ಹುಣಸೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹುಣಸೂರು ಮಾದುಪ್ರಸಾದ್
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೭ ನೇ ಸಾಲು:
 
[[ವರ್ಗ:ಮೈಸೂರು ಜಿಲ್ಲೆಯ ತಾಲೂಕುಗಳು]]
 
ಮಂಟಿಮಾಳ ಕತೆ,
ಲೇಖಕರು: ಡಾ. ಮಾದುಪ್ರಸಾದ್ ಹುಣಸೂರು
ಅಭಿಪ್ರಾಯ: ಹನುಮಂತ ಹಾಲಗೇರಿ.
“ನಾವು ಊರು ಬಿಟ್ಟು ಹೋಗಬೇಕಂತೆ, ಇಲ್ಲ ಅಂದ್ರೆ ಇಡೀ ಊರ್ಗೇ ಪಾಪ ಸುತ್ಕೊಂಡದಂತೆ”. ಇದು “ಮಂಟಿಮಾಳ” ಕತೆಯಲ್ಲಿ ರಾಚ ಎಂಬ ನಥದೃಷ್ಟ ಪಾತ್ರವೊಂದು ಹೇಳುವ ಮಾತು. ಈ ಮಾತನ್ನು ಇಲ್ಲಿನ ಎಲ್ಲ ಕತೆಗಳು ಕೇಂದ್ರ ಪಾತ್ರಗಳಿಗೂ ಅನ್ವಯಿಸಬಹುದೇನೋ. ಯಾರದೋ ಕಪಟತನ, ಹುನ್ನಾರ, ಸ್ವಾರ್ಥ, ದಬ್ಬಾಳಿಕೆ, ವಂಚನೆಗೆ ಇಲ್ಲಿನ ತಳ ಸಮುದಾಯದ ಜೀವಗಳು ಊರು ಬಿಟ್ಟು ಹೋಗಬೇಕಾದ, ಯಾರೋ ಕೇಳುವ ದಾಖಲೆಗಳಿಗೆ ದೇಶವನ್ನೇ ತೊರೆಯಬೇಕಾದ ಅನಿವಾರ್ಯತೆಯಲ್ಲಿನ ನತದೃಷ್ಟ ಪಾತ್ರಗಳ ಅನುಭವದ ಬದುಕನ್ನೆ ಗೆಳೆಯ ಮಾದುಪ್ರಸಾದ್ ಕಥೆಗಳನ್ನಾಗಿ ಹೆಣೆದಿದ್ದಾರೆ. ಒಂದೊಂದು ಕಥೆ ಓದಿದಷ್ಟು ಆಳದಾಳದ ಕಂದರಕ್ಕೆ ಬಿಳುತ್ತಿದ್ದೆನೇನೋ ಎನ್ನುವಷ್ಟು ಭಯ ಕಾಡತೊಡಗಿ ಮನಸ್ಸು ಸಂಕಟಗೊಳ್ಳುತ್ತದೆ. ಉತ್ತರ ಕರ್ನಾಟಕದ ಭಾಗದವನಾದ ನಾನು, 70ರ ದಶಕದಲ್ಲಿಯೆ ದಲಿತ ಚಳವಳಿಯ ಏರುಗತಿಯಲ್ಲಿದ್ದ ಮೈಸೂರು ಸೀಮೆಯಲ್ಲಿ ನಮ್ಮ ಕಡೆ ಇದ್ದಷ್ಟು ಜಾತಿಯತೆ, ಮೌಡ್ಯಗಳು, ವರ್ಗ ಸಂಘರ್ಷ ಇರಲಿಕಿಲ್ಲ ಎಂದೇ ಭಾವಿಸಿದ್ದೆ. ಆದರೆ, ಗೆಳೆಯ ಮಾಧುಪ್ರಸಾದ್ ಕಂಡುಂಡ ಇಲ್ಲಿನ ಕತೆಗಳನ್ನು ಓದುತ್ತಿದ್ದರೆ, ಈ ಅನಿಷ್ಠಗಳು ಈ ಭಾಗದಲ್ಲಿಯೂ ಆಳದಲ್ಲಿ ಮತ್ತಷ್ಟು ಗಟ್ಟಿಗೊಳ್ಳುತ್ತಿವೆಯಲ್ಲ ಎಂದು ಖೇದವಾಗುತ್ತದೆ.
