ಹುಣಸೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಅನಗತ್ಯವಾಗಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೭ ನೇ ಸಾಲು:
ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ಸಾಹಿತಿ,. ನಟ,ಚಿತ್ರಕಥಾ ಲೇಖಕ, ಸಂಭಾಷಣೆಕಾರ..ಹುಣಸೂರು ಕೃಷ್ಣಮೂರ್ತಿ ಇದೇ ಊರಿನವರು.
 
ದೆ.
ಮತ್ತೊಬ್ಬ ಲೇಖಕ ಹೊಸ ತಲೆಮಾರಿನ ಕಥೆಗಾರ :
 
ಹುಣಸೂರು ಮಾದುಪ್ರಸಾದ್:
 
 
ಡಾ.ಮಾದುಪ್ರಸಾದ್ ಹುಣಸೂರು ಎಂಬ ಹೆಸರಿನಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿರುವ ಇವರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರಂಗಯ್ಯನಕೊಪ್ಪಲು ಗ್ರಾಮದ ಶ್ರೀ ಕುಂಡಯ್ಯ ಮತ್ತು ಕಾಳಮ್ಮ ದಂಪತಿಗಳ ನಾಲ್ಕನೆಯ ಮಗನಾಗಿ 20 ಮಾರ್ಚ್ 1982ರಲ್ಲಿ ಜನಿಸಿದರು. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬ ಮಾತಿನಂತೆ ಬಾಲ್ಯದಲ್ಲಿಯೇ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗ್ರಾಮದ ಸಾಂಸ್ಕೃತಿಕ ಆಚಾರಣೆಗಳ ಭಾಗವಾಗಿ ಬೆಳೆದವರು. ಗ್ರಾಮೀಣ ಕಲೆ, ನಾಟಕದ ಅಭಿರುಚಿಯೊಂದಿಗೆ ಬೆರೆತು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದರು. ಮಾಧ್ಯಮಿಕ ಶಿಕ್ಷಣವು ಬೋಳನಹಳ್ಳಿಯಲ್ಲಿ ನಡೆಯಿತು. ಪ್ರೌಢಶಾಲಾ ಶಿಕ್ಷಣವನ್ನು ಅರಸಿ ಹುಣಸೂರು ಪಟ್ಟಣವನ್ನು ಸೇರಿದ ನಂತರ ಇಲ್ಲಿಯ ಪ್ರಾಕೃತಿಕ ಮೈಸಿರಿಗೆ ಬೆರಗಾಗಿ ತಮ್ಮ ಹೆಸರಿನೊಂದಿಗೆ ಹುಣಸೂರನ್ನು ಬೆಸುಗೆ ಹಾಕಿಕೊಂಡು ಸಾಹಿತ್ಯದ ಒಲವನ್ನು ಬೆಳಸಿಕೊಂಡರು. ಜೊತೆಗೆ ಆಶುಭಾಷಣ, ನಾಟಕ ಅಭಿನಯ, ಪ್ರಬಂಧ, ಚರ್ಚಾಸ್ಪರ್ಧೆಗಳಂತಹ ಬಹುಮುಖ ತೆಯನ್ನು ಕಂಡುಕೊಂಡರು. ಸಹಪಾಠಿಗಳು