ಶ್ರೀಶೈಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
infobox, cat, iw
೨೬ ನೇ ಸಾಲು:
==ಶ್ರೀಶೈಲದ ಇತಿಹಾಸ==
 
ಶ್ರೀಶೈಲದ ಇತಿಹಾಸವು ಅತ್ಯಂತ ವರ್ಣರಂಜಿತವಾದುದು . ದಕ್ಷಿಣ ಭಾರತದ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿ ಶ್ರೀಶೈಲವು ಇರುವುದರಿಂದ ,ಇಲ್ಲಿನ ಅಧಿಪತ್ಯಕ್ಕಾಗಿ ,ಅನೇಕ ರಾಜ ಮನೆತನಗಳ ನಡುವೆ ಸತತವಾಗಿ ಇತಿಹಾಸದುದ್ದಕ್ಕೂ ಸಂಗ್ರಾಮಗಳು ನಡೆದಿರುವ ಬಗ್ಗೆ ಮಾಹಿತಿ ಇದೆ .ಕ್ರಿ.ಶ. ೩ನೇ ಶತಮಾನದ ವರೆಗೆ ,[[ಗುಪ್ತರು]], [[ಶಾತವಾಹನರು]], [[ಮೌರ್ಯರು]]ಶ್ರೀಶೈಲ ಪ್ರದೇಶದಲ್ಲಿ ತಮ್ಮ ಆಡಳಿತವನ್ನು ನಡೆಸಿದರು .ನಂತರ ದಕ್ಷಿಣದ ಪ್ರಬಲ ಅರಸರಾದ ಪಲ್ಲವರ ವಶಕ್ಕೆ ಶ್ರೀಶೈಲದ ಅಧಿಪತ್ಯವು ಬಂದಿತು .ಅವರನ್ನು ಸೋಲಿಸಿ ಕದಂಬರು ೬ನೇ ಶತಮಾನದ ವೇಳೆಗೆ ಶ್ರೀಶೈಲವನ್ನು ತಮ್ಮ ಕೈವಶ ಮಾಡಿಕೊಂಡರು .೭ನೇ ಶತಮಾನದ ವೇಳೆಗೆ ಶ್ರೀಶೈಲವು ಚೋಳ ಸಾಮ್ರಾಜ್ಯದ ಭಾಗವಾಯಿತು .ಸುಮಾರು ಎಂಟನೇ ಶತಮಾನದ ವರೆಗೆ [[ಚೋಳ]]ರ ಅಧೀನದಲ್ಲಿದ್ದ ಶ್ರೀಶೈಲವು ,ನಂತರ [[ಚಾಲುಕ್ಯ#ಕಲ್ಯಾಣಿಯ ಚಾಲುಕ್ಯರು|ಕಲ್ಯಾಣಿ ಚಾಳುಕ್ಯರ ]] ವಶಕ್ಕೆ ಬಂದಿತು .ಚೋಳರು ಮತ್ತು ಚಾಳುಕ್ಯರ ನಡುವೆ ಶ್ರೀಶೈಲಕ್ಕಾಗಿ ಅನೇಕ ಕದನಗಳು ನಡೆದವು .ನಂತರ ಕಲ್ಯಾಣಿ ಚಾಳುಕ್ಯರನ್ನು ಹಿಮ್ಮೆಟ್ಟಿಸಿದ [[ರಾಷ್ಟ್ರಕೂಟರು]]ಶ್ರೀಶೈಲದ ಮೇಲೆ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದರು .
 
೧೧ ರಿಂದ ೧೪ನೇ ಶತಮಾನದವರೆಗೆ [[ಕಾಕತೀಯ ಅರಸರು]] ಶ್ರೀಶೈಲ ಪ್ರಾಂತ್ಯವನ್ನು ಆಳಿದರು .ಇವರ ಕಾಲದಲ್ಲಿ ,ಅನೇಕ ಜೀರ್ಣೋದ್ದಾರ ಕಾರ್ಯಕ್ರಮಗಳನ್ನು ಕೈಗೊಂಡರು. ದೇವಾಲಯದ ನಿತ್ಯ ಸೇವೆಗೆ , ಭೂಮಿ ಕಾಣಿಗಳು ಸಮರ್ಪಣೆಯಾದವು.೧೪ನೇ ಶತಮಾನದ ಕೊನೆಯ ವೇಳೆಗೆ [[ಕೊಂಡವೀಟಿ ರೆಡ್ಡಿಗಳ]] ಅಧಿಪತ್ಯಕ್ಕೆ ಶ್ರೀಶೈಲವು ಬಂದಿತು ಅವರ ಕಾಲದಲ್ಲಿಯೂ ಅನೇಕ ಅಭಿವೃದ್ದಿ ಕಾರ್ಯಗಳು ನಡೆದು , ಪಾತಾಳ ಗಂಗೆಗೆ ಮೆಟ್ಟಿಲುಗಳನ್ನು ಹಾಕಿಸಲಾಯಿತು .ಮಂಟಪಗಳನ್ನು ಕಟ್ಟಿಸಲಾಯಿತು . ನಂತರ ಶ್ರೀಶೈಲವು [[ವಿಜಯನಗರ ಸಾಮ್ರಾಜ್ಯದಸಾಮ್ರಾಜ್ಯ]] ಅಧೀನಕ್ಕೆ ಬಂದಿತು .ನಂತರ [[ಬಿಜಾಪುರ ಸುಲ್ತಾನರು]], [[ಔರಂಗಜೇಬ]] , ಅವರ ನಂತರ [[ಮರಾಠರು]] ನಂತರ[[ ಟಿಪ್ಪು ]], [[ಬ್ರಿಟಿಷರು]], ಈಗ ಟ್ರಷ್ಟಿಗಳ ಆಡಳಿತದಲ್ಲಿ ಶ್ರೀಶೈಲವು ಅಭಿವೃದ್ದಿ ಹೊಂದುತ್ತಿದೆ .
 
 
"https://kn.wikipedia.org/wiki/ಶ್ರೀಶೈಲ" ಇಂದ ಪಡೆಯಲ್ಪಟ್ಟಿದೆ