ಇಲೈ ವಿಟ್ನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
'''ಇಲೈ ವಿಟ್ನಿ''', (Eli Whitney Junior) (ಡಿಸೆಂಬರ್,೮, ೧೭೬೫-ಜನವರಿ ೮, ೧೮೨೫) ಒಬ್ಬ [[ಅಮೇರಿಕ]]ದ [[ಸಂಶೋಧಕ]], ಕಾಳು ಹತ್ತಿಬೆಳೆಯ ಬೀಜಗಳನ್ನು ಬೇರ್ಪಡಿಸಲು ೨ ವರ್ಷ ಸತತವಾಗಿ ಶ್ರಮಿಸಿ ಯಂತ್ರವೊಂದನ್ನು ರಚಿಸಿ, ಸಿದ್ಧಿಪಡೆದ ಹರಿಕಾರರೆಂದು ಅಮೆರಿಕದಲ್ಲಿ ಹೆಸರಾದರು.
[[ಚಿತ್ರ:Eli_Whitney_1940_Issue-1c.jpg|thumb|ಅಮೇರಿಕದಅಮೆರಿಕದ ಅಂಚೆಚೀಟಿಯಲ್ಲಿ ]]ವಿಶ್ವದ ಹತ್ತಿ ಉತ್ಪಾದಕರಿಗೆ ನೆರವು ನೀಡಿದ ಈ ಕಾಟನ್ ಜಿನ್ ಯಂತ್ರ ಎಲ್ಲೆಲ್ಲೂ ಜನಪ್ರಿಯತೆಯನ್ನುಗಳಿಸಿತು. ಅದನ್ನು 'ಜಿನ್ನಿಂಗ್ ಯಂತ್ರ|ಇಂಜಿನ್' ಎಂದು ಕರೆದರು. 'ಇಂಜಿನ್' ಪದವನ್ನು ಗ್ರಾಹಕರು ಹೆಚ್ಚಾಗಿ ಬಳಸದೆ, 'ಜಿನ್' ಎನ್ನುವ ಪದ ಹಾಗೆಯೇ ಉಳಿದು ಅತ್ಯಂತ ಪ್ರಸಿದ್ಧಿಯನ್ನು ಗಳಿಸಿತು. 'ಕೈಗಾರಿಕಾ ಕ್ರಾಂತಿ'ಯ ಸಮಯದಲ್ಲಿ ಹಲವಾರು ಹೊಸ ಹೊಸ ಆವಿಷ್ಕಾರಗಳು, ,ಮತ್ತು ಹೊಸ ಹೊಸ ಸಂಶೋಧನೆಗಳು, ಯಂತ್ರನಿರ್ಮಾಣಗಳು, ಪ್ರಮುಖವಾಗಿ ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಜರುಗಿದವು. ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣದ ರಾಜ್ಯಗಳಲ್ಲಿ ನಡೆದ ಆಂತರಿಕ ಕಲಹದ ಮೊದಲೇ 'ಹತ್ತಿ ಜಿನ್ ಯಂತ್ರ'ದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲಾಯಿತು. ಅದೊಂದು ಅತ್ಯಂತ ಮಹತ್ವದ ಬೆಳವಣಿಗೆಯೆಂದು ಇತಿಹಾಸದಲ್ಲಿ ದಾಖಲಾಗಿದೆ. ಅಮೆರಿಕದಲ್ಲಿ ಮೊದಲಿನಿಂದಲೂ ಬೆಳೆಯುತ್ತಿದ್ದ 'ಅಪ್ಲಾಂಡ್ ಹತ್ತಿ'ಯ ಕಾಳುಗಳನ್ನು ಬಿಡಿಸುವುದು ಕಷ್ಟಕರವಾಗಿತ್ತು. ಜಿನ್ನಿಂಗ್ ಯಂತ್ರದಿಂದಾಗಿ ಒಬ್ಬ ಕೆಲಸಗಾರನು ಮಾಡುವ ಕೆಲಸದ ೫೦ ಪಟ್ಟು ಉತ್ಪಾದನೆ ವರ್ಧಿಸಿ ಲಾಭದಾಯಕವಾಯಿತು. ಇದರ ಜೊತೆಗೆ ಹೆಚ್ಛು ಹೆಚ್ಚು 'ಪ್ಲಾಂಟೇಶನ್' ಗಳಲ್ಲಿ ಹತ್ತಿಯನ್ನು ಬೆಳೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕೂಲಿಯಾಳುಗಳ ಸಂಖ್ಯೆಯೂ ಹೆಚ್ಚಾಯಿತು. ಈ ಬೆಳವಣಿಗೆಗಳು ಪೇಟೆಂಟ್ ಮೇಲೆ ಪರಿಣಾಮ ಬೀರಿದ್ದಲ್ಲದೆ ಹಲವಾರು ಕಾನೂನು ಕಾರವಾಯಿಗಳಲ್ಲಿ ಮಾರ್ಪಾಡುಗಳನ್ನು ಮಾಡಬೇಕಾದ ಸನ್ನಿವೇಶ ಒದಗಿಬಂತು. ಅದೇ ಸಮಯದಲ್ಲಿ ಯೂರೋಪಿನ ಫ್ರಾನ್ಸ್ ದೇಶ, ಹಾಗೂ ಇಂಗ್ಲೆಂಡ್ ದೇಶಗಳ ನಡುವೆ ಯುದ್ಧವೇರ್ಪಟ್ಟ ಸನ್ನಿವೇಶದಲ್ಲಿ ಅಮೆರಿಕವೂ ಭಾಗವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ ಅಮೆರಿಕದ ಹೊಸ ಸೈನ್ಯಕ್ಕೆ 'ಮಸ್ಕೆಟ್'(ಕೋವಿ,ಬಂದೂಕಗಳು) ಗಳ ನಿರ್ಮಾಣಮಾಡುವ ಕಾರ್ಯ ಭರದಿಂದ ಸಾಗಿತು. <ref> [http://www.eliwhitney.org/7/museum/about-eli-whitney/factory Whitney Factory] </ref>
 
===ಜನನ, ವಿದ್ಯಾಭ್ಯಾಸ ವೃತ್ತಿ===
"https://kn.wikipedia.org/wiki/ಇಲೈ_ವಿಟ್ನಿ" ಇಂದ ಪಡೆಯಲ್ಪಟ್ಟಿದೆ