ಸೊಲ್ಲಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Satrasta,_Solapur.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
→‎ಹೆಸರಿನ ಮೂಲ: Removed uncited information
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೯ ನೇ ಸಾಲು:
 
=='''ಹೆಸರಿನ ಮೂಲ'''==
ಸೊಲ್ಲಾಪುರ ಜಿಲ್ಲೆ ಪುರಾತನ ಕಾಲದಿಂದಲೂ ಆಂಧ್ರಭೃತ್ಯರು, [[ಚಾಲುಕ್ಯ|ಚಾಲುಕ್ಯರು]], [[ರಾಷ್ಟ್ರಕೂಟ|ರಾಷ್ಟ್ರಕೂಟರು]], ಯಾದವರು ಮತ್ತು ಬಹಮನಿ ಸುಲ್ತಾನ ಇತ್ಯಾದಿ ರಾಜರುಗಳ ಆಳ್ವಿಕೆಗೆ ಒಳಪಟ್ಟಿತ್ತು. ಸೊಲ್ಲಾಪುರ ಎಂಬ ಹೆಸರು ಸೋಳಾ ( ಹದಿನಾರು) ಮತ್ತು ಪುರ ( ಹಳ್ಳಿ) ಎಂಬ ಪದಗಳಿಂದ ಬಂದಿರಬೇಕು ಅನ್ನುತ್ತಾರೆ. ಈಗಿನ ಸೊಲ್ಲಾಫುರದಲ್ಲಿ ಆದಿಲಪುರ, ಅಹಮದ್ ಪುರ, ಚಪಲದೇವ, ಫತೇಹ್ ಪುರ, ಜಾಮದಾರವಾಡಿ, ಕಲಜಾಪುರ, ಖದರಪುರ, ಖಂಡೇರ್‍ವಕಿವಾಡಿ, ಮುಹಮ್ಮದ್ ಪುರ, ರಾನಾಪುರ, ಸಂದಾಲಪುರ, ಶೇಕ್ ಪುರ, ಸೋಲಾಪುರ, ಸೋನಲಗಿ, ಸೋನಾಪುರ ಮತ್ತು ವೈದಕ್ ವಾಡಿ ಎಂಬ ಹದಿನಾರು ಹಳ್ಳಿಗಳು ಅಡಕವಾಗಿವೆ. ಆದರೆ ಈಚೆಗಿನ ಸಂಶೋಧನೆಯ ಪ್ರಕಾರ ಈ ನಂಬಿಕೆ ನಿರಾಧಾರವಾದದ್ದು. ಕಾಮಟಿ ಎಂಬಲ್ಲಿ ಸಿಕ್ಕಿರುವ, ಶಕೆ ೧೨೩೮ರ, ಯಾದವರ ಪತನದ ನಂತರದ ಕಾಲದ, ಒಂದು ಸಂಸ್ಕೃತ ಶಾಸನದ ಪ್ರಕಾರ ಈ ಊರಿನ ಹೆಸರು ಸೋನಾಲಿಪುರ. ಸೊಲ್ಲಾಪುರ ಕೋಟೆಯೊಳಗಿನ ಒಂದು ಶಾಸನದ ಪ್ರಕಾರ , ಈ ಊರನ್ನು ಸೋನಾಲಪುರ ಎಂದು ಕರೆಯಲಾಗುತ್ತಿತ್ತು. ಕೋಟೆಯ ಬಾವಿಯಮೇಲಿನ ಬರಹದ ಪ್ರಕಾರ ಊರಿನ ಹೆಸರು ಸಂದಾಲಪುರ ಎಂದಿತ್ತು.
 
ಮುಸ್ಲಿಮ್ ಆಡಳಿತದಕಾಲದಲ್ಲಿಯೂ ಇದು ಸಂದಾಲಪುರವಾಗಿತ್ತು. ಆದ್ದರಿಂದ ಸೋನಾಲಪುರ ಕಾಲಕ್ರಮೇಣ ತನ್ನ ನ ಕಾರವನ್ನು ಕಳೆದುಕೊಂಡು ಸೋಲಾಪುರ ಎಂದಾಗಿರಬಹುದು ಎಂದು ಊಹಿಸಲು ಕಾರಣಗಳಿವೆ. ಮುಂದೆ ಬ್ರಿಟಿಶರ ಬಾಯಲ್ಲಿ ಇದು ಶೋಲಾಪುರವಾಗಿ , ಈಗಲೂ ಶೋಲಾಪುರ ಎಂಬ ಹೆಸರನ್ನೂ ಉಪಯೋಗಿಸಲಾಗುತ್ತದೆ.
 
