ಹೊಸ್ತೋಟ ಮಂಜುನಾಥ ಭಾಗವತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Clean up
೨೭ ನೇ ಸಾಲು:
==ಬಗೆಬಗೆಯ ಚಟುವಟಿಕೆ==
:ಅನಂತರ ಹಲವಾರು ಊರು ಮೇಳಗಳಲ್ಲಿ ಯಕ್ಷಗಾನ ಕಲಿಕಾ ಶಿಬಿರಗಳು, ಶಾಲಾಮಕ್ಕಳಿಗೆ ಮತ್ತು ಮಹಿಳಯರಿಗೆ ,ಅಂಧರಿಗೆ (!) ಯಕ್ಷಗಾನ ತರಬೇತಿ, ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಮಟ್ಟುಗಳ ಅಧ್ಯಯನ ಮತ್ತು ಸಂಗ್ರಹ; ಸಿರಸಿಯ ಹತ್ತಿರ ಸ್ವರ್ಣವಲ್ಲಿ ಮಠದಲ್ಲಿ (ಯಕ್ಷ ಶಾಲ್ಮಲೆ) ಯಕ್ಷಗಾನದ ಅನುಸಂಧಾನ, ಭಾಗವತಿಕೆ , ಮೃದಂಗ, ವೇóಷಭೂಷಣ , ನೃತ್ಯ, ಭಾವಾಭಿನಯ ಪ್ರಾತ್ಯಕ್ಷತೆಯ ಗೋಷ್ಟಿಗಳು , ಬೇಸಿಗೆ ಶಿಬಿರಗಳು-ಅದರಲ್ಲಿ ಪ್ರಾತ್ಯಕ್ಷತೆಯ ಪ್ರಯೋಗ, ಹಲವಾರು ಯಕ್ಷಗಾನ ಸಪ್ತಾಹಗಳ ನಿರ್ದೇಶನ,ಯಕ್ಷಗಾನ ತಾಳಮದ್ದಲೆ (ಅಭಿನಯ ವೇಷಧರಿಸದೆ ಕುಳಿತು, ಸಂಭಾಷಣೆಯಲ್ಲಿ ಯಕ್ಷಗಾನ ಪ್ರಸಂಗ ನೆಡೆಸುವುದು-(ಕೆವಲ ಮಾತುಗರಿಕೆಯ ನಾಟಕೀಯ ಕಥಾ ಪ್ರಸಂಗ) ಈ ಎಲ್ಲಾ ಕಾರ್ಯಕ್ರಮಗಲನ್ನು ಬಿಡುವಿಲ್ಲದೆ ನಡೆಸಿದ್ದಾರೆ. ಜಾನಪದ ವಿಚಾರವೂ ಸೇರಿದಂತೆ ಹಲವೆಡೆ ಉಪನ್ಯಾಸ ನೀಡಿದ್ದಾರೆ. ಹೀಗೆ ಈ ಎಲ್ಲಾ ಬಗೆಯ ಚಟುವಟಿಗಳಲ್ಲಿ ಈಗಲೂ ನಿರತರಾಗಿದ್ದಾರೆ.
 
