ಸದಸ್ಯ:Lokesha Kunchadka/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೭ ನೇ ಸಾಲು:
ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡದ್ದು ಬಿಟ್ಟರೆ ಈ ಹೋರಾಟಗಾರರ ಗುಂಪು ಯಾವುದೆ ಸಂಪತ್ತನ್ನು ದೋಚಲಿಲ್ಲ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಳ್ಳುವ ತನಕ ಬ್ರಿಟಿಷರಿಗೆ ಹೋರಾಟಕ್ಕಾಗಿ ಜನರ ಗುಂಪೊಂದು ಸಂಘಟಿತವಾದದ್ದು ತಿಳಿಯಲಿಲ್ಲ. ಖಜಾನೆಯನ್ನು ವಶಪಡಿಸಿಕೊಂಡಾಗ ಕೂಡ ದರೋಡೆ ಎಂದು ತಿಳಿದರೇ ಹೊರತು, ಅಲ್ಲೊಂದು ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಸಿದ್ಧವಾದುದ್ದು ಬ್ರಿಟಿಷರ ಗಮನಕ್ಕೆ ಬರಲಿಲ್ಲ. ಅಷ್ಟರ ಮಟ್ಟಿಗಿನ ಮುಂಜಾಗರೂಕತೆಯನ್ನು ವಹಿಸಲಾಗಿತ್ತು. ಬೆಳ್ಳಾರೆಯ ಹಿರಿಯರ ಪ್ರಕಾರ ಪುತ್ತೂರು, ಸುಬ್ರಹ್ಮಣ್ಯ ಹಾಗೂ ಇತರೆಡೆಗೆ ದಂಡು ಸಾಗುವಾಗ ಮದುವೆ ದಿಬ್ಬಣದ ರೂಪದಲ್ಲಿ ಸಾಗುತ್ತಿತ್ತು. ಹೀಗೆ ಬ್ರಿಟಿಷ್ ಅಧಿಕಾರಿಗಳಿಗೆ ಚಳ್ಳೆಹಣ್ಣನ್ನು ತಿನ್ನಿಸಿದ್ದರು. ಈ ಹೋರಾಟಗಾರರು ತೆಂಗಿನ ಮಡಲಿನ ಕೊತ್ತಲಿಂಗೆಯ ಮಂಡೆಯನ್ನು ಆಯುಧವಾಗಿ ಉಪಯೋಗಿಸಿಕೊಂಡಿದ್ದರು. ಈ ಹೋರಾಟಗಾರರ ಕೆಚ್ಚೆದೆಗೆ ಸಾಹಸಕ್ಕೆ ಸಾಕ್ಷಿಯಾದ ಬೆಳ್ಳಾರೆಯ ಕೋಟೆ ಈಗ ಕೂಡ ಇದೆ. ಇವರು ವಶಪಡಿಸಿಕೊಂಡ ಬ್ರಿಟಿಷರ ಖಜಾನೆ ಕೂಡ ಇದೆ. ಬೆಳ್ಳಾರೆಯ ಕೋಟೆಯಲ್ಲಿ ಸೇರಿಕೊಂಡು. ಈ ಪ್ರದೇಶವನ್ನು ಬ್ರಿಟಿಷರ ಖಜಾನೆ ಇದ್ದ ಬಂಗಲೆಯ ಕಾರಣಕ್ಕೆ ಇಲ್ಲಿಗೆ ಬಂಗ್ಲೆಗುಡ್ಡೆ ಎಂಬ ಹೆಸರು ಬಂದಿದೆ. ಸ್ವತಂತ್ರ ಧ್ವಜ ಹಾರಾಡಿದ ಬೆಳ್ಳಾರೆಯ ಈ ಕೋಟೆಯನ್ನು ಸ್ಮಾರಕವಾಗಿ ರಕ್ಷಿಸಬೇಕಾಗಿದೆ .
==ಹೋರಾಟದಲ್ಲಿ ಭಾಗವಹಿಸಿದವರು==
* ಕೆದಂಬಾಡಿ ರಾಮ ಗೌಡ.
* ಗುಡ್ಡೆಮನೆ ಅಪ್ಪಯ್ಯ ಗೌಡ.
* ಕುಡಕಲ್ಲು ಪುಟ್ಟ ಗೌಡ
* ಕುಂಚಡ್ಕ ತಿಮ್ಮ ಗೌಡ
* ಕೋಲ್ಚಾರು ಕೂಸಪ್ಪ ಗೌಡ
* ಗುಂಡ್ಲ
* ದೇರಾಜೆ
* ಉಳುವಾರು
 
==ಪರಿಣಾಮ==
ಬೆಳ್ಳಾರೆಯ ಕೋಟೆಯಲ್ಲಿ ಕಲ್ಯಾಣ ಸ್ವಾಮಿಗೆ ಪಟ್ಟಕಟ್ಟುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡರು. ಕೊಡಗಿನ ಬೇರೆ ಬೇರೆ ಭಾಗಗಳಿಗೆ ನಿರೂಪ ಕಳಿಸಿ ಬೆಂಬಲ ಕೇಳಿದರು. ಬೆಳ್ಳಾರೆಯ ಬೀರಣ್ಣ ಬಂಟರ ನೇತೃತ್ವದಲ್ಲಿ ಒಂದು ಗುಂಪು ಸುಬ್ರಹ್ಮಣ್ಯ ಕಡೆಗೆ ಹೋಯಿತು. ‘ಕಂಚುಡ್ಕ ತಿಮ್ಮಗೌಡ ಹಾಗೂ ಕುಡಕಲ್ಲು ಪುಟ್ಟಗೌಡರ ನೇತೃತ್ವದಲ್ಲಿ ಸೈನ್ಯವನ್ನು ಕುಂಬಳೆ ಕಾಸರಗೋಡಿಗೆ ಕಳುಹಿಸಲಾಯಿತು. ಇನ್ನೊಂದು ತಂಡ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮತ್ತೊಂದು ತಂಡ ಉಪ್ಪಿನಂಗಡಿ ಬಿಸಲೆಗೆ ಹೋಯಿತೆಂದು’ . ಪುತ್ತೂರು, ಪಾಣೆ ಮಂಗಳೂರು ಮತ್ತು ಮಂಗಳೂರಿಗೆ ರಾಮಗೌಡ ಹಾಗೂ ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ದಂಡು ಹೊರಟಿತು. ಪುತ್ತೂರನ್ನು ವಶಪಡಿಸಿಕೊಂಡು ಪಾಣೆಮಂಗಳೂರಿಗೆ ಬಂದಾಗ ನಂದಾವರದ ಲಕ್ಷ್ಮಪ್ಪ ಬಂಗರಸನು ಕೂಡಿಕೊಂಡನು. 1837 ಎಪ್ರಿಲ್ 5ರಂದು ಮಂಗಳೂರನ್ನು ವಶಪಡಿಸಿಕೊಂಡು ಬಾವುಟಗುಡ್ಡದಲ್ಲಿ ಧ್ವಜ ಹಾರಿಸಿದರು ಇಲ್ಲಿ 13 ದಿನ ಆಡಳಿತ ನಡೆಸಿದರು.