ಅನಿತಾ ರತ್ನಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನದ ರಚನೆಗಾಗಿ
( ಯಾವುದೇ ವ್ಯತ್ಯಾಸವಿಲ್ಲ )

೧೬:೪೭, ೩೧ ಮಾರ್ಚ್ ೨೦೨೦ ನಂತೆ ಪರಿಷ್ಕರಣೆ

ಅನಿತಾ ರತ್ನಂ ರವರು ಭಾರತೀಯ ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯಗಾರ್ತಿ ಹಾಗೂ ನೃತ್ಯ ಸಂಯೋಜಕಿ.ಭರತನಾಟ್ಯ, ಮೋಹಿನಿಯಟ್ಟಂ, ತೈ ಚಿ ಚುಆನ್ ಮತ್ತು ಕಳರಿ ಪಯಟ್ಟು ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದ ಅವರು "ನಿಯೋ ಭರತ ನಾಟ್ಯಂ" ಎಂಬ ಹೆಸರಿನ ನೃತ್ಯ ಶೈಲಿಯನ್ನು ರಚಿಸಿದ್ದಾರೆ.[೧]ಅನಿತಾ ರವರು ೧೯೯೨ ರಲ್ಲಿ ಚೆನ್ನೈನಲ್ಲಿ ಸ್ಥಾಪಿಸಲಾದ ಅರಂಗಮ್ ಟ್ರಸ್ಟ್ ನ ಸ್ಥಾಪಕ-ನಿರ್ದೇಶಕಿ.[೨]ಅಲ್ಲದೇ ಅವರು ೧೯೯೩ ರಲ್ಲಿ ಅರಂಗಮ್ ಡ್ಯಾನ್ಸ್ ಥಿಯೇಟರ್ ಎಂಬ ಪ್ರದರ್ಶನ ಕಂಪನಿಯನ್ನೂ ಸ್ಥಾಪಿಸಿದ್ದಾರೆ.

ಅನಿತಾ ರತ್ನಂ
Anita Ratnam, 2012 in Cologne
Born (1954-05-21) ೨೧ ಮೇ ೧೯೫೪ (ವಯಸ್ಸು ೬೯)
ಮಧುರೈ, ತಮಿಳು ನಾಡು
Nationalityಭಾರತೀಯ
Educationಕಲಾಕ್ಷೇತ್ರ
Occupation(s)ನೃತ್ಯಗಾರ್ತಿ, ನೃತ್ಯ ಸಂಯೋಜಕಿ
Known forನಿರ್ದೇಶಕಿ, ಅರಂಗಮ್ ಸಂವಾದಾತ್ಮಕ, ಚೆನ್ನೈ
Websitewww.anitaratnam.com

ತರಬೇತಿ

ಅನಿತಾ ರತ್ನಂ ರವರು ಆರಂಭದಲ್ಲಿ ಭರತನಾಟ್ಯ ಗುರು, ಅಡ್ಯಾರ್ ಕೆ.ಲಕ್ಷ್ಮಣ್ ರವರಿಂದ ನೃತ್ಯ ತರಬೇತಿಯನ್ನು ಪಡೆದರು.ನಂತರ ಉನ್ನತ ತರಬೇತಿಗಾಗಿ, ರುಕ್ಮಿಣಿ ದೇವಿ ಅರುಂಡಾಲೆ ಅವರ 'ಕಲಾಕ್ಷೇತ್ರ' ಎಂಬ ನೃತ್ಯ ಅಕಾಡೆಮಿಗೆ ಸೇರಿ, ನೃತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದಕೊಂಡರು.ಅವರು ಭರತನಾಟ್ಯ ಹಾಗೂ ಕೇರಳದ ಶಾಸ್ತ್ರೀಯ ನೃತ್ಯಗಳಾದ ಕಥಕ್ಕಳಿ ಮತ್ತು ಮೋಹಿನಿಯಟ್ಟಂ ನಲ್ಲಿಯೂ ತರಬೇತಿ ಪಡೆದಿದ್ದಾರೆ.[೩]