ಬಾಲ್ಯದಲ್ಲಿಯೇ ಇವರ ಕವಿತ್ವದಶಕ್ತಿಗೆ ಮೆಚ್ಚಿ ಕವಿಗೆಳಯ ಎಂದು ಗೌರವಪೂರ್ವಕವಾಗಿ ಸಂಬೋಧಿಸುತ್ತಿದ್ದರು. ಪ್ರೌಢಶಾಲಾ, ಕಾಲೇಜು ಫಲಿತಾಂಶದಲ್ಲಿ ತಾಲೂಕಿನಲ್ಲಿಯೇ ಮೊದಲಿಗರಾಗಿ ಉತ್ತೀರ್ಣರಾದರು. ವಸಂತ ಮಹಲ್ ಮೈಸೂರು ಇಲ್ಲಿ ಶಿಕ್ಷಕ ತರಬೇತಿಯನ್ನು ಪಡೆದು 2002ನೇ ಇಸವಿಯಲ್ಲಿ ಶಿಕ್ಷಕ ವೃತ್ತಿಯನ್ನು ಖಾಸಗಿ ಶಾಲೆಯಲ್ಲಿ ಆರಂಭಿಸಿ, 2004 ರಲ್ಲಿ ಪಿರಿಯಾಪಟ್ಟಣದ ಭೂತನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸರ್ಕಾರಿ ವೃತ್ತಿಯನ್ನು ಆರಂಭಿಸಿದರು. ಮಕ್ಕಳ ಒಡನಾಟದಿಂದ ಅವರು ಮಕ್ಕಳ ಸಾಹಿತ್ಯದ ಒಲವನ್ನು ಹೊಂದಿದರು. 'ಹಾಡೋಣ ಬಾರೋ ಕಿಶೋರ' ಎಂಬ ಮಕ್ಕಳ ಪದ್ಯ ಸಂಕಲನವನ್ನು 2006ರಲ್ಲಿ ಹೊರತಂದರು. ಪ್ರತಿಭಾವಂತ ಶಿಕ್ಷಕರೂ ಆದ ಇವರಿಗೆ ಮಂಡ್ಯದ ಯುವ ಬರೆಹಗಾರರ ಬಳಗವು 2007ರಲ್ಲಿ 'ರಾಧಾಕೃಷ್ಣನ್ ಆದರ್ಶ ಶಿಕ್ಷಕ ಪುರಸ್ಕಾರವನ್ನು ದೇಜಗೌ ಇವರಿಂದ ನೀಡಿ ಗೌರವಿಸಿತು. 2010ರಲ್ಲಿ 'ನಗೆ ತೊರೆ' ಎಂಬ ಹಾಸ್ಯ ಚುಟುಕು ಸಂಕಲನ ಹೊರತಂದರು. ಈ ಮೂಲಕ ಹಾಸ್ಯ ಸಾಹಿತಿಯಾಗಿ ನಾಡಿನಾದ್ಯಂತ ಗುರ್ತಿಸಿ ಕೊಂಡರು. ಅನೇಕ ಹಾಸ್ಯ ಕಾರ್ಯಕ್ರಮಗಳನ್ನು ನೀಡಿ ಜನಮನ್ನಣೆಯನ್ನು ಪಡೆದರು. 2011ರಲ್ಲಿ ಹೊರತಂದ ' ಗೋಲಿ ಗೆಜ್ಜುಗದ ಹುಡುಗ' ಮಕ್ಕಳ ಕಾದಂಬರಿಯು ಹೊಸ ಸಂಚಲನದೊಂದಿಗೆ ನಾಡಿಗೆ ಪರಿಚಯವಾಯಿತು. ಇದಕ್ಕೆ ಮೈಸೂರು ಸಾಹಿತ್ಯ ಬಳಗವು 'ಸಾಹಿತ್ಯ ಸಿಂಧು' ಪುರಸ್ಕಾರ ವನ್ನು ನೀಡಿ ಗೌರವಿಸಿತು. 2014ರಲ್ಲಿ ಹೊರತಂದ 'ಚುಕ್ಕಿ ನವಿಲು ಗರಿ' ಮಕ್ಕಳ ಪದ್ಯಗಳಿಗೆ ಶ್ರೀ ಜಿ.