ಶ್ಯಾಮ್ ಬೆನಗಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೨ ನೇ ಸಾಲು:
 
==[[ಅಂಕುರ್]]ಚಲನಚಿತ್ರದ ನಿರ್ದೇಶನ==
ಶ್ಯಾಮ್ ಬೆನೆಗಲ್ ತಮ್ಮ ವಾಕ್ಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಅಂಕುರ್ ಚಿತ್ರದಿಂದ. [[ಅನಂತನಾಗ್]], [[ಶಬಾನಾ ಆಜ್ಮಿ]] , ಮತ್ತು [[ಸಾಧು ಮೆಹರ್]] ನಟಿಸಿದ, ಈ ಹಿಂದಿ ಚಿತ್ರ, ಹೊಸಆಯಾಮ ನೀಡಿದ್ದಲ್ಲದೆ, ಅಂತರರಾಷ್ಟ್ರೀಯ ಖ್ಯಾತಿಯನ್ನು ತಂದು ಕೊಟ್ಟಿತು. ಭೂಮಾಲೀಕತ್ವದ ಅನೇಕ ಜನರು ಬಡವರನ್ನು, ಶೋಷಿತರನ್ನು ಕಾಡುವ ಚಿತ್ರವಾದ ಇದು, ಭೂಮಾಲೀಕರ ಮತ್ತು ಅವರ ಜೀವನದ ಒಳನೋಟಗಳನ್ನು ವಿಸ್ತರಿಸುತ್ತಾ ಸಾಗುತ್ತದೆ. ಅದನ್ನು ತಯಾರಿಸಿದಾಗ ಅವರಿಗೆ ೩೭ ವರ್ಷ. ಚಿತ್ರನಿರ್ಮಾಣಕಾರ್ಯದಲ್ಲಿ ಆತ್ಮ- ಸ್ಥೈರ್ಯವನ್ನು ತಂದುಕೊಟ್ಟ ಮೊದಲ ಚಿತ್ರ ಇದು. ಅಲ್ಲಿಂದ ಮುಂದೆ ಸುಮಾರು ೨೧ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಲಾತ್ಮಕ ಹಾಗೂ ಕಮರ್ಷಿಯಲ್ ಎರಡರ ಸಮ್ಮಿಶ್ರಣದಲ್ಲಿ ಇವರ ಚಿತ್ರಗಳು ರೂಪುಗೊಂಡಿವೆ. ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನದೊಂದಿಗೆ,ಬದಲಾವಣೆಯ ತುಡಿತವೂ ಇವರ ಚಿತ್ರಗಳಲ್ಲಿ ಎದ್ದು ಕಾಣುತ್ತವೆ. ಇವರ ಕೆಲವು ಪ್ರಸಿದ್ಧ [[ಹಿಂದಿ]] ಚಿತ್ರಗಳು , ಕಲಿಯುಗ್, ಮಂಥನ್. [[೧೯೮೬]]ರಲ್ಲಿ [[ಭಾರತೀಯ ರೈಲ್ವೆ]]ಗೆ '''ಯಾತ್ರಾ''' ಎಂಬ ಧಾರಾವಾಹಿ ನಿರ್ದೇಶಿಸಿದರು. [[ಇಳಾ_ಅರುಣ್]] ಮತ್ತು ಇತರರು ನಟಿಸಿದ ಈ ಧಾರಾವಾಹಿ, ಬಹು ಮನ್ನಣೆಗೆ ಪಾತ್ರವಾಯಿತು.