ವೃತ್ತಿ ಜೀವನ

 
೨೦೧೨ ರಲ್ಲಿ, ಕಲೋನ್, ರಾಟೆನ್ಸ್ಟ್ರಾಚ್-ಜೋಯೆಸ್ಟ್ ಮ್ಯೂಸಿಯಂನ "ರಾಮಾಯಣ ಇನ್ ಪರ್ಫೋರ್ಮೆನ್ಸ್" ಉತ್ಸವದಲ್ಲಿ ಅನಿತಾ ರತ್ನಂ

ಅನಿತಾ ರತ್ನಂ ರವರು ನ್ಯೂ ಓರ್ಲಿಯನ್ಸ್ ವಿಶ್ವವಿದ್ಯಾನಿಲಯದಿಂದ, ಥಿಯೇಟರ್ ಮತ್ತು ಟೆಲಿವಿಷನ್ ನಲ್ಲಿ ಎಂ.ಎ ಮಾಡಿದ್ದಾರೆ.ನಂತರ ಹತ್ತು ವರ್ಷಗಳ ಕಾಲ ಯುನೈಟೆಡ್ ಸ್ಟೇಟ್ಸ್ ನಲ್ಲಿ ದೂರದರ್ಶನ ನಿರ್ಮಾಪಕಿಯಾಗಿ ಕೆಲಸ ಮಾಡಿದರು.[೪]೨೦೦೭ ರಲ್ಲಿ ಕೆನಡಾ ಮೂಲದ ನೃತ್ಯಗಾರ-ನೃತ್ಯ ಸಂಯೋಜಕರಾದ ಹರಿ ಕೃಷ್ಣನ್ ಅವರ ಸಹಯೋಗದೊಂದಿಗೆ, ನ್ಯೂಯಾರ್ಕ್ ನ ಜಾಯ್ಸ್ ಸೊಹೊ ದಲ್ಲಿ "ಸೆವೆನ್ ಗ್ರೇಸಸ್" ಎಂಬ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದ್ದಾರೆ.ಅನಿತಾರವರು ಕಂಡುಕೊಂಡೈನ್ ಕಂಡುಕೊಂಡೈನ್(೨೦೦೦) ಮತ್ತು ಬಾಯ್ಸ್(೨೦೦೩) ನಂತಹ ಕೆಲವು ತಮಿಳು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ನೃತ್ಯ ಸಂಯೋಜನೆಗಳು

  • ಎ ಮ್ಯಾಪ್ ಟು ದಿ ನೆಕ್ಸ್ಟ್ ವರ್ಲ್ಡ್ (೧೯೯೭), ಸ್ಥಳೀಯ ಅಮೆರಿಕನ್ ಕವಿ ಜಾಯ್ ಹರ್ಜೊರವರೊಂದಿಗೆ.
  • ಇನ್ನರ್ ವರ್ಲ್ಡ್ (೧೯೯೮), ಮಿನಿಯಾಪೊಲಿಸ್ ನ ಪಂಗಿಯಾ ವರ್ಲ್ಡ್ ಥಿಯೇಟರ್ ನೊಂದಿಗೆ.
  • ಡಾಟರ್ಸ್ ಆಫ್ ದಿ ಓಷನ್ (೧೯೯೯), ಬರಹಗಾರ್ತಿ ಶೋಭಿತಾ ಪುಂಜಾರವರೊಂದಿಗೆ.
  • ಡಸ್ಟ್ (೨೦೦೨), ಮಾರ್ಕ್ ಟೇಲರ್(ಪಿಟ್ಸ್ಬರ್ಗ್, ಯುಎಸ್ಎ)ರವರೊಂದಿಗೆ.[೫]
  • ಹೈಪನೇಟೆಡ್ (೨೦೦೨), ಟೊರಾಂಟೋದ ಲತಾ ಪದಕ್ಕೆ.
  • ಸೆವೆನ್ ಗ್ರೇಸಸ್ (೨೦೦೫), ಕೆನಡಾ ಮೂಲದ ಹರಿ ಕೃಷ್ಣನ್ ರವರೊಂದಿಗೆ.
  • ವೋರ್ಟೆಕ್ಸ್ಟ್ (೨೦೦೬), ಕೆನಡಾದ ನೃತ್ಯ ಕಲಾವಿದ ಪೀಟರ್ ಚಿನ್ ರವರೊಂದಿಗೆ.
  • ಮಾತ್ರಿಕಾ (೨೦೦೯).

