ಉಷಾ(ದೇವತೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
<center><i>ಕೃಷ್ಣನ ಮೊಮ್ಮಗ ಅನಿರುದ್ಧನ ಹೆಂಡತಿ , ಬಾಣಾಸುರನ ಮಗಳ ಕುರಿತ ಮಾಹಿತಿಗಾಗಿ [[ಉಷೆ]] ‎ ನೋಡಿರಿ.</i></center>
<center><i> 'ಉಷಾ' ಕನ್ನಡ ಚಲನಚಿತ್ರ ಕ್ಕಾಗಿ [[ಉಷಾ]] ನೋಡಿರಿ. </i></center>
ಉಷಸ್ , ಉಷೆ, ಉಷಾದೇವಿ ಎಂದು ಪ್ರಸಿದ್ಧಳಾಗಿರುವ ವೈದಿಕ ದೇವತೆ. ಮುಂಬೆಳಗಿನ ಸಾಮ್ರಾಜ್ಞಿ<ref>{{citation|last=Apte |first=Vaman Shivram |title=The Practical Sanskrit Dictionary |year=1965 |publisher=Motilal Banarsidass |location=New Delhi |isbn=81-208-0567-4|edition=4th}}, p. 304.</ref>. ಜ್ಯೋತಿರ್ಮಂಡಲಗಳಲ್ಲೆಲ್ಲ ಅತ್ಯಧಿಕವಾದ ತೇಜಸ್ಸುಳ್ಳವಳು. ದೇವಮಾತೆಯಾದ್ದರಿಂದ ದೇವತೆಗಳಿಗೂ ಪೂಜ್ಯಳು. ಇವಳ ಸ್ವರೂಪ ಎರಡು ವಿಧ. ಜಗತ್ತನ್ನು ಆಕರ್ಷಿಸುವ ಭವ್ಯವಾದ ಲೌಕಿಕ ಸ್ವರೂಪ ಒಂದಾದರೆ. ಗುಹ್ಯವೂ ಸತ್ಯಾತ್ಮಕವೂ ಆದ ದಿವ್ಯಸ್ವರೂಪ ಮತ್ತೊಂದು.<ref>{{cite web |last1=Wilkins |first1=W. J. |title=Hindu Gods and Goddesses |url=https://books.google.co.in/books?id=f0XpDQAAQBAJ&pg=PA48&redir_esc=y |publisher=Courier Corporation |accessdate=20 March 2020 |language=en |date=21 November 2003}}</ref><ref>http://www.yogamag.net/archives/1991/ajan91/vedgod.shtml</ref>
==ಋಗ್ವೇದದಲ್ಲಿ ಬಣ್ಣನೆ==
ಋಗ್ವೇದದಲ್ಲಿ ಉಷಸ್‍ನ್ನು ಹಲವಾರು ಮಂತ್ರಗಳಲ್ಲಿ ಬಣ್ಣಿಸಲಾಗಿದೆ. ವಸ್ತ್ರಾಲಂಕಾರಗಳಿಂದ ಭೂಷಿತಳಾದ ಪತ್ನಿ ಪತಿಯ ಆಗಮನವನ್ನು ನಿರೀಕ್ಷಿಸುವಂತೆ ಉಷೆ ನಾನಾ ವರ್ಣಾತ್ಮಕವಾದ ದಿವ್ಯ ಪ್ರತಿಭೆಯಿಂದ ಶೋಭಿಸುತ್ತ ಪತಿಯಾದ ಆದಿತ್ಯನನ್ನು ನಿರೀಕ್ಷಿಸುತ್ತಿದ್ದಾಳೆ. ಸ್ನಾನಮಾಡಲಿಳಿದ ಸುಂದರ ತರುಣಿ ಲಜ್ಜೆಯಿಂದ ಬಳುಕುತ್ತ ಮೇಲೆದ್ದು ಬರುವಂತೆ ಆಕರ್ಷಕವಾದ ರೂಪವುಳ್ಳ ಈಕೆ ತನ್ನ ದಿವ್ಯ ಸೌಂದರ್ಯವನ್ನು ಪ್ರಕಾಶಪಡಿಸುತ್ತ ಅಂತರಿಕ್ಷದಲ್ಲಿ ಅವಿರ್ಭವಿಸುತ್ತಾಳೆ. ನರ್ತನಮಾಡುವ ಸ್ತ್ರೀಯಂತೆ ರೂಪುಲಾವಣ್ಯಗಳನ್ನು ತೋರಿಸುತ್ತಾಳೆ. ಹೀಗೆಂದು ಉಷೆಯನ್ನು ಬಣ್ಣಿಸಲಾಗಿದೆ.
"https://kn.wikipedia.org/wiki/ಉಷಾ(ದೇವತೆ)" ಇಂದ ಪಡೆಯಲ್ಪಟ್ಟಿದೆ