ಯು. ಬಿ. ಪವನಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು 2405:204:578B:F644:A760:89D0:1228:2606 (ಚರ್ಚೆ) ರ 928875 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
Clean up
೩೫ ನೇ ಸಾಲು:
==ಕನ್ನಡ ಮತ್ತು ಗಣಕ ಕ್ಷೇತ್ರದಲ್ಲಿ==
*ಕನ್ನಡ ಅಕ್ಷರಗಳನ್ನು ಕಲಿಯಲು ಸಹಾಯಕವಾಗುವ "ಕನ್ನಡ ಕಲಿ" ಎಂಬ ಕಂಪ್ಯೂಟರ್ ಆಟದ ತಯಾರಿಕೆ;
*ವಿಶ್ವಾದ್ಯಂತ ಮಕ್ಕಳಿಗೆ ಕ್ರಮವಿಧಿ ರಚನೆಯ ಮೂಲತತ್ವಗಳನ್ನು ಕಲಿಸಲು ಬಳಸಲಾಗುವ ಲೋಗೋ ಎಂಬ ತಂತ್ರಾಂಶದ ಕನ್ನಡ ಅವತರಣಿಕೆಯನ್ನು ಸಿದ್ಧಪಡಿಸಲಾಗಿದೆ.
*ಯೂನಿಕೋಡ್‌ನಲ್ಲಿ ಕನ್ನಡದ ಸ್ಥಾನಮಾನಗಳ ಕುರಿತಾಗಿ ಮಾಹಿತಿ, ಸಲಹೆಗಳನ್ನು ನೀಡಲು ೨೦೦೦ದ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ಮತ್ತು ೧೭ನೇ ಯೂನಿಕೋಡ್ ಸಮ್ಮೇಳನದಲ್ಲಿ ಭಾಗವಹಿಸುವಿಕೆ ಮತ್ತು ಯೂನಿಕೋಡ್ ಕನ್‌ಸಾರ್‌ಷಿಯಂ ಸದಸ್ಯರೊಂದಿಗೆ ಕನ್ನಡದ ಕುರಿತು ಚರ್ಚೆ.
*ವಿಂಡೋಸ್ ಎಕ್ಸ್‌ಪಿ, ಆಫೀಸ್ ಎಕ್ಸ್‌ಪಿ ಇವುಗಳಲ್ಲಿ ಕನ್ನಡ ಮತ್ತು ಕನ್ನಡದ ಓಪನ್‌ಟೈಪ್ ಫಾಂಟುಗಳು ಇತ್ಯಾದಿಗಳ ಕುರಿತು ಮೈಕ್ರೋಸಾಫ್ಟ್ ಕಂಪನಿಗೆ ಸಲಹೆಗಾರರು.
*ಕನ್ನಡಕ್ಕೆ ಒಂದು ಓಪನ್‌ಟೈಪ್ ಫಾಂಟಿನ ತಯಾರಿಕೆ.
*೨೦೦೨ರ ಆಗಸ್ಟ್‌ನಲ್ಲಿ ಅಮೆರಿಕದ ಸಿಯಾಟಲ್‌ನಲ್ಲಿ ನಡೆದ, ಓಪನ್‌ಟೈಪ್ ಫಾಂಟಿಗೆ ಸಂಬಂಧಿಸಿದ ಮೈಕ್ರೋಸಾಫ್ಟ್ ಕಂಪನಿಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಾಗಿದೆ.
*೨೦೦೪ ಫೆಬ್ರವರಿ ತಿಂಗಳಲ್ಲಿ ಅಮೆರಿಕದ ರೆಡ್‌ಮಂಡ್‌ನಲ್ಲಿ ಮೈಕ್ರೋಸಾಫ್ಟ್ ಕಂಪೆನಿ ನಡೆಸಿದ ಜಾಗತಿಕ ತಂತ್ರಾಂಶ ತಯಾರಿಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಾಗಿದೆ.
*ಬಹುಭಾಷೀಯ ಸ್ಮಾರ್ಟ್‌ಟ್ಯಾಗ್‌ಗಳು (ಆಫೀಸ್ ಎಕ್ಸ್‌ಪಿಗಾಗಿರುವ) ಮತ್ತು ವಿಬಿ ಡಾಟ್‌ನೆಟ್ ಬಳಸಿ ಕೆಲವು ಆನ್ವಯಿಕ ತಂತ್ರಾಂಶಗಳನ್ನು ಸಿದ್ಧಪಡಿಸಲಾಗಿದೆ. ಭಾರತದಲ್ಲಿರುವ ಮೈಕ್ರೋಸಾಫ್ಟ್ ಕಂಪನಿಯು ಸಂಘಟಿಸಿದ್ದ ಅಖಿಲಭಾರತ ಸ್ಮಾರ್ಟ್‌ಟ್ಯಾಗ್ ಸ್ಪರ್ಧೆಯಲ್ಲಿ ಈ ತಂತ್ರಾಂಶಗಳು ಮೂರನೆಯ ಬಹುಮಾನವನ್ನು ಪಡೆದಿವೆ.
*ಶಾಲಾ ಮಕ್ಕಳಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕನ್ನಡದಲ್ಲಿ ಪ್ರಕಟಿಸುವ "ಬಾಲ ವಿಜ್ಞಾನ" ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಮೂರು ವರ್ಷಗಳ ಸೇವೆ.
