ವಿಠ್ಠಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Small corrections
Small corrections
೮೧ ನೇ ಸಾಲು:
== ಮೂರ್ತಿಶಿಲ್ಪ ==
 
ಸಾಮಾನ್ಯವಾಗಿ ಎಲ್ಲ ವಿಠ್ಠಲ ವಿಗ್ರಹಗಳು ಪಂಢರಪುರದಲ್ಲಿನ ಅವನ ಕೇಂದ್ರ ವಿಗ್ರಹವನ್ನು ಆಧರಿಸಿ ರೂಪಿಸಲಾಗಿವೆ. ಪಂಢರಪುರ ವಿಗ್ರಹವು ೩ ಅಡಿ ೯ ಅಂಗುಲ (೧.೧ ಮೀಟರು) ಎತ್ತರವಿರುವ ಒಂದು ಕಪ್ಪುಶಿಲಾ ಶಿಲ್ಪವಾಗಿದೆ. ಅವನನ್ನು ಒಬ್ಬ ಗಾಢಬಣ್ಣದ, ಹಲವುವೇಳೆ ಕಪ್ಪು ಬಣ್ಣದ ಬಾಲಕನನ್ನಾಗಿ ಚಿತ್ರಿಸಲಾಗುತ್ತದೆ. ಕವಿ-ಸಂತರು ಅವನನ್ನು ಒಬ್ಬ "ಗಾಢ ವರ್ಣದ [[ಪರಬ್ರಹ್ಮ]]ನೆಂದು" ಕರೆದಿದ್ದಾರೆ.<ref name="Pande448">Pande (2008) p. 448</ref> ಅವನು ಶಿವನ ಪ್ರತೀಕವಾದ ಲಿಂಗವೆಂದು ಅರ್ಥವಿವರಣೆ ಮಾಡಲಾದ ಎತ್ತರದ, ಶಂಕುವಿನಾಕಾರದ ತಲೆಯುಡಿಗೆ ಅಥವಾ ಒಂದು ಮುಕುಟವನ್ನು ಧರಿಸುತ್ತಾನೆ. ಹೀಗೆ, ಜ಼ೆಲಿಯಟ್‌ಯವರಜ಼ೆಲಿಯಟ್‌ರವರ ಪ್ರಕಾರ, ವಿಠ್ಠಲನು ಶಿವ ಮತ್ತು ವಿಷ್ಣು ಇಬ್ಬರನ್ನೂ ಪ್ರತಿನಿಧಿಸುತ್ತಾನೆ.<ref>Zelliot, Eleanor in Mokashi (1987) pp. 35–36</ref> ವೈಷ್ಣವ ಸಂಪ್ರದಾಯದ ಪ್ರಕಾರ ವಿಷ್ಣುವಿನ ಮೊದಲ ಮತ್ತು ಅಗ್ರಗಣ್ಯ ಭಕ್ತನಾದ, ಶಿವನನ್ನು ವಿಠ್ಠಲನು (ವಿಷ್ಣು) ತನ್ನ ಸ್ವಂತ ತಲೆಯ ಮೇಲೆ ಹೊರುತ್ತಾನೆಂದು ಮೊದಲನೇ ವಾರಕರೀ ಕವಿ-ಸಂತನಾದ [[ಜ್ಞಾನೇಶ್ವರ]]ನು (೧೩ನೇ ಶತಮಾನ) ಹೇಳುತ್ತಾನೆ.<ref>Ranade (1933) p. 41</ref>
 
ಸೊಂಟದ ಮೇಲೆ ಕೈಯಿಟ್ಟುಕೊಂಡು ಭಕ್ತ ಪುಂಡಲೀಕನಿಂದ ಎಸೆಯಲ್ಪಟ್ಟ ಇಟ್ಟಿಗೆಯ ಮೇಲೆ ನಿಂತಿರುವಂತೆ ವಿಠ್ಠಲನನ್ನು ತೋರಿಸಲಾಗುತ್ತದೆ. ಅವನು, ಪುರಾಣೋಕ್ತ ''[[ಕೌಸ್ತುಭ]]'' ಮಣಿಯನ್ನು ಹುದುಗಿಸಿದ, [[ತುಳಸಿ]] ಮಣಿಗಳ ಒಂದು ಕಂಠಹಾರ, ಮತ್ತು ಕವಿ-ಸಂತ ತುಕಾರಾಮನು ವಿಷ್ಣುವಿನ ಮೂರ್ತಿಶಿಲ್ಪಕ್ಕೆ ಸಂಬಂಧಿಸುವ ''ಮಕರ ಕುಂಡಲ''ವನ್ನು (ಮತ್ಸ್ಯಾಕಾರದ ಕರ್ಣಾಭರಣ) ಧರಿಸುತ್ತಾನೆ. ಪಂಢರಪುರದ ವಿಠ್ಠಲನು, ವಿಷ್ಣುವಿಗೆ ಸಂಬಂಧಿಸಲಾದ ಚಿಹ್ನೆಗಳಾದ, ತನ್ನ ಎಡಗೈಯಲ್ಲಿ ಒಂದು ''[[ಶಂಖ]]'' ಮತ್ತು ತನ್ನ ಬಲಗೈಯಲ್ಲಿ ಒಂದು ''[[ಚಕ್ರ]]'' ಅಥವಾ ತಾವರೆ ಹೂವನ್ನು ಹಿಡಿಯುತ್ತಾನೆ. ಕೆಲವು ವಿಗ್ರಹಗಳು ವಿಠ್ಠಲನ ಬಲಗೈಯು ಸಾಂಪ್ರದಾಯಿಕವಾಗಿ ಒಂದು ಆಶೀರ್ವಾದವೆಂದು ತಪ್ಪಾಗಿ ತಿಳಿದುಕೊಳ್ಳಲಾದ ಒಂದು ಸನ್ನೆಯನ್ನುಕೈಸನ್ನೆಯನ್ನು ಮಾಡುತ್ತಿರುವಂತೆ ಚಿತ್ರಿಸುತ್ತವೆ; ಕೇಂದ್ರ ವಿಗ್ರಹದಲ್ಲಿ ಆಶೀರ್ವಾದದ ಯಾವುದೇ ಸನ್ನೆಯುಕೈಸನ್ನೆಯು ಕಾಣಿಸುವುದಿಲ್ಲ.<ref name="hastings" /><ref name="mahagov" />
 
