ಅನಿತಾ ರತ್ನಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೮ ನೇ ಸಾಲು:
|website = [http://www.anitaratnam.com/ www.anitaratnam.com]
}}
ಅನಿತಾ ರತ್ನಂ ರವರು [[ಭಾರತೀಯ]] ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯಗಾರ್ತಿ ಹಾಗೂ [[ನೃತ್ಯ]] ಸಂಯೋಜಕಿ.[[ಭರತನಾಟ್ಯ]], [[ಮೋಹಿನಿಯಟ್ಟಂ]], [[ತೈ ಚಿ ಚುಆನ್]] ಮತ್ತು [[ಕಳರಿ ಪಯಟ್ಟು]] ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದ ಅವರು "ನಿಯೋ ಭರತ ನಾಟ್ಯಂ" ಎಂಬ ಹೆಸರಿನ ನೃತ್ಯ ಶೈಲಿಯನ್ನು ರಚಿಸಿದ್ದಾರೆ.<ref>https://prabook.com/web/anita.ratnam/726459</ref>ಅನಿತಾ ರವರು ೧೯೯೨ ರಲ್ಲಿ [[ಚೆನ್ನೈ]]ನಲ್ಲಿ ಸ್ಥಾಪಿಸಲಾದ ಅರಂಗಮ್ ಟ್ರಸ್ಟ್ ನ ಸ್ಥಾಪಕ-ನಿರ್ದೇಶಕಿ.<ref>http://chennaiyilthiruvaiyaru.com/anita-rathnam/</ref>ಹಾಗೆಯೇ ಪ್ರತಿವರ್ಷ [[ಡಿಸೆಂಬರ್]] ತಿಂಗಳಲ್ಲಿ ಚೆನ್ನೈನಲ್ಲಿ ನಡೆಯುವ [[ಭಾರತ]]ದ ಸಮಕಾಲೀನ ನೃತ್ಯ ಉತ್ಸವ 'ದಿ ಅದರ್ ಫೆಸ್ಟಿವಲ್' ನ ಸಹ-ಸ್ಥಾಪಕಿ ಹಾಗೂ ಪ್ರವರ್ತಕಿ.ಅಲ್ಲದೇ ಅವರು ೧೯೯೩ ರಲ್ಲಿ ಅರಂಗಮ್ ಡ್ಯಾನ್ಸ್ ಥಿಯೇಟರ್ ಎಂಬ ಪ್ರದರ್ಶನ ಕಂಪನಿಯನ್ನೂ ಸ್ಥಾಪಿಸಿದ್ದಾರೆ.ನೃತ್ಯ ಸಂಯೋಜಕಿಯಾಗಿ, ವಿದ್ವಾಂಸೆಯಾಗಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತೆಯಾಗಿ ಅನಿತಾರವರು ಹಲವು [[ಪ್ರಶಸ್ತಿ]]ಯನ್ನು ಪಡೆದುಕೊಂಡಿದ್ದಾರೆ.
==ತರಬೇತಿ==
ಅನಿತಾ ರತ್ನಂ ರವರು ಆರಂಭದಲ್ಲಿ ಭರತನಾಟ್ಯ ಗುರು, ಅಡ್ಯಾರ್ ಕೆ.ಲಕ್ಷ್ಮಣ್ ರವರಿಂದ ನೃತ್ಯ [[ತರಬೇತಿ]]ಯನ್ನು ಪಡೆದರು.ನಂತರ ಉನ್ನತ ತರಬೇತಿಗಾಗಿ, ರುಕ್ಮಿಣಿ ದೇವಿ ಅರುಂಡಾಲೆ ಅವರ 'ಕಲಾಕ್ಷೇತ್ರ' ಎಂಬ ನೃತ್ಯ ಅಕಾಡೆಮಿಗೆ ಸೇರಿ, ನೃತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದಕೊಂಡರು.ಅವರು ಭರತನಾಟ್ಯ ಹಾಗೂ [[ಕೇರಳ]]ದ ಶಾಸ್ತ್ರೀಯ ನೃತ್ಯಗಳಾದ [[ಕಥಕ್ಕಳಿ]] ಮತ್ತು ಮೋಹಿನಿಯಟ್ಟಂ ನಲ್ಲಿಯೂ ತರಬೇತಿ ಪಡೆದಿದ್ದಾರೆ.<ref>https://www.mapsofindia.com/who-is-who/art-culture/anita-ratnam.html</ref>
"https://kn.wikipedia.org/wiki/ಅನಿತಾ_ರತ್ನಂ" ಇಂದ ಪಡೆಯಲ್ಪಟ್ಟಿದೆ