ಮುಸ್ಲಿಮ್ ಆಡಳಿತದಕಾಲದಲ್ಲಿಯೂ ಇದು ಸಂದಾಲಪುರವಾಗಿತ್ತು. ಆದ್ದರಿಂದ ಸೋನಾಲಪುರ ಕಾಲಕ್ರಮೇಣ ತನ್ನ ನ ಕಾರವನ್ನು ಕಳೆದುಕೊಂಡು ಸೋಲಾಪುರ ಎಂದಾಗಿರಬಹುದು ಎಂದು ಊಹಿಸಲು ಕಾರಣಗಳಿವೆ. ಮುಂದೆ ಬ್ರಿಟಿಶರ ಬಾಯಲ್ಲಿ ಇದು ಶೋಲಾಪುರವಾಗಿ , ಈಗಲೂ ಶೋಲಾಪುರ ಎಂಬ ಹೆಸರನ್ನೂ ಉಪಯೋಗಿಸಲಾಗುತ್ತದೆ.
=='''ಇತಿಹಾಸ'''==
ಈಗಿನ ಸೋಲಾಪುರ ಜಿಲ್ಲೆ ಮೊದಲು ಅಹಮದ್ ನಗರ, [[ಪುಣೆ]] ಮತ್ತು ಸತಾರಾ ಜಿಲ್ಲೆಗಳಲ್ಲಿ ಹಂಚಿಹೋಗಿತ್ತು. ೧೮೩೮ರಲ್ಲಿ ಇದು ಅಹಮದ್ ನಗರದ ಉಪ-ಜಿಲ್ಲೆಯಾಯಿತು. ಇದರಲ್ಲಿ ಬಾರ್ಶಿ, ಮೋಹೋಲ್,ಮಧಾ, ಕರ್ಮಾಲಾ, ಇಂಡಿ, ಹಿಪ್ಪರಗಿ ಮತ್ತು ಮುದ್ದೇಬಿಹಾಳ ಉಪವಿಭಾಗಳು ಸೇರಿದ್ದವು. ೧೮೬೪ರಲ್ಲಿ ಈ ಉಪ-ಜಿಲ್ಲೆಯನ್ನು ರದ್ದುಗೊಳಿಸಲಾಯಿತು. ೧೮೭೧ರಲ್ಲಿ ಇದನ್ನು ಸೊಲ್ಲಾಪುರ,ಬಾರ್ಶಿ, ಮೋಹೋಲ್, ಮಧಾ ಮತ್ತು ಕರ್ಮಾಲಾ ಅಲ್ಲದೆ ಸತಾರಾ ಜಿಲ್ಲೆಯ ಎರಡು ಉಪ-ವಿಭಾಗಗಳಾದ ಪಂಢರಪುರ ಮತ್ತು ಸಂಗೋಳಾ ಸೇರಿದಂತೆ ಒಂದು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ೧೮೭೫ರಲ್ಲಿ ಇದಕ್ಕೆ ಮಾಲ್ಶಿರಸ್ ಉಪ-ವಿಭಾಗವನ್ನು ಸೇರಿಸಲಾಯಿತು. [[೧೯೫೬|೧೯೫೬ರ]] ರಾಜ್ಯಗಳ ಪುನರ್‍ರಚನೆಯ ಸಂದರ್ಭದಲ್ಲಿ ಸೊಲ್ಲಾಪುರ [[ಮಹಾರಾಷ್ಟ್ರ|ಮಹಾರಾಷ್ಟ್ರಕ್ಕೆ]] ಸೇರಿತು.
"https://kn.wikipedia.org/wiki/ಸೊಲ್ಲಾಪುರ" ಇಂದ ಪಡೆಯಲ್ಪಟ್ಟಿದೆ