"ತಂಬುಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
→‎ತಯಾರಿಸುವ ವಿಧಾನ: ಕೊಂಡಿಯನ್ನು ಸೇರಿಸಿದೆ
ಚು
ಚು (→‎ತಯಾರಿಸುವ ವಿಧಾನ: ಕೊಂಡಿಯನ್ನು ಸೇರಿಸಿದೆ)
ಹೆಚ್ಚಿನೆಲ್ಲಾ ತಂಬುಳಿಗಳನ್ನು ತಯಾರಿಸುವ ವಿಧಾನ ಸಾಮಾನ್ಯವಾಗಿ ಒಂದೇ ರೀತಿಯದ್ದಾಗಿರುತ್ತದೆ. ಆದರೆ ಅವುಗಳು [[ಆರೋಗ್ಯ]]ದ ಮೇಲೆ ಬೀರುವ ಪರಿಣಾಮ ಹಾಗೂ [[ಔಷಧಿ|ಔಷಧೀಯ]] ಗುಣಗಳಲ್ಲಿ ವ್ಯತ್ಯಾಸವಿದೆ.
ಮೂಲ ವಸ್ತುಗಳ ಆಧಾರದ ಮೇಲೆ ತಂಬುಳಿ ಮಾಡುವ ವಿಧಾನವನ್ನು ಎರಡು ರೀತಿಯಾಗಿ ವಿಂಗಡಿಸಬಹುದು.<ref>http://archana-hebbar.blogspot.com/2009/10/blog-post.html</ref>
[[ಒಂದೆಲಗ]] ಹಾಗೂ ಮಾದಿರವನ್ನು ಹೊರತುಪಡಿಸಿ ಎಲ್ಲಾ [[ಎಲೆ|ಎಲೆಗಳು]], ಚಿಗುರುಗಳು[[ಚಿಗುರು]]ಗಳು, ಸಮೂಲ, [[ಕಾಳು|ಕಾಳುಗಳು]], [[ಹೂವು|ಹೂವುಗಳು]]ಗಳು ಹಾಗೂ ಸಿಪ್ಪೆ ಇವುಗಳ ತಂಬುಳಿ ತಯಾರಿಸುವ ವಿಧಾನ ಒಂದೇ ರೀತಿ. ಮೂಲವಸ್ತುವಿನೊಂದಿಗೆ ಒಂದು ಚಿಟಿಕೆ [[ಜೀರಿಗೆ]] ಹಾಗೂ [[ಮೆಣಸಿನಕಾಯಿ|ಒಣಮೆಣಸನ್ನು]] ಹಾಕಿ [[ತುಪ್ಪ]]ದಲ್ಲಿ ಹದವಾಗಿ ಹುರಿಯಬೇಕು. ಬಳಿಕ ಇವೆಲ್ಲವನ್ನೂ ಒಂದು ಮುಷ್ಟಿ [[ತೆಂಗಿನಕಾಯಿ]] ತುರಿಯೊಂದಿಗೆ ರುಬ್ಬಬೇಕು. ಈ ಮಿಶ್ರಣದೊಂದಿಗೆ ಒಂದು ಲೋಟ [[ಮಜ್ಜಿಗೆ]] ಸೇರಿಸಿ, ರುಚಿಗೆ ತಕ್ಕಷ್ಟು [[ಉಪ್ಪು]] ಹಾಕಬೇಕು. ಕೊನೆಯದಾಗಿ ಒಗ್ಗರಣೆ ಕೊಟ್ಟರೆ ರುಚಿಕರವಾದ ತಂಬುಳಿ ಸಿದ್ಧ.<ref>https://www.prajavani.net/article/%E0%B2%A4%E0%B2%82%E0%B2%AA%E0%B3%81-%E0%B2%A4%E0%B2%82%E0%B2%AC%E0%B3%81%E0%B2%B3%E0%B2%BF</ref>
ಉಳಿದಂತೆ ಎಲ್ಲಾ ಗೆಡ್ಡೆಗಳು, ಕಾಯಿಗಳು ಹಾಗೂ [[ಒಂದೆಲಗ]] ಮತ್ತು ಮಾದಿರದ ತಂಬುಳಿ ಮಾಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಮೂಲವಸ್ತುವಿನೊಂದಿಗೆ [[ಮೆಣಸಿನಕಾಯಿ|ಹಸಿಮೆಣಸು]] ಹಾಗೂ ಒಂದು ಮುಷ್ಟಿ ತೆಂಗಿನಕಾಯಿ ತುರಿ ಹಾಕಿ ರುಬ್ಬಬೇಕು. ಈ ಮಿಶ್ರಣಕ್ಕೆ ಒಂದು ಲೋಟ [[ಮಜ್ಜಿಗೆ]] ಹಾಗೂ ರುಚಿಗೆ ತಕ್ಕಷ್ಟು [[ಉಪ್ಪು]] ಹಾಕಬೇಕು. ಕೊನೆಗೆ ಒಗ್ಗರಣೆ ಹಾಕಿದರೆ ತಂಬುಳಿ ತಯಾರಾದಂತೆಯೇ.<ref>https://www.prajavani.net/article/%E0%B2%A4%E0%B2%82%E0%B2%AA%E0%B3%81-%E0%B2%A4%E0%B2%82%E0%B2%AC%E0%B3%81%E0%B2%B3%E0%B2%BF</ref>
 
