"ಬಿ.ಎಸ್.ಪಾಟೀಲ(ಮನಗೂಳಿ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

/* ಅತ್ಯಾಕರ್ಷಕ ಮನೆ *
No edit summary
(/* ಅತ್ಯಾಕರ್ಷಕ ಮನೆ *)
 
ಪಾಟೀಲರು ೨೦೦೪ರಲ್ಲಿ [[ವಿಜಯಪುರ ಲೋಕಸಭಾ ಕ್ಷೇತ್ರ]]ದಿಂದ ಸ್ಪರ್ಧಿಸಿ ಪರಾಜಿತರಾದರು.<ref>http://www.indiavotes.com/alliance/partyContested/5/1/14/43</ref>
==ಅತ್ಯಾಕರ್ಷಕ ಮನೆ==
 
ಮನಗೂಳಿ ಮುತ್ಯಾ, ಮನಗೂಳಿ ಗೌಡರು ಎಂದೇ ಅಭಿಮಾನಿಗಳು ಅವರನ್ನು ಕರೆಯುತ್ತಾರೆ. ಗೌಡರು 1937ರಲ್ಲಿ ಈ ಮನೆ ನಿರ್ಮಿಸಿದರು. ನಂತರ ಬಿ.ಎಸ್.ಪಾಟೀಲರು ನವೀಕರಣಗೊಳಿಸುತ್ತಾ ಬಂದರು.
 
ಮನೆ ಚಾವಣಿ ಮೇಲೆ ಮಣ್ಣು, ಕೆಳಗೆ ಆಕರ್ಷಕ ಕೆತ್ತನೆ, ಕಟ್ಟಿಗೆ ಮೂಲಕ ಮನೆ ನಿರ್ಮಾಣಗೊಂಡಿದೆ. ಮನೆಗೆ ಉದ್ದನೆ ಗೋಡೆ ಜತೆಗೆ ಪೂರ್ವ ದಿಕ್ಕಿಗೆ ಅಗಲ ಮತ್ತು ಎತ್ತರವಾದ ಪ್ರವೇಶ ಬಾಗಿಲು ಮನೆಯ ಪ್ರಮುಖ ಆಕರ್ಷಣೆ. ಒಳ ಪ್ರವೇಶಿಸುತ್ತಿದ್ದಂತೆ ಮತ್ತೊಂದು ಬಣ್ಣ ಬಳಿದುಕೊಂಡ ಪ್ರವೇಶ ದ್ವಾರ ಎಲ್ಲರನ್ನೂ ಸ್ವಾಗತಿಸುತ್ತದೆ.
 
ಚೌಕಾಕಾರದ ಮನೆ ಒಳಾಂಗಣದ ಪಡಸಾಲೆ 30*30 ಅಳತೆಯಲ್ಲಿದೆ. ಇದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೋಣೆಗಳಿವೆ. ಒಳಾಂಗಣಕ್ಕೆ ಸಾಕಷ್ಟು ಬೆಳಕು ಬೀಳುವ ವ್ಯವಸ್ಥೆ ಇಲ್ಲಿದೆ. ಒಳಾಂಗಣದ ಚಾವಣಿ ಮೇಲಿನ ಮಳೆ ನೀರು ವಿಶಾಲವಾದ ಜಾಗೆಯಲ್ಲಿ ಬಂದು ಬೀಳುತ್ತವೆ. ತೂಗು ಮಂಚ, ಆಸನಗಳ ವ್ಯವಸ್ಥೆಯಿಂದ ಮನೆ ತನ್ನ ಅಂದ ಹೆಚ್ಚಿಸಿಕೊಂಡಿದೆ.
 
ಬಿ.ಎಸ್.ಪಾಟೀಲರು ಬಳಸುತ್ತಿದ್ದ ಕಚೇರಿ ಈಗ ಅವರ ಪುತ್ರ ಅಪ್ಪುಗೌಡರು ಬಳಸುತ್ತಿದ್ದಾರೆ. ಮನೆಯಲ್ಲಿ ನಾನಾ ರಾಜಕೀಯ ವ್ಯಕ್ತಿಗಳ ಭಾವಚಿತ್ರಗಳು, ರಾಜಕೀಯ ಬೆಳವಣಿಗೆಯ ಭಾವಚಿತ್ರಗಳ ಅಲ್ಬಂ ನೋಡುಗರನ್ನು ಸೆಳೆಯುತ್ತದೆ.
 
