"ಜನತಾ ಕರ್ಫ್ಯೂ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಜನತಾ ಕರ್ಫ್ಯೂ''' ( ಪೀಪಲ್ಸ್ ಕರ್ಫ್ಯೂ ) ಭಾರತದ ಪ್ರಧಾನಿ [[ನರೇಂದ್ರ ಮೋದಿ]]ಯವರು [[ಕೊರೋನಾವೈರಸ್]] ಹರಡುವಿಕೆಯನ್ನು ಎದುರಿಸಲು ಮಾಡಿದ ಪ್ರಯತ್ನ. ೧೯ ಮಾರ್ಚ್ ೨೦೨೦ರಂದು ಭಾರತದಲ್ಲಿ ಕೊರೋನಾವೈರಸ್ ಕಾಯಿಲೆಯ ಸಮುದಾಯ ಹರಡುವಿಕೆಯನ್ನು ಕಡಿಮೆ ಮಾಡಲು ಮಾರ್ಚ್ ೨೨ ರಂದು ಬೆಳಿಗ್ಗೆ ೭ ರಿಂದ ರಾತ್ರಿ ೯ ರವರೆಗೆ ಸ್ವಯಂ-ಹೇರಿದ 'ಕರ್ಫ್ಯೂ' ಆಚರಿಸುವಂತೆ ಪ್ರಧಾನ ಮಂತ್ರಿ ಭಾರತದ ಎಲ್ಲಾ ನಾಗರಿಕರನ್ನು ಕೋರಿದರು. ಮಾರ್ಚ್ ೨೪ ರಂದು ಮುಂದಿನ ೨೧ ದಿನಗಳವರೆಗೆ ಭಾರತವು 'ಒಟ್ಟು ಲಾಕ್-ಡೌನ್' ಇರುತ್ತದೆ ಎಂದು ಪ್ರಧಾನಿ ಘೋಷಿಸಿದ್ದಾರೆ.
[[File:Roads of Bhopal during Janta Curfew 01.jpg|thumb|250px|Empty street during Janata curfew in [[Bhopal]], Madhya Pradesh]]
==ಕಾರ್ಯ ತಂತ್ರ==
ಜನತಾ ಕರ್ಫ್ಯೂ ೧೪ (೭-೯) ಗಂಟೆಗಳ ಕರ್ಫ್ಯೂ ಆಗಿದ್ದು ಮಾರ್ಚ್ ೨೨ ರಂದು ಇದನ್ನು ನಿಗದಿಪಡಿಸಲಾಯಿತು. ಪೊಲೀಸ್, ವೈದ್ಯಕೀಯ ಸೇವೆಗಳು, ಮಾಧ್ಯಮ, ಮತ್ತು ಅಗ್ನಿಶಾಮಕ ದಳದಂತಹ 'ಅಗತ್ಯ ಸೇವೆಗಳ' ಜನರನ್ನು ಹೊರತುಪಡಿಸಿ ಎಲ್ಲರೂ ಕರ್ಫ್ಯೂನಲ್ಲಿ ಭಾಗವಹಿಸಬೇಕಾಗಿತ್ತು. ಸಂಜೆ ೫ ಗಂಟೆಗೆ (೨೨ ಮಾರ್ಚ್ ೨೦೨೦), ಎಲ್ಲಾ ನಾಗರಿಕರು ತಮ್ಮ ದ್ವಾರಗಳು, ಬಾಲ್ಕನಿಗಳು ಅಥವಾ ಕಿಟಕಿಗಳಲ್ಲಿ ನಿಂತು, ಈ ಅಗತ್ಯ ಸೇವೆಗಳನ್ನು ನೀಡುವ ವೃತ್ತಿಪರರಿಗೆ ಮೆಚ್ಚುಗೆಯಾಗಿ ಕೈ ಚಪ್ಪಾಳೆ ತಟ್ಟಲು ಅಥವಾ ಗಂಟೆ ಬಾರಿಸುವಂತೆ ಕೇಳಲಾಯಿತು. [[ರಾಷ್ಟ್ರೀಯ ಕೆಡೆಟ್ ಪಡೆ|ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್]] ಮತ್ತು [[ರಾಷ್ಟ್ರೀಯ ಸೇವಾ ಯೋಜನೆ]]ಗೆ ಸೇರಿದ ಜನರು ದೇಶದಲ್ಲಿ [[ಕರ್ಫ್ಯೂ]] ಜಾರಿಗೊಳಿಸಬೇಕಾಗಿತ್ತು.
೧,೯೨೭

edits

"https://kn.wikipedia.org/wiki/ವಿಶೇಷ:MobileDiff/984800" ಇಂದ ಪಡೆಯಲ್ಪಟ್ಟಿದೆ