬೆಂಗಳೂರು ಮುದ್ರಣ ಆರಂಭವಾಯಿತು.
*[[ಕೊಡಗು]] ಜಿಲ್ಲೆಯ [[ಶಕ್ತಿ]] [[ದಿನಪತ್ರಿಕೆ]]ಯ ಸಂಪಾದಕರಾಗಿದ್ದ [[ಬಿ.ಎಸ್.ಗೋಪಾಲಕೃಷ್ಣ]] ಸಂಪಾದಕರಾಗಿ ನೇಮಕಗೊಂಡರು. ಅಂತಿಮ ತೀರ್ಪು ಹೊರಬರುವವರೆಗೆ ನ್ಯಾಯಾಲಯ ತನ್ನ ರಿಸೀವರ್ ಮೂಲಕ [[ಲೋಕ ಶಿಕ್ಷಣ ಟ್ರಸ್ಟ್]]ನ ಆಡಳಿತದ ಹೊಣೆಗಾರಿಕೆ ಹೊತ್ತುಕೊಂಡಿತು. [[ಎಸ್.ವಿ.ಜಯಶೀಲರಾವ್]] ಜಂಟಿ ಸಂಪಾದಕರಾಗಿ, ಹೆಚ್.ಆರ್.ನಾಗೇಶರಾವ್ ಸುದ್ದಿ ಸಂಪಾದಕರಾಗಿ ಪತ್ರಿಕೆಯ ಪುನರುತ್ಥಾನಕ್ಕೆ ಶ್ರಮಿಸಿದರು.
* [[ಬಿ.ಎಸ್.ಗೋಪಾಲಕೃಷ್ಣ]] ಅವರ ನಿರ್ಗಮನವಾಯಿತು, [[ಎಸ್.ವಿ.ಜಯಶೀಲರಾವ್]] ಅವರು [[ಮುಂಜಾನೆ]] ದಿನಪತ್ರಿಕೆಯ ಸಂಪಾದಕರಾದರು. ೧೯೮೩ರಲ್ಲಿ [[ಎಂ.ಆರ್.ಸಿದ್ಧಾಪುರ]] ಸಂಪಾದಕರಾಗಿ ಹುಬ್ಬಳ್ಳಿಯಲ್ಲಿ ಅಧಿಕಾರವಹಿಸಿಕೊಂಡರು. ಹೆಚ್.ಆರ್.ನಾಗೇಶರಾವ್ ಬೆಂಗಳೂರು ಆವೃತ್ತಿಯ ಸಹಾಯಕ ಸಂಪಾದಕ, ಮುದ್ರಕ ಹಾಗೂ ಪ್ರಕಾಶಕರಾಗಿ ನಿಯೋಜಿತರಾದರು. ೧೯೮೪ರಲ್ಲಿ ನಾಗೇಶರಾವ್ ಬೆಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕರಾದರು. ೩೧ ಅಕ್ಟೋಬರ್ ೧೯೮೫ರಂದು ಸೇವಾನಿವೃತ್ತರಾದರು.
 
===ದಿನಚರಿ ನಿರ್ವಹಣೆ===