ಬಿ. ಹೊಂಬಳ ರಾಜ್ಯ ಪುರಸ್ಕಾರ ಲಭಿಸಿತು. ಮುಕ್ತ ವಿಶ್ವವಿದ್ಯಾಲಯದ ಪದವಿ, ಉನ್ನತ ಪದವಿಯನ್ನು ಗಳಿಸಿದ ಶ್ರೀ ಮಾದುಪ್ರಸಾದ್ ರವರು ಮಕ್ಕಳ ಸಾಹಿತ್ಯದ ಹೆಚ್ಚಿನ ಅಧ್ಯಯನದ ದೃಷ್ಟಿಯಿಂದ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪದವಿಯನ್ನು 'ಮಕ್ಕಳ ಕಥಾ ಸಾಹಿತ್ಯ ಸ್ವರೂಪ: ತಾತ್ವಿಕತೆ ' ಎಂಬ ವಿಷಯವಾಗಿ ಮಹಾಪ್ರಬಂಧ ವನ್ನು ಮಂಡಿಸಿ ಪಡೆದರು. 'ಬೆಂದವರ ಬೆವರು' ಕವನ ಸಂಕಲನ, ಹಕ್ಕಿಗಾನ , ಚಿಣ್ಣರ ಚಿಲಿಪಿಲಿ ಮಕ್ಕಳ ಪದ್ಯಗಳನ್ನು ಹೊರತಂದರು. ಕಥೆ ಅವರ ಆಸಕ್ತಿಯ ಕ್ಷೇತ್ರವಾಗಿ ಬೆಳೆಯಿತು. ಮೈಸೂರು ಮಿತ್ರ ಪತ್ರಿಕೆಯ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಸತತವಾಗಿ ಏಳು ವರ್ಷಗಳ ಕಾಲ ಬಹುಮಾನವನ್ನು ಪಡೆದರು. ಶಿಕ್ಷಕ ರ ಕಲ್ಯಾಣ ನಿಧಿಯ ವತಿಯಿಂದ ನಡೆಯುವ ಆಶುಭಾಷಣ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳಕಾಲ ರಾಜ್ಯಮಟ್ಟದಲ್ಲಿ ವಿಜೇತರಾದರು. ತೆವಲು, ಸೀರೆ, ಮಂಟಿಮಾಳ, ಬಯಕೆಯ ಕೋಳಿ, ಭರವಸೆ, ರಕ್ತದಾನವೂ ಕುಲದ ಮಾನವೂ, ಸವಣಗುಡ್ಡ ಮುಂತಾದ ಕಥೆಗಳು ಜನರ ಮಾನಸದಲ್ಲಿ ನಿಲ್ಲುವಂತೆ ಬರೆದರು. ಎಂ.ಎಸ್. ಪುಟ್ಟಣ್ಣ ರ ಮಕ್ಕಳ ಸಾಹಿತ್ಯದ ಕೊಡುಗೆ ಎಂಬ ಸಂಶೋಧನಾ ಗ್ರಂಥವನ್ನು ಹೊರತಂದರು. 'ಕೂಳಿನ ಕಾಳಗ' ಕಥಾ ಸಂಕಲನವನ್ನು ಪ್ರಕಟಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಹಲವು ಪುಸ್ತಕ ಗಳಿಗೆ ಲೇಖನಗಳನ್ನು ಬರೆದರು. ನಾಡಿನಾದ್ಯಂತ ಸಂಧ್ಯಾ ಸಾಹಿತ್ಯ ಚಟುವಟಿಕೆಗಳ ಸಲುವಾಗಿ ಮಕ್ಕಳ ಸಾಹಿತ್ಯದ ಸಂಘಟನೆಗಾಗಿ ಸಂಚರಿಸುತ್ತಾ ಭಾಷಣಗಳನ್ನು ನೀಡಿದರು. ಅವರ ತೊಟ್ಟಿಲಗೊಂಬೆ ಕಾದಂಬರಿಯು ಹೊಸ ಸಂಚಲನವನ್ನು ಉಂಟುಮಾಡಿದೆ. ಮಕ್ಕಳ ಸಾಹಿತ್ಯದ ಪ್ರಚಾರಕ್ಕಾಗಿ ಅವರೇ 'ಬಾಲ ಸಾಹಿತ್ಯ ಚಿಂತನಾ ಬಳಗ'ವನ್ನು ಸಂಘಟಿಸಿ ಮುನ್ನಡೆಸುತ್ತಾ ಬಂದಿದ್ದಾರೆ. ಇಂದಿಗೂ ಅವರ ಲೇಖನಗಳನ್ನು ನಾಡಿನ ಅನೇಕ ಪತ್ರಿಕೆಗಳಲ್ಲಿ ಕಾಣಬಹುದಾಗಿದೆ.