ಪಂಢರಪುರದ ವಿಗ್ರಹವು ''ದಿಗಂಬರ''ವಾಗಿ ಇರುತ್ತದೆ, ಅಥವಾ ಜನನಾಂಗಗಳ ಆಕಾರವು ಕಾಣುವ ಸೊಂಟವನ್ನು ಸುತ್ತಿದ ಒಂದು ಮಡಿಕೆಯುಳ್ಳ ಮತ್ತು ಪಾದಗಳಿಗೆ ವಿಸ್ತರಿಸುವ (ನೀಳುಡುಪು) ಒಂದು ಕೌಪೀನದಿಂದ ತೊಡಿಸಲ್ಪಟ್ಟಿರುತ್ತದೆ.<ref name="hastings" /><ref name="mahagov" /> ಇತರ ವಿಗ್ರಹಗಳು ಮತ್ತು ಚಿತ್ರಗಳು ಅವನನ್ನು ವಸ್ತ್ರಧರಿತನಾಗಿ ಚಿತ್ರಿಸುತ್ತವೆ, ಸಾಮಾನ್ಯವಾಗಿ, ಪಂಢರಪುರದ ಅರ್ಚಕರು ಅವನಿಗೆ ಉಡುಪು ತೊಡಿಸುವ ವಿಧಾನದಂತೆ, ''ಪೀತಾಂಬರ''ದಿಂದ (ಒಂದು ಹಳದಿಬಣ್ಣದ [[ಪಂಚೆ]]), ಮತ್ತು ಬಗೆಬಗೆಯ ಚಿನ್ನದ ಆಭರಣಗಳಿಂದ. ಪಂಢರಪುರದ ವಿಗ್ರಹವು ಎಡ ವಕ್ಷಸ್ಥಲದ ಮೇಲೆ, ಸಾಮಾನ್ಯವಾಗಿ ವಿಷ್ಣು ಮತ್ತು ಕೃಷ್ಣ ವಿಗ್ರಹಗಳ ವಕ್ಷಸ್ಥಲದ ಮೇಲೆ ಕಾಣಿಸುವ, ಶ್ವೇತರೋಮದ ಒಂದು ಸುರುಳೆಯೆಂದು ಹೇಳಲಾದ ''[[ಶ್ರೀವತ್ಸ]]ಲಾಂಛನವನ್ನು'' ಹೊಂದಿದೆ.<ref name="MW1100">Monier-Williams (2008 version) p.[http://www.sanskrit-lexicon.uni-koeln.de/cgi-bin/serveimg.pl?file=/scans/MWScan/MWScanjpg/mw1100-zrIraGga.jpg 1110]</ref> ಬಲ ವಕ್ಷಸ್ಥಲದ ಮೇಲಿನ ''ಶ್ರೀನಿಕೇತನ''ವೆಂದು ಕರೆಯಲಾದ ಒಂದು ವರ್ತುಲಾಕಾರದ ಮಚ್ಚೆ, ''ಮೇಖಲ'' (ಒಂದು ಮೂರು ದಾರಗಳ ಸೊಂಟಪಟ್ಟಿ), ಕಾಲುಗಳ ನಡುವೆ ನೆಲದಲ್ಲಿ ನಾಟಿದ ಒಂದು ಉದ್ದವಾದ ದಂಡ (''ಕಠಿ''), ಮತ್ತು ಮೊಣಕೈಗಳ ಮೇಲೆ ಜೋಡಿ ಬಳೆ ಹಾಗೂ ಮುತ್ತಿನ ಕಡಗಗಳು ವಿಗ್ರಹದ ಘನತೆಯನ್ನು ಹೆಚ್ಚಿಸಿವೆ.<ref name="mahagov" />
"https://kn.wikipedia.org/wiki/ವಿಠ್ಠಲ" ಇಂದ ಪಡೆಯಲ್ಪಟ್ಟಿದೆ