ಮನೆಯ ಪ್ರವೇಶ ದ್ವಾರದ ಎಡ ಮತ್ತು ಬಲಕ್ಕೆ ವಿಶಾಲವಾದ ಎತ್ತರದ ಎರಡು ಕಟ್ಟೆಗಳಿವೆ. ಕೆಳಗೆ ಧಾನ್ಯ ಸಂಗ್ರಹದ ಹಗೆಗಳಿವೆ. ಜಾನುವಾರು ಕಟ್ಟಲು ಪ್ರತ್ಯೇಕ ಜಾಗೆ. ಜನರೊಂದಿಗೆ ಬೆರೆತು ಮಾತನಾಡಲು ಮತ್ತೊಂದು ವಿಶೇಷ ಕೊಠಡಿ ವ್ಯವಸ್ಥೆ ಇಲ್ಲಿದೆ.
 
ವಿಶಾಲ ಅಡುಗೆ ಮನೆ, ಅತಿಥಿ ಗೃಹ, ವಿಶಾಲ ಮೈದಾನ ಇದೆ. ಮನೆ ಪ್ರವೇಶಿಸುತ್ತಿದ್ದಂತೆ ಸುಂದರವಾಗಿ ಕೆತ್ತಿದ ಗಣಪತಿ ಬಹು ಆಕರ್ಷಿತವಾಗಿ ಕಾಣುತ್ತದೆ. ಚಾವಣಿ ಕಟ್ಟಿಗೆ ಕೆಳಗೆ ಮನೆ ಮಂದಿಯ ಭಾವಚಿತ್ರಗಳನ್ನು ಹಾಕಲಾಗಿದೆ. ಒಂದೂವರೆ ಎಕರೆ ಜಾಗೆಗಿಂತ ಅಧಿಕ ಸ್ಥಳದಲ್ಲಿ ಭವ್ಯವಾಗಿ ನಿರ್ಮಾಣವಾದ ಈ ಮನೆಯ ಕೆಲ ಜಾಗೆಯನ್ನು ದಕ್ಷಿಣಕ್ಕೆ ಸೋಮೇಶ್ವರ ದೇವಸ್ಥಾನಕ್ಕೆ ಹಾಗೂ ಉತ್ತರಕ್ಕೆ ಮನೆ ಗುರುಗಳಿಗೆ ಬಿಟ್ಟು ಕೊಟ್ಟಿದ್ದಾರೆ. 2011ರಲ್ಲಿ ಮತ್ತೆ ನವೀಕರಣಗೊಂಡ ಮನೆ ಮತ್ತಷ್ಟು ಆಕರ್ಷಿಸುತ್ತಿದೆ.
 
ಬಿ.ಎಸ್.ಪಾಟೀಲ(ಮನಗೂಳಿ)ರ ತಂದೆ ಸೋಮನಗೌಡರು ನಿರ್ಮಿಸಿದ ಮನೆ ಕಟ್ಟಡ ಮಾದರಿ ಅಂದವಾಗಿದೆ. ಮನೆಗೆ ಸುಣ್ಣ ಬಣ್ಣ ಮಾಡಿಸಲು ಅಪಾರ ಹಣ ಖರ್ಚಾಗುತ್ತದೆ. ವಿಶಾಲ ಮನೆ ಇದ್ದರೂ ಆಳುಗಳು ಶುಚಿ ಕೆಲಸ ಮಾಡುವುದರಿಂದ ನಮಗೆ ಶುಚಿತ್ವದ ಬಗ್ಗೆ ತೊಂದರೆ ಎನಿಸಿಲ್ಲ.ಬಿ.ಎಸ್.ಪಾಟೀಲರು ಜನರ ಸಮಸ್ಯೆಗಳಿಗೆ ಇದೇ ಮನೆಯಲ್ಲಿ ಪರಿಹರಿಸಿ ಕಳುಹಿಸುತ್ತಿದ್ದರು.<ref>https://vijaykarnataka.indiatimes.com/district/vijayapura/-/articleshow/45660883.cms</ref>
 
==ನಿಧನ==
 
೪,೭೭೮

edits

"https://kn.wikipedia.org/wiki/ವಿಶೇಷ:MobileDiff/987400" ಇಂದ ಪಡೆಯಲ್ಪಟ್ಟಿದೆ