 
{{commons category|ಹುಣಸೂರು ಮಾದುಪ್ರಸಾದ್}}
 
[[ವರ್ಗ:ಮೈಸೂರು ಜಿಲ್ಲೆಯ ತಾಲೂಕುಗಳು]]
 
ಮಂಟಿಮಾಳ ಕತೆ,
ಲೇಖಕರು: ಡಾ. ಮಾದುಪ್ರಸಾದ್ ಹುಣಸೂರು
ಅಭಿಪ್ರಾಯ: ಹನುಮಂತ ಹಾಲಗೇರಿ.
“ನಾವು ಊರು ಬಿಟ್ಟು ಹೋಗಬೇಕಂತೆ, ಇಲ್ಲ ಅಂದ್ರೆ ಇಡೀ ಊರ್ಗೇ ಪಾಪ ಸುತ್ಕೊಂಡದಂತೆ”. ಇದು “ಮಂಟಿಮಾಳ” ಕತೆಯಲ್ಲಿ ರಾಚ ಎಂಬ ನಥದೃಷ್ಟ ಪಾತ್ರವೊಂದು ಹೇಳುವ ಮಾತು. ಈ ಮಾತನ್ನು ಇಲ್ಲಿನ ಎಲ್ಲ ಕತೆಗಳು ಕೇಂದ್ರ ಪಾತ್ರಗಳಿಗೂ ಅನ್ವಯಿಸಬಹುದೇನೋ. ಯಾರದೋ ಕಪಟತನ, ಹುನ್ನಾರ, ಸ್ವಾರ್ಥ, ದಬ್ಬಾಳಿಕೆ, ವಂಚನೆಗೆ ಇಲ್ಲಿನ ತಳ ಸಮುದಾಯದ ಜೀವಗಳು ಊರು ಬಿಟ್ಟು ಹೋಗಬೇಕಾದ, ಯಾರೋ ಕೇಳುವ ದಾಖಲೆಗಳಿಗೆ ದೇಶವನ್ನೇ ತೊರೆಯಬೇಕಾದ ಅನಿವಾರ್ಯತೆಯಲ್ಲಿನ ನತದೃಷ್ಟ ಪಾತ್ರಗಳ ಅನುಭವದ ಬದುಕನ್ನೆ ಗೆಳೆಯ ಮಾದುಪ್ರಸಾದ್ ಕಥೆಗಳನ್ನಾಗಿ ಹೆಣೆದಿದ್ದಾರೆ. ಒಂದೊಂದು ಕಥೆ ಓದಿದಷ್ಟು ಆಳದಾಳದ ಕಂದರಕ್ಕೆ ಬಿಳುತ್ತಿದ್ದೆನೇನೋ ಎನ್ನುವಷ್ಟು ಭಯ ಕಾಡತೊಡಗಿ ಮನಸ್ಸು ಸಂಕಟಗೊಳ್ಳುತ್ತದೆ. ಉತ್ತರ ಕರ್ನಾಟಕದ ಭಾಗದವನಾದ ನಾನು, 70ರ ದಶಕದಲ್ಲಿಯೆ ದಲಿತ ಚಳವಳಿಯ ಏರುಗತಿಯಲ್ಲಿದ್ದ ಮೈಸೂರು ಸೀಮೆಯಲ್ಲಿ ನಮ್ಮ ಕಡೆ ಇದ್ದಷ್ಟು ಜಾತಿಯತೆ, ಮೌಡ್ಯಗಳು, ವರ್ಗ ಸಂಘರ್ಷ ಇರಲಿಕಿಲ್ಲ ಎಂದೇ ಭಾವಿಸಿದ್ದೆ. ಆದರೆ, ಗೆಳೆಯ ಮಾಧುಪ್ರಸಾದ್ ಕಂಡುಂಡ ಇಲ್ಲಿನ ಕತೆಗಳನ್ನು ಓದುತ್ತಿದ್ದರೆ, ಈ ಅನಿಷ್ಠಗಳು ಈ ಭಾಗದಲ್ಲಿಯೂ ಆಳದಲ್ಲಿ ಮತ್ತಷ್ಟು ಗಟ್ಟಿಗೊಳ್ಳುತ್ತಿವೆಯಲ್ಲ ಎಂದು ಖೇದವಾಗುತ್ತದೆ.
