ಬಿರಿಯಾನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by Udayavani (talk) to last revision by Skylark95choppen
೭ ನೇ ಸಾಲು:
==ಮೂಲ==
[[ಮೊಘಲ್ ಸಾಮ್ರಾಜ್ಯ|ಮೊಗಲರು]] ಬಿರಿಯಾನಿಯ ಪ್ರವರ್ತಕರೆಂದು ಚರಿತ್ರೆಯ ಮೂಲಗಳು ಹೇಳುತ್ತವೆ. <ref>{{cite news |title=The Story of Biryani: How This Exotic Dish Came, Saw and Conquered India! |url=https://www.thebetterindia.com/60553/history-biryani-india/ |accessdate=5 January 2020 |work=The Better India |date=6 July 2016}}</ref>ಇತ್ತೀಚಿನ ದಿನಗಳಲ್ಲಿ ಭಾರತೀಯರು ಬಿರಿಯಾನಿ ಮಾಡುವ ಕ್ರಮವನ್ನು ರೂಢಿಸಿಕೊಂಡಿದ್ದಾರೆ. 'ಬಿರಿಯಾನಿ' ಎಂಬ ಪದವು [[ಪಾರ್ಸಿಕರು|ಪರ್ಷಿಯನ್]] ಪದವಾದ ಬಿರಿಯನ್ ನಿಂದ ಬಂದಿದೆ. <ref>{{cite news |title=Everything you want to know about biryani |url=https://www.hindustantimes.com/india/everything-you-want-to-know-about-biryani/story-YTHNsrnZm2cQyviBzBLKkJ.html |accessdate=10 January 2020 |work=Hindustan Times |date=27 February 2010 |}}</ref>ಇದು ದಕ್ಷಿಣ ಏಷ್ಯಾದಲ್ಲಿ ಬಹಳ ಜನಪ್ರಿಯವಾದ ಖಾದ್ಯವಾಗಿದೆ. ಭಾರತದ ಎಲ್ಲಾ ಕಡೆಯಲ್ಲೂ ಈ ಖಾದ್ಯವನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದಲ್ಲಿ ಅಕ್ಕಿಯು ಪ್ರಧಾನ ಆಹಾರವಾಗಿದ್ದುದರಿಂದ [[ತೆಲಂಗಾಣ]], [[ತಮಿಳು ನಾಡು]], [[ಕೇರಳ]] ಮತ್ತು [[ಕರ್ನಾಟಕ]]ದಲ್ಲಿ ವಿಭಿನ್ನ ರೀತಿಯ ಬಿರಿಯಾನಿಗಳನ್ನು ಮಾಡುತ್ತಿದ್ದರು.<ref>{{cite news |last1=Karan |first1=Pratibha |title=Biryani |url=https://books.google.co.in/books?id=cZe-r38DYjcC&redir_esc=y |accessdate=10 January 2020 |publisher=Random House India |date=24 July 2017 |}}</ref> ಬಿರಿಯಾನಿಗಳಲ್ಲಿ ಅನೇಕ ರೀತಿಯ ವಿಧಗಳಿವೆ. ಸಾಮಾನ್ಯವಾಗಿ ಆಯಾ ಪ್ರದೇಶದ ಹೆಸರಿನೊಂದಿಗೆ ಕರೆಯುತ್ತಾರೆ.<ref>{{cite news |title=Hyderabadi Chicken Dum Biryani |url=https://www.bawarchi.com/recipe/hyderabadi-dum-biryani-oetp1Rihadbbc.html |accessdate=5 January 2020 |work=Bawarchi |}}</ref> ಉದಾಹರಣೆಗೆ ಹೈದರಾಬಾದ್ ಬಿರಿಯಾನಿ ದಕ್ಷಿಣ ಭಾರತದ [[ಹೈದರಾಬಾದ್]] ನಗರದಲ್ಲಿ ಮಾಡುತ್ತಾರೆ.<ref>{{cite news |title=The Other Hyderabadi Biryani With a 300-Year-Old Past |url=https://food.ndtv.com/opinions/the-other-hyderabadi-biryani-with-a-300-year-old-past-730300 |accessdate=5 January 2020 |work=NDTV Food}}</ref>ಮಲಬಾರಿ ಬಿರಿಯಾನಿ ಕೆರಳದ ಕರಾವಳೆಯಲ್ಲಿ ಅರಬ್ ವ್ಯಾಪಾರಿಗಳ ಸಂಬರ್ಕದಿಂದ ಬೆಳದುಬಂದ ರೀತಿ. ಸಿಂಧಿ ಬಿರಿಯಾನಿ ಸಾಮಾನ್ಯವಾಗಿ ಸಿಂಧ್ ಪ್ರದೇಶದಲ್ಲಿ ಮಾಡುತ್ತಾರೆ.
 