 
[[೧೯೬೯]] ರಲ್ಲಿ, ಭಾರತೀಯ ಹಿಂದಿ ಚಿತ್ರರಂಗದಲ್ಲಿ ಹೊಸ ಶೈಲಿ, ಹೊಸ ವಿನ್ಯಾಸಗಳು, ಹೊಸ ಆಶಯಗಳನ್ನು ಚಿತ್ರ ನಿರ್ಮಾಪಕರುಗಳು ಗುರುತಿಸಿ, ಅವುಗಳನ್ನು ಪರದೆಯಮೇಲೆ ತರಲು ಯತ್ನಿಸುತ್ತಿದ್ದರು. ಅನೇಕ ವಾರ್ತಾ-ಚಿತ್ರಗಳನ್ನೂ ತಯಾರಿಸಿದ ಅನುಭವಿ,೪ ದಶಕಗಳಕಾಲ ಹಿಂದಿ ಚಿತ್ರರಂಗದಲ್ಲಿ ಸೇವೆಮಾಡಿದ ಈ ದಿಗ್ದರ್ಶಕ, ಆರಿಸಿಕೊಂಡ ಕೆಲವು ಕಲಾವಿದರು, ಮುಂದೆ ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬಂದರು. [[ಸ್ಮಿತಾ ಪಾಟೀಲ್]], [[ನಾಸಿರುದ್ದೀನ್ ಶಾ]], [[ಓಂ ಪುರಿ]], ಕುಲ್ ಭೂಷಣ್ ಖರಬಂದಾ. ಹೊಸ ಅಲೆಯ ಚಿತ್ರನಿರ್ಮಾಪಕ, ನಿರ್ದೇಶಕರಿಗೆ ಮಾದರಿಯಂತಿದ್ದ ಬೆನೆಗಲ್ ರವರು, ಒಬ್ಬ ಕಲಾತ್ಮಕ, ಜನಪ್ರಿಯ ಮತ್ತು ನಿರ್ಮಾಪಕ ನಿರ್ದೇಶರೆಂದು ಹೆಸರುಮಾಡಿ, ಹಿಂದಿ- ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದ ಕೆಲವೇ ಸಮಯದಲ್ಲಿ ತಮ್ಮ ಛಾಪನ್ನು ಚಿತ್ರರಂಗದಮೇಲೆ ಒತ್ತಿಬಿಟ್ಟರು.ಮುಂದೆ 'ಚರಣದಾಸ್ ಚೋರ್,' ಎಂಬ ಎಂಬ ಮಕ್ಕಳ ಚಿತ್ರ ತಯಾರಿಸಿದರು. 'ನಿಶಾಂತ್', 'ಭೂಮಿಕಾ', 'ಮಂಥನ್', 'ಜುನೂನ್', 'ಕಲಿಯುಗ್', 'ಆರೋಹಣ್', 'ಮಂಡಿ', 'ತ್ರಿಕಾಲ್', ಮೆಗಾ ಕಿರುತೆರೆ ಧಾರಾವಾಹಿ 'ಯಾತ್ರಾ' ಮರೆಯಲಾರದ ಚಿತ್ರಗಳು. ವಾಸ್ತವಿಕತೆ, ಮತ್ತು ವೈವಿಧ್ಯತೆ ಅವರ ಚಿತ್ರಗಳಲ್ಲಿ ಎದ್ದು ತೋರುತ್ತವೆ. ಪ್ರಾದೇಶಿಕತೆಯನ್ನು ಅವರಷ್ಟು ಗಾಢವಾಗಿ ಚಿತ್ರಿಸುವವರು ಕಡಿಮೆ. ಶಿಕ್ಷಕನ ಕಣ್ಣಿನಲ್ಲಿ, ಭಾರತದ ಗ್ರಾಮೀಣ ಚಿತ್ರಣವನ್ನು, ನಿಶಾಂತ್ ಚಿತ್ರದಲ್ಲಿ ಕಾಣುತ್ತೇವೆ. ಮಂಥನ್ ಚಿತ್ರ, [[ಗುಜರಾತ್|ಗುಜರಾತಿನ]] ಹಾಲಿನ ಕ್ರಾಂತಿಯ ಹಿನ್ನೆಲೆಯಲ್ಲಿ ಕಂಡುಕೊಂಡ ಕಟುಸತ್ಯಗಳ ನಿರೂಪಣೆಯಾಗಿದೆ. ಒಬ್ಬ ನಟಿಯು ತನ್ನ ಜೀವನದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಆ ತಾರೆಯ ಜೀವನವನ್ನು ಮರುಸೃಷ್ಟಿಮಾಡುವ ಪ್ರಯತ್ನ, 'ಭೂಮಿಕಾ' ದಲ್ಲಿ ನಿಜಕ್ಕೂ ಸೊಗಸಾಗಿದೆ. ಇನ್ನುಳಿದ ಶ್ಯಾಮ್ ಬೆನೆಗಲ್ ರ ಚಿತ್ರಗಳನ್ನು ಬಲ್ಲವರು, ದೃಶ್ಯ ಕಾವ್ಯಗಳೆಂದು ಬಣ್ಣಿಸುತ್ತಾರೆ.
"https://kn.wikipedia.org/wiki/ಶ್ಯಾಮ್_ಬೆನಗಲ್" ಇಂದ ಪಡೆಯಲ್ಪಟ್ಟಿದೆ