“ಮಂಟಿಮಾಳ”ದ ರೈತನಾಗುವ ಕನಸು ಕಂಡ ರಾಚ ಇಲ್ಲಿ ಯಾರದೋ ಮೌಡ್ಯಕ್ಕೆ ಕುಟುಂಬ ಸಮೇತ ಊರು ತೊರೆಯುವ ಮೂಲಕ “ಚೋಮ”ನನ್ನು ನೆನಪಿಸುತ್ತಾನೆ. “ತೆವಲು” ಕಥೆಯಲ್ಲಿನ ಅನಾಥ ಹೆಂಗಸು ತುತ್ತು ಕೂಳಿಗಾಗಿ ಮೈಯನ್ನೆ ಮಾರಿಕೊಂಡು ಅದರಿಂದ ಬಸಿರು ಹೊತ್ತು ಇನ್ನಷ್ಟು ಸಂಕಟವನ್ನು ಮೈಮೇಲೆ ಹಾಕಿಕೊಳ್ಳುತ್ತಾಳೆ. “ಸೀರೆ” ಕಥೆಯಲ್ಲಿ ತಾಯಿಯ ಮೈಮುಚ್ಚುವ ಒಂದು “ಸೀರೆ”ಗಾಗಿ ತಾಯಿಪೀಡಕ ತಂದೆಯನ್ನು ಮಗನೇ ಬಲಿತೆಗೆದುಕೊಳ್ಳುತ್ತಾನೆ. ಹೀಗೆ ಇಲ್ಲಿನ ಎಲ್ಲ ಕಥೆಗಳು ಅಂತ್ಯ ದುಖಾಂತ್ಯವೇ ಆಗಿವೆ ಮತ್ತು ಒಂದಕ್ಕೊಂದು ಇಂಟಲಿಂಕ್ ಇರುವಷ್ಟು ಬೆಸೆದುಕೊಂಡಿವೆ.