ಮೀನು ಪ್ರಿಯರಿಗೆ ಸಿಗಡಿ ಅಂದರೆ ಎಲ್ಲರಿಗೆ ಅಚ್ಚು ಮೆಚ್ಚು. ಮಾಂಸಹಾರದಲ್ಲಿ ಅತ್ಯಂತ ಆರೋಗ್ಯಕರವಾದ ಆಹಾರದಲ್ಲಿ ಸಿಗಡಿಯೂ ಉತ್ತಮವಾದ ಸ್ಥಾನಮಾನ ಪಡೆದಿದೆ. ಸಿಗಡಿ ಪಶ್ವಿಮ ಮತ್ತು ಪೂರ್ವ ಕಡಲ ಕಿನಾರೆಯಲ್ಲಿ ಧಾರಾಳ ದೊರೆಯುತ್ತವೆ. ಸಿಗಡಿಯನ್ನು ಒಂದು ಮುಖ್ಯವಾದ ಮೀನಿನ ಪಂಗಡವೆಂದು ಪರಿಗಣಿಸಲಾಗಿದೆ. ಸುಮಾರು 30ಕ್ಕಿಂತಲೂ ಹೆಚ್ಚು ಬಗೆಯ ಸಿಗಡಿಗಳಿವೆ. ಅವುಗಳ ಗಾತ್ರದಲ್ಲೂ ವ್ಯತ್ಯಾಸಗಳಿವೆ. ಸುಮಾರು 6 ಸೆಂ.ಮೀ. ಗಾತ್ರದಿಂದ 30 ಸೆಂ.ಮೀ. ವರೆಗೆ ಬೆಳೆಯುವ ಸಿಗಡಿಗಳಿವೆ. ಸಿಗಡಿಯನ್ನು ತುಳುವಿನಲ್ಲಿ ಎಟ್ಟಿ ಎಂದು ಕರೆಯುತ್ತಾರೆ.
 
ನೀವು ಮನೆಯಲ್ಲೇ ಸಿದ್ಧ ಪಡಿಸಿ; ಮಾಂಸಹಾರಿಗಳು ಇಷ್ಟಪಡುವ ಮತ್ತು ಪೌಷ್ಠಿಕಾಂಶದ ಸಿಗಡಿ ಬಿರಿಯಾನಿಯನ್ನು ನೀವೂ ಒಮ್ಮೆ ಸವಿದು ನೋಡಿ.
 
'''ಬೇಕಾಗುವ ಸಾಮಗ್ರಿಗಳು'''
 
ಸಿಗಡಿ 20, ಬಾಸುಮತಿ ಅಕ್ಕಿ 1/2 ಕೆ.ಜಿ., ಟೊಮೆಟೋ 2, ಈರುಳ್ಳಿ 4, ತುಪ್ಪ 4 ಚಮಚ, ಜೀರಿಗೆ 1 ಚಮಚ, ಅರಿಶಿನ ಪುಡಿ ಸ್ವಲ್ಪ, ಗಸಗಸೆ 1 ಚಮಚ, ಕರಿಮೆಣಸು 5 ರಿಂದ 10, ಮೆಣಸಿನ ಕಾಯಿ 5, ಒಣಮೆಣಸು 5, ಏಲಕ್ಕಿ 4, ಲವಂಗ 5, ಬೆಳ್ಳುಳ್ಳಿ ಬೀಜ 4, ಹಸಿ ಶುಂಠಿ ಸ್ವಲ್ಪ, ಕೊತ್ತಂಬರಿ ಸೊಪ್ಪು 1 ಕಂತೆ, ತೆಂಗಿನ ತುರಿ 2 ಚಮಚ ಗೇರು ಬೀಜ 10 ರುಚಿಗೆ ತಕ್ಕಷ್ಟು ಉಪ್ಪು.
 