“ಮಂಟಿಮಾಳ”ದ ರೈತನಾಗುವ ಕನಸು ಕಂಡ ರಾಚ ಇಲ್ಲಿ ಯಾರದೋ ಮೌಡ್ಯಕ್ಕೆ ಕುಟುಂಬ ಸಮೇತ ಊರು ತೊರೆಯುವ ಮೂಲಕ “ಚೋಮ”ನನ್ನು ನೆನಪಿಸುತ್ತಾನೆ. “ತೆವಲು” ಕಥೆಯಲ್ಲಿನ ಅನಾಥ ಹೆಂಗಸು ತುತ್ತು ಕೂಳಿಗಾಗಿ ಮೈಯನ್ನೆ ಮಾರಿಕೊಂಡು ಅದರಿಂದ ಬಸಿರು ಹೊತ್ತು ಇನ್ನಷ್ಟು ಸಂಕಟವನ್ನು ಮೈಮೇಲೆ ಹಾಕಿಕೊಳ್ಳುತ್ತಾಳೆ. “ಸೀರೆ” ಕಥೆಯಲ್ಲಿ ತಾಯಿಯ ಮೈಮುಚ್ಚುವ ಒಂದು “ಸೀರೆ”ಗಾಗಿ ತಾಯಿಪೀಡಕ ತಂದೆಯನ್ನು ಮಗನೇ ಬಲಿತೆಗೆದುಕೊಳ್ಳುತ್ತಾನೆ. ಹೀಗೆ ಇಲ್ಲಿನ ಎಲ್ಲ ಕಥೆಗಳು ಅಂತ್ಯ ದುಖಾಂತ್ಯವೇ ಆಗಿವೆ ಮತ್ತು ಒಂದಕ್ಕೊಂದು ಇಂಟಲಿಂಕ್ ಇರುವಷ್ಟು ಬೆಸೆದುಕೊಂಡಿವೆ.
ಇಲ್ಲಿನ ಭಾಷೆ ಮತ್ತು ನಿರೂಪಣೆ ಸರಳಾತಿ ಸರಳ. ಕಥೆಗಳಲ್ಲಿನ ಸಣ್ಣ ಸಣ್ಣ ವಾಕ್ಯಗಳು ಮಹತ್ತರವಾದುದನ್ನು ದ್ವನಿಸುತ್ತವೆ. ರೂಪಕ, ಉಪಮೆಗಳ, ತಂತ್ರ ಇತ್ಯಾದಿಗಳ ಬಗ್ಗೆ ಕಥೆಗಾರ ತಲೆಕೆಡಸಿಕೊಳ್ಳದಿರುವುದರಿಂದ ಎಲ್ಲ ಕತೆಗಳು ಆರಾಮಾಗಿ ಓದಿಸಿಕೊಳ್ಳುತ್ತವೆ. ಸರಳತೆಯೇ ಈ ಕತೆಗಳ ಶಕ್ತಿ ಮತ್ತು ಮಿತಿಯೂ ಹೌದು. ಸಮಾಜದಲ್ಲಿನ ಜಾತಿಯತೆ, ಬಡವ ಶ್ರೀಮಂತ ಶ್ರೀಮಂತ, ಗೊಡ್ಡು ಸಂಪ್ರದಾಯಗಳ ಬಲೆಗೆ ಸಿಕ್ಕ ನಮ್ಮದೇ ಕುಟುಂಬದ ಬಂಧುವೊಬ್ಬ ತನ್ನ ಕತೆಯನ್ನು ಪಕ್ಕದಲ್ಲೇ ಆಗಾಗ ತೇವಗೊಂಡ ಕಣ್ಣುಗಳೊಂದಿಗೆ ತನ್ನ ಕಥೆಯನ್ನು ಓದುಗನಿಗೆ ದಾಟಿಸಿದ ಅನುಭವವಾಗುತ್ತದೆ. ತನ್ನ ಮೊದಲ ಸಂಕಲನದಲ್ಲೇ ನೆಲಕ್ಕಂಟಿದ ಬದುಕುಗಳ ಸಂಕಟವನ್ನು ಅನಾವಣಗೊಳಿಸುವ ಮೂಲಕ ಜೀವ ಕಾರುಣ್ಯದ ತತ್ರಾಣಿಯಂತೆ ಕಾಣುತ್ತಿರುವ ಗೆಳೆಯ ಮಾಧು, ತನ್ನ ಮೊದಲ ಸಂಕಲನದಲ್ಲೇ ಭರವಸೆಯ ಮೂಡಿಸಿದ್ದಾನೆ. ಆದ್ರೆ ಕಥನದ ಪರಿಸರ ಕಟ್ಟಿಕೊಡುವಲ್ಲಿ ಒಂದಿಷ್ಟು ವ್ಯವದಾನ ರೂಢಿಸಿಕೊಂಡರೆ ಹೊಟ್ಟೆಕಿಚ್ಚಾಗುವಂತ ಕಥೆಗಳನ್ನು ಬರೆಯಬಲ್ಲ. ಈ ಮಾತು ನನಗೂ ಅನ್ವಯಿಸುತ್ತದೆ ಎಂಬ ಎಚ್ಚರದಲ್ಲಿಯೇ ಹೇಳಿದ್ದೇನೆ.
 
ಹನುಮಂತ ಹಾಲಗೇರಿ
ಕತೆಗಾರರು.
 
== ಹರವೆ ==
"https://kn.wikipedia.org/wiki/ಹುಣಸೂರು" ಇಂದ ಪಡೆಯಲ್ಪಟ್ಟಿದೆ