ಉಮಾಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೦ ನೇ ಸಾಲು:
==ಚಲನಚಿತ್ರರಂಗದಲ್ಲಿ==
‘ಅನುಭವ’ ಚಿತ್ರದಲ್ಲಿನ ಅವರ ಪಾತ್ರ ಕಾಶೀನಾಥರ ಹೊಸ ರೀತಿಯ ಒಂದು ಬೋಲ್ಡ್ ಪ್ರಯೋಗ. ಈ ಚಿತ್ರದಲ್ಲಿ ಉಮಾಶ್ರೀ ಅವರು ತೋರಿದ ಗಮನಾರ್ಹ ಅಭಿನಯ ನೆನಪಿನಲ್ಲಿ ಉಳಿಯುವಂತದ್ದು. ಆ ಪಾತ್ರದಲ್ಲಿ ಅವರ ಪಾತ್ರ ಹೇಗೇ ಇದ್ದರೂ ಅವರು ನೆನಪಲ್ಲಿ ಉಳಿದದ್ದು ಮಾತ್ರ ಆಕೆಯ ಅಭಿನಯ ಸಾಮರ್ಥ್ಯದಿಂದ. ಒಬ್ಬ ಕಲಾವಿದರು ತನಗೆ ನೀಡಿದ ಯಾವುದೇ ಪಾತ್ರದಲ್ಲೂ ತನ್ನನ್ನು ಅಡಗಿಸಿ, ತನ್ನ ಪಾತ್ರವನ್ನೂ ಅಡಗಿಸಿ ಕಲೆಯನ್ನು ಸುಗಮವಾಗಿ ಹೊರಚೆಲ್ಲುವ ವಿಶಿಷ್ಟ ಪರಿ ಇದು.
'ಗೋಲ್ ಮಾಲ್ ರಾಧಾಕೃಷ್ಣ; ಎಂಬ ಚಿತ್ರದಲ್ಲಿ, ಉಮೇಶ್, ಸಿಹಿ ಕಹಿ ಚಂದ್ರು, ಮೈಸೂರು ಲೋಕೇಶ್, ಮುಖ್ಯಮಂತ್ರಿ ಚಂದ್ರು, ಅನಂತನಾಗ್ ಇವರುಗಳ ಸುತ್ತ ತಿರುಗುವ ಕತೆಯಲ್ಲಿ, ಹಲವೊಮ್ಮೆ ಅಲ್ಲಿನ ಹಾಸ್ಯ ಸನ್ನಿವೇಶ ಮೇರೆ ಮೀರಿದ್ದು ಎಂದು ಭಾವ ಕೊಡುತ್ತಿದ್ದರೂ ಕೂಡ, ಉಮಾಶ್ರೀ ತಮ್ಮ ಪಾತ್ರಕ್ಕೆ ನೀಡುವ ಹೊಳಪು ನೆನಪಲ್ಲಿ ಉಳಿಯುವಂತದ್ದು. ಇವರ ಸಾಧನೆ ನಿಜವಾಗಲೂ ಕಣ್ಣೀರು ತರುವಂಥದ್ದು
 
==ಶ್ರೇಷ್ಠ ಕಲಾವಿದೆ==
ನಾಟಕ ರಂಗ ಕೊಡುವ ವೈವಿಧ್ಯತೆಯನ್ನು ದುರದೃಷ್ಟವಶಾತ್ ಚಿತ್ರರಂಗ ಮತ್ತು ದೂರದರ್ಶನ ನೀಡಲು ಆಶಕ್ಯವಾಗಿವೆ. ಇಲ್ಲಿ ಎಲ್ಲವೂ ಜೆರಾಕ್ಸ್ ಕಾಪಿಯಂತೆ ನಡೆದು ಬಿಡಬೇಕು. ಹೀಗಾಗಿ ಇಲ್ಲಿನ ಕಲಾವಿದರು ಅದರಲ್ಲೂ ಪೋಷಕ ಪಾತ್ರದವರು ಟೈಪ್ ಕಾಸ್ಟ್ ಆಗಿ ಸವೆದು ಹೋಗುವುದೇ ಹೆಚ್ಚು. ಅತ್ಯಂತ ಆಳವಾದ ಸಾಮರ್ಥ್ಯವುಳ್ಳವರು ಮಾತ್ರವೇ ಸಿಕ್ಕ ಒಂದೆರಡು ಮುತ್ತಿನ ಅವಕಾಶಗಳನ್ನೇ ಹಾದಿಗಳನ್ನಾಗಿ ಪರಿವರ್ತಿಸಿಕೊಳ್ಳುವ ಸಂಯಮ ತೋರುತ್ತಾರೆ. ಉಮಾಶ್ರೀ ಅಂತಹ ಶ್ರೇಷ್ಟ ಕಲಾವಿದರ ಸಾಲಿಗೆ ಸೇರುವವರು.
"https://kn.wikipedia.org/wiki/ಉಮಾಶ್ರೀ" ಇಂದ ಪಡೆಯಲ್ಪಟ್ಟಿದೆ