==ಯಕ್ಷಗಾನ ಪ್ರಸಂಗಗಳ ರಚನೆ==
::;ಯಕ್ಷಗಾನದ ಪ್ರಸಂಗವೆಂದರೆ:
:ಅದು ಗೀತಾ ನಾಟಕದಂತೆ ಹೆಚ್ಚಾಗಿ ಪೌರಾಣಿಕ ಕಥೆಯನ್ನು ಸಂಭಾಷಣೆಗಳುಳ್ಳ ಪದ್ಯಗಳಲ್ಲಿ ರಚಿಸಿದ ಯಕ್ಷಗಾನದ ನಾಟಕ. ಪ್ರತಿ ಪದ(ಪದ್ಯ)ಕ್ಕೆ ರಾಗ-ತಾಳಗಳಿರುತ್ತವೆ.ಅದನ್ನು(‍ಈ ಪದ್ಯದ ಕಥಾನಕವನ್ನು) ಪ್ರಸಂಗವೆನ್ನುತ್ತಾರೆ. ಈ ಕಥಾನಕದ ಪದ್ಯಗಳನ್ನು ಭಾಗವತರು ಹಿಮ್ಮೇಳದೊಡನೆ ಕಂಚಿನ/ಹಿತ್ತಾಳೆ ತಾಳವನ್ನು ಬಾರಿಸುತ್ತಾ ಹಾಡುತ್ತಾರೆ. ಅದಕ್ಕೆ ಪಾತ್ರಧಾರಿಗಳು ಪದ್ಯ ಹೇಳುವಾಗ ಹೆಜ್ಜೆ ಮತ್ತು ಸಹಜ ಅಭಿನಯದೊದಿಗೆ ನರ್ತಿಸಿ ಪದ (ಪದ್ಯ) ಮುಗಿದ ನಂತರ ತಮ್ಮ ಸ್ವಂತಿಕೆಯ ಪ್ರತಿಭೆಯನ್ನು ಸೇರಿಸಿ ಅರ್ಥ ಹೇಳುತ್ತಾರೆ -ಅಂದರೆ ಪದ್ಯದ ಅರ್ಥಕ್ಕೆ ಸರಿಯಾಗಿ ಸಂಭಾಷಣೆ ನಡೆಸುವರು. ಅಂದರೆ ಅರ್ಥವು ಸಂಭಾಷಣೆಯ ರೂಪದಲ್ಲಿರುವುದು.ಸಂದರ್ಭಕ್ಕೆ ತಕ್ಕಂತೆ, ನಿರೂಪಣೆ/ಸ್ವಗತವೂ ಆಗಿರಬಹುದು. ಕೊನೆಯಲ್ಲಿ ಮಂದಿನ ಪದಕ್ಕೆ ಸೂಚನೆ ಕೊಟ್ಟು ಮಾತು ಮುಗಿಸುತ್ತಾರೆ. ಆಗ ಭಾಗವತರು ಹಿಮ್ಮೇಳದೊಡನೆ ಮಂದಿನ ಪದ ಹೇಳುವರು. ಸಂಭಾಷಣೆ ಮುಂದುವರೆಯುವುದು.
:ಹೊಸ್ತೋಟದ ಮಂಜುನಾಥ ಬಾಗವತರು ಈ ಬಗೆಯ ಅನೇಕ ಯಕ್ಷಗಾನದ ಪ್ರಸಂಗಗಳನ್ನು ರಚಿಸಿದ್ದಾರೆ.
 
:ಯಕ್ಷಗಾನದ ರಾಗ, ದಾಟಿ, ಮಟ್ಟು, ಛಂದಸ್ಸು, ನಿರೂಪಣೆ ಹಾಗೂ ಹಾಡುಗರಿಕೆಯಲ್ಲಿನ ಪಾತ್ರಗಳಿಗೆ ಅನುಗುಣವಾಗಿ ಹಾಡನ್ನು ಹಾಡುವ ಸಿದ್ಧಿಗಳಿಸಿರುವ ಶ್ರೇಷ್ಠತೆ ಇವರಲ್ಲಿದೆ. ಆಧುನಿಕ ಕಾಲದ ಪ್ರಸಂಗಕರ್ತರಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ಸ್ವರೂಪದ ಸಾಹಿತ್ಯ ರಚಿಸಿರುವ ಪ್ರಸಂಗಕರ್ತರಲ್ಲಿ ಒಬ್ಬರು. ಚಿಕ್ಕ ಪ್ರಸಂಗ ಹಾಗೂ ದೊಡ ಪ್ರಸಂಗ ಒಟ್ಟಾಗಿ ಸುಮಾರು 250ಕ್ಕೂ ಹೆಚ್ಚು (೧೩೦ ?) ಪ್ರಸಂಗಗಳನ್ನು ಶ್ರೀಯುತರು ರಚಿಸಿರುವರು. ಮುಖ್ಯವಾಗಿ ಇವರ ಬರಹಗಳು ಅಭ್ಯಾಸಿ ಮತ್ತು ಹವ್ಯಾಸಿ ಯಕ್ಷಗಾನ ತಂಡಕ್ಕಾಗಿ ರಚಿತವಾದಂತವು. ಸಾಂಪ್ರದಾಯಿಕ ಪ್ರಸಂಗಗಳಲ್ಲಿ ಕಥೆಯ ಸಾರಾಂಶವನ್ನು ನಾಟಕೀಯವಾಗಿ ಹೇಳುವುದು ಇವರ ಮುಖ್ಯ ತತ್ವ.
 
==ರಚಿಸಿದ ಕೆಲವು ಯಕ್ಷಗಾನ ಪ್ರಸಂಗಗಳು==