'''ತಯಾರಿಸುವ ವಿಧಾನ'''
 
ಸಿಗಡಿ ಸಿಪ್ಪೆ ಸುಲಿದು(ತಲೆಭಾಗ ಸೇರಿ)ತೆಗೆದು ಹಾಕಿ, ಸ್ವಚ್ಛಗೊಳಿಸಿ ನೀರಲ್ಲಿ ತೊಳೆಯಿರಿ. ನಂತರ ನೀರು ಬಸಿದು ಹಿಂಡಿ ತೆಗೆಯಿರಿ. ಜೀರಿಗೆ, ಗಸಗಸೆ, ಕರಿ ಮೆಣಸು, ಹಸಿ ಮೆಣಸು, ಒಣ ಮೆಣಸು, ಬೆಳ್ಳುಳ್ಳಿ ಬೀಜ, ಶುಂಠಿ, ಆರಿಶಿನ ಪುಡಿ, 1 ಈರುಳ್ಳಿ ಮತ್ತು ತೆಂಗಿನ ತುರಿ ಹಾಕಿ ಈ ಎಲ್ಲ ಪದಾರ್ಥಗಳನ್ನು ಮಿಕ್ಸರಿಗೆ ಹಾಕಿ ನಯವಾಗಿ ಮಸಾಲೆ ರುಬ್ಬಿರಿ. ಅಕ್ಕಿಯನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ 3 ಕಪ್ ನೀರು ಬಿಸಿ ಮಾಡಿ ಪಕ್ಕದಲ್ಲಿಟ್ಟುಕೊಳ್ಳಿ. ಬಿರಿಯಾನಿ ಮಾಡುವ ಪಾತ್ರೆಗೆ 4 ಚಮಚ ತುಪ್ಪ ಹಾಕಿ ಒಲೆಯ ಮೇಲಿಟ್ಟು ಕಾಯಿಸಿರಿ. ಅದರಲ್ಲಿ ಈರುಳ್ಳಿ ಕೊಚ್ಚಲನ್ನು ಹಾಕಿ ಹುರಿಯಿರಿ. ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಟೊಮೆಟೋ ಸೇರಿಸಿ ಸ್ವಲ್ಪ ಹುರಿದು ಸಿಗಡಿಯನ್ನು ಸೇರಿಸಿ ಮಗುಚಿರಿ. ಇವುಗಳನ್ನು ಚೆನ್ನಾಗಿ ಹುರಿದ ಮೇಲೆ ಅಕ್ಕಿ ಸೇರಿಸಿ ಹುರಿಯಿರಿ. ನಂತರ 3 ಕಪ್ ಬಿಸಿ ನೀರು ಸೇರಿಸಿ, ಲವಂಗ, ಏಲಕ್ಕಿ, ಗೇರು ಬೀಜ ಮತ್ತು ರುಚಿಗೆ ಉಪ್ಪು ಹಾಕಿ ಒಂದು ಕುದಿ ಚೆನ್ನಾಗಿ ಬಂದ ಮೇಲೆ ಉರಿಯನ್ನು ಮಂದಗೊಳಿಸಿರಿ. ಪಾತ್ರೆಯನ್ನು ಮುಚ್ಚಿ ಮಂದ ಉರಿಯ ಮೇಲೆ ಬೇಯಿಸಿರಿ. ಬಿರಿಯಾನಿ ತಳ ಹತ್ತದಂತೆ 2 ರಿಂದ 3 ಬಾರಿ ಮುಚ್ಚಳ ತೆಗೆದು ಮಗುಚಿರಿ. ಪಾತ್ರೆಯಲ್ಲಿ ನೀರು ಪೂರ್ತಿ ಆರಿದ ಬಳಿಕ ಪಾತ್ರೆ ಕೆಳಗಿಸಿರಿ. ಈಗ ಬಿಸಿ-ಬಿಸಿಯಾದ ಸಿಗಡಿ ಬಿರಿಯಾನಿ ಸವಿಯಲು ಸಿದ್ಧ.[https://www.udayavani.com/articles/web-focus/prawn-biryani-recipe]
 
==ಬೇಕಾಗುವ ಸಾಮಾನು==
"https://kn.wikipedia.org/wiki/ಬಿರಿಯಾನಿ" ಇಂದ ಪಡೆಯಲ್ಪಟ್ಟಿದೆ