===ಆರೋಗ್ಯವರ್ಧಕ ತಂಬುಳಿ===
ಅಜೀರ್ಣವಾಗಿದ್ದರೆ ಅಥವಾ ನಾಲಗೆಯಲ್ಲಿ ಅಗ್ರವಿದ್ದರೆ ಒಂದೆಲಗ, ಮಾದಿರ, ನೆಕ್ಕರೆ, ನೀರುಳ್ಳಿ, ನೆಲ್ಲಿ, ಸಾಂಬಾರ ಬಳ್ಳಿ, ಇಲಿಕಿವಿ, ಜೀರಿಗೆ, ದಾಳಿಂಬ ಸಿಪ್ಪೆ, ಕಿತ್ತಳೆ ಸಿಪ್ಪೆ ಇವುಗಳಲ್ಲಿ ಯಾವುದಾದರೊಂದು ಬಗೆಯ ತಂಬುಳಿ ಮಾಡಿ ಸೇವಿಸಿದರೆ ಅಗ್ರ ನಿವಾರಣೆಯಾತ್ತದೆ. ಜೊತೆಗೆ ಉತ್ತಮ ಜೀರ್ಣಕಾರಿ.ಹೊಟ್ಟೆ ಹುಳದ ಬಾಧೆಯಿದ್ದರೆ ಅತ್ತಿ, ಬೆಳ್ಳುಳ್ಳಿ, ಗರ್ಗ, ಇಲಿಕಿವಿ, ಬಿಳಿ ದಾಸವಾಳದ ತಂಬುಳಿಯಿಂದ ಹುಳದ ಸಮಸ್ಯೆ ಶಮನವಾಗುತ್ತದೆ. ಜೊತೆಗೆ ಈ ಸಮಸ್ಯೆ ಬಾಧಿಸದಂತೆ ತಡೆಯುತ್ತದೆ.ಶೀತ, ಜ್ವರ, ಕೆಮ್ಮಿದ್ದರೆ ವೀಳ್ಯದೆಲೆ, ಮಾದಿರ, [[ಶುಂಠಿ]], ಬೆಳ್ಳುಳ್ಳಿ, ಸಾಂಬಾರ ಬಳ್ಳಿ, ತುಂಬೆ ಹೂವಿನ ತಂಬುಳಿ ಸೇವನೆ ಉತ್ತಮ. ಎಲೆಮುರಿ ಅಥವಾ ಜೀರಿಗೆಯ ತಂಬುಳಿ ಬಾಯಿಯಲ್ಲಾಗುವ ಹುಣ್ಣನ್ನು ನಿವಾರಿಸುತ್ತದೆ. ಸಿಹಿಮೂತ್ರದ ಸಮಸ್ಯೆ ಇರುವವರು ಬಿಲ್ವಪತ್ರೆ, ನೀರುಳ್ಳಿ, ಗರ್ಗ, ಮೆಂತೆ ತಂಬುಳಿ ಸೇವಿಸಿದರೆ ಈ ರೋಗ ನಿಯತ್ರಣದಲ್ಲಿರುತ್ತದೆ. ಅಜೀರ್ಣದಿಂದ ಅಥವಾ ವಾಯುವಿನಿಂದಾಗುವ ಹೊಟ್ಟನೋವಿನ ಶಮನಕ್ಕೆ ನೆಕ್ಕರೆ, ನೆಲ್ಲಿ, ಇಲಿಕಿವಿ, ಜೀರಿಗೆ ತಂಬುಳಿ ಉಪಕಾರಿ. ಮಾದಿರ, ಸಾಂಬಾರ ಬಳ್ಳಿ, ಜೀರಿಗೆ ತಂಬುಳಿ ಮಲಬದ್ಧತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಾಯುವಿನ ಸಮಸ್ಯೆ, ಗ್ಯಾಸ್ಟ್ರಿಕ್ ತೊಂದರೆಯಿರುವವರು ಜೀರಿಗೆ, ಓಮ ತಂಬುಳಿ ಸೇವಿಸಿದರೆ ಉತ್ತಮ. ಇದರಿಂದ ಗ್ಯಾಸ್ಟ್ರಿಕ್ ನಿಯಂತ್ರಣದಲ್ಲಿರುತ್ತದೆ. ಮೆಂತೆ, ಬಿಳಿ ದಾಸವಾಳ, ಅಶೋಕ ಹೂವಿನ ತಂಬುಳಿ ಸೇವನೆಯಿಂದ ದೇಹ ತಂಪಾಗಿರುತ್ತದೆ. ಎಲೆಮುರಿ, [[ನೆಲ್ಲಿ]] ತಂಬುಳಿ ಸೇವನೆಯಿಂದ ದೇಹದಲ್ಲಿ ಕಬ್ಬಿಣ ಸತ್ವ ವೃದ್ಧಿಯಾಗುತ್ತದೆ. ನೆಲನೆಲ್ಲಿ ತಂಬುಳಿ ಹಳದಿ ರೋಗ ನಿವಾರಣೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಗರ್ಗದ ತಂಬುಳಿ [[ದೇಹ]]ದ [[ರಕ್ತ]]ವನ್ನು ಶುದ್ಧೀಕರಿಸುತ್ತದೆ.<ref>http://kannada.webdunia.com/article/recipe-in-kannada/tambuli-is-good-for-health-117122100026_1.html</ref>
೧,೯೨೪

edits

"https://kn.wikipedia.org/wiki/ವಿಶೇಷ:MobileDiff/984924" ಇಂದ ಪಡೆಯಲ್ಪಟ್ಟಿದೆ