ಇಲ್ಲಿನ ಭಾಷೆ ಮತ್ತು ನಿರೂಪಣೆ ಸರಳಾತಿ ಸರಳ. ಕಥೆಗಳಲ್ಲಿನ ಸಣ್ಣ ಸಣ್ಣ ವಾಕ್ಯಗಳು ಮಹತ್ತರವಾದುದನ್ನು ದ್ವನಿಸುತ್ತವೆ. ರೂಪಕ, ಉಪಮೆಗಳ, ತಂತ್ರ ಇತ್ಯಾದಿಗಳ ಬಗ್ಗೆ ಕಥೆಗಾರ ತಲೆಕೆಡಸಿಕೊಳ್ಳದಿರುವುದರಿಂದ ಎಲ್ಲ ಕತೆಗಳು ಆರಾಮಾಗಿ ಓದಿಸಿಕೊಳ್ಳುತ್ತವೆ. ಸರಳತೆಯೇ ಈ ಕತೆಗಳ ಶಕ್ತಿ ಮತ್ತು ಮಿತಿಯೂ ಹೌದು. ಸಮಾಜದಲ್ಲಿನ ಜಾತಿಯತೆ, ಬಡವ ಶ್ರೀಮಂತ ಶ್ರೀಮಂತ, ಗೊಡ್ಡು ಸಂಪ್ರದಾಯಗಳ ಬಲೆಗೆ ಸಿಕ್ಕ ನಮ್ಮದೇ ಕುಟುಂಬದ ಬಂಧುವೊಬ್ಬ ತನ್ನ ಕತೆಯನ್ನು ಪಕ್ಕದಲ್ಲೇ ಆಗಾಗ ತೇವಗೊಂಡ ಕಣ್ಣುಗಳೊಂದಿಗೆ ತನ್ನ ಕಥೆಯನ್ನು ಓದುಗನಿಗೆ ದಾಟಿಸಿದ ಅನುಭವವಾಗುತ್ತದೆ. ತನ್ನ ಮೊದಲ ಸಂಕಲನದಲ್ಲೇ ನೆಲಕ್ಕಂಟಿದ ಬದುಕುಗಳ ಸಂಕಟವನ್ನು ಅನಾವಣಗೊಳಿಸುವ ಮೂಲಕ ಜೀವ ಕಾರುಣ್ಯದ ತತ್ರಾಣಿಯಂತೆ ಕಾಣುತ್ತಿರುವ ಗೆಳೆಯ ಮಾಧು, ತನ್ನ ಮೊದಲ ಸಂಕಲನದಲ್ಲೇ ಭರವಸೆಯ ಮೂಡಿಸಿದ್ದಾನೆ. ಆದ್ರೆ ಕಥನದ ಪರಿಸರ ಕಟ್ಟಿಕೊಡುವಲ್ಲಿ ಒಂದಿಷ್ಟು ವ್ಯವದಾನ ರೂಢಿಸಿಕೊಂಡರೆ ಹೊಟ್ಟೆಕಿಚ್ಚಾಗುವಂತ ಕಥೆಗಳನ್ನು ಬರೆಯಬಲ್ಲ. ಈ ಮಾತು ನನಗೂ ಅನ್ವಯಿಸುತ್ತದೆ ಎಂಬ ಎಚ್ಚರದಲ್ಲಿಯೇ ಹೇಳಿದ್ದೇನೆ.
 
ಹನುಮಂತ ಹಾಲಗೇರಿ
ಕತೆಗಾರರು.
 
== ಹರವೆ ==
ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಸಮೀಪವಿರುವ ಈ ಗ್ರಾಮದಲ್ಲಿ ಲಕ್ಷ್ಮೀದೇವಿ ದೇವಸ್ಥಾನ ಹಲವಾರು ನಿಗೂಢಗಳ ನಡುವೆ ಇದೆ.ಈ ದೇಗುಲವನ್ನು ಪ್ರತೀ 14 ವರ್ಷಗಳಿಗೊಮ್ಮೆ ತೆರೆಯಲಾಗುವುದು.ಆ ದಿನ ಹಲವಾರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಿಗೆ ಸಂಪ್ರದಾಯದಂತೆ ಪೂಜೆ ನಡೆಸಲಾಗುವುದು. ಮರುದಿನ ಜಾತ್ರಾ ಉತ್ಸವ ನೆಡೆಸಲಾಗುತ್ತದೆ. ರಾತ್ರಿ ವೇಳೆ ಪೌರಾಣಿಕ ನಾಟಕ ಏರ್ಪಡಿಸಲಾಗುತ್ತದೆ.ಹೀಗೆ ಲಕ್ಷೀದೇವಿ ಉತ್ಸವ ನೆಡೆಯುತ್ತದೆ.
"https://kn.wikipedia.org/wiki/ಹುಣಸೂರು" ಇಂದ ಪಡೆಯಲ್ಪಟ್ಟಿದೆ