ಪ್ರಶಸ್ತಿಗಳು ಮತ್ತು ಬಿರುದುಗಳು

ಅನಿತಾ ರತ್ನಂ ರವರು ದೇಶ ವಿದೇಶಗಳಲ್ಲಿ, ಪ್ರದರ್ಶನ ಕಲೆಯಲ್ಲಿನ ಕೆಲಸಕ್ಕಾಗಿ ಹಲವಾರು ಪ್ರಶಸ್ತಿಗಳು ಹಾಗೂ ಬಿರುದುಗಳನ್ನು ಪಡೆದುಕೊಂಡಿದ್ದಾರೆ:[೬]

  • ಶ್ರೀ ಕೃಷ್ಣ ಗಾನ ಸಭಾ, ಚೆನ್ನೈನ 'ನೃತ್ಯ ಚೂಡಾಮಣಿ'(೧೯೯೬)
  • ತಮಿಳು ನಾಡು ಸರ್ಕಾರದಿಂದ ನೃತ್ಯ ಸಂಶೋಧನೆಗಾಗಿ, 'ಕಲೈಮಾಮಣಿ'(೧೯೯೮)
  • ನ್ಯೂಯಾರ್ಕ್ ನ ರಾಷ್ಟ್ರೀಯ ಮಹಿಳಾ ಸಂಘಟನೆಯಿಂದ 'ಮೀಡಿಯಾ ಅಚೀವ್ಮೆಂಟ್ ಪ್ರಶಸ್ತಿ'(೧೯೯೧)
  • ಸಾಂಸ್ಕೃತಿಕ ಸಾಮರಸ್ಯಕ್ಕಾಗಿ, 'ಮಹಾತ್ಮ ಗಾಂಧಿ ಪ್ರಶಸ್ತಿ'(೧೯೮೬)ಯುಎಸ್
  • ಮೈಸೂರಿನ ಶ್ರೀ ಲಲಿತಕಲಾ ಫೌಂಡೇಶನ್ ಟ್ರಸ್ಟ್ ವತಿಯಿಂದ 'ಲಲಿತಕಲಾರತ್ನ'(೨೦೦೩)
  • ನವದೆಹಲಿಯ ಶ್ರೀ ಷಣ್ಮುಖಾನಂದ ಸಂಗೀತ ಸಭಾ ವತಿಯಿಂದ 'ನಾಟ್ಯರತ್ನ'(೨೦೦೩)
  • ಯುನೈಟೆಡ್ ಕಿಂಗ್ಡಂ, 'ನ್ಯಾಷನಲ್ ಇಂಡಿಯನ್ ಆರ್ಟ್ಸ್ ಅವಾರ್ಡ್ಸ್'(ಮಿಲಾಪ್ ಫೆಸ್ಟ್)ನ 'ವಿಶ್ವ ಕಲಾ ರತ್ನ'(೨೦೧೭)

ಉಲ್ಲೇಖಗಳು

  1. https://prabook.com/web/anita.ratnam/726459
  2. http://chennaiyilthiruvaiyaru.com/anita-rathnam/
  3. https://www.mapsofindia.com/who-is-who/art-culture/anita-ratnam.html
  4. https://www.webindia123.com/dances/dancer/Anita_Ratnam.htm
  5. https://web.archive.org/web/20081202111908/http://www.hinduonnet.com/thehindu/mp/2002/12/04/stories/2002120400330100.htm
  6. http://chennaiyilthiruvaiyaru.com/anita-rathnam/