ಮರಾಠಾ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಶಿವಾಜಿ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭ ನೇ ಸಾಲು:
 
ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಶಾಹು ಮತ್ತು ಪೇಶ್ವೆ [[ಮೊದಲನೇ ಬಾಜೀರಾವ್]] ಕಾಲಕ್ಕೆ ತನ್ನ ತುತ್ತತುದಿಯನ್ನು ತಲುಪಿತು. ೧೭೬೧ ರಲ್ಲಿ [[ಮೂರನೆಯ ಪಾಣಿಪತ್ ಯುದ್ಧ]]ದ ಸೋಲು ಸಾಮ್ರಾಜ್ಯದ ಇನ್ನಷ್ಟು ವಿಸ್ತರಣೆಯನ್ನು ತಡೆದು ಪೇಶ್ವೆಗಳ ಅಧಿಕಾರವನ್ನು ಮೊಟಕುಗೊಳಿಸಿತು. ಆಗ ಅವರು ರಾಜ್ಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡರು. [[ಶಿಂಧೆ]] , [[ಹೋಳ್ಕರ್]] , [[ಗಾಯಕವಾಡ್]] , [[ಪಂತಪ್ರತಿನಿಧಿ]] ಮತ್ತು [[ನೇವಳ್ಕರ್]] ರು ತಂತಮ್ಮ ಪ್ರದೇಶಗಳಿಗೆ ರಾಜರಾದರು. ಸಾಮ್ರಾಜ್ಯವು ಸಡಿಲಾದ ಒಕ್ಕೂಟವೊಂದಕ್ಕೆ ದಾರಿ ಮಾಡಿಕೊಟ್ಟಿತು. ಅಧಿಕಾರವು ಐದು ಪ್ರಮುಖಮನೆತನಗಳಲ್ಲಿ ಉಳಿಯಿತು: [[ಪುಣೆ]]ಯ ಪೇಶ್ವೆಗಳು ; [[ಮಾಳವ]] ಮತ್ತು [[ಗ್ವಾಲಿಯರ್]] ನ [[ಸಿಂಧಿಯಾ]]ರು (ಮೂಲದಲ್ಲಿ ಇವರು ಶಿಂಧೆ);[[ಇಂದೂರ್]] ನ [[ಹೋಳ್ಕರ್]] ರು ;[[ನಾಗಪುರ]]ದ [[ಭೋಂಸ್ಲೆ]] ಗಳು ; [[ಬರೋಡ]]ದ [[ಗಾಯಕವಾಡ್]] ರು. ೧೯ ನೇ ಶತಮಾನದ ಮೊದಲಿಗೆ ಸಿಂಧಿಯ ಮತ್ತು ಹೋಳ್ಕರರ ನಡುವಿನ ವೈರತ್ವವು ಬ್ರಿಟಿಷರು ಮತ್ತು [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ಜತೆಗಿನ ಮೂರು [[ಆಂಗ್ಲೋ ಮರಾಠಾ ಯುದ್ಧಗಳು]] ಈ ಒಕ್ಕೂಟದ ಪ್ರಮುಖ ಘಟನೆಗಳಾಗಿದ್ದವು . [[ಮೂರನೇ ಆಂಗ್ಲೋ ಮರಾಠಾ ಯುದ್ಧ]]ದಲ್ಲಿ ಕೊನೆಯ ಪೇಶ್ವೆಯಾದ [[ಎರಡನೇ ಬಾಜೀರಾಯ]]ನನ್ನು ಬ್ರಿಟಿಷರು ೧೮೧೮ರಲ್ಲಿ ಸೋಲಿಸಿದರು. ಮೊದಲಿನ ಮರಾಠಾ ಸಾಮ್ರಾಜ್ಯದ ಬಹುಭಾಗವನ್ನು [[ಬ್ರಿಟಿಷ್ ಭಾರತ]]ವು ತನ್ನೊಳಗೆ ಸೇರಿಸಿಕೊಂಡಿತಾದರೂ ಕೆಲವು ಭಾಗಗಳು ಭಾರತವು ೧೯೪೭ರಲ್ಲಿ ಸ್ವತಂತ್ರವಾಗುವವರೆಗೆ ಅರೆ-ಸ್ವತಂತ್ರವಾಗಿ ಉಳಿದುಕೊಂಡವು.
 
 
'''[[ಛತ್ರಪತಿ ಶಿವಾಜಿ]]'''
 
[[ವರ್ಗ:ಮರಾಠ ಸಾಮ್ರಾಜ್ಯ|*]]
"https://kn.wikipedia.org/wiki/ಮರಾಠಾ_ಸಾಮ್ರಾಜ್ಯ" ಇಂದ ಪಡೆಯಲ್ಪಟ್ಟಿದೆ