"ಜಯಪ್ರಕಾಶ ಮಾವಿನಕುಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು
2000ರಲ್ಲಿ ಪ್ರಥಮ ಉಡುಪಿ ಜಿಲ್ಲಾ ಶಿಕ್ಷಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹದಿಮೂರನೆಯ [[ಕಾರ್ಕಳ]] ತಾಲೂಕು ಸಾಹಿತ್ಯ ಸಮ್ಮೇಳನ(4-2-2017)ದ ಅಧ್ಯಕ್ಷರಾಗಿ ಸಮ್ಮೇಳನ ನಡೆಸಿಕೊಟ್ಟಿದ್ದಾರೆ.
 
ಕಾಲೇಜು ಶಿಕ್ಷಕ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ಕಾಲೇಜು ಶಿಕ್ಷಕರಿಗೆ ಅವಿರತ ನ್ಯಾಯ ದೊರಕಿಸಿದ್ದಾರೆ. [[ಮಂಗಳೂರು ವಿಶ್ವವಿದ್ಯಾನಿಲಯದವಿಶ್ವವಿದ್ಯಾನಿಲಯ]]ದ ಸಿಂಡಿಕೇಟ್, ಸೆನೆಟ್, ಅಕಾಡೆಮಿಕ್ ಕೌನ್ಸಿಲ್, ಫೈನಾನ್ಸ್ ಕಮಿಟಿ ಸದಸ್ಯರಾಗಿ ಆಯ್ಕೆಗೊಂಡು ನಿರಂತರ ಶಿಕ್ಷಕರ ಮತ್ತು ಶಿಕ್ಷಣದ ಬಗ್ಗೆ ಚಿಂತನೆ ನಡೆಸಿದ್ದಾರೆ. [[ಕರ್ನಾಟಕ ನಾಟಕ ಅಕಾಡೆಮಿ]], ಎಸ್ಎಸ್ಎಲ್‌ಸಿ ಪರೀಕ್ಷಾ ಮಂಡಳಿ, [[ಕೇಂದ್ರ ಸಾಹಿತ್ಯ ಅಕಾಡೆಮಿ]] ಕನ್ನಡ ಭಾಷಾ ಮಂಡಳಿ, ಗ್ರಂಥಾಲಯ ಪ್ರಾಧಿಕಾರಗಳ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ.
 
ಅನೇಕ ರಂಗಸಂಸ್ಥೆಗಳನ್ನು - ಅಸಂಗತ (ಕುಂದಾಪುರ), ಅಭಿಮುಖ (ಮೂಲ್ಕಿ), ರಂಗಭಾರತಿ (ಮೂಡುಬಿದಿರೆ), ಭುವನರಂಗ (ಕಾರ್ಕಳ), ರಂಗಸಂಸ್ಕೃತಿ (ಕಾರ್ಕಳ), ರಂಗಸಂಗಮ (ಮೂಡುಬಿದಿರೆ) - ಹೋದಕಡೆಯೆಲ್ಲಾ ಸಂಸ್ಥೆಗಳನ್ನು ಕಟ್ಟಿ ರಂಗಭೂಮಿಗಾಗಿ ಶ್ರಮಿಸಿದ್ದಾರೆ. ಸಂಘಟನಾ ಚತುರರಾಗಿರುವ ಡಾ. ಮಾವಿನಕುಳಿಯವರು ದಕ್ಷಿಣ ಕನ್ನಡ ಜಿಲ್ಲೆಯ ಎರಡು ಜಿಲ್ಲಾ ಸಾಹಿತ್ಯ ಸಮ್ಮೇಳನ (ಮೂಲ್ಕಿ ಮತ್ತು ಮೂಡಬಿದಿರೆಯ) ಪ್ರಧಾನ ಕಾರ್ಯದರ್ಶಿಯಾಗಿ, ಎರಡು (ಮಂಗಳೂರು ಮತ್ತು ಮೂಡುಬಿದಿರೆ) ರಾಜ್ಯ ಸಮ್ಮೇಳನಗಳ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ದುಡಿದಿದ್ದಾರೆ. 'ಶಿವರಾಮ ಕಾರಂತ ಪ್ರತಿಷ್ಠಾನದ ದ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಇಲ್ಲಿಯವರೆಗೂ ಮೂವತ್ತು ವರ್ಷಗಳಿಂದ ದುಡಿಯುತ್ತಲೇ ಇದ್ದಾರೆ. ಈ ಪ್ರತಿಷ್ಠಾನದಿಂದ ಪ್ರತೀ ವರ್ಷ ಇಪ್ಪತ್ತೈದು ಸಾವಿರ ರೂಪಾಯಿಗಳ ಕಾರಂತ ಪ್ರಶಸ್ತಿ, ಕಾರಂತ ಪುರಸ್ಕಾರಗಳನ್ನು ಸುಮಾರು ನಲವತ್ತು ಸಾಹಿತಿಗಳಿಗೆ ನೀಡುತ್ತಾ ಬಂದಿರುವುದು ಉಲ್ಲೇಖಾರ್ಹ.
೧,೯೨೪

edits

"https://kn.wikipedia.org/wiki/ವಿಶೇಷ:MobileDiff/984919" ಇಂದ ಪಡೆಯಲ್ಪಟ್ಟಿದೆ