*ಗಣಕಗಳಲ್ಲಿ ಕನ್ನಡವನ್ನು ಬಳಸುವಲ್ಲಿನ ಶಿಷ್ಟತೆಗಳನ್ನು ರಚಿಸಲು ಕರ್ನಾಟಕ ರಾಜ್ಯ ಸರ್ಕಾರವು ನೇಮಿಸಿದ್ದ ಸಮಿತಿಯಲ್ಲಿ ಸದಸ್ಯರಾಗಿ ಸೇವೆ.
*೨೦೦೦ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಹೊರತರಲಾದ ವಿಶೇಷ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ಸದಸ್ಯರಾಗಿ ಸೇವೆ.
*ಸ್ವಯಂಸೇವಾ ಸಂಸ್ಥೆಯಾದ ಅಜೀಂ ಪ್ರೇಂಜೀ ಫೌಂಡೇಷನ್‌ಗಾಗಿ ಶೈಕ್ಷಣಿಕ ಬಹುಮಾಧ್ಯಮ ಸಿಡಿಗಳನ್ನು ಸಿದ್ಧಪಡಿಸಲಾಗಿದೆ.
*ಅಂಗೈ ಗಣಕದಲ್ಲಿ ಬಳಸಲು ಕನ್ನಡದ ಮೆಮೋ ಎಡಿಟರ್‌ಅನ್ನು ಸಿದ್ಧಪಡಿಸಲಾಗಿದೆ. ಬಹುಶ: ಇದು ಅಂಗೈ ಗಣಕಕ್ಕಾಗಿ ತಯಾರಾದ ಭಾರತೀಯ ಭಾಷೆಗಳ ಮೊದಲ ಆನ್ವಯಿಕ ತಂತ್ರಾಂಶವಾಗಿರಬಹುದು.
*ಎಚ್‌ಪಿ - ಜೊರ್ನಾಸಡಾಗಾಗಿ ಕನ್ನಡದ ಒಂದು ನೋಟ್‌ಪ್ಯಾಡನ್ನು ಪ್ರಥಮವಾಗಿ ಅಭಿವೃದ್ಧಿಪಡಿಸಲಾಗಿದೆ. ಇದೂ ಸಹ ವಿನ್‌ಸಿಇ ಸಾಧನದಲ್ಲಿನ ಭಾರತೀಯ ಭಾಷೆಗಳ ಪ್ರಥಮ ಆನ್ವಯಿಕವಾಗಿರಬಹುದು.
*ಐಐಐಟಿ-ಹೈದರಾಬಾದ್, ಐಐಎಸ್ಸಿ-ಬೆಂಗಳೂರು, ಐಐಐಟಿ-ಬೆಂಗಳೂರು, ಎಂ.ಸಿ. ವಿ.ವಿ.-ಭೋಪಾಲ, ಐಐಟಿ-ಮುಂಬಯಿ, ಐಐಟಿ-ದೆಹಲಿ-ಇತ್ಯಾದಿ ಸ್ಥಳಗಳಲ್ಲಿ ಗಣಕಗಳಲ್ಲಿ ಭಾರತೀಯ ಭಾಷೆಗಳು ಎಂಬ ವಿಷಯ ಕುರಿತು ಹಲವಾರು ಉಪನ್ಯಾಸಗಳು ಮತ್ತು ಭಾಷಣಗಳನ್ನು ನೀಡಲಾಗಿದೆ. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲಾಗಿದೆ.
*ಮಾಹಿತಿ ತಂತ್ರಜ್ಞಾನವನ್ನು ಜನರಿಗೆ ಒಯ್ಯುವ ನಿಟ್ಟಿನಲ್ಲಿ ಈ ವಿಷಯದ ಬಗ್ಗೆ ಹಲವು ಭಾಷಣ, ಪ್ರಾತ್ಯಕ್ಷಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ನೀಡಲಾಗಿದೆ
*೨೦೦೩ ರ ಡಿಸೆಂಬರ್ ನಲ್ಲಿ, ಮೂಡುಬಿದಿರೆಯಲ್ಲಿ ಜರುಗಿದ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಸ್ಥಾನ-ಮಾನ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿಷಯ ಮಂಡನೆ.
*೨೦೧೧ರಲ್ಲಿ, ಬೆಳಗಾವಿಯಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನದಲ್ಲಿ ಕನ್ನಡ ತಂತ್ರಾಂಶ ವಿಷಯ ಮಂಡನೆ ಮಾಡಿದರು.
*೨೦೧೩ರಲ್ಲಿ, ಮುಂಬಯಿ ವಿಶ್ವವಿದ್ಯಾಲಯದ ಜೊತೆಗೂಡಿ, ಕಲೀನಾದ ಕಾಲೇಜಿನಲ್ಲಿ ಇಂಟರ್ನೆಟ್ ನಲ್ಲಿ ಕನ್ನಡ ಪ್ರಯೋಗದ ಬಗ್ಗೆ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿ.
 
[[ಚಿತ್ರ:P n (s).jpg|thumb|right|300px|'ಪುಣೆನಗರದ ವಿಕಿಪೀಡಿಯ ಕಮ್ಮಟವೊಂದರಲ್ಲಿ']]
[[File:10468142 10203693680640015 8308226231122399955 o (f).jpg|thumb|right|300px|ಡಾ.ಪವನಜರವರಿಗೆ ಗುಲ್ಬರ್ಗಾದಲ್ಲಿ ಸನ್ಮಾನ ಮಾಡಲಾಯಿತು(೨೦೧೪)]]
"https://kn.wikipedia.org/wiki/ಯು._ಬಿ._ಪವನಜ" ಇಂದ ಪಡೆಯಲ್ಪಟ್ಟಿದೆ